ರಾಜಸ್ಥಾನದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಅವರು ಭಾರತೀಯ ಮುಸ್ಲಿಮರ ವಿರುದ್ಧ ಅತ್ಯಂತ ನೇರ ಮತ್ತು ಬಹಿರಂಗವಾಗಿ ದ್ವೇಷಪೂರಿತ ವಾಗ್ದಾಳಿ ನಡೆಸಿದರು. ಅವರ ಭಾಷಣ ವೈರಲ್ ಆದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿ ಹೇಳಿಕೆಗಳಿಗೆ ತೀವ್ರ ಖಂಡನೆಗಳು ವ್ಯಕ್ತವಾಗಿವೆ. ಜವಾಬ್ದಾರಿ ಸ್ಥಾನದಲ್ಲಿರುವ ಮೋದಿ ಅವರು ಭಾರತದ ಜಾತ್ಯತೀತ ಸಿದ್ಧಾಂತವನ್ನು ಮರೆಯಬಾರದು ಎಂದು ಹಲವರು ಆಕ್ರೋಶ, ಕೋಪ ವ್ಯಕ್ತಪಡಿಸಿದ್ದಾರೆ.
ಮೋದಿ ಮತ್ತು ಬಿಜೆಪಿ ನಾಯಕರು ಚುನಾವಣೆಯ ಸಮಯದಲ್ಲಿ ಕೋಮುವಾದಿ ದ್ವೇಷ ಹೇಳಿಕೆ ನೀಡುವುದು ಹೊಸದೇನಲ್ಲ. ಆದರೂ, ಪ್ರಧಾನಿ ಮೋದಿ, ಭಾರತೀಯ ಮುಸ್ಲಿಮರನ್ನು ‘ಒಳನುಸುಳುವವರು’ ಎಂದು ಹೆಸರಿಸುವುದು ಅಥವಾ ಬ್ರಾಂಡ್ ಮಾಡುವುದು ತೀರಾ ದ್ವೇಷ ಕಾರುವುದನ್ನು ಪ್ರತಿಧ್ವನಿಸುತ್ತದೆ.
ಕೋಮು ಸಿದ್ಧಾಂತದ ಮೇಲೆ ಚುನಾಯಿತರಾದ ಮೋದಿಯವರು ತಮ್ಮ ಕೋಮು ಭರವಸೆಯನ್ನು ಈಡೇರಿಸುತ್ತಿದ್ದಾರೆ ಎಂದು ಕೆಲವರು ವಾದಿಸುತ್ತಿದ್ದಾರೆ ಮತ್ತು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಬಹುಸಂಖ್ಯಾತರು ಮೋದಿ ಹೇಳಿಕೆಗಳನ್ನು ಖಂಡಿಸಿದ್ದಾರೆ. “ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ” ಎಂದೂ ಸುಳ್ಳು ಹೇಳಿಕೆ ನೀಡಿದರು. ಅವರ ಹೇಳಿಕೆ ಮೇಲೆ ಹಲವಾರು ಮಂದಿ ತ್ವರಿತ ಸತ್ಯ-ಶೋಧನೆ ನಡೆಸಿದ್ದಾರೆ. ಮೋದಿ ಅವರ ಸುಳ್ಳನ್ನು ಬಟಾಬಯಲು ಮಾಡಿದ್ದಾರೆ.
ಸಿಂಗ್ ಕುರಿತ ಮೋದಿ ಹೇಳಿಕೆಯನ್ನು ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಅವರು ಅಲ್ಲಗಳೆದಿದ್ದಾರೆ. ‘ದೇಶದ ಸಂಪನ್ಯೂಲಗಳಲ್ಲಿ ಮುಸ್ಲಿಮರಿಗೆ ಮೊಲದ ಹಕ್ಕು’ ಎಂಬ ವದಂತಿಯ ಬಗ್ಗೆ ಮನಮೋಹನ್ ಸಿಂಗ್ ಅವರು 2006ರಲ್ಲೇ ನೀಡಿದ್ದ ಸ್ಪಷ್ಟನೆಯ ಬಗ್ಗೆ ತಿಳಿಸಿದ್ದಾರೆ.

