ಲೋಕಸಭಾ ಚುನಾವಣೆ | 70 ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳ ಸಂಖ್ಯೆ 14ರಿಂದ 6ಕ್ಕೆ ಕುಸಿತ

Date:

Advertisements

ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾದ ಬಳಿಕ, 1951ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ 53 ರಾಜಕೀಯ ಪಕ್ಷಗಳು ಚುನಾವಣಾ ಕಣದಲ್ಲಿದ್ದವು. ಇಂದು, ರಾಜಕೀಯ ಪಕ್ಷಗಳ ಸಂಖ್ಯೆ ಬರೋಬ್ಬರಿ 2,500ಕ್ಕಿಂತ ಹೆಚ್ಚಾಗಿವೆ. ಆದರೂ, ಈ 70 ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷಗಳ ಸಂಖ್ಯೆ ಮಾತ್ರ 14ರಿಂದ 6ಕ್ಕೆ ಕುಸಿದಿದೆ.

ಈಗ, 18ನೇ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಈ ಚುನಾವಣೆಯಲ್ಲಿ ಆರು ರಾಷ್ಟ್ರೀಯ ಪಕ್ಷಗಳು ಸರ್ಧಿಸುತ್ತಿವೆ. 14 ರಾಷ್ಟ್ರೀಯ ಪಕ್ಷಗಳ ಪೈಕಿ, ಹಲವು ಪಕ್ಷಗಳು ಮತ್ತೊಂದು ಪಕ್ಷದೊಂದಿಗೆ ವಿಲೀನವಾಗಿವೆ. ಕೆಲವು ಪಕ್ಷಗಳಂತೂ ಅಸ್ತಿತ್ವದಲ್ಲೇ ಇಲ್ಲ.

ಮೊದಲ ಚುನಾವಣೆಯಲ್ಲಿ ಕಣದಲ್ಲಿದ್ದ 51 ಪಕ್ಷಗಳ ಪೈಕಿ, 14ಅನ್ನು ರಾಷ್ಟ್ರೀಯ ಪಕ್ಷಗಳೆಂದು ಮಾನ್ಯತೆ ನೀಡಲಾಗಿತ್ತು. ಉಳಿದ ಪಕ್ಷಗಳನ್ನು ರಾಜ್ಯ/ಪ್ರಾದೇಶಿಕ ಪಕ್ಷಗಳು ಎಂದು ಪರಿಗಣಿಸಲಾಗಿತ್ತು.

Advertisements

ಚುನಾವಣಾ ಆಯೋಗದ ‘ಲೀಪ್ ಆಫ್ ಫೇತ್’ ಪುಸ್ತಕದ ಪ್ರಕಾರ, 1953ರ ಚುನಾವಣೆ ವೇಳೆ 29 ರಾಜಕೀಯ ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದ್ದವು. ಅವುಗಳಲ್ಲಿ 14 ಪಕ್ಷಗಳಿಗೆ ಮಾತ್ರ ರಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಲಾಗಿತ್ತು. ಆದಾಗ್ಯೂ, ಚುನಾವಣಾ ಫಲಿತಾಂಶಗಳು ಆ 14ರಲ್ಲಿಯೂ ಹಲವು ಪಕ್ಷಗಳು ರಾಷ್ಟ್ರೀಯ ಸ್ಥಾನಮಾನಕ್ಕೆ ಅರ್ಹವಲ್ಲ ಎಂಬುದನ್ನು ಸೂಚಿಸಿತ್ತು. ಫಲಿತಾಂಶದ ಬಳಿಕ ನಾಲ್ಕು ಪಕ್ಷಗಳಿಗೆ ಮಾತ್ರ ರಾಷ್ಟ್ರೀಯ ಪಕ್ಷದ ಮಾನ್ಯತೆ ಉಳಿಸಿಕೊಳ್ಳಲು ಅನುಮತಿ ನೀಡಲಾಗಿತ್ತು.

1953ರ ಸಮಯದಲ್ಲಿ ಆ ನಾಲ್ಕು ರಾಷ್ಟ್ರೀಯ ಪಕ್ಷಗಳು – ಕಾಂಗ್ರೆಸ್, ಪ್ರಜಾ ಸೋಷಿಯಲಿಸ್ಟ್ ಪಾರ್ಟಿ (ಸಮಾಜವಾದಿ ಪಕ್ಷ ಮತ್ತು ಕಿಸಾನ್ ಮಜ್ದೂರ್ ಪಕ್ಷದ ವಿಲೀನದ ನಂತರ ರೂಪುಗೊಂಡಿತು), ಸಿಪಿಐ ಮತ್ತು ಜನಸಂಘ.

