“ಸಚಿವರೊಬ್ಬರ ಮಾತಿನ ಶೈಲಿಯು ಲೋಕಸಭಾ ಚುನಾವಣೆಯ ಪಕ್ಷದ ಸಾವಿರಾರು ಮತಗಳನ್ನು ಹಾಳು ಮಾಡಿದೆ” ಎಂದು ಬಿಜೆಪಿ ಶಾಸಕ ಮೃಣಾಲ್ ಸೈಕಿಯಾ ಹೇಳಿದ್ದಾರೆ.
ಖುಮ್ಟೈ ಶಾಸಕರಾದ ಮೃಣಾಲ್ ಸೈಕಿಯಾ ಅವರು ಬಿಜೆಪಿ ಸಚಿವ ಜಯಂತ ಮಲ್ಲ ಬರುವಾ ಸಾರ್ವಜನಿಕವಾಗಿ ಪಕ್ಷದ ಒಳ ವಿಚಾರಗಳನ್ನು ಮಾತನಾಡುವುದನ್ನು ತಡೆಯುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಮನವಿ ಮಾಡಿದ್ದಾರೆ.
#8pm :- Respected HCM @himantabiswa sir, pl tell @jayanta_malla to keep his mouth shut about party affairs. He should realise by now that his style of talking has already spoiled thousands of @bjp4assam votes in this #election2024 pic.twitter.com/xoN6o9bpMN
— Mrinal Saikia (@Mrinal_MLA) May 15, 2024
“ಗೌರವಾನ್ವಿತ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೇ, ದಯವಿಟ್ಟು ಸಚಿವ ಜಯಂತ ಮಲ್ಲ ಬರುವಾ ಅವರಿಗೆ ಪಕ್ಷದ ವ್ಯವಹಾರಗಳ ಬಗ್ಗೆ ಮಾತನಾಡದಂತೆ ತಿಳಿಸಿ. ಈ 2024ರ ಚುನಾವಣೆಯಲ್ಲಿ ಅವರ ಮಾತಿನ ಶೈಲಿ ಈಗಾಗಲೇ ಅಸ್ಸಾಂನಲ್ಲಿ ಸಾವಿರಾರು ಮತಗಳನ್ನು ಹಾಳು ಮಾಡಿದೆ ಎಂಬುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು” ಎಂದು ಮೃಣಾಲ್ ಸೈಕಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಪಕ್ಷದ ಸೋಲಿಗೆ ಬಿಜೆಪಿಯನ್ನು ದೂಷಿಸಲಾಗದು: ಕಾಂಗ್ರೆಸ್ ನಾಯಕ
ಬಿಜೆಪಿ ಹಳೆಯ ನಾಯಕರುಗಳ ವಿರುದ್ಧವಾಗಿ ಜಯಂತ ಮಲ್ಲ ಬರುವಾ ಅವರು ಹೇಳಿಕೆಗಳನ್ನು ನೀಡಿದ್ದರು. ಪಕ್ಷಕ್ಕೆ ಸಮರ್ಪಣೆ ಅತ್ಯಂತ ಮುಖ್ಯವಾಗಿದ್ದು ನಮ್ಮ ನಾಯಕರು ಎಷ್ಟು ಸಮಯವನ್ನು ನೀಡುತ್ತಾರೆ ಎಂದು ಬರುವಾ ಬಹಿರಂಗವಾಗಿ ಪ್ರಶ್ನಿಸಿದ್ದರು.
ಪಕ್ಷದ ನಾಯಕತ್ವವನ್ನು ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಶಾಸಕ ಅಶೋಕ್ ಶರ್ಮಾ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು ಇದಾದ ಬಳಿಕ ಬರುವಾ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳು ಮತದಾನದ ದಿನದಂದು ಪಕ್ಷದ ವಿರುದ್ಧ ಮತದಾರರನ್ನು ಪ್ರಚೋದಿಸುತ್ತದೆ ಎಂದು ಬಿಜೆಪಿಯ ಇತರೆ ನಾಯಕರು ಆರೋಪಿಸಿದ್ದಾರೆ.
ಕೆಲವು ಸಮಯದಿಂದ ಅಸ್ಸಾಂನಲ್ಲಿ ಬಿಜೆಪಿ ತನ್ನ ಹಳೆಯ ಮತ್ತು ಹೊಸ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಪ್ರಭಾವಕ್ಕೆ ಒಳಗಾಗಿದೆ. ಶರ್ಮಾ ಹಿರಿಯ ಬಿಜೆಪಿ ನಾಯಕರಾಗಿದ್ದರೆ, ಬರುವಾ ಈ ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದವರು.