ಮೋದಿ ವೈಫಲ್ಯ | ಆರೋಗ್ಯ ಸೇವೆ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲ; ಅಂಕಿಅಂಶಗಳು ಹೀಗಿವೆ

Date:

Advertisements

2014ರ ಚುನಾವಣೆ ವೇಳೆ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ, ಭಾರತಕ್ಕಾಗಿ ಹೊಸ ಆರೋಗ್ಯ ನೀತಿಯನ್ನು ರೂಪಿಸುವುದಾಗಿ ಹೇಳಿತ್ತು. ದೇಶದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸಲು ರಾಷ್ಟ್ರೀಯ ಆರೋಗ್ಯ ಭರವಸೆ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿತ್ತು.

2017ರಲ್ಲಿ, ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ರಾಷ್ಟ್ರೀಯ ಆರೋಗ್ಯ ನೀತಿಯನ್ನು ರಚಿಸಿತು. ಈ ನೀತಿಯು ಸರ್ಕಾರಿ ಆಸ್ಪತ್ರೆಗಳ ಮೇಲೆ ಕೇಂದ್ರೀಕೃತವಾಗಿರುವ ಸಾರ್ವಜನಿಕ ಆರೋಗ್ಯ ರಕ್ಷಣೆಯ ಮಾದರಿಯನ್ನು ವಿಮೆ ಆಧಾರಿತ ಮಾದರಿಗೆ ಬದಲಾಯಿಸುವ ಸಂಕೇತವೆಂದು ಹೇಳಿಕೊಂಡಿತು.ಆ ಆದರೆ, ಈಗ ಅಸಲಿಯತ್ತು ಬೇರೆಯೇ ಇದೆ.

2018ರಿಂದ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಸರ್ಕಾರವು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ವಿಮೆಯನ್ನು ಒದಗಿಸುತ್ತಿದೆ. ಆದರೆ, ಈ ಯೋಜನೆಯಡಿಯ ಫಲಾನುಭವ ಸಿಗುವ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗಿಂತ ಕಡಿಮೆ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿವೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ.

Advertisements

ಕೋವಿಡ್-19 ಸಮಯದಲ್ಲಿ ವಿಮಾ ಯೋಜನೆಯು ಆರೋಗ್ಯ ಸೇವೆ ಒದಗಿಸುವಲ್ಲಿ ವಿಫಲವಾಗಿದೆ: ಕೊರೊನಾವಲ್ಲದೆ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಲ್ಲಿ ಕೇವಲ 11.9% ರೋಗಿಗಳು ಮಾತ್ರ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆದಿದ್ದಾರೆ.

ರಾಷ್ಟ್ರೀಯ ಆರೋಗ್ಯ ನೀತಿಯ ಭಾಗವಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿಸ್ತರಣೆಯ ಭಾಗವಾಗಿ ಮತ್ತಷ್ಟು ಸೇವೆಗಳನ್ನು ಒದಗಿಸಲು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ, ಈವರೆಗೆ 1.5 ಲಕ್ಷ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ, ಈ ಕೇಂದ್ರಗಳಿಗೆ ಗುರುತಿಸಲಾಗಿರುವ ಮಾರ್ಗಸೂಚಿಯಂತೆ ಪ್ರತಿಯೊಂದು ಕೇಂದ್ರವು ಯೋಗ, ಮೌಖಿಕ ಆರೈಕೆ, ಉಪಶಾಮಕ ಆರೈಕೆ, ಮಾನಸಿಕ ಆರೋಗ್ಯದ ತಪಾಸಣೆ ಅಥವಾ ಸಾಂಕ್ರಾಮಿಕವಲ್ಲದ ರೋಗಗಳಿಗೆ ಯಾವುದೇ ಸೇವೆ ಒದಗಿಸುತ್ತಿಲ್ಲ ಎಂಬುದು ಕಂಡುಬಂದಿದೆ.