ಚುನಾವಣೆಯಲ್ಲಿ ತಮ್ಮ ಪ್ರಾಬಲ್ಯ ಸಾಬೀತು ಮಾಡಲಾಗದೆ, ಅಖಿಲ ಭಾರತೀಯ ಹಿಂದೂ ಮಹಾಸಭಾ (HMS), ಅಖಿಲ ಭಾರತ ಭಾರತೀಯ ಜನಸಂಘ (BJS), ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP), ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟ (SCF), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (ಮಾರ್ಕ್ಸ್ವಾದಿ ಗುಂಪು) (FBL-MG) ಮತ್ತು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (ರುಯಿಕರ್ ಗುಂಪು) (FBL-RG), ಕೃಷಿಕರ್ ಲೋಕ ಪಕ್ಷ (KLP), ಬೊಲ್ಶೆವಿಕ್ ಪಾರ್ಟಿ ಆಫ್ ಇಂಡಿಯಾ (BPI), ಮತ್ತು ರೆವಲ್ಯೂಷನರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (RCPI) ಪಕ್ಷಗಳು ರಾಷ್ಟ್ರೀಯ ಸ್ಥಾನಮಾನವನ್ನು ಕಳೆದುಕೊಂಡಿದ್ದವು.

ಸಮಾಜವಾದಿ ಪಕ್ಷ ಮತ್ತು ಕಿಸಾನ್ ಮಜ್ದೂರ್ ಪಕ್ಷವು ಮೊದಲ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಆದರೆ, ನಂತರದಲ್ಲಿ ಈ ಎರಡೂ ಪಕ್ಷಗಳು ವಿಲೀನಗೊಂಡು ಪ್ರಜಾ ಸಮಾಜವಾದಿ ಪಕ್ಷವನ್ನು ಸ್ಥಾಪಿಸಲಾಯಿತು.

1957ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ನಾಲ್ಕು ರಾಷ್ಟ್ರೀಯ ಪಕ್ಷಗಳು ಕಣದಲ್ಲಿದ್ದವು. ಆಗ, ಪ್ರಾದೇಶಿಕ ಪಕ್ಷಗಳ ಸಂಖ್ಯೆ 15ಕ್ಕೆ ಇಳಿದಿತ್ತು. ಆದರೆ, 1962ರ ಚುನಾವಣೆಯಲ್ಲಿ 27 ಪ್ರಾದೇಶಿಕ ಪಕ್ಷಗಳು ಸ್ಪರ್ಧಿಸಿದ್ದವು. ಆಗ, ಸಮಾಜವಾದಿ (SOC) ಮತ್ತು ಸ್ವತಂತ್ರ (SWA) ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವುದರೊಂದಿಗೆ ರಾಷ್ಟ್ರೀಯ ಪಕ್ಷಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿತ್ತು.

ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಕಾಂಗ್ರೆಸ್‌ನ ಪ್ರಾಬಲ್ಯವು ದೀರ್ಘಕಾಲದವರೆಗೆ ಮುಂದುವರೆಯಿತು. 2014 ರವರೆ ನಡೆದಿದ್ದ 14 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ 11 ಚುನಾವಣೆಗಳನ್ನು ಗೆದ್ದಿದೆ. ಆದರೆ, 2014ರ ನಂತರ ಅಲೆಯು ಬಿಜೆಪಿ ಎಡೆಗೆ ತಿರುಗಿದೆ.

1951ರ ಚುನಾವಣೆಯ ನಂತರದ ಎರಡು ಲೋಕಸಭಾ ಚುನಾವಣೆಗಳಲ್ಲಿ CPI ಪ್ರಮುಖ ಪ್ರತಿಪಕ್ಷವಾಗಿತ್ತು. ಆದಾಗ್ಯೂ, 1964ರಲ್ಲಿ, ಸಿಪಿಐ ಪಕ್ಷವು ಒಡೆದು, ಇಬ್ಬಾಗವಾಯಿತು. ಸಿಪಿಐ(ಎಂ) ಉದಯಿಸಿತು ನಂತರದ ವರ್ಷಗಳಲ್ಲಿ, ಹೊಸ ಸಿಪಿಐ(ಎಂ) ದೇಶದ ಸಾರ್ವತ್ರಿಕ ಚುನಾವಣೆಗಳಲ್ಲಿ ಸಿಪಿಐಗಿಂತ ಹೆಚ್ಚಿನ ಮತಗಳನ್ನು ಗಳಿಸಿತು.

