ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಕೊನೆಯಾಗಿದೆ. ಇದಾದ ಬೆನ್ನಲ್ಲೇ ಹಲವು ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷಾ ವರದಿಯನ್ನು ಪ್ರಕಟಿಸಿದೆ. ಕೆಲವು ಸಮೀಕ್ಷಾ ವರದಿ ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರವೇ ಮುಂದುವರೆಯಲಿದೆ ಎಂದು ಹೇಳಿದರೆ, ಇನ್ನು ಕೆಲವು ಮಾಧ್ಯಮಗಳ ಸಮೀಕ್ಷೆಗಳು ಮಹಾಯುತಿ ಸರ್ಕಾರಕ್ಕೆ ಮಹಾ ವಿಕಾಸ್ ಅಘಾಡಿ ಪೈಪೋಟಿ ನೀಡಲಿದೆ, ಎಂವಿಎ ಸರ್ಕಾರ ರಚನೆಯಾಗಬಹುದು ಎಂದು ಹೇಳಿದೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ 25.75% ಮತ ಹಂಚಿಕೆಯೊಂದಿಗೆ 105 ಸ್ಥಾನಗಳನ್ನು ಗಳಿಸಿತ್ತು. ಶಿವಸೇನೆ 56 ಸ್ಥಾನಗಳನ್ನು (16.41% ಮತ ಹಂಚಿಕೆ), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಕ್ರಮವಾಗಿ 54 (16.71%) ಮತ್ತು 44 (15.87%) ಸ್ಥಾನಗಳನ್ನು ಪಡೆದುಕೊಂಡಿವೆ. ಇತರೆ ಪಕ್ಷಗಳು 29 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ.
ಇದನ್ನು ಓದಿದ್ದೀರಾ? ಚುನಾವಣೋತ್ತರ ಸಮೀಕ್ಷೆ | ಜಾರ್ಖಂಡ್- ಇಂಡಿಯಾ ಒಕ್ಕೂಟದತ್ತ ಒಲವು
ಅದಾದ ಬಳಿಕ ಕಳೆದ ಐದು ವರ್ಷಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಸಾಕಷ್ಟು ರಾಜಕೀಯ ಬದಲಾವಣೆಗಳು ಸಂಭವಿಸಿದೆ. ಐದು ವರ್ಷಗಳಲ್ಲಿ ಮೂರು ಸರ್ಕಾರಗಳನ್ನು ಮಹಾರಾಷ್ಟ್ರ ಕಂಡಿದೆ. ಶಿವಸೇನೆ, ಎನ್‌ಸಿಪಿ ಎರಡೂ ಕೂಡಾ ಇಬ್ಭಾಗವಾಗಿದೆ. ಎರಡು ಪಕ್ಷಗಳು ಶಿವಸೇನೆ ಶಿಂದೆ ಬಣ, ಶಿವಸೇನೆ ಉದ್ದವ್, ಎನ್‌ಸಿಪಿ ಅಜಿತ್ ಪವಾರ್ ಬಣ, ಎನ್‌ಸಿಪಿ ಶರದ್ ಪವಾರ್ ಬಣವಾಗಿ ನಾಲ್ಕು ಪಾಲಾಗಿದೆ, ಪರಸ್ಪರ ಸ್ಪರ್ಧಿಸಿದೆ.
ಚುನಾವಣೋತ್ತರ ಸಮೀಕ್ಷೆಗಳು
ಚಾಣಕ್ಯ: ಎನ್‌ಡಿಎ 152-160, ಎಂವಿಎ 130-138, ಇತರೆ 6-8
ದೈನಿಕ ಭಾಸ್ಕರ: ಎನ್‌ಡಿಎ 125-140, ಎಂವಿಎ 135-150, ಇತರೆ 20-25
ಎಲೆಕ್ಟೊರಲ್ ಎಡ್ಜ್: ಎನ್‌ಡಿಎ 118, ಎಂವಿಎ 150, ಇತರೆ 20
ಲೋಕನೀತಿ ಮರಾಠಿ-ರುದ್ರ: ಎನ್‌ಡಿಎ 128-142, ಎಂವಿಎ 125-140, ಇತರೆ 18-23
ಮ್ಯಾಟ್ರಿಜ್: ಎನ್‌ಡಿಎ 150-170, ಎಂವಿಎ 110-130, ಇತರೆ 8-10
ಪಿ-ಮಾರ್ಕ್: ಎನ್‌ಡಿಎ 137-157, ಎಂವಿಎ 126-146, ಇತರೆ 2-8
ಪೀಪಲ್ಸ್ ಪಲ್ಸ್: ಎನ್‌ಡಿಎ 175-195, ಎಂವಿಎ 85-112, ಇತರೆ 7-12
ಪೋಲ್ ಡೈರಿ: ಎನ್‌ಡಿಎ 122-186, ಎಂವಿಎ 69-121, ಇತರೆ 10-27
ಟೈಮ್ಸ್ ನೌ-ಜೆವಿಸಿ: ಎನ್‌ಡಿಎ 150-167, ಎಂವಿಎ 107-125, ಇತರೆ 13-14
