ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದ ಅಮೆರಿಕ: ಐದು ಎಡಪಕ್ಷಗಳಿಂದ ಖಂಡನೆ

Date:

Advertisements

ಇರಾನ್ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿರುವುದನ್ನು ದೇಶದ ಐದು ಎಡಪಕ್ಷಗಳು ಬಲವಾಗಿ ಖಂಡಿಸಿವೆ. “ಇದು ಇರಾನಿನ ಸಾರ್ವಭೌಮತ್ವ ಮತ್ತು ವಿಶ್ವಸಂಸ್ಥೆಯ ಸನ್ನದಿನ(ಚಾರ್ಟರ್‌ನ) ಗಂಭೀರ ಉಲ್ಲಂಘನೆಯಾಗಿದ್ದು, ಜಗತ್ತಿನಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ಪಶ್ಚಿಮ ಏಷ್ಯಾವನ್ನು ಅಸ್ಥಿರಗೊಳಿಸುತ್ತದೆ ಮತ್ತು ತೀವ್ರ ಆರ್ಥಿಕ ದುಷ್ಪರಿಣಾಮಗಳನ್ನು ಬೀರುತ್ತದೆ” ಎಂದು ಎಡಪಕ್ಷಗಳು ಹೇಳಿವೆ.

ಇರಾನ್ ಅಣ್ವಸ್ತ್ರ ನೆಲೆಗಳನ್ನು ಗುರಿಯಾಗಿಸಿ ಅಮೆರಿಕೆ ಬಾಂಬ್ ದಾಳಿ ನಡೆಸಿದೆ. ಇರಾನ್‌ನ ಮೂರು ಅಣು ಕೇಂದ್ರಗಳನ್ನು ಬಾಂಬ್ ದಾಳಿಯಲ್ಲಿ ನಾಶಪಡಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರು. ಈ ದಾಳಿ ಬಗ್ಗೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯಾ ಗುಟೆರಸ್ ಸೇರಿದಂತೆ ಹಲವು ನಾಯಕರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಐದು ಎಡಪಕ್ಷಗಳು ಟ್ರಂಪ್ ಸರ್ಕಾರದ ಈ ನಡೆಯನ್ನು ಖಂಡಿಸಿವೆ.

ಇದನ್ನು ಓದಿದ್ದೀರಾ? ಮೊದಲ ದಾಳಿ ಮಾಡಿದ ಸೋ-ಕಾಲ್ಡ್‌ ಶಾಂತಿಪ್ರಿಯ ಟ್ರಂಪ್; ತಮ್ಮ ಯುದ್ಧ ವಿರೋಧಿ ಹೋರಾಟ ಕೈಬಿಟ್ಟಿದ್ದೇಕೆ?

Advertisements

“ಇರಾನ್ ಇನ್ನೇನು ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸಲಿದೆ ಎನ್ನುತ್ತ ಅಮೆರಿಕ ಮತ್ತು ಇಸ್ರೇಲ್ ತಮ್ಮ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿವೆ. ಆದರೆ, ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(IAEA)ಯ ಮಹಾನಿರ್ದೇಶಕ ರಾಫೆಲ್ ಗ್ರೋಸಿ ಜೂನ್ 19ರಂದು ‘ಪರಮಾಣು ಶಸ್ತ್ರಾಸ್ತ್ರದತ್ತ ಚಲಿಸುವ ಒಂದು ವ್ಯವಸ್ಥಿತ ಪ್ರಯತ್ನದ ಬಗ್ಗೆ ನಮಗೆ ಯಾವುದೇ ಪುರಾವೆಯೂ ಇರಲಿಲ್ಲ’ ಎಂದು ಹೇಳಿರುವುದನ್ನು ಗಮನಿಸುವುದು ಮುಖ್ಯ” ಎಂದು ಎಡಪಕ್ಷಗಳು ಹೇಳಿವೆ.

“ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಸೂಚಿಸುವ ನಿರ್ಣಾಯಕ ಪುರಾವೆಗಳನ್ನು ತಾವು ಹೊಂದಿಲ್ಲ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಸಹ ಒಪ್ಪಿಕೊಂಡಿವೆ. ಇದಲ್ಲದೆ, ಇರಾನ್ ಈಗಲೂ ಪರಮಾಣು ಅಪ್ರಸರಣ ಒಪ್ಪಂದಕ್ಕೆ(NPT) ಸಹಿದಾರನಾಗಿಯೇ ಇದೆ” ಎಂಬ ಸಂಗತಿಯತ್ತ ಎಡಪಕ್ಷಗಳು ಗಮನ ಸೆಳೆದಿವೆ.