“ಕಾಂಗ್ರೆಸ್‌ನಲ್ಲಿದ್ದ ಜಯಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ ಮತ್ತು ಆಚಾರ್ಯ ನರೇಂದ್ರ ದೇವ್ ಅವರನ್ನೊಳಗೊಂಡ ಎಡಪಂಥೀಯ ಚಿಂತನೆ ಹೊಂದಿದ್ದ ಬಣವು ಸ್ವಾತಂತ್ರ್ಯದ ಆರಂಭದಲ್ಲೇ ಪಕ್ಷದಿಂದ ಬೇರ್ಪಟ್ಟಿತ್ತು. ಅವರು ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರದ ಕಾರಣದಿಂದಾಗಿ ನಾರಾಯಣ್ ಅವರು ಜನಪ್ರಿಯತೆ ಹೊಂದಿದ್ದರೂ, ಅವರ ಪಕ್ಷವು ಚುನಾವಣೆಯಲ್ಲಿ ಹೆಚ್ಚು ಪ್ರಭಾವಶಾಲಿ ಆಗಲಿಲ್ಲ. ಹೀಗಾಗಿ, ನಂತರದಲ್ಲಿ ಕಿಸಾನ್ ಮಜ್ದೂರ್ ಪಕ್ಷದೊಂದಿಗೆ ವಿಲೀನ ಮಾಡಿ ‘ಪ್ರಜಾ ಸಮಾಜವಾದಿ ಪಕ್ಷ (ಪಿಎಸ್‌ಪಿ)ವನ್ನು ಕಟ್ಟಿದರು” ಎಂದು ಆಕ್ಸಿಸ್ ಇಂಡಿಯಾಧ ಅಧ್ಯಕ್ಷ ಪ್ರದೀಪ್ ಗುಪ್ತಾ ಹೇಳಿದ್ದಾರೆ.

ಆದರೆ, ನಾರಾಯಣ್ ಅವರು ಪಿಎಸ್‌ಪಿಯಿಂದ ಸರಿದಿದ್ದರು. ನಂತರದಲ್ಲಿ, 70ರ ದಶಕದಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧದ ಚಳುವಳಿಯನ್ನು ಅವರು ಮುನ್ನಡೆಸಿ, ರಾಷ್ಟ್ರ ರಾಜಕಾರಣಕ್ಕೆ ಮರುಪ್ರವೇಶ ಮಾಡಿದರು. ಇಂದಿರಾ ಸರ್ಕಾರವು ಭ್ರಷ್ಟ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ಅವರು ಆರೋಪಿಸಿದರು. 1975ರಲ್ಲಿ ಘೋಷಿಸಲ್ಪಟ್ಟ ತುತರ್ತು ಪರಿಸ್ಥಿತಿ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿದರು. 1977ರಲ್ಲಿ ತುರ್ತು ಪರಿಸ್ಥಿತಿಯ ನಂತರ, ದೇಶದ ಎಲ್ಲ ವಿರೋಧ ಪಕ್ಷದವರು ಒಟ್ಟಾಗಿ ಜನತಾ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್‌ಅನ್ನು ಸೋಲಿಸಿದರು.

1992ರ ಚುನಾವಣೆಯಲ್ಲಿ ಏಳು – ಕಾಂಗ್ರೆಸ್, ಬಿಜೆಪಿ, ಸಿಪಿಐ, ಸಿಪಿಎಂ, ಜನತಾ ದಳ, ಜನತಾ ಪಕ್ಷ ಮತ್ತು ಲೋಕದಳ – ಪಕ್ಷಗಳು ರಾಷ್ಟ್ರೀಯ ಪಕ್ಷವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು.

ಚುನಾವಣಾ ಆಯೋಗದ ವರದಿಗಳ ಪ್ರಕಾರ, 1996ರ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಷ್ಟ್ರೀಯ ಸ್ಥಾನಮಾನ ಹೊಂದಿದ್ದ ಎಂಟು – ಕಾಂಗ್ರೆಸ್ (INC), ಆಲ್ ಇಂದಿರಾ ಕಾಂಗ್ರೆಸ್ (ತಿವಾರಿ), ಬಿಜೆಪಿ, ಸಿಪಿಐ, ಸಿಪಿಎಂ, ಜನತಾ ದಳ, ಜನತಾ ಪಕ್ಷ ಮತ್ತು ಸಮತಾ ಪಾರ್ಟಿ – ಪಕ್ಷಗಳು ಒಳಗೊಂಡಂತೆ 209 ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದವು.

1998ರ ಚುನಾವಣೆಯಲ್ಲಿ ಏಳು – ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ, ಜನತಾ ದಳ, ಸಿಪಿಐ, ಸಿಪಿಎಂ ಮತ್ತು ಸಮತಾ ಪಕ್ಷ – ರಾಷ್ಟ್ರೀಯ ಪಕ್ಷಗಳು ಸೇರಿದಂತೆ 176 ಪಕ್ಷಗಳು ಚುನಾವಣಾ ಕಣದಲ್ಲಿದ್ದವು.

