ಮೋದಿ ಸುಳ್ಳುಗಳು ಭಾಗ-7 | ಹತ್ತು ವರ್ಷದ ಮೋದಿ ಆಡಳಿತದಲ್ಲಿ ʼಅಚ್ಛೇ ದಿನ್‌ʼ ಬಂದಿದ್ದು ಯಾರಿಗೆ?

Date:

Advertisements

ಲೋಕಸಭಾ ಚುನಾವಣೆ‌ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಚಾರ ಕೈಗೊಂಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಆನಂದ್ ಮತ್ತು ಸುರೇಂದ್ರನಗರದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಧ್ಯೇಯ ‘ವಿಕಸಿತ್ ಭಾರತ್’ ಎಂದಿರುವ ಅವರು, “2047ರ ಹೊತ್ತಿಗೆ ವಿಕಸಿತ ಭಾರತವನ್ನು ಸಕ್ರಿಯಗೊಳಿಸಲು 24×7 ಶ್ರಮಿಸುತ್ತೇನೆ” ಎಂದು ಹೇಳಿದ್ದಾರೆ.

“ಕಾಂಗ್ರೆಸ್ ‘ರಿಪೋರ್ಟ್ ಕಾರ್ಡ್’ ಹಗರಣಗಳ ‘ರಿಪೋರ್ಟ್ ಕಾರ್ಡ್’ ಆಗಿದೆ. ಅವರ ದಾಖಲೆಗಳು 2ಜಿ, ಸಿಎಜಿ, ಕಾಮನ್‌ವೆಲ್ತ್‌ ಮತ್ತು ಚಾಪರ್ ಹಗರಣಗಳಿಂದ ತುಂಬಿವೆ. ಬಿಜೆಪಿಯ ವರದಿಯ ದಾಖಲೆಯು ಅಭೂತಪೂರ್ವ ಬೆಳವಣಿಗೆಗೆ ಸಮಾನಾರ್ಥಕವಾಗಿದೆ. ನಮ್ಮ ರಿಪೋರ್ಟ್ ಕಾರ್ಡ್ ವಾಸ್ತವವಾಗಿ ಬಡತನವನ್ನು ಕಡಿಮೆ ಮಾಡಿದೆ ಮತ್ತು ಎಲ್ಲರನ್ನೂ ಸಬಲೀಕರಣಗೊಳಿಸಿದೆ” ಎಂದು ಮೋದಿಯವರು ಮತ್ತೊಮ್ಮೆ ಭಂಡತನವನ್ನು ಮೆರೆದಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಮತ್ತು ರಣದೀಪ್ ಸುರ್ಜೆವಾಲಾ ಅವರು ದೆಹಲಿಯಲ್ಲಿ 2022ರಲ್ಲಿಯೇ ಪತ್ರಿಕಾಗೋಷ್ಟಿ ನಡೆಸಿ, ‘8 ಸಾಲ್, 8 ಚಾಲ್, ಭಜಪ ಸರ್ಕಾರ್ ವಿಫಲ್’ ಎಂಬ ಶೀರ್ಷಿಕೆಯ ಪುಸ್ತಕವನ್ನು ಪ್ರಸ್ತುತಪಡಿಸಿದ್ದರು. ಇದು ಆರ್ಥಿಕತೆ, ವಿದೇಶಾಂಗ ನೀತಿ, ಕೋಮು ಸೌಹಾರ್ದತೆ ಮತ್ತು ಹಣದುಬ್ಬರಕ್ಕೆ ಸಂಬಂಧಿಸಿದಂತೆ ಕೇಂದ್ರದ ‘ವೈಫಲ್ಯಗಳು ಮತ್ತು ಕಾರ್ಯಕ್ಷಮತೆ’ಯನ್ನು ಎತ್ತಿ ತೋರಿಸುತ್ತದೆ.

