- ಜಲಗಾಂವ್ ಜಿಲ್ಲೆಯಲ್ಲಿ ಶಿವಸೇನೆ ಸಮಾವೇಶದಲ್ಲಿ ಸಂಜಯ್ ರಾವುತ್ ಭಾಷಣ
- ಶಿಂಧೆ ಸರ್ಕಾರದ ಒಳಗೆ ಮುಖ್ಯಮಂತ್ರಿ ಬದಲಾವಣೆಗೆ ಮಸಲತ್ತು ಆರೋಪ
ಮಹಾರಾಷ್ಟ್ರದಲ್ಲಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಇನ್ನು 15 ದಿನದಲ್ಲಿ ಅಂತ್ಯವಾಗಲಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವ ಶಿವಸೇನಾ (ಯುಬಿಟಿ) ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಭಾನುವಾರ (ಏಪ್ರಿಲ್ 23) ನಡೆದ ಪಕ್ಷದ ಸಮಾವೇಶದಲ್ಲಿ ರಾವುತ್ ಸುದ್ದಿಗಾರರಿಗೆ ಹೇಳಿದರು.
“ಶಿಂಧೆ ಸರ್ಕಾರಕ್ಕೆ ಮರಣ ಶಾಸನ ಬರೆಯುತ್ತೇವೆ. ಇನ್ನು 15 ದಿನದಲ್ಲಿ ಅವರ ಸರ್ಕಾರ ಕೊನೆಗೊಳ್ಳಲಿದೆ” ಎಂದು ಶಿವಸೇನಾದ ಸಂಜಯ್ ರಾವುತ್ ಸಮಾವೇಶದ ವೇಳೆ ಸುದ್ದಿಗಾರರಿಗೆ ಹೇಳಿದರು.
“ಸುಪ್ರೀಂಕೋರ್ಟ್ ತೀರ್ಪು ಹೊರಬೀಳಲಿದ್ದು, ಶಿಂಧೆ ಅವರ ಸರ್ಕಾರ ಪತನಗೊಳ್ಳಲಿದೆ” ಎಂದು ಸಂಜಯ್ ರಾವುತ್ ಹೇಳಿದ್ದಾರೆ.
ಮುಖ್ಯಮಂತ್ರಿ ಶಿಂಧೆಗೆ ಬಿಜೆಪಿಯು ಗಂಟು ಮೂಟೆ ಕಟ್ಟಿಕೊಳ್ಳಲು ಹೇಳಿದೆ ಎಂದು ಶನಿವಾರ (ಏಪ್ರಿಲ್ 22) ಸಂಜಯ್ ರಾವುತ್ ಹೇಳಿದ್ದರು.
ಮುಖ್ಯಮಂತ್ರಿ ಹುದ್ದೆ ಮೇಲೆ ಹಕ್ಕು ಸಾಧಿಸಲು ತಾವು ಸಿದ್ಧ ಎಂದು ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿಕೆಗೆ ಸಂಜಯ್ ರಾವುತ್ ಪ್ರತಿಕ್ರಿಯಿಸಿದ್ದರು.
“2024ರಲ್ಲಿ ಮಾತ್ರವಲ್ಲ, ನಾನು ಈಗಲೂ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಸಿದ್ಧನಿದ್ದೇನೆ” ಎಂದು ಅಜಿತ್ ಪವಾರ್ ಪಿಂಪ್ರಿ ಚಿಂಚವಾಡದಲ್ಲಿ ಶುಕ್ರವಾರ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದರು.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆ ಭಾನುವಾರ ಏಕನಾಥ್ ಶಿಂಧೆ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಎರಡು ಬಣಗಳ ಸಮಾವೇಶಗಳಿಗೆ ಸಾಕ್ಷಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಕೇರಳ | ಅಲ್ಪಸಂಖ್ಯಾತರ ಮೇಲಿನ ಸಂಘ ಪರಿವಾರದ ದಾಳಿ ಬಗ್ಗೆ ವ್ಯಾಪಕ ಪ್ರಚಾರಕ್ಕೆ ಕಾಂಗ್ರೆಸ್ ಸಿದ್ಧತೆ
ಉದ್ಧವ್ ಅವರ ಶಿವಸೇನಾದ ಸಮಾವೇಶಕ್ಕೆ ಅಡಚಣೆ ಉಂಟುಮಾಡುವುದಾಗಿ ನೀರು ಪೂರೈಕೆ ಸಚಿವ ಗುಲಾಬ್‌ರಾವ್ ಪಾಟೀಲ್ ಹೇಳಿದ್ದರು. ಸಚಿವ ಗುಲಾಬ್‌ರಾವ್ ವಿರುದ್ಧ ಭಷ್ಟಾಚಾರ ಆರೋಪವಿದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.