1999ರಲ್ಲಿ, ಏಳು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಸಿಪಿಐ, ಸಿಪಿಎಂ, ಜನತಾ ದಳ (ಜಾತ್ಯತೀತ) ಮತ್ತು ಜನತಾ ದಳ (ಯುನೈಟೆಡ್) ಸೇರಿದಂತೆ 160 ರಾಜಕೀಯ ಪಕ್ಷಗಳು ಚುನಾವಣಾ ಕಣದಲ್ಲಿದ್ದವು.

2014ರಲ್ಲಿ, 464 ರಾಜಕೀಯ ಪಕ್ಷಗಳು ಸ್ಪರ್ಧೆಸಿದ್ದವು. ಅವುಗಳಲ್ಲಿ ಆರು ರಾಷ್ಟ್ರೀಯ ಪಕ್ಷಗಳು – ಬಿಜೆಪಿ, ಕಾಂಗ್ರೆಸ್, ಸಿಪಿಐ, ಸಿಪಿಐ-ಎಂ, ಎನ್‌ಸಿಪಿ ಮತ್ತು ಬಿಎಸ್‌ಪಿ – ಸ್ಪರ್ಧೆಯಲ್ಲಿದ್ದವು.

ತೃಣಮೂಲ ಕಾಂಗ್ರೆಸ್ (ಟಿಎಂಸಿ), 2016ರಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಿತು. 2019ರ ಚುನಾವಣೆಯಲ್ಲಿ ಹೊಸ ಸ್ಥಾನಮಾನದೊಂದಿಗೆ ಚುನಾವಣೆಗೆ ಸ್ಪರ್ಧಿಸಿತು. ಹೀಗಾಗಿ, 2019ರ ಚುನಾವಣೆಯಲ್ಲಿ ಏಳು ರಾಷ್ಟ್ರೀಯ ಪಕ್ಷಗಳು – ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಸಿಪಿಐ, ಸಿಪಿಐ(ಎಂ), ಎನ್‌ಸಿಪಿ ಮತ್ತು ಟಿಎಂಸಿ – ಸೇರಿದಂತೆ, ಒಟ್ಟು 674 ಪಕ್ಷಗಳು ಸ್ಪರ್ಧಿಸಿದ್ದವು.

ಆದರೆ, ಈ ಚುನಾವಣೆ ಬಳಿಕ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಎರಡೂ ತಮ್ಮ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿವೆ.

“ನಿಬಂಧನೆಗಳ ಪ್ರಕಾರ, ರಾಷ್ಟ್ರೀಯ ಪಕ್ಷವಾಗಲು, ಒಂದು ರಾಜಕೀಯ ಸಂಘಟನೆಯು ಲೋಕಸಭೆಯ ಒಟ್ಟು ಸ್ಥಾನಗಳಲ್ಲಿ ಕನಿಷ್ಠ 2% ಸ್ಥಾನಗಳನ್ನು, ಕನಿಷ್ಠ ಮೂರು ವಿವಿಧ ರಾಜ್ಯಗಳಲ್ಲಿ ಗೆಲ್ಲಬೇಕು ಅಥವಾ ನಾಲ್ಕು ರಾಜ್ಯಗಳಲ್ಲಿ ಕನಿಷ್ಠ 6% ಮತಗಳನ್ನು ಪಡೆಯಬೇಕು” ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೈಶಿ ಹೇಳಿದ್ದಾರೆ.

ಕಳೆದ ವರ್ಷ, ಚುನಾವಣಾ ಆಯೋಗವು ಆಮ್ ಆದ್ಮಿ ಪಕ್ಷವನ್ನು (ಎಎಪಿ) ರಾಷ್ಟ್ರೀಯ ಪಕ್ಷವೆಂದು ಗುರುತಿಸಿದೆ.

ದೇಶವು ಈಗ ಆರು ರಾಷ್ಟ್ರೀಯ ಪಕ್ಷಗಳನ್ನು ಹೊಂದಿದೆ – ಬಿಜೆಪಿ, ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ಸಿಪಿಐ(ಎಂ), ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಎಎಪಿ.

2024ರ ಲೋಕಸಭಾ ಚುನಾವಣೆಯು ಏಪ್ರಿಲ್‌ 19ರಿಂದ ಆರಂಭವಾಗಲಿದ್ದು, 7 ಹಂತದಲ್ಲಿ ಚುನಾವಣೆಯ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X