ಭೂ ಒಡೆತನದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ರಾಜ್ಯವಾಗಿ ನಿಲ್ಲಲಿದೆ: ರಾಹುಲ್‌ ಗಾಂಧಿ ವಿಶ್ವಾಸ

Date:

Advertisements
- ಸಂಕಲ್ಪ ‌ಸಮಾವೇಶದಲ್ಲಿ 1,11,111 ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಣೆ

- '500 ನೂತನ ಕಂದಾಯ ಗ್ರಾಮಗಳನ್ನು ಘೋಷಣೆ ಮಾಡುವುದು ನಮ್ಮ ಸಂಕಲ್ಪ'

ಕರ್ನಾಟಕ ಸರ್ಕಾರ ಯಶಸ್ವಿಯಾಗಿ ಎರಡು ವರ್ಷವನ್ನು ಪೂರೈಸಿದೆ. ನಮ್ಮ ಕಾಂಗ್ರೆಸ್ ಸರ್ಕಾರ ನಿಮ್ಮ ಹಣವನ್ನು ಮರಳಿ ನಿಮಗೆ ನೀಡುತ್ತಿದೆ. ನೀವು ಕಟ್ಟುವ ತೆರಿಗೆಯ ಹಣ ಮರಳಿ ನಿಮಗೆ ಸೇರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಅದು ಯಶಸ್ವಿಯಾಗಿ ಈಡೇರಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದರು.

ಹೊಸಪೇಟೆಯಲ್ಲಿ ಮಂಗಳವಾರ ನಡೆದ ಸಮರ್ಪಣಾ ಸಂಕಲ್ಪ ‌ಸಮಾವೇಶದಲ್ಲಿ 1,11,111 ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, “ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ನಂತರದಲ್ಲಿ ಕರ್ನಾಟಕದ ಜನರ ಭೂ ಮಾಲಿಕತ್ವದ ಬಗ್ಗೆ ಮಾತನಾಡಿದೆ. ಇಲ್ಲಿ ಹೆಚ್ಚು ಜನ ಭೂಮಿ ಹೊಂದಿದ್ದಾರೆ. ಆದರೆ ಮಾಲಿಕತ್ವ ಹೊಂದಿಲ್ಲ ಎಂಬುದು ನನಗೆ ಮನವರಿಕೆಯಾಗಿತ್ತು. ಪರಿಶಿಷ್ಟ, ಬುಡಕಟ್ಟು ಜನಾಂಗದವರು ವಾಸಿಸುವ ಅನೇಕ ಕಂದಾಯ ಗ್ರಾಮಗಳು ಗ್ರಾಮಗಳೇ ಎಂದು ಘೋಷಣೆಯಾಗಿರಲಿಲ್ಲ. ಇಲ್ಲಿನ ವಾಸಿಗಳಿಗೆ ಸರ್ಕಾರದ ಅನೇಕ ಸೌಲಭ್ಯಗಳು ಸೇರಿದಂತೆ ಅನೇಕ ಅನುಕೂಲಗಳು ನಿಮಗೆ ಈಗ ದೊರೆಯುತ್ತವೆ” ಎಂದರು.

ರಾಜ್ಯದ ಅನೇಕ ಸಮಸ್ಯೆಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರ ಬಳಿ ಚರ್ಚೆ‌ ಮಾಡಿದೆ. ಈಗ ನಾನು ಆಲೋಚನೆ ಮಾಡಿದ ಯೋಜನೆ ಜಾರಿಗೆ ಬಂದಿದೆ. ಈ ದೇಶದ ಜನಸಾಮಾನ್ಯರ ಹೆಸರಿನಲ್ಲಿ ಭೂಮಿಯ ಮಾಲಿಕತ್ವ ಬರುತಿದೆ. ಇದು ನಮ್ಮ ಆರನೇ ಭೂ ಗ್ಯಾರಂಟಿ” ಎಂದರು ಹೇಳಿದರು.