ಆರೋಗ್ಯ ಖರ್ಚು
2017ರ ರಾಷ್ಟ್ರೀಯ ಆರೋಗ್ಯ ನೀತಿಯು ಸಾರ್ವಜನಿಕ ಆರೋಗ್ಯಕ್ಕೆ ಸರ್ಕಾರ ಮಾಡುವ ಒಟ್ಟು ವೆಚ್ಚವು ದೇಶದ ಜಿಡಿಪಿಯ ಕನಿಷ್ಠ 2.5% ಆಗಿರಬೇಕು ಎಂದು ಶಿಫಾರಸು ಮಾಡಿದೆ. ಆದರೆ, ಆರೋಗ್ಯ ಕ್ಷೇತ್ರಕ್ಕೆ ಸರ್ಕಾರವು 2014-15ರಲ್ಲಿ GDPಯ 1.13% ಆಗಿತ್ತು. ಇದು 2022-23ರಲ್ಲಿ ಜಿಡಿಪಿಯ 2.1% ಆಗಿದ್ದರೆ, ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಸಚಿವಾಲಯಕ್ಕೆ ಹಂಚಿಕೆಯಾದ ಪಾಲು ಕೇವಲ 1.9% ಮಾತ್ರ.

ರೋಗಿಗಳು ಸ್ವತಃ ಭರಿಸುವ ಆರೋಗ್ಯ ವೆಚ್ಚಗಳು ಸರ್ಕಾರ ತನ್ನ ಜನರಿಗೆ ಯಾವ ರೀತಿಯಲ್ಲಿ ಆರೋಗ್ಯ ಸೇವೆ ಒದಗಿಸುತ್ತಿವೆ ಎಂಬುದರ ಸೂಚಕವೆಂದು ಪರಿಗಣಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಘಾನಾ, ಭೂತಾನ್, ಇಂಡೋನೇಷ್ಯಾ, ಮಾಲ್ಡೀವ್ಸ್, ಶ್ರೀಲಂಕಾದಂತಹ ದೇಶಗಳಿಗಿಂತ ಪ್ರಸ್ತುತ ಆರೋಗ್ಯ ವೆಚ್ಚದ ಶೇಕಡಾವಾರು ಪ್ರಮಾಣದಲ್ಲಿ ಭಾರತವು ಹೆಚ್ಚಿನ ಹಣದ ವೆಚ್ಚವನ್ನು ಹೊಂದಿದೆ. ಅಂದರೆ, ಆ ದೇಶಗಳಿಂದ ಭಾರತದ ಜನರು ಹೆಚ್ಚಾಗಿ ಆರೋಗ್ಯಕ್ಕಾಗಿ ತಮ್ಮ ಕೈಯಿಂದ ಹಣ ವ್ಯಯಿಸುತ್ತಿದ್ದಾರೆ.

2015-16ರಲ್ಲಿ ಭಾರತದಲ್ಲಿನ ಸರಾಸರಿ ಹಣದ ವೆಚ್ಚವು ರೂ. 3,197 ಇತ್ತು. ಅದು 2019-21ರಲ್ಲಿ 2,916 ರೂ.ಗೆ ಇಳಿಕೆಯಾಗಿದೆ. ಆದರೆ, ಗಣನೀಯ ಪ್ರಮಾಣದಲ್ಲಿ ಯಾವುದೇ ಇಳಿಕೆ ಕಂಡಿಲ್ಲದೇ ಇರುವುದು, ಜನರು ತಮ್ಮ ಜೇಬಿನಿಂದಲೇ ಹಣ ಭರಿಸುತ್ತಿರುವುದನ್ನು ಸೂಚಿಸುತ್ತದೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು (ಏಮ್ಸ್‌)
2014ರಲ್ಲಿ, ಬಿಜೆಪಿ ಪ್ರತಿ ರಾಜ್ಯದಲ್ಲೂ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು-ಏಮ್ಸ್‌) ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ದೆಹಲಿಯಲ್ಲಿ ವಿಶೇಷವಾದ ಮತ್ತು ಹಳೆಯದಾದ ಏಮ್ಸ್‌ ವೈದ್ಯಕೀಯ ಕಾಲೇಜು ಇದೆ.

ಕಳೆದ ಒಂದು ದಶಕದಲ್ಲಿ ಮೋದಿ ಸರ್ಕಾರ 15 ಹೊಸ ಏಮ್ಸ್‌ಗಳನ್ನು ಸ್ಥಾಪಿಸಿದೆ. ಆದರೆ, ಏಮ್ಸ್‌ನ ಉದ್ದೇಶಗಳು ಹಾಗೂ ಅವುಗಳಲ್ಲಿ ಒದಗಿಸಬಹುದಾದ ಅನೇಕ ಸೇವೆಗಳನ್ನು ಅವು ನೀಡುತ್ತಿಲ್ಲ. ಅನೇಕ ಏಮ್ಸ್‌ ಸಂಸ್ಥೆಗಳು ಹೊರರೋಗಿ ಮತ್ತು ಒಳರೋಗಿ ವಿಭಾಗಗಳಲ್ಲಿ ಸೀಮಿತ ಸೇವೆಗಳನ್ನು ಮಾತ್ರ ನೀಡುತ್ತಿವೆ.

