ಮೋದಿ ಸುಳ್ಳುಗಳು | ಪ್ರಗತಿಪರ ನೀತಿಗಳು ಮತ್ತು ದೃಢ ಆಡಳಿತ ನೀಡಿದ್ದಾರಾ ಮೋದಿ?

Date:

Advertisements

ಮಹಾರಾಷ್ಟ್ರದ ಮುಂಬೈನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಭಾರತದ ಅಭಿವೃದ್ಧಿಯಲ್ಲಿ ಮುಂಬೈ ಮಹತ್ವದ ಪಾತ್ರ ವಹಿಸುತ್ತದೆ. ಪ್ರಗತಿಪರ ನೀತಿಗಳು ಮತ್ತು ದೃಢವಾದ ಆಡಳಿತದ ಮುಂದುವರಿಕೆಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ(ಶಿಂಧೆ ಬಣ) ಅಭ್ಯರ್ಥಿಗಳನ್ನು ಬೆಂಬಲಿಸಿ” ಎಂದು ಮತದಾರರಿಗೆ ಮೋದೀಜಿ ಸುಳ್ಳಿನ ಸರಮಾಲೆ ಹಾಕಿದ್ದಾರೆ.

“ಮುಂಬೈ ಕೇವಲ ಕನಸು ಕಾಣುವುದಿಲ್ಲ, ಮುಂಬೈ ತನ್ನ ಕನಸುಗಳನ್ನು ನನಸು ಮಾಡುತ್ತದೆ. ಏನನ್ನಾದರೂ ಸಾಧಿಸುವ ಸಂಕಲ್ಪದೊಂದಿಗೆ ಹೊರಟವರಿಗೆ, ಮುಂಬೈ ಎಂದಿಗೂ ನಿರಾಶೆಪಡಿಸಿಲ್ಲ. 2047ರ ಭಾರತದ ಕನಸನ್ನು ನನಸಾಗಿಸಲು, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸಲು ನಗರದ ಕ್ರಿಯಾತ್ಮಕ ಸ್ವರೂಪವು ನಿರ್ಣಾಯಕವಾಗಿದೆ” ಎಂದು ಮೋದೀಜಿ ಮತದಾರರಿಗೆ ಹುರಿದುಂಬಿಸಿದ್ದಾರೆ.

ಭಾರತದ ಪ್ರಗತಿಗೆ ಅಡ್ಡಿಯಾಗಿರುವ ಐತಿಹಾಸಿಕ ನ್ಯೂನತೆಗಳ ಬಗ್ಗೆ ಪ್ರಧಾನಿ ಗಮನಸೆಳೆದರು. “ಭಾರತದೊಂದಿಗೆ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳು ನಮಗಿಂತ ಮುಂದಿವೆ. ನಾವು ಕಡಿಮೆ ಸಾಮರ್ಥ್ಯ ಹೊಂದಿದ್ದೇವಾ? ಭಾರತೀಯರ ಸಾಮರ್ಥ್ಯದಲ್ಲಿ ನಂಬಿಕೆಯಿಲ್ಲದ ಸರ್ಕಾರದಲ್ಲಿ ಕೊರತೆ ಇತ್ತು. ಅವರ ನೀತಿಗಳಿಂದಾಗಿ ಭಾರತವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದು ಹೇಳಿದರು.

Advertisements

“ದೇಶದಲ್ಲಿ ಬಡತನ ನಿರ್ಮೂಲನೆಗಾಗಿ ರೂಪಿಸಿದ್ದ ಯೋಜನೆಗಳನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊನೆಗೊಳಿಸುತ್ತಿದೆ. ಬಡವರಿಗೆ ಹಣ ನೀಡುತ್ತಿದ್ದ ಎಲ್ಲ ಯೋಜನೆಗಳನ್ನೂ 2014ರ ನಂತರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಒಂದಾದ ನಂತರ ಒಂದರಂತೆ ಕೊನೆಗೊಳಿಸಲಾಗಿದೆ” ಎಂದು ರಾಹುಲ್ ಗಾಂಧಿ ಈ ಹಿಂದೆಯೇ ಆಪಾದಿಸಿದ್ದರು.

