ಪಾಕಿಸ್ತಾನದ ವಿರುದ್ದದ ದಾಳಿಯನ್ನು ನಿಲ್ಲಿಸುವ ಒಪ್ಪುವ ಮೂಲಕ ಹಿಂದುತ್ವ ಸಿದ್ಧಾಂತವಾದಿ ವಿ ಡಿ ಸಾವರ್ಕರ್ ಅವರ ‘ಅಖಂಡ ಭಾರತ’ ಕನಸನ್ನು ನನಸು ಮಾಡುವ ಅವಕಾಶವನ್ನು ನರೇಂದ್ರ ಮೋದಿ ಸರ್ಕಾರ ಕಳೆದುಕೊಂಡಿದೆ ಎಂದು ಶಿವಸೇನೆ (ಯುಬಿಟಿ) ಮಂಗಳವಾರ ಹೇಳಿದೆ.
ಸುಮಾರು 26 ಪ್ರವಾಸಿಗರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ದಾಳಿ ವಿರುದ್ದ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ | ಜಮ್ಮುವಿನಲ್ಲಿ ಕಾಂಗ್ರೆಸ್‌ಗೆ ಶಿವಸೇನೆ ಸಾಥ್
ಇದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಸದ್ಯ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದವನ್ನು ಕೆಲವು ರಾಜಕೀಯ ಪಕ್ಷಗಳು ಸ್ವಾಗತಿಸಿದರೆ ಕೆಲವು ಪಕ್ಷಗಳು ಯುದ್ಧ ನಡೆಯಬೇಕಿತ್ತು ಎಂಬ ವಾದ ಮಾಡಿದೆ. ವಿಪಕ್ಷಗಳೂ ಯುದ್ಧ ನಿಲ್ಲಿಸಿ ವಿನಾಶವನ್ನು ತಡೆಯುವ ನಿರ್ಧಾರವನ್ನು ಸಮ್ಮತಿಸಿದೆ. ಆದರೆ ಈ ನಡುವೆ ವಿಪಕ್ಷ, ಬಲಪಂಥೀಯ ಪಕ್ಷ ಶಿವಸೇನೆ (ಯುಬಿಟಿ) ಕದನ ವಿರಾಮವನ್ನು ಟೀಕಿಸಿದೆ.
ಈ ಸಂಘರ್ಷ ಇನ್ನೂ ನಾಲ್ಕು ದಿನಗಳ ಕಾಲ ಮುಂದುವರಿದಿದ್ದರೆ, ಭಾರತೀಯ ಸಶಸ್ತ್ರ ಪಡೆಗಳು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ), ಕರಾಚಿ ಮತ್ತು ಲಾಹೋರ್ ಅನ್ನು ವಶಪಡಿಸಿಕೊಳ್ಳುತ್ತಿದ್ದವು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಟ ಹಾಳು ಮಾಡಿದರು ಎಂದು ಶಿವಸೇನೆ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಹೇಳಿದೆ.
ಪಾಕಿಸ್ತಾನದ ವಿರುದ್ಧದ ಮಿಲಿಟರಿ ಕ್ರಮವನ್ನು ನಿಲ್ಲಿಸುವ ಮುನ್ನ ಭಾರತ ಕನಿಷ್ಟ ಪಕ್ಷ ಕನಿಷ್ಠ ಪಕ್ಷ ಪಿಒಕೆಯನ್ನು ವಾಪಸ್ ತೆಗೆದುಕೊಂಡು ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಬೇಕಿತ್ತು. ಪಿಒಕೆಯಿಂದ ರಾಮೇಶ್ವರಂ ಮತ್ತು ಸಿಂಧೂ ಅಸ್ಸಾಂವರೆಗೆ ವಿಸ್ತರಿಸಿರುವ ಅವಿಭಜಿತ ಭಾರತದ ಕನಸು ಸಾವರ್ಕರ್ ಕಂಡಿದ್ದರು. ಪ್ರಧಾನಿ ಮೋದಿ ಮತ್ತು ಅವರ ಸರ್ಕಾರವು ಸಾವರ್ಕರ್ ಅವರ ಅಖಂಡ ಭಾರತ ಕನಸನ್ನು ನನಸು ಮಾಡುವ ಅವಕಾಶವನ್ನು ಕಳೆದುಕೊಂಡಿತು” ಎಂದು ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಭಗತ್ ಸಿಂಗ್ ಹೆಸರಿಡಲು ಆಗ್ರಹಿಸಿ ಸಾವರ್ಕರ್ ಫ್ಲೈ ಓವರ್‌ಗೆ ಮಸಿ ಬಳಿದ NSUI ಕಾರ್ಯಕರ್ತರು: ಮೂವರ ಬಂಧನ
ಸಾವರ್ಕರ್ ಹೆಸರಿನಲ್ಲಿ ರಾಜಕೀಯ ಮಾಡುವ ಹಕ್ಕು ಇನ್ನು ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಲ್ಲ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ. ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಎಲ್ಲರೂ ಅಖಂಡ ಭಾರತದ ಪ್ರತಿಪಾದಕರು. ಆದರೆ ಕನಸನ್ನು ನನಸಾಗಿಸುವ ಸಮಯ ಬಂದಾಗ ಹಿಂದೆ ಸರಿದಿದ್ದಾರೆ ಎಂದು ಹೇಳಿದೆ.
ಇನ್ನು ಕೆಲವು ರಾಜಕೀಯ ಪಕ್ಷಗಳು ಯುದ್ಧ ನಡೆಸಬೇಕಿತ್ತು ಎಂದು ಹೇಳಿದರೆ ಇನ್ನೊಂದೆಡೆ ಯುದ್ಧ ಬಾಲಿವುಡ್ ಸಿನಿಮಾವಲ್ಲ, ಅದು ‘ರೋಮ್ಯಾಂಟಿಕ್’ ಅಲ್ಲ ಎಂದು ಭಾರತೀಯ ಸೇನಾ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ ಹೇಳಿದ್ದಾರೆ. ಕದನ ವಿರಾಮದ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ನರವಾಣೆ ಟೀಕಿಸಿದ್ದಾರೆ.
