ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರು ಸಾಂವಿಧಾನಿಕ ಸ್ಥಾನದಲ್ಲಿದ್ದುಕೊಂಡು ಕರ್ನಾಟಕದಲ್ಲಿ ʼಆಪರೇಷನ್ ಕಮಲʼ ಮಾಡೋಣ ಎಂದು ಹೇಳಲು ಸಿಎಂ ಶಿಂಧೆಗೆ ನಾಚಿಕೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತೀರುಗೇಟು ನೀಡಿದರು.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಏಕನಾಥ ಶಿಂಧೆಗೆ ಬೇರೆ ಏನೂ ಕೆಲಸ ಇಲ್ಲ. ಬರೀ ರಾಜ್ಯದಲ್ಲಿ ಬರೀ ಕಳವು ಮಾಡಬೇಕು ಅನ್ನೋದೇ ಅವರ ಉದ್ದೇಶವಾಗಿದೆ. ಆಪರೇಷನ್ ಕಮಲ ಮಾಡೋಣ, ಹಣ, ಆಸ್ತಿ ಕಸಿದುಕೊಳ್ಳುವ ಕೆಲಸ ಮಾಡುವ ಇಂತಹವರಿಗೆ ಛೀಮಾರಿ ಹಾಕೋಣ” ಎಂದು ಶಿಂಧೆ ಹೇಳಿಕೆಯನ್ನು ಸಚಿವ ಖಂಡ್ರೆ ತಳ್ಳಿ ಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಇಲ್ಲಿನ ಕಾಂಗ್ರೆಸ್‌ನವರು ಏನು ಗಿರಾಕಿಗಳು ಇದ್ದಾರಾ ಹೊತ್ತುಕೊಂಡು ಹೋಗೋಕೆ. ಅವರು ಬಂದ್ರೆ ಇಲ್ಲಿನವರು ಸುಮ್ಮನೆ ಬಿಡುತ್ತಾರೇ? ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ರಾಜ್ಯಕ್ಕೆ ಕಾಲಿಡಲಿ ನೋಡೋಣ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು
ಮಾಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಅವರ ಮುಖ್ಯಮಂತ್ರಿ ಹುದ್ದೆಯೇ ಅಲುಗಾಡುತ್ತಿದೆ. ಯಾವಾಗ ಛಿದ್ರವಾಗುತ್ತದೆ ಎಂಬುದು ಅವರಿಗೆ ಗೊತ್ತಿಲ್ಲ. ಇನ್ನು ಲೋಕಸಭಾ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗದೇ ಸಂಪೂರ್ಣ ನೆಲೆ ಕಳೆದುಕೊಳ್ಳುತ್ತಾರೆ. ಅವರ ಸಿಎಂ ಹುದ್ದೆಯೇ ಉಳಿಯದು. ಹೀಗಿದ್ದರೂ ಬೇರೆಯವರ ಬಗ್ಗೆ ಯಾಕೆ ಮಾತಾಡಬೇಕು ಎಂದು ಸಚಿವ ಖಂಡ್ರೆ ಹೇಳಿದರು.