ವೈದ್ಯಕೀಯ ಕಾಲೇಜುಗಳು
2014ರಲ್ಲಿ, ಭಾರತವು 806 ಜಿಲ್ಲೆಗಳಿಗೆ 387 ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು. ಬಿಜೆಪಿ ಸರ್ಕಾರವು ಅವುಗಳನ್ನು 706ಕ್ಕೆ ಹೆಚ್ಚಿಸಿದೆ. ಆದರೆ, ಅನೇಕ ಹೊಸ ಕಾಲೇಜುಗಳಲ್ಲಿ ವೈದ್ಯರು ಮತ್ತು ಇತರ ಸಿಬ್ಬಂದಿ ಕೊರತೆಯಿದೆ. ಹೀಗಾಗಿ, ಈ ಹಿಂದೆ ಇದ್ದ ಹಳೆಯ ಆಸ್ಪತ್ರೆಗಳಿಗೇ ರೋಗಿಗಳು ತೆರಳುತ್ತಿದ್ದಾರೆ. ಅದಕ್ಕಾಗಿ, ಹೆಚ್ಚು ಪ್ರಯಾಣವನ್ನು ಮಾಡುತ್ತಿದ್ದಾರೆ. ಹೊಸ ಆಸ್ಪತ್ರೆಗಳು ಹೆಸರಿಗಷ್ಟೇ ಸೀಮಿತವಾಗಿವೆ.

2022-23ರಲ್ಲಿ, ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ನಡೆಸಿದ ಸಮೀಕ್ಷೆ ಪ್ರಕಾರ, ಹೊಸದಾಗಿ ಆರಂಭವಾದ ಎಲ್ಲ 246 ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಪ್ರಾಧ್ಯಪಕರ ಹಾಜರಾತಿಯು 50%ಅನ್ನೂ ಪೂರೈಸಿಲ್ಲ. ಅಂದರೆ, ಆ ಪ್ರಮಾಣದಲ್ಲಿ ವೈದ್ಯರ ಕೊರತೆಗಳು ಎದ್ದು ಕಾಣಿಸುತ್ತಿವೆ.

ಅಪೌಷ್ಟಿಕತೆ
ಕಳೆದ ದಶಕದಲ್ಲಿ ನಡೆದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳ ಪ್ರಕಾರ, ಅಪೌಷ್ಟಿಕತೆಯ ಸೂಚಕಗಳಲ್ಲಿ ಭಾರತೀಯ ಮಕ್ಕಳು ಹೆಚ್ಚು ಅಪೌಷ್ಟಿಕತೆ ಎದುರಿಸುತ್ತಿದ್ದಾರೆ.

2015-16ರ ಸಮೀಕ್ಷೆಯಲ್ಲಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 7.5%ರಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆಗೆ ತುತ್ತಾಗಿದ್ದರು. ಅವರು ಬೆಳವಳಿಗೆ ಮತ್ತು ತೂಕದಲ್ಲಿ ಭಾರೀ ಕೊರತೆ ಕಂಡುಬಂದಿತ್ತು. ಈ ಅಪೌಷ್ಟಿಕತೆಯ ಪ್ರಮಾಣ, 2019-21ರ ನಡುವೆ 7.7%ಕ್ಕೆ ಏರಿಕೆಯಾಗಿದೆ. ಇದೇ ವಯಸ್ಸಿನವರಲ್ಲಿ ಸ್ಥೂಲಕಾಯ ಸಮಸ್ಯೆಯು ಇದೇ ಅವಧಿಯಲ್ಲಿ 2.1% ರಿಂದ 3.4%ಕ್ಕೆ ಏರಿದೆ.