ಮನರೇಗಾ ಯೋಜನೆ, ಆಹಾರ ಭದ್ರತೆ, ಭೂ ಸ್ವಾಧೀನ ಸೇರಿದಂತೆ ಹಲವು ಯೋಜನೆಗಳನ್ನು ಆಡಳಿತಾತ್ಮಕವಾಗಿ ಕೊನೆಗೊಳಿಸಿದರು. ಬಳಿಕ ನೋಟ್‌ ಬ್ಯಾನ್ ಮಾಡಿದರು. ನೋಟ್ ಬ್ಯಾನ್ ಸಂದರ್ಭದಲ್ಲಿ ತಾವು ಕಪ್ಪು ಹಣದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆಂದು ಪ್ರಧಾನಿ ಸುಳ್ಳು ಹೇಳಿದ್ದರು. ನೋಟ್ ಬ್ಯಾನ್ ಆದಾಗ ವಿಜಯ್ ಮಲ್ಯ, ನೀರವ್ ಮೋದಿ ಬ್ಯಾಂಕ್ ಎದುರು ಹಣಕ್ಕಾಗಿ ಕ್ಯೂ ನಿಲ್ಲಲಿಲ್ಲ. ಬದಲಾಗಿ ಬಡವರು, ಜನಸಾಮಾನ್ಯರು, ಕಾರ್ಮಿಕರು ಅಷ್ಟೋ ಇಷ್ಟೋ ಉಳಿತಾಯ ಮಾಡಿ ಕೂಡಿಟ್ಟಿದ್ದ ಹಣವನ್ನು ಬದಲಿಸಿಕೊಳ್ಳಲು ಹರಸಾಹಸ ಪಟ್ಟಿದ್ದರು. ಜನಸಾಮಾನ್ಯರ ಜೇಬಿನಲ್ಲಿದ್ದ ಹಣವನ್ನು ಭಾರತದಲ್ಲಿರೋ 15 ಮಂದಿ ಸಿರಿವಂತರಿಗೆ ನೀಡುವುದೇ ನೋಟ್ ಬ್ಯಾನ್ ಉದ್ದೇಶವಾಗಿತ್ತಾ?.

ಮೋದೀಜಿ ನಿಜವಾಗಿಯೂ ದೇಶದ ಆರ್ಥಿಕತೆಯನ್ನು ಮುನ್ನಡೆಸಬೇಕಿದ್ದರೆ, ಬಡವರ ಜೇಬಿನಲ್ಲಿ ಹಣ ಇರಬೇಕಿತ್ತು. ಆದರೆ ರೈತರು, ಕಾರ್ಮಿಕರು, ಯುವಜನರ ಬಳಿ ಖರ್ಚು ಮಾಡಲು ಹಣವೇ ಇಲ್ಲ. ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಇಲ್ಲ, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇಲ್ಲ. ಯುವಜನರಿಗೆ ಉದ್ಯೋಗ ಸೃಷ್ಟಿಯಾಗಲಿಲ್ಲ. ಹೀಗಿರುವಾಗ ದೇಶದ ಆರ್ಥಿಕತೆ ಹೇಗೆ ಮುನ್ನಡೆಯುತ್ತೆ?. ಯಾರ ಶ್ರೀಮಂತಿಕೆಯಿಂದ ಮೋದೀಜಿ ದೇಶದ ಶ್ರೀಮಂತಿಕೆಯನ್ನು ಲೆಕ್ಕಾಚಾರ ಮಾಡುತ್ತಿದ್ದಾರೆ? ಪ್ರಸ್ತುತವಾಗಿ ಜನರು ಅನುಭವಿಸುತ್ತಿರುವ ಸಮಸ್ಯೆಗಳಿಂದ ಹೊರತರಲು ಚಿಂತಿಸದ ಮೋದಿ 2047ರ ಹೊತ್ತಿನ ಅಭಿವೃದ್ಧಿಯ ಕುರಿತು ಜನರಿಗೆ ಹುಸಿ ಆಶ್ವಾಸನೆ ನೀಡುತ್ತಿದ್ದಾರೆ.

“ಸ್ವಾತಂತ್ರ್ಯದ ನಂತರ ಗಾಂಧೀಜಿಯವರ ಸಲಹೆಯಂತೆ ಕಾಂಗ್ರೆಸ್ ಅನ್ನು ವಿಸರ್ಜಿಸಿದ್ದರೆ, ಭಾರತವು ಇಂದು ಕನಿಷ್ಠ ಐದು ದಶಕಗಳಷ್ಟು ಮುಂದಿರುತ್ತಿತ್ತು” ಎಂದು ಅವರು ಹೇಳಿದರು.

