ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿ ನೋಡಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ 50 ಸ್ಥಾನ ಗೆಲ್ಲುವುದು ಕಷ್ಟ. ಇಂತಹ ಸ್ಥಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡ್ತೀವಿ ಅಂದ್ರೇನು? ಮಾಡಲ್ಲ ಅಂದ್ರೇನು? ಬೇಕಾದರೆ ಮೂರು ಲೋಕಕ್ಕೂ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಿ ಎಂದು ಸಿ ಟಿ ರವಿ ಲೇವಡಿ ಮಾಡಿದರು.
ಚಿಕ್ಕಮಗಳೂರಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಪಾತಾಳ, ದೇವ, ಭೂಲೋಕ ಮೂರಕ್ಕೂ ಖರ್ಗೆ ಅವರನ್ನು ಮಾಡಲಿ. ಹೇಗೂ 50 ದಾಟಲ್ಲ. ಇದರ ಮೇಲೆ ಏನೂ ಹೇಳೋಣ ಇವರ ಬಗ್ಗೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ
ದಲಿತರನ್ನು ಯಾಕೆ ಸಿಎಂ ಮಾಡಿಲ್ಲ?
“ಕಾಂಗ್ರೆಸ್ಗೆ ಬಹುಮತ ಬಂದಾಗ ಯಾಕೆ ದಲಿತರನ್ನು ಸಿಎಂ ಮಾಡಲ್ಲ. ಈ ಬಾರಿ ಏಕೆ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕಿತ್ತು. ಈ ಹಿಂದೆ ಪರಮೇಶ್ವರ್ ಎಲ್ಲಿ ಸಿಎಂ ಆಗ್ತಾರೋ ಅಂತ ಷಡ್ಯಂತ್ರ, ಹಣ, ಜಾತಿಯಿಂದ ಸೋಲಿಸಿದರು” ಎಂದು ಹೇಳಿದರು.
“ಚುನಾವಣೆ ಪೂರ್ವ ಡಿಕೆ ಶಿವಕುಮಾರ್ ಅವರೇ ಖರ್ಗೆ ಸಿಎಂ ಆಗಲಿ ಎಂದಿದ್ದರು. ಸುಮಾರು ಜನ ಅವರ ಮಾತನ್ನು ನಂಬಿ ಖರ್ಗೆ ಸಿಎಂ ಆಗ್ತಾರೆ ಅಂತ ಓಟು ಹಾಕಿದ್ರು. ಮೆಜಾರಿಟಿ ಬಂದ ಮೇಲೆ ಖರ್ಗೆ ಅವರೂ ಇಲ್ಲ, ಖರ್ಗೆ ಅವರ ಹೆಸರೂ ಇಲ್ಲ” ಎಂದು ಟೀಕಿಸಿದರು.