us attack on iran

“ಈ ಎಲ್ಲ ಸಂಗತಿಗಳ ಹೊರತಾಗಿಯೂ, ಇರಾನ್ ಮತ್ತು ಅಮೆರಿಕ ನಡುವಿನ ಯಾವುದೇ ಸಂಭಾವ್ಯ ಮಾತುಕತೆಗಳನ್ನು ಹಾಳುಮಾಡಲು ಇಸ್ರೇಲ್ ಜೂನ್ 12ರಂದು ಇರಾನ್ ಮೇಲೆ ದಾಳಿ ನಡೆಸಿತು. ಈಗ, ಅಧ್ಯಕ್ಷ ಟ್ರಂಪ್ ಮಾತುಕತೆಗೆ ಎರಡು ವಾರಗಳ ಕಾಲಾವಕಾಶ ನೀಡಿದ್ದರೂ ಸಹ, ಯುಎಸ್‍ ಈ ಆಕ್ರಮಣಕಾರಿ ಕೃತ್ಯದಲ್ಲಿ ಇಸ್ರೇಲ್ ಜೊತೆ ಸೇರಿಕೊಂಡಿದೆ, ತಮ್ಮದೇ ಆದ ಗುಪ್ತಚರ ವಿಶ್ಲೇಷಣೆಗಳನ್ನು ಅಥವಾ ಯಾವುದೇ ರಾಜತಾಂತ್ರಿಕ ಪ್ರಕ್ರಿಯೆಯ ಬಗ್ಗೆ ಗಮನವನ್ನೇ ಹರಿಸದೆ, ಇರಾನ್ ಮತ್ತು ಇಡೀ ಪಶ್ಚಿಮ ಏಷ್ಯಾ ಪ್ರದೇಶದ ಮೇಲೆ ಯುದ್ಧ ಹೇರುವುದೇ ಅಮೆರಿಕ-ಇಸ್ರೇಲ್ ಅಕ್ಷದ ಉದ್ದೇಶ ಎಂಬುದನ್ನು ಸ್ಪಷ್ಟವಾಗಿ ಇದು ತೋರಿಸುತ್ತದೆ” ಎಂದು ಹೇಳಿದೆ.

“ಇರಾನನ್ನು ನಾಶಪಡಿಸುವುದು ಮತ್ತು ಪಶ್ಚಿಮ ಏಷ್ಯಾದ ಮೇಲೆ ಸಾಮ್ರಾಜ್ಯಶಾಹಿ ಪ್ರಾಬಲ್ಯವನ್ನು ಸ್ಥಾಪಿಸುವುದು ಮತ್ತು ಸಂಪನ್ಮೂಲಗಳ ಜಾಗತಿಕ ಹರಿವನ್ನು ನಿಯಂತ್ರಿಸುವುದೇ ನಿಜವಾದ ಉದ್ದೇಶವಾಗಿದೆ ಎಂಬುದು ಸ್ವಯಂವೇದ್ಯ. ಈ ದಾಳಿಯು ಮಿಲಿಟರಿ-ಕೈಗಾರಿಕಾ ಸಂಕೀರ್ಣದ ಹಿತಾಸಕ್ತಿಗಳನ್ನು ಪೂರೈಸುವ ಮತ್ತು ಅಂತಾರಾಷ್ಟ್ರೀಯ ಬಂಡವಾಳವು ದೀರ್ಘಕಾಲದಿಂದಿರುವ ತನ್ನ ಬಿಕ್ಕಟ್ಟಿನಿಂದ ಹೊರಬರಲು ಅನುವು ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ” ಎಂದು ಎಡಪಕ್ಷಗಳು ಅಭಿಪ್ರಾಯಪಟ್ಟಿವೆ.

ಇದನ್ನು ಓದಿದ್ದೀರಾ? ಅಮೆರಿಕ ದಾಳಿ: ಇರಾನ್‌ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

“ಅಮೆರಿಕವು ಇರಾನ್ ಮೇಲೆ ಬಂಕರ್‌ಗಳನ್ನು ಧ್ವಂಸಗೊಳಿಸುವ ಬಾಂಬ್‌ಗಳನ್ನು ಬೀಳಿಸಲು ಬಿ -2 ಸ್ಟೆಲ್ತ್ ಬಾಂಬರ್‌ಗಳನ್ನು ನಿಯೋಜಿಸಿ ಇರಾಕ್‌ ಮೇಲೆ ಈ ಹಿಂದೆ ನಡೆಸಿದ ಆಕ್ರಮಣದ ಮರುಪ್ರದರ್ಶನ ಕೊಟ್ಟಿದೆ. ಇರಾಕ್‍ ಮೇಲೆಯೂ ಹೀಗೆಯೇ ಪರಿಶೀಲನೆಗೆ ಒಳಪಡಿಸದ ದಾವೆಗಳ ಆಧಾರದ ಮೇಲೆ ದಾಳಿ ನಡೆಸಲಾಗಿತ್ತು, ಈ ದಾವೆಗಳು ಸುಳ್ಳು ಎಂದು ನಂತರ ಸಾಬೀತಾಯಿತು” ಎಂಬುದನ್ನು ಎಡಪಕ್ಷಗಳು ಹೇಳಿಕೆಯಲ್ಲಿ ಉಲ್ಲೇಖಿಸಿವೆ.

