ಗೋಡ್ಸೆ ಆರಾಧಕ ಬಿಜೆಪಿಯವರಿಂದ ವಿಕೃತಗಳಲ್ಲದೆ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
“ಹೊಸ ಯುಗ ರಾವಣ ಇಲ್ಲಿದ್ದಾರೆ, ಅವನು ದುಷ್ಟ. ಧರ್ಮ ವಿರೋಧಿ. ರಾಮ ವಿರೋಧಿ. ಭಾರತವನ್ನು ನಾಶ ಮಾಡುವುದೇ ಅವನ ಗುರಿ” ಎಂದು ಬಿಜೆಪಿ, ರಾಹುಲ್ ಗಾಂಧಿಯ ಭಾವಚಿತ್ರವನ್ನು ರಾವಣ ಚಿತ್ರದಂತೆ ಚಿತ್ರಿಸಿ ಟ್ವೀಟ್ ಮಾಡಿರುವ ಬಗ್ಗೆ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಕರಿತು ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ, “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ರಾವಣನಂತೆ ಬಿಂಬಿಸುವ ಪೋಸ್ಟರ್ ಬಿಡುಗಡೆ ಮಾಡಿರುವ ಬಿಜೆಪಿ, ತನ್ನ ಮಾನಸಿಕ ವಿಕಾರತೆಯನ್ನು ಕಾರಿಕೊಂಡಿದೆ. ಕೀಚಕ, ಮಾರೀಚನಂತಹ ಸಂತತಿಯೇ ತುಂಬಿಕೊಂಡಿರುವ ಬಿಜೆಪಿ, ರಾಹುಲ್‌ರನ್ನು ರಾವಣನಿಗೆ ಹೋಲಿಸಿರುವುದು ಹಾಸ್ಯಾಸ್ಪದ” ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ರಾವಣನಂತೆ ಬಿಂಬಿಸುವ ಪೋಸ್ಟರ್ ಬಿಡುಗಡೆ ಮಾಡಿರುವ BJP, ತನ್ನ ಮಾನಸಿಕ ವಿಕಾರತೆಯನ್ನು ಕಾರಿಕೊಂಡಿದೆ.
ಗೋಡ್ಸೆ ಆರಾಧಕ BJPಯವರಿಂದ ಇಂತಹ ವಿಕೃತಗಳಲ್ಲದೆ ಇನ್ನೇನು ನಿರೀಕ್ಷಿಸಲು ಸಾಧ್ಯ?
ಕೀಚಕ,ಮಾರೀಚನಂತಹ ಸಂತತಿಯೇ ತುಂಬಿಕೊಂಡಿರುವ BJP, ರಾಹುಲ್‌ರನ್ನು ರಾವಣನಿಗೆ ಹೋಲಿಸಿರುವುದು ಹಾಸ್ಯಾಸ್ಪದ. pic.twitter.com/GQvbEPjdaU
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 6, 2023