ರಾಜಕೀಯಕ್ಕಾಗಿ ಭಾರತ್ ಅಕ್ಕಿಯನ್ನು ಕೇಂದ್ರ ಸರ್ಕಾರ ವಿತರಣೆ ಮಾಡುತ್ತಿದೆ. ದೇಶದಲ್ಲಿ 40 ರೂ.ಗಿಂತ ಕಡಿಮೆ ಅಕ್ಕಿ ಇಲ್ಲ. ಜನರ ಅಕ್ಕಿಯನ್ನು 39 ರೂ.ಗೆ ಖರೀದಿಸಿ 19 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಆ ಮೂಲಕ ಒಂದು ಕೆ.ಜಿಗೆ 20 ರೂ. ಲಾಸ್ ಮಾಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ ಆರೋಪಿಸಿರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೇಂದ್ರ ಸರ್ಕಾರದಿಂದ ಜನರಿಗೆ ಭಾರತ್ ಅಕ್ಕಿ ವಿತರಣೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಇವರು ಅಕ್ಕಿಯನ್ನು ಕೊಡಲಿ, ಆದರೆ ಲಾಸ್ ಆಗದಂತೆ ನೀಡಲಿ. ಅಕ್ಕಿ ಕೊಡಿ ಹಣ ಕೊಡುತ್ತೇವೆ ಅಂತಾ ಕೇಳಿದರೂ ನಮಗೆ ಕೊಡಲಿಲ್ಲ. ದೇಶದ ಬೊಕ್ಕಸ, ಜನರ ಹಣಕ್ಕೆ ಒಂದು ಇತಿಮಿತಿ ಇರಬೇಕು” ಎಂದರು.
“ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿ, ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯನ್ನೂ ಜಾರಿಗೊಳಿಸಿದರು. ಕೇಂದ್ರದ 5 ಕೆಜಿ ಜತೆ ತಾವೂ ಐದು ಕೆಜಿ ಸೇರಿಸಿ ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದರು. ಆದರೆ ಅಷ್ಟೊಂದು ಪ್ರಮಾಣದಲ್ಲಿ ಅಕ್ಕಿ ಸಿಗದ ಕಾರಣಕ್ಕೆ ಇದುವರೆಗೂ ಅಕ್ಕಿ ಕೊಡಲಾಗಿಲ್ಲ. ಅದರ ಬದಲಿಗೆ ತಲಾ 170 ರೂ. ಹಣ ನೀಡುತ್ತಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಪಕ್ಷ ನಾಯಕ ಅಶೋಕ್ ಮತ್ತು ಸಾರ್ವಜನಿಕ ಸಭ್ಯತೆ
“ಬಿಪಿಎಲ್ ಕಾರ್ಡ್‌ನ ಪ್ರತಿ ಫಲಾನುಭವಿ ಖಾತೆಗೆ ಪ್ರತಿ ತಿಂಗಳು 170 ರೂಪಾಯಿಯಂತೆ ಹಣ ಹಾಕುತ್ತಿದ್ದಾರೆ. ಕಳೆದ 6 ತಿಂಗಳಲ್ಲಿ ಜನರ ಖಾತೆಗೆ ಬರೋಬ್ಬರಿ 3,751 ಕೋಟಿ ರೂ. ಹಣ ವರ್ಗಾವಣೆ ಮಾಡಿದೆ. ಇನ್ನು ಎರಡು ಸರ್ವೇಗಳಲ್ಲಿ ಅಕ್ಕಿ ಬಗ್ಗೆಯೇ ಹೆಚ್ಚಿನ ಜನ ಒಲವು ತೋರಿಸಿದ್ದಾರೆ. ಹೀಗಾಗಿ ಮತ್ತೆ ಅಕ್ಕಿ ಖರೀದಿಗೆ ಸರ್ಕಾರ ಪ್ರಯತ್ನ ಆರಂಭಿಸಿದೆ” ಎಂದು ಹೇಳಿದರು.

ಸಚಿವ ಮುನಿಯಪ್ಪನವ್ರೆ….
ನೀವು ಕೊಡೋ 5 ಕೆಜಿ ಅಕ್ಕಿ 170 ರೂ. ನಿಂದ ಬಡವ್ರು ಜೀವನ ಮಾಡೋಕ್ಕಾಗಲ್ಲ ಸ್ವಾಮಿ… ಕೊನೆ ಪಕ್ಷ ಓಪನ್ ಮಾರ್ಕೆಟ್ ಗೆ ಕೆಜಿಗೆ 29 ರೂ ಭಾರತ್ ಅಕ್ಕಿ ನೀಡೋದ್ರಿಂದ ಎಲ್ಲಾ ವರ್ಗದ ಜನ್ರು ನೆಮ್ಮದಿಯಾಗಿ ಊಟ ಮಾಡಬಹುದು. ಜನ್ರ ತೆರಿಗೆ ಹಣವನ್ನು ಪಕ್ಷದ ವರ್ಚಸ್ಸು ಬೆಳೆಸೋದಕ್ಕಾಗಿ ಬಿಟ್ಟಿ ಗ್ಯಾರಂಟಿ ನೀಡ್ತಿದ್ದೀರಿ ನೀವು. ಅದ್ರ ಬದಲು ಶಾಶ್ವತವಾಗಿ ಜನರಿಗೆ ಉಚಿತ ಆರೋಗ್ಯ ಸೇವೆ.. ದೇಶದ ಮಕ್ಕಳಿಗೆ ಉಚಿತ್ ವಿದ್ಯಾಭ್ಯಾಸ ನೀಡಿದ್ರೆ ನೀವೊಂದು ಮಾದರಿ ಸರ್ಕಾರ ಅಂದುಕೊಳ್ಳಬಹುದಿತ್ತು. ಅದ್ರೆ, ಬಿಕ್ಷಕರಿಗೆ ನೀಡುವಂತೆ 5 ಕೆಜಿ ಉಚಿತ ಅಕ್ಕಿ, 170 ರೂ.ಕೊಡ್ತಿದ್ದೇನೆ ಅಂತೀರಿ.. ಅದ್ರೆ ಅದೆಷ್ಟು ಜನ್ರಿಗೆ ಸಿಕ್ಕಿದೆಯೋ ದೇವರೇ ಬಲ್ಲ… ಚಿಲ್ಲರೆ ಗಿಮಿಕ್,.. ಚಿಲ್ಲರೆ ಯೋಚನೆ ಬಿಟ್ಟು ರಾಜ್ಯ ಸರ್ಕಾರ ಜನ್ರ ಕಲ್ಯಾಣಕ್ಕೆ ಶ್ರಮಿಸಿದ್ರೆ ಒಳಿತಾಗಬಹುದು…