Advertisements

“ಇನ್ನೂ 500 ನೂತನ ಕಂದಾಯ ಗ್ರಾಮಗಳನ್ನು ಘೋಷಣೆ ಮಾಡುವುದು ನಮ್ಮ ಸಂಕಲ್ಪ. ಕರ್ನಾಟಕದಲ್ಲಿ ಯಾರೂ ಸಹ ಭೂಮಿಯ ಮಾಲಿಕತ್ವ ಇಲ್ಲದೇ ಇರಬಾರದು ಎಂಬುದು ನಮ್ಮ ಆಶಯ. ಪತ್ರಿ ಊರಿನಲ್ಲಿ ಇರುವ ಗ್ಯಾರಂಟಿ ಸಮಿತಿಗಳು ಇಂತಹ ಭೂ ಮಾಲಿಕತ್ವ ಇಲ್ಲದ ಕುಟುಂಬಗಳಿಗೆ ಅವರ ಹಕ್ಕನ್ನು ಕೊಡಿಸುವ ಕೆಲಸ ಮಾಡಬೇಕು. ಭೂ ಒಡೆತನದಲ್ಲಿ ಕರ್ನಾಟಕ ಇಡೀ ದೇಶದಲ್ಲಿ ಮೊಟ್ಟಮೊದಲ ರಾಜ್ಯವಾಗಿ ನಿಲ್ಲಲಿದೆ. ಯಾರಿಗೆ ಜಮಿನೀನ ಹಕ್ಕು ಇಲ್ಲವೋ ಅದನ್ನು ನೀಡುವುದು ನಮ್ಮ ಗುರಿ. ಈ ಮೂಲಕ ಆರನೇ ಗ್ಯಾರಂಟಿ ನೀಡುತ್ತಿದ್ದೇವೆ. ಇದು ಕರ್ನಾಟಕದ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಲಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಂದಿನ ಮೂರು ವರ್ಷದಲ್ಲಾದರೂ ಸರ್ಕಾರ ಜನಪರವಾಗಿರಬಹುದೇ?

“ಈ ದೇಶದ ಕೆಲವೇ ಕುಟುಂಬಗಳಿಗೆ ಮಾತ್ರ ನಿಮ್ಮ ತೆರಿಗೆ ಹಣ, ದೇಶದ ಸಂಪತ್ತು ಹೋಗಬೇಕು ಎನ್ನುವುದು ಬಿಜೆಪಿಯ ಧೋರಣೆ. ಆದರೆ ಕರ್ನಾಟಕದಲ್ಲಿ ಪರಿಶಿಷ್ಟ ‌ಜಾತಿ, ಪಂಗಡ, ಆದಿವಾಸಿ ಹೀಗೆ ಎಲ್ಲ ವರ್ಗದ ಬಡವರ ಜೇಬಿಗೆ ನೇರವಾಗಿ ಹಣ ಹೋಗುತ್ತಿದೆ. ನಿಮಗೆ ನೀಡಿದ ಹಣ ನೇರವಾಗಿ ಮಾರುಕಟ್ಟೆಗೆ ಹೋಗುತ್ತದೆ, ಮರಳಿ ಸರ್ಕಾರಕ್ಕೆ ಬರುತ್ತದೆ. ಹಳ್ಳಿ, ಹಳ್ಳಿಗಳಲ್ಲಿ ಹಣದ ಚಲಾವಣೆ ನಡೆಯುತ್ತದೆ. ಇದು ಕರ್ನಾಟಕದ ಆರ್ಥಿಕತೆಯ ಸಬಲತೆಗೆ ಪುಷ್ಟಿ ನೀಡುತ್ತದೆ” ಎಂದರು.

