ಲೋಕಸಭೆಯಲ್ಲಿ ಸೋಮವಾರ ಒಂದು ದೇಶ – ಒಂದು ಚುನಾವಣೆ ಮಸೂದೆ ಮಂಡಿಸುವುದನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಯನ್ನು – ಸಂವಿಧಾನ (129 ನೇ ತಿದ್ದುಪಡಿ) ಮಸೂದೆ (ಒಂದು ದೇಶ- ಒಂದು ಚುನಾವಣೆ) ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲು ನಿಗದಿಪಡಿಸಲಾಗಿತ್ತು.
ಇದನ್ನು ಓದಿದ್ದೀರಾ? ‘ಒಂದು ದೇಶ- ಒಂದು ಚುನಾವಣೆ’ಗೆ ಕೇಂದ್ರ ಸಚಿವ ಸಂಪುಟ ಅಸ್ತು
ಹಾಗೆಯೇ ಈಗಾಗಲೇ ಒಂದು ದೇಶ- ಒಂದು ಚುನಾವಣೆ ಮಸೂದೆ ಪ್ರತಿಯನ್ನು ಸರ್ಕಾರವು ಸಂಸದರಿಗೆ ನೀಡಿದೆ. ಆದ್ದರಿಂದ ಸೋಮವಾರವೇ ಈ ಮಸೂದೆ ಮಂಡಿಸಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ ಇಂದು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಈ ಎರಡು ಮಸೂದೆಗಳ ಮಂಡನೆಯ ಬಗ್ಗೆ ಉಲ್ಲೇಖಿಸಲಾಗಿಲ್ಲ. ಆದರೆ ಯಾವ ಕಾರಣಕ್ಕೆ ಈ ವಿವಾದಿತ ಮಸೂದೆ ಮಂಡನೆಯನ್ನು ಸರ್ಕಾರ ವಿಳಂಬಗೊಳಿಸುತ್ತಿದೆ ಎಂಬುದು ಅಸ್ಪಷ್ಟವಾಗಿದೆ.
ಇದನ್ನು ಓದಿದ್ದೀರಾ? ಧಾರವಾಡ | ಒಂದು ದೇಶ, ಒಂದು ವೇತನ ಜಾರಿಗೆ ಸಿಎಐ(ಎಂ) ಒತ್ತಾಯ
ಸೋಮವಾರ ಮಂಡಿಸಲಾಗುವ ಇತರೆ ಮಸೂದೆಗಳು ಅಂಗೀಕಾರಗೊಂಡ ಬಳಿಕವೇ ಒಂದು ದೇಶ- ಒಂದು ಚುನಾವಣೆ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ.
ಇನ್ನು ಇತ್ತೀಚೆಗೆ ‘ಒಂದು ದೇಶ- ಒಂದು ಚುನಾವಣೆ’ ಶಿಫಾರಸಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸನ್ನು ಸರ್ಕಾರವು ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಿದೆ. ಆದರೆ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಲೋಕಸಭೆ ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 4ರಂದು ಆರಂಭವಾಗಿದ್ದು ಡಿಸೆಂಬರ್ 20ರಂದು ಮುಕ್ತಾಯವಾಗಲಿದೆ.
