ಗಣಿ ಲೂಟಿ ನಡೆಸುವ ಕುಮಾರಸ್ವಾಮಿ ಪ್ಲ್ಯಾನ್‌ ಈಗ ಜಗಜ್ಜಾಹೀರು: ಕಾಂಗ್ರೆಸ್‌ ಕಿಡಿ

Date:

Advertisements

ಕರ್ನಾಟಕದ ಭೂಮಿ ಭಗೆಯುವುದು ಕುಮಾರಸ್ವಾಮಿಯವರ ಅತ್ಯಂತ ಆಸಕ್ತಿದಾಯಕ ವಿಷಯ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕೇವಲ ಅಧಿಕಾರ ಹಪಹಪಿತನಕ್ಕೆ ಮಾತ್ರವಲ್ಲ, ಅಧಿಕಾರ ಬಳಸಿ ಗಣಿಯಲ್ಲಿ ಲೂಟಿಗಾರಿಕೆ ನಡೆಸುವುದು ಅವರ ಪ್ಲ್ಯಾನ್‌ ಆಗಿತ್ತು ಎನ್ನುವುದು ಈಗ ಜಗಜ್ಜಾಹೀರಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ದ ಗಣಿ ಅಕ್ರಮ ವಿಚಾರದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಲೋಕಾಯುಕ್ತ ಸಲ್ಲಿಸಿರುವ ಮನವಿಯನ್ನು ರಾಜ್ಯಪಾಲರು 10 ತಿಂಗಳಿನಿಂದ ತಮ್ಮ ಬಳಿಯೇ ಇಟ್ಟುಕೊಂಡಿರುವ ಬಗ್ಗೆ ಈ ದಿನ. ಕಾಂ ವರದಿ ಮಾಡಿದ ಬೆನ್ನಲ್ಲೇ ಕೆಪಿಸಿಸಿ ಕುಮಾರಸ್ವಾಮಿ ವಿರುದ್ಧ ಎಕ್ಸ್‌ ತಾಣದಲ್ಲಿ ಕಿಡಿಕಾರಿದೆ.

“2023ರ ನವೆಂಬರ್ ತಿಂಗಳಲ್ಲೇ ಗಣಿ ಹಗರಣದ ಕುರಿತಂತೆ ಕೇಂದ್ರ ಸಚಿವ ಕುಮಾರಸ್ವಾಮಿಯವರ ತನಿಖೆ ನಡೆಸಲು ಲೋಕಾಯುಕ್ತ ರಾಜ್ಯಪಾಲರ ಅನುಮತಿ ಕೇಳಿದೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆ ಎದುರಿಸುವ ನೈತಿಕತೆ ತೋರಿಸಲಿ, ಗಣಿ ಹಗರಣದ ಬಗ್ಗೆ ರಾಜ್ಯದ ಜನರಿಗೆ ಉತ್ತರ ನೀಡಲಿ” ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

Advertisements

“ಸಹಿ ನನ್ನದಲ್ಲ ಎಂದಿದ್ದ ಕುಮಾರಸ್ವಾಮಿಯವರ ಸುಳ್ಳು ಎಫ್‌ಎಸ್‌ಎಲ್‌ ವರದಿಯಲ್ಲಿ ಬಹಿರಂಗವಾಗಿದೆ. ಸುಳ್ಳು ಹೇಳಿ ಕಾನೂನಿನ ದಿಕ್ಕು ತಪ್ಪಿಸಿದ್ದಕ್ಕಾಗಿ ಅವರು ರಾಜೀನಾಮೆ ಕೊಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಲಿ” ಎಂದು ಕುಟುಕಿದೆ.

