ಮಧ್ಯಪ್ರದೇಶ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಜಿತು ಪಟ್ಟಾರಿ ಅವರು ರೌ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಮಧು ವರ್ಮಾ ಅವರು ಜಿತು ಪಟ್ಟಾರಿ ಅವರನ್ನು ಹಿಂದಿಕ್ಕಿ, ಮುನ್ನಡೆ ಸಾಧಿಸಿದ್ದಾರೆ.
ಪಟ್ವಾರಿ ಅವರು ಈ ಹಿಂದೆ ಕಮಲ್ ನಾಥ್ ಸರ್ಕಾರದಲ್ಲಿ ಉನ್ನತ ಶಿಕ್ಷಣ, ಯುವಜನ ಮತ್ತು ಕ್ರೀಡಾ ವ್ಯವಹಾರಗಳ ಸಚಿವರೂ ಆಗಿದ್ದರು.
ಇನ್ನು, ವಿರೋಧ ಪಕ್ಷದ ನಾಯಕರಾಗಿದ್ದ ಕಾಂಗ್ರೆಸ್ ನಾಯಕ ಡಾ. ಗೋವಿಂದ್ ಸಿಂಗ್ ಕೂಡ ಲಾಹಾರ್ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ. ಅಲ್ಲಿ, ಬಿಜೆಪಿಯ ಅಂಬ್ರಿಶ್ ಶರ್ಮಾ ಅವರು ಮುನ್ನಡೆ ಸಾಧಿಸಿದ್ದಾರೆ.
ಸಿಂಗ್ ಅವರು ಲಹಾರ್ ಕ್ಷೇತ್ರದಿಂದ ಹಾಲಿ ಶಾಸಕರಾಗಿದ್ದಾರೆ. ಅವರು 1990ರಿಂದ ಇಲ್ಲಿಯವರೆಗೆ ಸತತ ಏಳು ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ, ಈಗ ಹಿನ್ನೆಡೆ ಅನುಭವಿಸಿದ್ದಾರೆ.
ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಪ್ರಹ್ಲಾದ್ ಪಟೇಲ್ ಮತ್ತು ನರೇಂದ್ರ ಸಿಂಗ್ ತೋಮರ್ ಕ್ರಮವಾಗಿ ಬುಧ್ನಿ, ನರಸಿಂಗ್‌ಪುರ ಮತ್ತು ದಿಮಾನಿ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ 149 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಮತ್ತೊಂದೆಡೆ ಕಾಂಗ್ರೆಸ್ ಕೇವಲ 62 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಚಿಂದ್ವಾರಾ ಕ್ಷೇತ್ರದಲ್ಲಿ ಕಮಲನಾಥ್ ಮುನ್ನಡೆ ಸಾಧಿಸಿದ್ದಾರೆ.
“ಡಬಲ್ ಇಂಜಿನ್ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸಿದೆ. ಜೊತೆಗೆ, ರಾಜ್ಯ ಸರ್ಕಾರದ ಯೋಜನೆಗಳು ಜನರನ್ನು ತಲುಪಿವೆ. ಎಲ್ಲ ಕಡೆಯೂ ನಮ್ಮ ಮೇಲಿನ ಜನರ ಪ್ರೀತಿ ಕಾಣುತ್ತಿದೆ. ಬಿಜೆಪಿಗೆ ಆರಾಮವಾಗಿ ಬಹುಮತ ಪಡೆಯುತ್ತದೆ: ಎಂದು ಚೌಹಾಣ್ ಹೇಳಿದ್ದಾರೆ.