Advertisements

ಹಣದುಬ್ಬರವಾಗಲಿ ಅಥವಾ ರೈತರ ಸಮಸ್ಯೆಯಾಗಲಿ ಪ್ರತಿಯೊಂದು ವೈಫಲ್ಯವೂ ಕೂಡಾ ಒಂದಕ್ಕಿಂತ ಇನ್ನೊಂದು ದೊಡ್ಡದಾಗಿದೆ. ಅಧಿಕಾರಕ್ಕೆ ಬರುವ ಮೊದಲು, ಮೋದಿ ತಮ್ಮ ಭಾಷಣಗಳಲ್ಲಿ ಹೇಳಿದ ಪ್ರಮುಖ ವಿಷಯ ‘ಅಚ್ಛೇ ದಿನ್’ (ಉತ್ತಮ ದಿನಗಳು). ಆದರೆ, ಹತ್ತು ವರ್ಷಗಳ ಬಳಿಕವೂ ಯಾರಿಗೆ ‘ಅಚ್ಛೇ ದಿನ್’ ಬಂದಿದೆ ಎಂಬುದು ತಿಳಿದಿಲ್ಲ. ಭಾರತೀಯ ನಾಗರಿಕರೂ ಕೂಡ ಇದೀಗ ಎಚ್ಚೆತ್ತುಕೊಂಡಿದ್ದು ಮೋದಿ ʼಅಚ್ಛೇ ದಿನʼಗಳು ಯಾರಿಗೆ ಬಂದಿವೆ? ಎಂಬುದನ್ನು ಕೇಳುತ್ತಿದ್ದಾರೆ.

ಮೋದಿ ಆಡಳಿತದ ಅಚ್ಛೇ ದಿನಗಳು 5,000 ಕೋಟಿ ರೂ.ಗಿಂತ ಹೆಚ್ಚು ಬೊಕ್ಕಸ ತುಂಬಿಸಿಕೊಂಡಿರುವ ಬಿಜೆಪಿಗೋ ಅಥವಾ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ 30 ಲಕ್ಷ ಕೋಟಿ ರೂ.ಗಳನ್ನು ಗಳಿಸಿದ 142 ಶ್ರೀಮಂತ ಭಾರತೀಯರಿಗೋ? ಸುಮಾರು 5,35,000 ಕೋಟಿ ರೂ.ಗಳ ವಂಚನೆ ಮಾಡಿದ ಬ್ಯಾಂಕ್ ದರೋಡೆಕೋರರಿಗೆ (ಮೆಹುಲ್ ಚೋಕ್ಸಿ, ನೀರವ್ ಮೋದಿ, ವಿಜಯ್ ಮಲ್ಯ, ಸಂದೇಸರಸ್) ಇದು ‘ಅಚ್ಛೇ ದಿನ್’ ಆಗಿದೆ.

“ಕಾಂಗ್ರೆಸ್ ತನ್ನ ಸೋಲಿನ ಹತಾಶೆಯಲ್ಲಿ ಭಾರತೀಯ ಸಮಾಜವನ್ನು ವಿಭಜಿಸಿದೆ. ಅವರ ತುಷ್ಟೀಕರಣ-ರಾಜಕೀಯವು ಅವರನ್ನು ಶತಮಾನಗಳಷ್ಟು ಹಳೆಯ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯನ್ನೂ ಕೂಡಾ ಕಾಂಗ್ರೆಸ್ ಬಹಿಷ್ಕರಿಸಿದೆ. ರಾಮ ಭಕ್ತಿ ಮತ್ತು ಶಿವ ಭಕ್ತಿಯ ನಡುವೆ ಸಂಘರ್ಷವನ್ನು ಸೃಷ್ಟಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ದೇಶದಲ್ಲಿ ಅನಗತ್ಯ ವಿಭಜನೆಗಳನ್ನು ಸೃಷ್ಟಿಸುವ ಉದ್ದೇಶದಿಂದ ಶಿವ ಮತ್ತು ರಾಮ ಭಕ್ತರ ನಡುವೆ ಸಂಘರ್ಷವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ” ಎಂದು ಮತದಾರರಲ್ಲಿ ಧಾರ್ಮಿಕ ದ್ವೇಷ ಹುಟ್ಟಿಸುವ ಸುಳ್ಳುಗಳನ್ನು ಮೋದಿ ಹೇಳುತ್ತಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ರೈತರ, ಕಾರ್ಮಿಕರ ಅಭಿವೃದ್ಧಿಗೆ ಯೋಜನೆ ಘೋಷಿಸದೇ ಕಾರ್ಪೊರೇಟ್, ಬಹುರಾಷ್ಟ್ರೀಯ ಕಂಪನಿಗಳ ಪರ ಕೆಲಸ ಮಾಡಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಮೂಲಕ ಭಾರೀ ಭ್ರಷ್ಟಾಚಾರ ನಡೆಸಿದ್ದು, ಶೇ 60ರಷ್ಟು ಬಾಂಡ್‌ಗಳನ್ನು ಬಿಜೆಪಿಯೇ ಖರೀದಿಸಿದೆ. ಕೇಂದ್ರ ಸರ್ಕಾರ ಬಹುತೇಕ ಉದ್ಯಮಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿದೆ. ವಿರೋಧ ಪಕ್ಷದ ಅನೇಕರಿಗೆ ಐ.ಟಿ, ಇ.ಡಿ, ಸಿಬಿಐಯ ಭಯ ಹುಟ್ಟಿಸಿ ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. 10 ವರ್ಷಗಳಲ್ಲಿ ಅನೇಕ ರೈತರು, ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚುನಾವಣೆಗೂ ಮುಂಚೆ ನೀಡಿದ ಭರವಸೆ ಈಡೇರಿಸದೇ ಗೃಹ ಸಚಿವ ಅಮಿತ್ ಶಾ ಜುಮ್ಲಾ ಎಂದು ಹೇಳಿ ಮೋಸ ಮಾಡುತ್ತಿದ್ದಾರೆ.