“ಕುಮಾರಸ್ವಾಮಿಯವರ ಮೇಲೆ ಗುರುತರವಾದ ಗಣಿ ಹಗರಣದ ಪ್ರಕರಣ ಲೋಕಾಯುಕ್ತ ಮುಂದಿದೆ. ರಾಜ್ಯಪಾಲರ ಟೇಬಲ್ ಮೇಲೆ ಕುಮಾರಸ್ವಾಮಿಯವರ ವಿರುದ್ದ ತನಿಖೆಗೆ ಅನುಮತಿ ಕೋರಿದ ಕಡತ ಕುಳಿತಿದೆ. ಯಡಿಯೂರಪ್ಪನವರ ಮೇಲೆ ಗಂಭೀರವಾದ ಪೋಕ್ಸೋ ಪ್ರಕರಣವಿದೆ. ವಿಜಯೇಂದ್ರರ ಮೇಲೆ ಆರ್‌ಟಿಜಿಎಸ್‌ ಲಂಚದ ಆರೋಪವಿದೆ. ಆರ್. ಅಶೋಕ್ ಅವರ ವಿರುದ್ಧ ಬಗರ್ ಹುಕುಂ ಹಗರಣದ ಕಪ್ಪು ಚುಕ್ಕೆ ಇದೆ. ಭ್ರಷ್ಟಾಚಾರದ ಆರೋಪಿಗಳೆಲ್ಲಾ ಒಟ್ಟಿಗೆ ಸೇರಿ ಪಾದಯಾತ್ರೆ ಮಾಡುತ್ತಿರುವುದು ಪಾಪ ತೊಳೆದುಕೊಳ್ಳುವುದಕ್ಕೋ, ಮತ್ತಷ್ಟು ಪಾಪ ಮಾಡಲು ಪ್ರೇರಣೆ ಪಡೆಯುವುದಕ್ಕೋ? ಬಿಜೆಪಿ ಜೆಡಿಎಸ್ ಪಾದಯಾತ್ರೆ ಆಲಿಬಾಬಾ ಮತ್ತು 40 ಕಳ್ಳರ ಕತೆ ನೆನಪಿಸುವಂತೆ ಇದೆ” ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

“ಕೇಂದ್ರ ಮಂತ್ರಿಯಾಗಿ ಕೃಷಿ ಖಾತೆಯನ್ನೇ ಕೇಳುತ್ತೇನೆ ಎನ್ನುತ್ತಿದ್ದ ಬ್ರದರ್ ಸ್ವಾಮಿಗಳು ಕರ್ನಾಟಕದ ಜನರ ಕಿವಿ ಮೇಲೆ ಇಟ್ಟಿದ್ದರಷ್ಟೇ. ಅವರ ಕಣ್ಣು ಇದ್ದಿದ್ದು ಗಣಿ ಖಾತೆ ಮೇಲೆಯೇ ಹೊರತು ಕೃಷಿ ಖಾತೆಯ ಮೇಲಲ್ಲ. ಮುಖ್ಯಮಂತ್ರಿಯಾಗಿದ್ದಾಗ
ಸಂಡೂರಿನ 550 ಎಕರೆ ಭೂಮಿ ಭಗೆಯಲು ಬ್ರದರ್ ಸ್ವಾಮಿಗಳು ಅಕ್ರಮ ಮಾರ್ಗ ಅನುಸರಿಸಿದ್ದರು, ಈಗ ಕೇಂದ್ರ ಗಣಿ ಸಚಿವರಾಗಿ ದೇವದಾರಿ ಗಣಿ ಭಗೆಯಲು ಕೈ ಇಡುವ ಪ್ರಯತ್ನ ಮಾಡಿದ್ದಾರೆ” ಎಂದು ಆರೋಪಿಸಿದೆ.

“ಕಳೆದ ನವೆಂಬರ್ ನಲ್ಲೇ ಲೋಕಾಯುಕ್ತ ಕುಮಾರಸ್ವಾಮಿಯವರ ವಿಚಾರಣೆಗೆ ಅನುಮತಿ ಕೇಳಿದ್ದ ಸಂಗತಿಯನ್ನು ಮುಚ್ಚಿಟ್ಟಿದ್ದೇಕೆ, ಕೇವಲ ಒಂದು ಖಾಸಗಿ ದೂರಿಗೆ 24 ಗಂಟೆಯ ಒಳಗೆ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ ರಾಜ್ಯಪಾಲರು ಲೋಕಾಯುಕ್ತರು ಅನುಮತಿ ಕೇಳಿದ್ದರೂ ಕುಮಾರಸ್ವಾಮಿಯವರಿಗೆ ನೋಟಿಸ್ ನೀಡದೆ, ವಿಚಾರಣೆಗೂ ಅನುಮತಿ ನೀಡದೆ ಕಡತವನ್ನು ಮೂಲೆಗೆ ಎಸೆದು ಕುಳಿತಿದ್ದೇಕೆ” ಎಂದು ಪ್ರಶ್ನಿಸಿದೆ.

“ಕನ್ನಡಮ್ಮನ ಒಡಲು ಭಗೆಯಲು ಹಾತೊರೆಯುವ ಕುಮಾರಸ್ವಾಮಿಯವರಿಂದ ಕರ್ನಾಟಕವನ್ನು ರಕ್ಷಿಸಲು ರಾಜ್ಯಪಾಲರಿಗೆ ಇಷ್ಟವಿಲ್ಲವೇ?” ಎಂದು ಕಾಂಗ್ರೆಸ್‌ ಕೇಳಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X