ಆಗಲೂ ಸಿಂಗ್ ಹೇಳಿದ್ದನ್ನು ಬಿಜೆಪಿ ಮತ್ತು ಹಲವರು ತಿರುಚಿ ವ್ಯಾಖ್ಯಾಸಿದ್ದರು. ಅಂದಹಾಗೆ, ಆಗ ಸಿಂಗ್ ಹೇಳಿಕೆ ಹೀಗಿತ್ತು;
“ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು ಅಭಿವೃದ್ಧಿಯ ಪ್ರತಿಫಲಗಳಲ್ಲಿ ಸಮನ ಪಾಲು ಪಡೆಯುವ ಅಧಿಕಾರ ಹೊಂದಿದ್ದಾರೆ. ಅದನ್ನು ಖಚಿತಪಡಿಸಿಕೊಳ್ಳಲು ನಾವು ನವೀನ ಯೋಜನೆಗಳನ್ನು ರೂಪಿಸಬೇಕಾಗಿದೆ. ಸಮಪಾಲು ಪಡೆಯಬೇಕೆಂದರೆ, ಅವರು ಸಂಪನ್ಮೂಲಗಳ ಬಗ್ಗೆ ಮೊದಲಿಗೆ ಹಕ್ಕು ಹೊಂದಿರಬೇಕು” ಎಂದಿದ್ದರು.
ಈ ಹೇಳಿಕೆಯನ್ನು ನೀಡುವ ಮುನ್ನವೇ ಸಿಂಗ್ ಅವರು ದೇಶದ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಹಾಗೂ ಮಕ್ಕಳ ಬಗ್ಗೆಯೂ ಮಾತನಾಡಿದ್ದರು.
ಮುಂದುವರೆದು, “ಎಲ್ಲ ಅಭಿವೃದ್ಧಿ ಸೂಚಕಗಳಲ್ಲಿ ಕೆಲವು ಸಾಮಾಜಿಕ ಗುಂಪುಗಳನ್ನು ಅಂಚಿನಲ್ಲಿ ಇರಿಸಲಾಗಿದೆ ಎಂಬುದು ವಾಸ್ತವ. ಈ ಅಂಚಿನಲ್ಲಿರುವ ಸಮುದಾಯಗಳನ್ನು ಮುನ್ನೆಲೆಗೆ ತರಲು ನಮ್ಮ ಯೋಜನೆಯು ವಿಶೇಷ ಗಮನ ಹರಿಸುತ್ತದೆ. ಇದು ಒಳಗೊಳ್ಳುವಿಕೆಯ ನಿಜವಾದ ಅರ್ಥ. ಒಳಗೊಳ್ಳುವಿಕೆ ಎಂದರೆ ಉತ್ತಮ ಗುರಿ. ನಾವು ಸಮೃದ್ಧ, ಸಮನಾದ ಭಾರತವನ್ನು ಹೊಂದಬೇಕೆಂದು ಆಶಿಸಿದರೆ, ನಾವು ಎಲ್ಲ ಸಮುದಾಯಗಳನ್ನು ಒಳಗೊಳ್ಳಬೇಕು. ಯಾರನ್ನೂ ಬಿಟ್ಟು ಹೋಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು” ಎಂದಿದ್ದರು.
ಅವರ ಮಾತಿನ ಸಣ್ಣ ತುಣುಕನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಲವರು ಹಂಚಿಕೊಳ್ಳುತ್ತಿದ್ದಾರೆ. ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ವಿರುದ್ಧ ತಪ್ಪು ಪ್ರತಿಪಾದನೆಯ ಜೊತೆ ಆ ತುಣುಕನ್ನು ಹರಿಬಿಡಲಾಗಿದೆ. ಇನ್ನು, ಮೋದಿ ಅವರೂ ಕೂಡ ಸಿಂಗ್ ಮಾಹಿತಿ ಅರ್ಥವನ್ನು ತಿರುಚಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
Today, Narendra Modi has shamelessly lied about Dr. Manmohan Singh’s speech regarding first right on resource of this country.