2022ರ ವೇಳೆಗೆ ಮಕ್ಕಳು ಮತ್ತು ಗರ್ಭಿಣಿಯರಿಗೆ ಸಂಪೂರ್ಣ ವ್ಯಾಕ್ಸಿನೇಷನ್ ಕವರೇಜ್ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ 76.4% ಮಕ್ಕಳು ಮಾತ್ರ ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಇನ್ನೂ, 23.6% ಮಕ್ಕಳು ಪೂರ್ಣಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಪಡೆಯಲು ಸಾಧ್ಯವಾಗಿಯೇ ಇಲ್ಲ.

ಟೆಲಿಮೆಡಿಸಿನ್
2019ರಲ್ಲಿ, ಮೋದಿ ಸರ್ಕಾರವು ಇ-ಸಂಜೀವನಿ ಎಂಬ ಟೆಲಿಮೆಡಿಸಿನ್ ಸೇವೆಯನ್ನು ಪ್ರಾರಂಭಿಸಿದೆ. ಇದು ಇಲ್ಲಿಯವರೆಗೆ 19.3 ಕೋಟಿ ಜನರಿಗೆ ಸೇವೆ ಸಲ್ಲಿಸಿದೆ ಎಂದು ಹೇಳಿಕೊಳ್ಳುತ್ತದೆ.

ಆದಾಗ್ಯೂ, ಅನೇಕ ಸರ್ಕಾರಿ ವೈದ್ಯರು, ದೈನಂದಿನ ಗುರಿಗಳನ್ನು ಪೂರೈಸುವ ಒತ್ತಡವನ್ನು ಎದುರಿಸುತ್ತಿದ್ದು, ಅವರು ಟೆಲಿಮೆಡಿಸಿನ್‌ ಸೇವೆ ಪಡೆಯದ ಇತರ ರೋಗಿಗಳನ್ನು ಟೆಲಿಮೆಡಿಸಿನ್‌ಗೆ ಒಳಪಡಿಸಿರುವುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿದ್ದಾರೆ ಎಂಬ ಆರೋಪಗಳೂ ಇವೆ.

ರೋಗ ನಿಯಂತ್ರಣ
ಅತಿಸಾರವನ್ನು ಕೊನೆಗಾಣಿಸುವ ಬಿಜೆಪಿಯ ಭರವಸೆ ಬಾಕಿ ಉಳಿದಿದೆ. 2019-20ರಲ್ಲಿ ನಡೆದ ಸಮೀಕ್ಷೆ ಪ್ರಕಾರ, ಸುಮಾರು 8% ಮಕ್ಕಳು ಅತಿಸಾರ ರೋಗದಿಂದ ಬಳಲುತ್ತಿದ್ದಾರೆ.

ಬಿಜೆಪಿ ತನ್ನ 2014ರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ‘ರಾಷ್ಟ್ರೀಯ ಸೊಳ್ಳೆ ನಿಯಂತ್ರಣ ಮಿಷನ್’ ಇನ್ನೂ ಪ್ರಾರಂಭವಾಗಿಲ್ಲ.

ಬಿಜೆಪಿ ತನ್ನ 2019ರ ಪ್ರಣಾಳಿಕೆಯಲ್ಲಿ ಕ್ಷಯರೋಗವನ್ನು ತೊಡೆದುಹಾಕುವುದಾಗಿ ಭರವಸೆ ನೀಡಿತ್ತು. ಇದಕ್ಕಾಗಿ, ಭಾರತವು ಟಿಬಿ ಹರಡುವಿಕೆಯನ್ನು ಪ್ರತಿ 10 ಲಕ್ಷ ಜನರ ಪೈಕಿ, ಒಂದು ಪ್ರಕರಣಕ್ಕೆ ಇಳಿಸಬೇಕಾಗುತ್ತದೆ. ಭಾರತದಲ್ಲಿ ಪ್ರಸ್ತುತ ಪ್ರತಿ ಲಕ್ಷ ಜನಸಂಖ್ಯೆಗೆ 188 ಜನರು ಕ್ಷಯ ರೋಗದಿಂದ ಬಳಲುತ್ತಿದ್ದಾರೆ. 2020ರಲ್ಲಿ, 4.93 ಲಕ್ಷ ಭಾರತೀಯರು ಕ್ಷಯ ರೋಗಕ್ಕೆ ಬಲಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಮಾಹಿತಿ ಮೂಲ: ದಿ ಸ್ಕ್ರಾಲ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X