ಬಿಜೆಪಿಯ ಕೈಸರ್‌ಗಂಜ್ ಲೋಕಸಭಾ ಅಭ್ಯರ್ಥಿ ಕರಣ್ ಭೂಷಣ್ ಸಿಂಗ್ ತಮ್ಮ ತಂದೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಹೊರಿಸಲಾಗಿರುವ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಮಾಡಿದ ಆರೋಪವನ್ನು ತಳ್ಳಿ ಹಾಕಿದ್ದು, ಇದು ರಾಜಕೀಯ ಪ್ರೇರಿತ ಎಂದಿದ್ದಾರೆ. ಹಾಗೆಯೇ ನನ್ನ ತಂದೆಯಂತೆ ನಾನು ನಿಮಗಾಗಿ ಇರುತ್ತೇನೆ ಎಂದು ಹೇಳಿದ್ದಾರೆ.
ಕರಣ್ ಭೂಷಣ್ ತನ್ನ ಕ್ಷೇತ್ರದ ವಿವಿಧ ಭಾಗಗಳಲ್ಲಿ ಪ್ರತಿದಿನ ಸರಾಸರಿ 10 ಸಣ್ಣ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಶುಕ್ರವಾರ ಸಭೆಯೊಂದರಲ್ಲಿ ಮಾತನಾಡಿದ ಅವರು, “ಮತದಾನಕ್ಕೂ ಮುನ್ನ ಕ್ಷೇತ್ರದ ಪ್ರತಿ ಗ್ರಾಮಗಳ ಜನರನ್ನು ತಲುಪಿ ಬೆಂಬಲ ನೀಡುವಂತೆ ಮನವಿ ಮಾಡಲು ಯೋಜನೆ ರೂಪಿಸಲಾಗಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಮಿತ್ರಪಕ್ಷ ಆರ್‌ಎಲ್‌ಡಿ ವಕ್ತಾರ ರಾಜೀನಾಮೆ
“ನೀವೆಲ್ಲರೂ ನನ್ನ ಕುಟುಂಬವನ್ನು ಬೆಂಬಲಿಸಿದ್ದೀರಿ. ನನ್ನ ತಂದೆಯೊಂದಿಗೆ ನಿಂತಿದ್ದೀರಿ. ನಮಗೆ ನೀಡುವ ಬೆಂಬಲ ಹೀಗೆಯೇ ಮುಂದುವರಿಸಬೇಕು ಎಂಬುವುದು ನಮ್ಮ ಆಶಯ. ನನ್ನ ತಂದೆಯಂತೆ ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ” ಎಂದು ಹೇಳಿದರು.
#WATCH | Gonda, UP: On Lok Sabha elections, BJP MP Brij Bhushan Sharan Singh says, “We won the last elections with a margin of 2.8 lakh votes…The atmosphere is in favour of the BJP and we will win the election by a big margin…It is the nature of our country, whenever atrocity… pic.twitter.com/MFbuAYkiw9
— ANI (@ANI) May 18, 2024
“ನಾವು ಕಳೆದ ಚುನಾವಣೆಯಲ್ಲಿ 2.8 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದೇವೆ. ಈಗ ವಾತಾವರಣ ಬಿಜೆಪಿ ಪರವಾಗಿದ್ದು ಮತ್ತೆ ಅಗಾಧ ಅಂತರದಲ್ಲಿ ಗೆಲುವು ಪಡೆಯಲಿದ್ದೇವೆ. ಯಾರದಾದರೂ ವಿರುದ್ಧ ದೌರ್ಜನ್ಯ ನಡೆದಾಗ ಜನರು ಅವರ ಪರವಾಗಿ ನಿಲ್ಲುತ್ತಾರೆ. ಒಂದುವರೆ ವರ್ಷದಿಂದ ಕೆಲವು ಜನರು ನಮ್ಮ ವಿರುದ್ಧ ಕೆಟ್ಟ ಭಾಷೆ ಬಳಸುತ್ತಿದ್ದಾರೆ. ಆದರೆ ಅದ್ಭುತ ಮತಗಳ ಅಂತರದಿಂದ ಕರಣ್ ಭೂಷಣ್ ಗೆಲ್ಲುವಂತೆ ಜನರು ಬಯಸುತ್ತಾರೆ” ಎಂದು ಬ್ರಿಜ್ ಭೂಷಣ್ ಹೇಳಿಕೊಂಡಿದ್ದಾರೆ.
