ಲೋಕಾಯುಕ್ತ ಪೊಲೀಸರು ಮಂಗಳವಾರ ಭ್ರಷ್ಟರ ಬೇಟೆ ಮುಂದುವರಿಸಿದ್ದು, ರಾಜ್ಯಾದ್ಯಂತ ಏಕಕಾಲಕ್ಕೆ 8 ಅಧಿಕಾರಿಗಳಿಗೆ ಸೇರಿದ 37 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ದಾಳಿಗೆ ಒಳಗಾದ ಅಧಿಕಾರಿಗಳ ಬಳಿ 22.50 ಕೋಟಿ ರೂ. ಮೌಲ್ಯದ ಆದಾಯ ಮೀರಿದ ಆಸ್ತಿ ಪತ್ತೆಯಾಗಿದೆ.
ಬೆಳಗಾವಿ, ಹಾವೇರಿ, ದಾವಣಗೆರೆ, ಬೀದರ್, ಮೈಸೂರು, ರಾಮನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆದಿದೆ. ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಒಬ್ಬ ನಿವೃತ್ತರೂ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ರಾಮನಗರದ ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ಪ್ರಕಾಶ್ ವಿ. ಮನೆ ಮೇಲೆಯೂ ದಾಳಿ ನಡೆದಿದ್ದು, ಒಟ್ಟು 4.26 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಅವರು, ಆರು ಮನೆಗಳು, ಎಂಟು ನಿವೇಶನ, 6 ಎಕರೆ ಕೃಷಿ ಜಮೀನು ಹೊಂದಿರುವುದು ಪತ್ತೆಯಾಗಿದೆ.
9 ಲಕ್ಷ ರೂ. ಗಂಟು ಕಟ್ಟಿ ಎಸೆದ ಕಾಶೀನಾಥ!
ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ, ಹಿರೇಕೆರೂರ ಉಪವಿಭಾಗದ ಎಇ ಕಾಶೀನಾಥ ಭಜಂತ್ರಿ ಲೋಕಾಯುಕ್ತ ದಾಳಿ ವೇಳೆ 9 ಲಕ್ಷ ರೂ. ಹಣವನ್ನು ಗಂಟು ಕಟ್ಟಿ ಕಿಟಕಿ ಮೂಲಕ ಹೊರಗೆ ಎಸೆದ ಘಟನೆ ನಡೆದಿದೆ. ಅಲ್ಲದೆ 2 ಲಕ್ಷ ರೂ. ಹಣವನ್ನು ಹಾಸಿಗೆಯಲ್ಲಿ ಸುತ್ತಿಟ್ಟಿದ್ದರು.
ದಾಳಿ ವೇಳೆ ಸಿಕ್ಕ ಆಸ್ತಿಗಳ ವಿವರ
ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ಕುಮಾರ್ ಬಳಿ ₹4.22 ಕೋಟಿ ಅಕ್ರಮ ಆಸ್ತಿ ಇರುವುದು ತನಿಖೆಯಲ್ಲಿ ಬಯಲಾಗಿದೆ. ಅವರು ಐದು ಮನೆ, ಏಳು ನಿವೇಶನ, 10 ಎಕರೆ ಕೃಷಿ ಜಮೀನಿನ ಒಡೆತನ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.
