ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, “ಆರ್ಥಿಕ ಸೋಲು, ನಿರುದ್ಯೋಗ, ಹಣದುಬ್ಬರವನ್ನು ಮಾತ್ರ ಮೋದಿ ಸರ್ಕಾರ ‘ಭಾರೀ ಪ್ರಮಾಣದಲ್ಲಿ’ ಸೃಷ್ಟಿಸಿದೆ” ಎಂದು ಟೀಕಿಸಿದ್ದಾರೆ.
ಈ ಬಗ್ಗೆ ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ ಅವರು ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದುವರಿಸಿದ್ದಾರೆ. ಅನ್ಯಾದಯ ತೆರಿಗೆಗಳನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಹಣದುಬ್ಬರ ಹೆಚ್ಚಳ; ಆದರೆ ಬಂಡವಾಳಶಾಹಿಗಳ ಬೆಳೆಸುತ್ತಿರುವ ಮೋದಿ ಸರ್ಕಾರ: ರಾಹುಲ್ ಗಾಂಧಿ
“ಮೋದಿ ಸರ್ಕಾರದಡಿಯಲ್ಲಿ ಯಾವುದಾದರೂ ‘ಉತ್ಪಾದನೆ’ ಎಂಬುದು ಆಗಿದ್ದರೆ, ಅದು ಆರ್ಥಿಕ ಸೋಲು, ನಿರುದ್ಯೋಗ, ಹಣದುಬ್ಬರ ಮತ್ತು ಸುಳ್ಳು ಮಾತ್ರ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಹಾಗೆಯೇ ಅನ್ಯಾಯದ ತೆರಿಗೆಯನ್ನು ರದ್ದುಪಡಿಸಿ, ಏಕಸ್ವಾಮ್ಯತ್ವವನ್ನು ಅಳಿಸುಹಾಕಿ, ಬ್ಯಾಂಕ್‌ಗಳಿಗೆ ಸಹಾಯದ ಬಾಗಿಲು ತೆರೆಯಿರಿ, ಕೌಶಲ್ಯ ಹೊಂದಿರುವವರಿಗೆ ಹಕ್ಕು ನೀಡಿ. ಹಾಗಾದರೆ ಮಾತ್ರ ಆರ್ಥಿಕತೆಯನ್ನು, ಉದ್ಯೋಗವನ್ನು ಮತ್ತು ಸದೃಢ ಭಾರತವನ್ನು ಬೆಳೆಸಲು ಸಾಧ್ಯವಾಗುತ್ತದೆ” ಎಂದು ರಾಹುಲ್ ಗಾಂಧಿ ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಉದ್ಯೋಗ ಸೃಷ್ಟಿಸುವ ಬದಲು ಮೋದಿ ಸರ್ಕಾರ ಗಮನ ಬೇರೆಡೆ ಸೆಳೆಯುತ್ತಿದೆ: ಕಾಂಗ್ರೆಸ್ ಆರೋಪ
2014ರಲ್ಲಿ ಪ್ರಧಾನಿಯಾಗುವುದಕ್ಕೂ ಮುನ್ನ ನರೇಂದ್ರ ಮೋದಿ ಅವರು ತಾನು ಪ್ರಧಾನಿಯಾದರೆ ದೇಶದಲ್ಲಿ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಮೂರು ಅವಧಿ ಕಳೆದರೂ ಒಂದು ಕೋಟಿ ಉದ್ಯೋಗವನ್ನು ಸೃಷ್ಟಿಸಲು ಕೂಡಾ ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹಣದುಬ್ಬರವೂ ಕೂಡಾ ಹೆಚ್ಚಾಗುತ್ತಿದೆ, ಆರ್ಥಿಕ ಸ್ಥಿತಿಯೂ ಹದಗೆಡುತ್ತಿದೆ.
2024-25ನೇ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇಕಡ 6.2ರಷ್ಟು ಪ್ರಗತಿ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇಕಡ 9.5ರಷ್ಟು ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ ಶೇಕಡ 3.3ರಷ್ಟು ಇಳಿಕೆಯಾಗಿದೆ.
