ಕಾಂಗ್ರೆಸ್ ನಾಯಕ, ವಯನಾಡು ಸಂಸದ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಮತ್ತು ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಎರಡೂ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸಿದ್ದಾರೆ.
ಈ ಹಿಂದೆ ಸೋನಿಯಾ ಗಾಂಧಿ 2004ರಿಂದ 2019ರವರೆಗೆ ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿರುವ ರಾಯ್‌ಬರೇಲಿಯಲ್ಲಿ ಈ ಬಾರಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದು ಕಾಂಗ್ರೆಸ್ ಭದ್ರಕೋಟೆಯಾಗಿರುವ ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಹೊಣೆ ಹೊತ್ತಿದ್ದಾರೆ.
Who is going to be PM of India 🇮🇳
❤️ For Rahul Gandhi
🔁 For Narendra Modi #ElectionsResults#India_जीत_रहा_है #400Paar pic.twitter.com/lbHo0NicUS— Kohlified 🗿 (@ShreeGZunjarrao) June 4, 2024
ಆರಂಭಿಕವಾಗಿ ರಾಹುಲ್ ಗಾಂಧಿ ವಯನಾಡು ಮತ್ತು ರಾಯ್‌ಬರೇಲಿ ಎರಡೂ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, 9 ಗಂಟೆ ವೇಳೆಗೆ ರಾಯ್‌ಬರೇಲಿಯಲ್ಲಿ 2126 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ವಯನಾಡಿನಲ್ಲಿ 8718 ಮತಗಳ ಮುನ್ನಡೆ ಸಾಧಿಸಿದ್ದರು.
ಇದನ್ನು ಓದಿದ್ದೀರಾ? ಜುಲೈ 5ರಂದು ಬಡ ಮಹಿಳೆಯರ ಖಾತೆಗೆ 8,500 ರೂ ಜಮೆ: ರಾಹುಲ್ ಗಾಂಧಿ
ಸದ್ಯ ರಾಹುಲ್ ಗಾಂಧಿ ರಾಯ್‌ಬರೇಲಿಯಲ್ಲಿ 50,589 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. ರಾಹುಲ್ 1,01,481 ಮತಗಳನ್ನು ಗಳಿಸಿದ್ದರೆ, ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ 50,892 ಮತಗಳನ್ನು ಗಳಿಸಿದ್ದಾರೆ.
#WATCH | Delhi: Congress MP Rahul Gandhi reaches the residence of party general secretary Priyanka Gandhi Vadra, in Khan Market. pic.twitter.com/SxJ8fF9Qow
— ANI (@ANI) June 4, 2024
ಇನ್ನು ತಾನು ಸಂಸದನಾಗಿರುವ ವಯನಾಡಿನಲ್ಲಿ ರಾಹುಲ್ ಗಾಂಧಿ 80,000 ಮತಗಳ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ ಕೆ ಸುರೇಂದ್ರನ್ ಮತ್ತು ಸಿಪಿಐಎಂನ ಅನ್ನಿ ರಾಜಾ ಹಿನ್ನೆಡೆ ಕಂಡಿದ್ದಾರೆ.
Rahul Gandhi is leading from both Seats Raibareli as well as Waynad 🔥🔥
We are going to witness history today as Rahul Gandhi will become new PM of INDIA 🇮🇳 🔥#ElectionsResults #INDIAAlliance #India_जीत_रहा_है #DhruvRathee pic.twitter.com/7d5hfctAJa
— Dhruv Rathee (Parody) (@dhruvrahtee) June 4, 2024
ಪ್ರಧಾನಿ ನರೇಂದ್ರ ಮೋದಿ ವಾರಾಣಾಸಿಯಲ್ಲಿ ಹಿನ್ನೆಡೆ ಸಾಧಿಸಿದ್ದು ಟ್ವಿಟ್ಟರ್‌ನಲ್ಲಿ ಮುಂದಿನ ಪ್ರಧಾನಿ ರಾಹುಲ್ ಗಾಂಧಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.