ಮಹಾತ್ಮಾ ಗಾಂಧಿಯವರು 1948 ಜನವರಿ 27ರಂದು ಬರೆದ ಟಿಪ್ಪಣಿಯ ಭಾಗವಾಗಿದ್ದು, “ಭಾರತವು ಎರಡು ಭಾಗಗಳಾಗಿ ವಿಭಜನೆಗೊಂಡಿದ್ದರೂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರೂಪಿಸಿದ ವಿಧಾನಗಳ ಮೂಲಕ ರಾಜಕೀಯ ಸ್ವಾತಂತ್ರ್ಯವನ್ನು ಪಡೆದ ನಂತರ, ಕಾಂಗ್ರೆಸ್ ಅದರ ಪ್ರಸ್ತುತ ಆಕಾರ ಮತ್ತು ರೂಪದಲ್ಲಿ, ಅಂದರೆ ಪ್ರಚಾರ ವಾಹನ ಮತ್ತು ಸಂಸದೀಯ ಯಂತ್ರವಾಗಿ ಅದರ ಬಳಕೆಯನ್ನು ಮೀರಿದೆ” ಎಂದು ಉಲ್ಲೇಖಿಸಿದ್ದರು.

ಮಹಾತ್ಮ ಗಾಂಧಿಯವರು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಕಾಂಗ್ರೆಸ್‌ನ ಉಪಯುಕ್ತತೆಯನ್ನು ಕಂಡು ಕರಡು ಸಂವಿಧಾನದಲ್ಲಿ ತಮ್ಮ ಕಾರಣಗಳನ್ನು ಪಟ್ಟಿ ಮಾಡಿದರು. ಅವುಗಳೆಂದರೆ ನಗರಗಳು ಮತ್ತು ಪಟ್ಟಣಗಳಿಂದ ಭಿನ್ನವಾಗಿರುವ ಏಳು ಲಕ್ಷ ಹಳ್ಳಿಗಳ ವಿಷಯದಲ್ಲಿ ಭಾರತವು ಇನ್ನೂ ಸಾಮಾಜಿಕ, ನೈತಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಬೇಕಾಗಿದೆ” ಎಂದು ಉಲ್ಲೇಖಿಸಿದ್ದರು.

“ಮಿಲಿಟರಿ ಶಕ್ತಿಯ ಮೇಲೆ ನಾಗರಿಕ ಅಧಿಕಾರದ ಆರೋಹಣಕ್ಕಾಗಿ ಹೋರಾಟವು ಭಾರತವು ತನ್ನ ಪ್ರಜಾಪ್ರಭುತ್ವದ ಮೇಕೆಯತ್ತ ಮುನ್ನಡೆಯುವಲ್ಲಿ ಖಂಡಿತವಾಗಿಯೂ ನಡೆಯುತ್ತದೆ, ಇದನ್ನು ರಾಜಕೀಯ ಪಕ್ಷಗಳು ಮತ್ತು ಕೋಮುವಾದಿ ಸಂಸ್ಥೆಗಳೊಂದಿಗಿನ ಅನಾರೋಗ್ಯಕರ ಸ್ಪರ್ಧೆಯಿಂದ ದೂರವಿಡಬೇಕು” ಎಂದು ಮಹಾತ್ಮ ಗಾಂಧಿ ಹೇಳಿದರು.

“ಮಿಲಿಟರಿ ಶಕ್ತಿಯ ಮೇಲೆ ನಾಗರಿಕ ಅಧಿಕಾರದ ಆರೋಹಣಕ್ಕಾಗಿ ಹೋರಾಟವು ಭಾರತದ ಪ್ರಜಾಪ್ರಭುತ್ವದ ಪ್ರಗತಿಯಲ್ಲಿ ಖಂಡಿತವಾಗಿಯೂ ನಡೆಯುತ್ತದೆ. ಇದನ್ನು ರಾಜಕೀಯ ಪಕ್ಷಗಳು ಮತ್ತು ಕೋಮುವಾದಿ ಸಂಸ್ಥೆಗಳೊಂದಿಗಿನ ಅನಾರೋಗ್ಯಕರ ಸ್ಪರ್ಧೆಯಿಂದ ದೂರವಿಡಬೇಕು” ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಆದರೆ, ಮೋದಿ ವಿಷಯವನ್ನೇ ತಿರುಚಿ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ.

