ಎನ್‌ಸಿಪಿ ಬಂಡಾಯ ಶಾಸಕರು ಮಹಾರಾಷ್ಟ್ರ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ ನಂತರ ಸಂಪುಟ ಪುನಾರಚನೆ ಮಾಡಲಾಗಿದೆ. ಡಿಸಿಎಂ ಅಜಿತ್ ಪವಾರ್ ಅವರಿಗೆ ಹಣಕಾಸು ಮತ್ತು ಯೋಜನೆ ಹಾಗೂ ಛಗನ್ ಭುಜಬುಲ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಲಾಗಿದೆ.
ಮಹಾರಾಷ್ಟ್ರ ಸಿಎಂ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕ ಭರತ್ ಗೊಗವಾಲೆ ಹಾಗೂ ಪ್ರಹಾರ್ ಪಕ್ಷದ ಶಾಸಕ ಬಚ್ಚು ಕಡು ಅವರ ತೀವ್ರ ವಿರೋಧದ ನಡುವೆಯೂ ಅಜಿತ್ ಅವರಿಗೆ ಹಣಕಾಸು ಖಾತೆ ನೀಡಲಾಗಿದೆ. ಹಿಂದಿನ ಮಹಾ ಅಘಾಡಿ ಸರ್ಕಾರದಲ್ಲಿ ಅಜಿತ್ ಹಣಕಾಸು ಸಚಿವರಾಗಿದ್ದಾಗ ಶಿವಸೇನೆ ಶಾಸಕರ ಕ್ಷೇತ್ರಗಳಿಗೆ ಹಣ ಬಿಡುಗಡೆಗೆ ನಿರ್ಬಂಧ ವಿಧಿಸಿದ್ದರು ಎಂದು ಆರೋಪಿಸಿ ಈ ಶಾಸಕರು ಆರೋಪಿಸಿದ್ದರು.
ಇಂದಿನ ಸಂಪುಟ ಪುನಾರಚನೆಯಲ್ಲಿ ಎನ್‌ಸಿಪಿಯ ಅಜಿತ್ ಪವಾರ್ ಬಣಕ್ಕೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ದಿಲೀಪ್ ವಾಲ್ಸೆ ಪಾಟೀಲ್ ಅವರಿಗೆ ಸಹಕಾರ ಸಚಿವಾಲಯ, ಧನಂಜಯ್ ಮುಂಡೆಗೆ ಕೃಷಿ, ಅದಿತಿ ತತ್ಕರೆ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅನಿಲ್ ಪಾಟೀಲ್ ಅವರಿಗೆ ಪರಿಹಾರ ಮತ್ತು ಪುನರ್ವಸತಿ, ವಿಪತ್ತು ನಿರ್ವಹಣೆ ಖಾತೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಭಾರತದ ಐತಿಹಾಸಿಕ ‘ಚಂದ್ರಯಾನ 3’ ಯಶಸ್ವಿ ಉಡಾವಣೆ; 20 ವರ್ಷದ ಹಿಂದೆ ಆರಂಭವಾದ ಯೋಜನೆ ಸಾಗಿದ್ದು ಹೇಗೆ?
ಈ ಮೊದಲು ಸಹಕಾರ ಇಲಾಖೆ ಬಿಜೆಪಿಯ ಅತುಲ್ ಸೇವ್ ಹಾಗೂ ಕೃಷಿ ಖಾತೆ ಶಿವಸೇನೆಯ ಅಬ್ದುಲ್ ಸತ್ತಾರ್ ಅವರ ಬಳಿ ಇತ್ತು.
ಸಂಪುಟ ಪುನಾರಚನೆಯ ನಂತರವೂ ಸರ್ಕಾರದಲ್ಲಿ ಅಸಮಾಧಾನ ಇನ್ನೂ ಮುಂದುವರಿದಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಕ್ಷಣದ ವಿಸ್ತರಣೆ ಮಾಡಿದ್ದರೂ ಅಧಿಕಾರ ಹಂಚಿಕೆ ಮಾತ್ರ ಜುಲೈ 17 ರಂದು ಪ್ರಾರಂಭವಾಗುವ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ನಂತರ ನಡೆಯಬೇಕು ಎಂಬ ಅಭಿಪ್ರಾಯವನ್ನು ಬಿಜೆಪಿ ತೆಗೆದುಕೊಂಡಿದೆ.