ಬ್ರಿಜ್ ಭೂಷಣ್ ಕುಟುಂಬಕ್ಕೆ ಗೊಂಡಾ ಮತ್ತು ಹತ್ತಿರದ ಜಿಲ್ಲೆಗಳ ಮೇಲ್ಜಾತಿಯವರ ಬೆಂಬಲ ಅಧಿಕವಾಗಿದ್ದು, ಅದನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಕುಟುಂಬವಿದೆ. ಗೊಂಡಾ, ಬಲರಾಂಪುರ ಮತ್ತು ಕೈಸರ್‌ಗಂಜ್ ಕ್ಷೇತ್ರಗಳನ್ನು ಪ್ರತಿನಿಧಿಸಿ ಆರು ಬಾರಿ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್‌ಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ.
ಇದನ್ನು ಓದಿದ್ದೀರಾ? ಬ್ರಿಜ್ ಭೂಷಣ್‌ಗೆ ತಪ್ಪಿದ ಲೋಕಸಭಾ ಟಿಕೆಟ್: ಪುತ್ರನಿಗೆ ಮಣೆ ಹಾಕಿದ ಬಿಜೆಪಿ
ಆರು ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳದ ಆರೋಪವನ್ನು ಬ್ರಿಜ್ ಭೂಷಣ್ ಹೊತ್ತಿದ್ದಾರೆ. ಈ ಆರೋಪದ ಬಳಿಕ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಸ್ಥಾನದಿಂದ ಬ್ರಿಜ್ ಭೂಷಣ್ ಕೆಳಕ್ಕಿಳಿದಿದ್ದಾರೆ. ಇನ್ನು ಕರಣ್ ಭೂಷಣ್ ಅವರ ಹಿರಿಯ ಸಹೋದರ ಪ್ರತೀಕ್ ಭೂಷಣ್ ಸಿಂಗ್ ಬಿಜೆಪಿ ಶಾಸಕರಾಗಿದ್ದಾರೆ. ಅವರ ತಾಯಿ ಕೇತ್ಕಿ ದೇವಿ ಸಿಂಗ್ ಗೊಂಡಾದ ಮಾಜಿ ಸಂಸದೆಯಾಗಿದ್ದಾರೆ. ಒಟ್ಟಾರೆಯಾಗಿ ಈ ಕುಟುಂಬದ ಬಹುತೇಕ ಎಲ್ಲ ಸದಸ್ಯರು ಬಿಜೆಪಿಯಿಂದ ಒಮ್ಮೆಯಾದರೂ ಟಿಕೆಟ್‌ಗಿಟ್ಟಿಸಿಕೊಂಡು ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ.
ಕೈಸರ್‌ಗಂಜ್ ಕ್ಷೇತ್ರದಲ್ಲಿ ಇಂಡಿಯಾ ಒಕ್ಕೂಟದಿಂದ ಸಮಾಜವಾದಿ ಪಕ್ಷದ ರಾಮ್ ಭಗತ್ ಮಿಶ್ರಾ ಅವರು ಕರಣ್ ಎದುರು ಸ್ಪರ್ಧಿಸಲಿದ್ದಾರೆ. ಬಿಎಸ್‌ಪಿಯಿಂದ ನರೇಂದ್ರ ಪಾಂಡೆ ಕಣಕ್ಕಿಳಿದಿದ್ದಾರೆ. ಮೇ 20 ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ.
ತಂದೆಯವರು ಮಾಡಿದ್ದನ್ನೆ ನಾನೂ ಮಾಡುತ್ತೇವೆ ಎಂದು ಇದರ ಅರ್ಥವೆ…?