Listen to this fact check and spread it as much as you can. pic.twitter.com/QLyRPzXtms
— Anshuman Sail Nehru (@AnshumanSail) April 21, 2024
ಎಲ್ಲಿ ಪೊಲೀಸರು – ಎಲ್ಲಿ ಚುನಾವಣಾ ಆಯೋಗ?
ಪ್ರಮುಖ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಮೋದಿ ಅವರು ಸ್ಪಷ್ಟವಾಗಿ ದ್ವೇಷ ಭಾಷಣ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಶಬ್ನಮ್ ಹಶ್ಮಿ, “ತಮ್ಮ ಸಾಂವಿಧಾನಿಕ ಕರ್ತವ್ಯದ ಪ್ರಕಾರ ರಾಜಸ್ಥಾನ ಪೊಲೀಸರು ಪ್ರಧಾನ ಮಂತ್ರಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಆದರೆ, ಅವರು ಎಫ್‌ಐಆರ್ ದಾಖಲಿಸಿಲ್ಲ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
@PoliceRajasthan By now you must have filed an FIR against the Prime Minister as the hate speech was given by him in Rajasthan which falls under your jurisdiction.
If not done so far file a case . It is your constitutional duty to file a case against Modi for the obnoxious…
— Shabnam Hashmi (@ShabnamHashmi) April 21, 2024
ಹಶ್ಮಿ ಮಾತ್ರವಲ್ಲದೆ, ಎಕ್ಸ್‌ನಲ್ಲಿ @ಎಂ ಭೀಮ್‌ರಾಜ್ ಎಂಬ ಖಾತೆ ಹೊಂದಿರುವ ನೆಟ್ಟಿಗರೊಬ್ಬರು, “ಮುಸ್ಲಿಮರ ವಿರುದ್ಧದ ದ್ವೇಷದ ಭಾಷಣ ಮಾಡಿದ ಮೋದಿ ವಿರುದ್ಧ ರಾಜ್ಯ (ಉದಾ: ತಮಿಳುನಾಡು) ಪೊಲೀಸರು ಸೆಕ್ಷನ್ 295 ಎ ಮತ್ತು 153 ಎ ಅಡಿಯಲ್ಲಿ ಎಫ್‌ಐಆರ್ ಸಲ್ಲಿಸಬಹುದೇ” ಎಂದು ಆಗ್ರಹಿಸಿದ್ದಾರೆ.
Even after 10 years of rule, if you have to resort to despicable communal statements to get votes, it reflects a pathetic desperation and a monumental failure.
— Manu Sebastian (@manuvichar) April 21, 2024
ಇನ್ನೂ ಕೆಲವರು, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
clearly he is not getting the attention he wants. the street, the gutter, the garbage pile, he can keep sinking lower. https://t.co/Xy1SMj2hM9
— Hartosh Singh Bal (@HartoshSinghBal) April 21, 2024
ಮೋದಿ ಅವರ ಮಾತುಗಳು 400 ಸ್ಥಾನಗಳನ್ನು ಗೆಲ್ಲುವೆಂಬ ಪ್ರತಿಪಾದನೆಯ ಆಚೆಗೂ ಅವರು ಸೋಲಿನ ಬಗ್ಗೆ ಎಷ್ಟು ಹೆದರಿದ್ದಾರೆ ಮತ್ತು ಹತಾಶೆಗೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಇಂತಹ ಕೋಮು ದ್ವೇಷದಿಂದ ದೇಶವು ಬಳಲುತ್ತಿದೆ ಎಂದು ಹಲವಾರು ಪತ್ರಕರ್ತರು ಕೂಡ ಖಂಡಿಸಿದ್ದಾರೆ.