ವಿಟ್ಠಲ ಶಿವಪ್ಪ ಧವಳೇಶ್ವರ್, ಗ್ರಾಮ ಆಡಳಿತಾಧಿಕಾರಿ, ಬೋರೆಗಾವ್ ಗ್ರಾಮ, ನಿಪ್ಪಾಣಿ ತಾಲೂಕು, ಬೆಳಗಾವಿ ಜಿಲ್ಲೆ (1.08 ಕೋಟಿ ರೂ.) 4 ಸ್ಥಳಗಳಲ್ಲಿ ಶೋಧ. 1 ವಾಸದ ಮನೆ, 4 ಎಕ್ರೆ ಕೃಷಿ ಜಮೀನು, 1,55,195 ರೂ. ನಗದು, 3,02,049 ರೂ. ಮೌಲ್ಯದ ಚಿನ್ನಾಭರಣ, 3,45,000 ರೂ. ಮೌಲ್ಯದ ವಾಹನಗಳು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾರ್ವಜನಿಕ ಸಂಯಮವೂ, ಸುದ್ದಿ ಮಾಧ್ಯಮಗಳೂ
ವೆಂಕಟೇಶ್ ಎಸ್.ಮುಜುಂದಾರ್, ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ, ಕೋರಮಂಗಲ, ಬೆಂಗಳೂರು (2.21 ಕೋಟಿ ರೂ.)5 ಸ್ಥಳಗಳಲ್ಲಿ ಶೋಧ. 2 ವಾಸದ ಮನೆಗಳು, 1 ಗ್ಯಾಸ್ ಗೋಡೌನ್, 1 ಎಕ್ರೆ ಕೃಷಿ ಜಮೀನು, 1,42,000 . 2, 39,31,900 . , 17,70,000 . ಮೌಲ್ಯದ ವಾಹನಗಳು.
ಕಮಲ್ ರಾಜ್, ಸಹಾಯಕ ನಿರ್ದೇಶಕ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ಪ್ರದೇಶ, ಕರೂರು, ದಾವಣಗೆರೆ, (1.99 ಕೋಟಿ ರೂ.) 4 ಸ್ಥಳಗಳಲ್ಲಿ ಶೋಧ. 6 ನಿವೇಶನಗಳು, 2 ವಾಸದ ಮನೆಗಳು, 1 ಎಕ್ರೆ ಕೃಷಿ ಜಮೀನು, 1,15,000 ರೂ. ನಗದು, 15,79,000 ರೂ. ಮೌಲ್ಯದ ಚಿನ್ನಾಭರಣಗಳು, 32.30 ಲಕ್ಷ ರೂ. ಮೌಲ್ಯದ ವಾಹನಗಳು, 18 ಲಕ್ಷ ರೂ. ಬೆಲೆಬಾಳುವ ಇತರ ವಸ್ತುಗಳು.
ನಾಗೇಶ್ ಡಿ., ಸಾರ್ವಜನಿಕ ಸಂಪರ್ಕ ಅಧಿಕಾರಿ, ಮೈಸೂರು ಸಿಟಿ ಕಾರ್ಪೊರೇಷನ್, ಮೈಸೂರು. (2.72 ಕೋಟಿ ರೂ.) 5 ಸ್ಥಳಗಳಲ್ಲಿ ಶೋಧ. 2 ನಿವೇಶನಗಳು, 1 ವಾಸದ ಮನೆ, 98, ಸಾವಿರ ರೂ. ನಗದು, 29,25,360 ರೂ. ಮೌಲ್ಯದ ಚಿನ್ನಾಭರಣಗಳು, 13,61,901 ರೂ. ಮೌಲ್ಯದ ವಾಹನಗಳು, 33,89,455 ರೂ. ಮೌಲ್ಯದ ಇತರ ವಸ್ತುಗಳು.
ಗೋವಿಂದಪ್ಪ ಹನುಮಂತಪ್ಪ ಭಜಂತ್ರಿ, ಸಹಾಯಕ ಕಾರ್ಯದರ್ಶಿ, ಕೆ.ಐ.ಎ.ಡಿ.ಬಿ., ಲಕ್ಕಮನಹಳ್ಳಿ, ಧಾರವಾಡ ಜಿಲ್ಲೆ. (2.79 ಕೋಟಿ ರೂ.) 7 ಸ್ಥಳಗಳಲ್ಲಿ ಶೋಧ. 3 ನಿವೇಶನ ಗಳು, 1 ವಾಸದ ಮನೆ, 7.26 ಎಕ್ರೆ ಕೃಷಿ ಜಮೀನು. 41.11 ಲಕ್ಷ ರೂ. ನಗದು, 27,11,300 ರೂ. ಮೌಲ್ಯದ ಚಿನ್ನಾಭರಣಗಳು, 20 ಲಕ್ಷ ರೂ. ಮೌಲ್ಯದ ವಾಹನಗಳು, 6 ಲಕ್ಷ ರೂ. ಮೌಲ್ಯದ ಇತರ ವಸ್ತುಗಳು.