ರಾಮಮಂದಿರ ನಿರ್ಮಾಣ, 370ನೇ ವಿಧಿಯನ್ನು ತೆಗೆದುಹಾಕುವುದು ಮತ್ತು ತ್ರಿವಳಿ ತಲಾಖ್ ರದ್ದತಿ ಸೇರಿದಂತೆ ಈ ಹಿಂದೆ ಅಸಾಧ್ಯವೆಂದು ಭಾವಿಸಿದ್ದನ್ನು ತಮ್ಮ ಸರ್ಕಾರ ಸಾಧಿಸಿದೆ. ಭಯೋತ್ಪಾದಕ ದಾಳಿಗಳು ಕಡಿಮೆಯಾಗಿದ್ದು, ಸುಧಾರಿತ ಭದ್ರತೆಯನ್ನು ಒದಗಿಸಲಾಗಿದೆ. ಸರಣಿ ಬಾಂಬ್ ಸ್ಫೋಟಗಳಿಂದ ಹಿಡಿದು, ಭಯೋತ್ಪಾದಕ ದಾಳಿಗಳಿಂದ ಮುಂಬೈನಂತಹ ನಮ್ಮ ನಗರಗಳು ನಡುಗುತ್ತಿದ್ದವು. ಈಗ, ಅದೆಲ್ಲವೂ ನಿಂತುಹೋಗಿದೆ” ಎಂದು ಪ್ರಧಾನಿ ಹೇಳಿದರು.

“ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಕಿತ್ತು ಹಾಕುತ್ತಾರೆ. ಚೀನಾ ಅಧ್ಯಕ್ಷರ ಜೊತೆ ಮಾತುಕತೆ ನಡೆಸುತ್ತಾ ಕಾಲಹರಣ ಮಾಡುತ್ತಾರೆ. ದೇಶದಲ್ಲಿರುವ ಬರ, ನಿರುದ್ಯೋಗ, ರೈತರ ಆತ್ಮಹತ್ಯೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸದೆ ಕೇವಲ ಅದಾನಿ, ಅಂಬಾನಿಯವರ ಲೌಡ್‌ ಸ್ಪೀಕರ್ ರೀತಿ ಪ್ರಧಾನಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ರಾಹುಲ್‌ ಗಾಂಧಿ ಈ ಹಿಂದೆ ಲೇವಡಿ ಮಾಡಿದ್ದರು.

ಇದನ್ನೂ ಓದಿದ್ದೀರಾ? ಮೋದಿ ಸುಳ್ಳುಗಳು | ಮತದಾರರ ಋಣ ತೀರಿಸುತ್ತಾರಾ ಮೋದಿ?

ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ತೆಗೆದು ಹಾಕುವ ಮೂಲಕ ಅದಾನಿ ಅಂಬಾನಿಗಳಂತಹ ಉದ್ಯಮಿಗಳ ವ್ಯವಹಾರಕ್ಕೆ ಸುಲಭ ಮಾರ್ಗ ಮಾಡಿಕೊಟ್ಟರು. ಅಲ್ಲದೆ, “ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ)ಯ ಉದ್ದಕ್ಕೂ ಪರಿಸ್ಥಿತಿ ಮಿಲಿಟರಿ ಮೌಲ್ಯಮಾಪನದ ದೃಷ್ಟಿಯಿಂದ “ತುಂಬಾ ದುರ್ಬಲ” ಮತ್ತು “ಸಾಕಷ್ಟು ಅಪಾಯಕಾರಿ” ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದರು.

ಇವೆಲ್ಲಾ ಬದಲಾವಣೆಗಳು ಕಂಡುಬಂದಿದ್ದು, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನಗಳನ್ನು ಕಿತ್ತು ಹಾಕಿದ ಬಳಿಕ ನಡೆದಿವೆ. ಆದರೂ ಕೂಡ ತಮ್ಮ ಪ್ರಧಾನಿ ಅಲ್ಲಿಯ ನಿವಾಸಿಗಳ ಕಷ್ಟ ಸಂಕಟಗಳನ್ನು ಕೇಳದ ಮೋದಿ, ತಮ್ಮ ದೊಡ್ಡ ಸಾಧನೆಯ ಕುರಿತು ಎದೆಯುಬ್ಬಿಸಿ ಹೊಗಳಿಕೊಳ್ಳುತ್ತಿದ್ದಾರೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X