ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೂರರ ಗಡಿಯನ್ನು ದಾಟಿ ಮುನ್ನಡೆ ಸಾಧಿಸುತ್ತಿದೆ. ಈ ಮೂಲಕ ಇಂಡಿಯಾ ಒಕ್ಕೂಟಕ್ಕೆ ಬೃಹತ್ ಕೊಡುಗೆಯನ್ನು ನೀಡಲು ಕಾಂಗ್ರೆಸ್ ಸಜ್ಜಾಗಿದೆ.
2014ರಲ್ಲಿ ಕೇವಲ 44 ಮತ್ತು 2019ರ ಚುನಾವಣೆಯಲ್ಲಿ 52 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಕಾಂಗ್ರೆಸ್ 2024ರಲ್ಲಿ ನೂರಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ. 2009ರಲ್ಲಿ ಯುಪಿಎ 206 ಸ್ಥಾನಗಳನ್ನು ಗೆದ್ದಿತ್ತು.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ದೇಶ ಮುನ್ನಡೆಸಬೇಕು ಎಂಬುವುದು ರಾಷ್ಟ್ರದ ಆಶಯ: ಸಂಜಯ್ ರಾವತ್
ಬೆಳಗ್ಗೆ 11.15ಕ್ಕೆ ಕಾಂಗ್ರೆಸ್ 99 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಂಡಿಯಾ ಒಕ್ಕೂಟವು 226ಕ್ಕೂ ಅಧಿಕ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಎಕ್ಸಿಟ್ ಪೋಲ್‌ಗಳ ಲೆಕ್ಕಾಚಾರವನ್ನು ಹುಸಿಯಾಗಿಸುತ್ತಿದೆ. ಎನ್‌ಡಿಎ 291 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
I owe an apology to the Congress party. It’s leader and primarily Rahul Gandhi.
— Shri 🇵🇸🇮🇳 (@Bombaysticc) June 4, 2024
2014ರಲ್ಲಿ ಏನಾಯಿತು?
2014ರಲ್ಲಿ ಕಾಂಗ್ರೆಸ್ ಮೋದಿ ಅಲೆಯನ್ನು ಎದುರಿಸಿ ಭಾರೀ ಸೋಲು ಕಂಡಿತ್ತು. ಆದರೆ 2024ರಲ್ಲಿ ಮೋದಿ ಅಲೆ ಅಲಿಯುತ್ತಿದ್ದು ಕಾಂಗ್ರೆಸ್ ಅಧಿಕ ಸ್ಥಾನವನ್ನು ಗಳಿಸುವ ನಿರೀಕ್ಷೆಯಿದೆ. 2014ರ ಚುನಾವಣೆಯಲ್ಲಿ ಹಿಂದಿ ಮಾತನಾಡುವ ಜನರು ಅಧಿಕವಾಗಿರುವ ರಾಜ್ಯಗಳಲ್ಲಿ ಬಿಜೆಪಿ ಅಧಿಕ ಸ್ಥಾನ ಪಡೆದುಕೊಂಡಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ: ರಾಯ್‌ಬರೇಲಿ, ವಯನಾಡಿನಲ್ಲಿ ರಾಹುಲ್ ಗಾಂಧಿ ಮುನ್ನಡೆ
10 ವರ್ಷಗಳ ಹಿಂದೆ ದೇಶದ 543 ಸ್ಥಾನಗಳಲ್ಲಿ 336 ಸ್ಥಾನಗಳನ್ನು ಎನ್‌ಡಿಎ ಗೆದ್ದಿತ್ತು, ಸ್ವಂತ ಬಲದಿಂದ ಕೇಸರಿ ಪಕ್ಷ 282 ಸ್ಥಾನಗಳನ್ನು ಗೆದ್ದಿದೆ. ಆದರೆ ಹಲವಾರು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಳ್ಳುತ್ತಿದೆ.
2019ರಲ್ಲಿ ಏನಾಯಿತು?
ಐದು ವರ್ಷಗಳ ಕಾಲ ಬಿಜೆಪಿ ತನ್ನ ಸ್ವಂತ ಬಲದಿಂದ 303 ಮತ್ತು ಮಿತ್ರಪಕ್ಷಗಳೊಂದಿಗೆ 353 ಸ್ಥಾನಗಳನ್ನು ಗೆದ್ದು ಮುಂದೆ ಸಾಗಿತು. ಯುಪಿಯಲ್ಲಿ 74, ಬಿಹಾರದಲ್ಲಿ 39 ಮತ್ತು ಮಧ್ಯಪ್ರದೇಶದಲ್ಲಿ 28 ಸ್ಥಾನಗಳನ್ನು ಗಳಿಸಿತ್ತು. ಕಾಂಗ್ರೆಸ್, ಈ ಬಾರಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ಪರ್ಧಿಸಿದ್ದು, ಮತ್ತೊಮ್ಮೆ ಹಿನ್ನೆಡೆ ಕಂಡಿತ್ತು.