ಪ್ರೆಸ್‌ಮೀಟ್‌ನಲ್ಲಿ ವಿಜಯೇಂದ್ರನ ಚಮಚಾಗಳಿದ್ದರೆ ಗೆಟ್‌ಔಟ್, ನೀವು ಪಾರದರ್ಶಕವಾಗಿದ್ದರೆ ನನ್ನ ಪ್ರೆಸ್ ಮೀಟ್‌ಗೆ ಬನ್ನಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಕೊಪ್ಪಳದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನೀವು ವಿಜಯೇಂದ್ರ ಕಡೆಯವರಾ? ವಿಜಯೇಂದ್ರ ಕೇಳು ಅಂತ ಹೇಳುತ್ತಾನೆ ಹಾಗೆ ಕೇಳುತ್ತೀರಾ?” ಎಂದು ಗರಂ ಆದರು. ಬಳಿಕ ಕೆಲ ಹೊತ್ತು ಮಾಧ್ಯಮದವರು ಹಾಗೂ ಯತ್ನಾಳ್ ನಡುವೆ ಮಾತಿನ ಚಕಮಕಿ ನಡೆಯಿತು.
“ಯಡಿಯೂರಪ್ಪ, ವಿಜಯೇಂದ್ರನಿಂದ ಎಂಜಲು ಕಾಸು ತಿನ್ನುವವರು ನನ್ನ ಪ್ರೆಸ್ ಮೀಟ್‌ಗೆ ಬರಬೇಡಿ. ಪಾರದರ್ಶಕವಾಗಿದ್ದರೆ ಬನ್ನಿ, ಕೆಲವೊಂದು ಮಾಧ್ಯಮಗಳು ತಮ್ಮಿಂದಲೇ ರಾಜ್ಯದ ಜನರ ಭಾವನೆಯಾಗುತ್ತದೆಂದು ತಿಳಿದುಕೊಂಡಿದ್ದಾರೆ. ಅದು ನಿಮ್ಮ ಮೂರ್ಖತನ. ನನಗೆ ಗೊತ್ತಿದೆ, ಯಾವಯಾವ ಮಾಧ್ಯಮಗಳು ಹೇಗಿವೆ ಎಂಬುದು ನನಗೆ ಗೊತ್ತು. ಸರಿಯಾದ ಮಾಧ್ಯಮದವರು ಹೀಗೆ ಪ್ರಶ್ನೆ ಕೇಳುತ್ತಾರಾ? ಹೇಗೆ ಕೇಳಬೇಕೆಂಬುದು ಗೊತ್ತಿರಬೇಕಲ್ಲವೇ?” ಎಂದು ಸುದ್ದಿಗಾರರ ವಿರುದ್ಧ ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಬೇಲೂರು | ಪವಿತ್ರ ರಂಝಾನ್ ಆಚರಣೆ; ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ
“ಚನ್ನಮ್ಮ, ರಾಯಣ್ಣ ಹಾಗೂ ಅಂಬೇಡ್ಕರ್ ಸೇರಿ ಪಕ್ಷ ಆರಂಭವಾಗುತ್ತದೆ. ವಿಜಯದಶಮಿತನಕ ರಾಜ್ಯಾದ್ಯಂತ ಪ್ರವಾಸ ಮಾಡಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಜನರ ಅಭಿಪ್ರಾಯ ಸಂಗ್ರಹಿಸುತ್ತೇನೆ. ಆ ನಂತರ ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇನೆ” ಎಂದು ತಿಳಿಸಿದರು.
Inflation should be the scale for price rise of commodities?
Consumption increases with population increase as the result?
Solution could be in limiting the population?