“ಎರಡನೇ ಮಹಾಯುದ್ಧದ ಕೊನೆಯಲ್ಲಿ ಜಪಾನ್ ಮಾತುಕತೆಗೆ ಸಿದ್ಧವಾಗಿದ್ದರೂ ಸಹ, ಪರಮಾಣು ಶಸ್ತ್ರಾಸ್ತ್ರವನ್ನು ಬಳಸಿದ ಏಕೈಕ ದೇಶವಾದ ಅಮೆರಿಕವು ಈಗ ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ” ಎಂದಿರುವ ಎಡಪಕ್ಷಗಳು ಅಮೆರಿಕದ ದಾಳಿಯು ಸಂಘರ್ಷವನ್ನು ತೀವ್ರವಾಗಿ ಹೆಚ್ಚಿಸುವ ಸಾಧ್ಯತೆಯಿದೆ ಎಂಬ ಭೀತಿಯನ್ನು ವ್ಯಕ್ತಪಡಿಸಿವೆ.

“ಇದು ಜಾಗತಿಕ ಶಾಂತಿ ಮತ್ತು ಜನಸಾಮಾನ್ಯರರ ಜೀವನೋಪಾಯಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ವಿಶೇಷವಾಗಿ, ಇದು ತೈಲ ಆಮದು ಮತ್ತು ವಲಸೆ ಕಾರ್ಮಿಕರಿಗೆ ಅವಕಾಶಗಳಿಗಾಗಿ ಪಶ್ಚಿಮ ಏಷ್ಯಾವನ್ನು ಹೆಚ್ಚು ಅವಲಂಬಿಸಿರುವ ಭಾರತದಂತಹ ದೇಶಗಳ ಮೇಲೆ ದುಷ್ಪರಿಣಾಮ ಬೀರಲಿವೆ. ಯುದ್ಧದ ಆರ್ಥಿಕ ಪರಿಣಾಮಗಳು ಬಹಳ ಹೆಚ್ಚು ತಟ್ಟುವುದು ಈಗಾಗಲೇ ಹೊರೆಹೊತ್ತಿರುವ ದುಡಿಯುವ ಜನಸಾಮಾನ್ಯರನ್ನು” ಎಂದು ಎಡಪಕ್ಷಗಳು ಎಚ್ಚರಿಸಿವೆ.

“ಭಾರತ ಸರ್ಕಾರವು ತನ್ನ ಅಮೆರಿಕ ಪರ, ಇಸ್ರೇಲ್ ಪರ ವಿದೇಶಾಂಗ ನೀತಿ ನಿಲುವನ್ನು ತಕ್ಷಣವೇ ತ್ಯಜಿಸಿ ಯುದ್ಧವನ್ನು ನಿಲ್ಲಿಸುವ ಜಾಗತಿಕ ಪ್ರಯತ್ನಗಳೊಂದಿಗೆ ಕೈಜೋಡಿಸಬೇಕು. ಈ ಸಾಮ್ರಾಜ್ಯಶಾಹಿ ಆಕ್ರಮಣದ ಕೃತ್ಯದ ವಿರುದ್ಧ ಪ್ರತಿಭಟನಾ ಕ್ರಮಗಳನ್ನು ತಕ್ಷಣವೇ ಸಂಘಟಿಸಲು ತಮ್ಮ ಎಲ್ಲಾ ಘಟಕಗಳಿಗೆ ಕರೆ ನೀಡಿವೆ ಮತ್ತು ನಮ್ಮ ದೇಶದ ಎಲ್ಲಾ ಶಾಂತಿಪ್ರಿಯ ಜನರು ಅಮೆರಿಕದ ದಾಳಿಯನ್ನು ಖಂಡಿಸಲು ಎಡಪಕ್ಷಗಳೊಂದಿಗೆ ಕೈಜೋಡಿಸಬೇಕು ಎಂದು ಎಡಪಕ್ಷಗಳು ಮನವಿ ಮಾಡಿದೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಸಿಪಿಐ(ಎಂ-ಎಲ್ ಲಿಬರೇಶನ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಆರ್‌ಎಸ್‌ಪಿ ಪ್ರಧಾನ ಕಾರ್ಯದರ್ಶಿ ಮನೋಜ್ ಭಟ್ಟಾಚಾರ್ಯ ಹಾಗೂ ಫಾರ್ವರ್ಡ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದೇವರಾಜನ್ ಈ ಜಂಟಿ ಹೇಳಿಕೆಯನ್ನು ನೀಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X