“ಬಿಜೆಪಿ ಒಂದೆರಡು ಜನರಿಗೆ ಲಾಭ ಮಾಡಿ ನೀಡುವ ಹಣ ಈ ದೇಶದ ಒಳಗೆ ಖರ್ಚಾಗುವುದಿಲ್ಲ. ಬದಲಾಗಿ ಲಂಡನ್, ನ್ಯೂಯಾರ್ಕ್ ಹೀಗೆ ಬೇರೆ, ಬೇರೆ ದೇಶಗಳಲ್ಲಿ ‌ಖರ್ಚು ಮಾಡಿ ಅಲ್ಲಿ ಆಸ್ತಿ ಖರೀದಿ ಮಾಡುತ್ತಾರೆ. ನಮ್ಮ ಕಾಂಗ್ರೆಸ್ ಯೋಜನೆಗಳಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಅವರಿಂದ ಉದ್ಯೋಗಗಳು ಮಾಯವಾಗುತ್ತವೆ. ಏನಾದರೂ ಆರ್ಥಿಕವಾಗಿ ಸಂಕಷ್ಟ ಎದುರಾದರೆ ಬಿಜೆಪಿ ಮಾಡೆಲ್ ಇಂದ ನಷ್ಟವೇ ಹೆಚ್ಚು. ನಮ್ಮ ಗ್ಯಾರಂಟಿ ಮಾಡೆಲ್ ನಿಂದ ನಿಮ್ಮ ಜೇಬಿನಲ್ಲಿ ಇರುವ ಹಣದಿಂದ ನೀವು ಜೀವನ ಸಾಗಿಸಬಹುದು. ನಿಮ್ಮ ಸಂಕಷ್ಟ ಕಾಲದಲ್ಲಿ ನಾವು ನಿಮಗೆ ಹಣ ನೀಡುತ್ತೇವೆ. ಅವರ ಮಾಡೆಲ್ ಅಲ್ಲಿ ಲಕ್ಷಾಂತರ ರೂಪಾಯಿ ಫೀ ಭರ್ತಿ ಮಾಡಿ ಖಾಸಗಿ ವಿ.ವಿ, ಶಾಲೆಗಳಲ್ಲಿ ಓದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ‌” ಎಂದು ಹೇಳಿದರು.

“ನಾವು ಚುನಾವಣೆ ಸಮಯದಲ್ಲಿ ಐದು ಗ್ಯಾರಂಟಿಗಳನ್ನು ನಿಮಗಾಗಿ ನೀಡುತ್ತೇವೆ ಎಂದು ಭರವಸೆ ನೀಡಿದ್ದೆವು. ಆಗ ಬಿಜೆಪಿಯವರು, ಈ ದೇಶದ ಪ್ರಧಾನಿಯವರು ಈ ಭರವಸೆಗಳನ್ನು ಕಾಂಗ್ರೆಸ್ ಎಂದಿಗೂ ಈಡೇರಿಸುವುದಿಲ್ಲ ಎನ್ನುವ ಮಾತುಗಳನ್ನಾಡಿದ್ದರು. ಆದರೆ ನಾವು ಇಂದು ಕರ್ನಾಟಕದ ಬಡ ಜನರ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಸಾವಿರಾರು ಕೋಟಿ ಹಣ ನಿಮ್ಮ ಕೈ ಸೇರುತ್ತಿದೆ. ನಾವು ಮೊದಲ ಭರವಸೆಯಾಗಿ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದೆವು. ಕರ್ನಾಟಕದ ‌ಮಹಿಳೆಯರ ಖಾತೆಗೆ ನಮ್ಮ ಸರ್ಕಾರ ನೇರವಾಗಿ ಹಣ ನೀಡುತ್ತಿದೆ. ಗೃಹಜ್ಯೋತಿ, ಶಕ್ತಿ ಯೋಜನೆ ಮೂಲಕ 3.5 ಕೋಟಿಯಷ್ಟಿರುವ ಮಹಿಳೆಯರು 500 ಕೋಟಿ ಟ್ರಿಪ್ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯದ ಮೂಲಕ 4 ಕೋಟಿಗೂ ಹೆಚ್ಚು ಜನರು 10 ಕೆಜಿ ಅಕ್ಕಿ ಪಡೆಯುತ್ತಿದ್ದಾರೆ. ಯುವನಿಧಿ ಹೀಗೆ ನಾವು ಮಾತು ಕೊಟ್ಟ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X