ಕೋವಿಡ್‌-19 ಸಾಂಕ್ರಾಮಿಕದ ವೇಳೆ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆಗಳ ಹೆಸರಿನಲ್ಲಿ ದೊಡ್ಡ ಹಗರಣಗಳನ್ನು ಮೋದಿ ಮಾಡಿದ್ದಾರೆ. ಇವುಗಳಿಂದ ಜನರ ಜೀವಕ್ಕೆ ತೊಂದರೆಯಾಗುತ್ತದೆಂದು ಗೊತ್ತಿದ್ದರೂ ಕೂಡಾ ದೇಣಿಗೆಯ ದುರಾಸೆಗೆ ಪ್ರತಿಯೊಬ್ಬರು ಈ ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕೆಂದು ಒತ್ತಾಯ ಹೇರಿದ್ದರು.

ಕೋವಿಶೀಲ್ಡ್ ಮತ್ತು ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರ್ಯಾಂಡ್ ಹೆಸರುಗಳ ಅಡಿಯಲ್ಲಿ ಜಾಗತಿಕವಾಗಿ ಮಾರಾಟವಾದ ಕೊರೊನಾ ಲಸಿಕೆ ಕೆಲವು ಅಪರೂಪದ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಈ ಲಸಿಕೆಯಿಂದಾಗಿ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಅಥವಾ ಟಿಟಿಎಸ್ ಎಂಬ ರೋಗ ಉಂಟಾಗಬಹುದೆಂದು ಈ ಲಸಿಕೆ ತಯಾರಿಸಿದ ಸಂಸ್ಥೆ ಅಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದ ಮುಂದೆ ಕೊನೆಗೂ ಒಪ್ಪಿಕೊಂಡಿದೆ.

ಮೋದಿಯ ಭಂಡಾಟ, ಭ್ರಷ್ಟಾಚಾರಗಳೆಲ್ಲ ಬಯಲಾದ ಬಳಿಕ ತಮ್ಮ ಸಾಧನೆಯ ಮೇಲೆ ಮತ ಕೇಳಲು ಮುಖವಿಲ್ಲದೆ, ವಿಪಕ್ಷಗಳನ್ನು ದೂಷಿಸುತ್ತ, ರಾಮಮಂದಿರವನ್ನು ಮುಂದೆ ತಂದು ಮತದಾರರಲ್ಲಿ ಇತರೆ ಪಕ್ಷಗಳ ನಾಯಕರ ವಿರುದ್ದ ದ್ವೇಷ ಉಂಟುಮಾಡುವಂತಹ ಮಾತುಗಳನ್ನಾಡುತ್ತಿದ್ದಾರೆ. ಮತದಾರರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವಂತೆ ದ್ವೇಷ ಭಾಷಣಗಳನ್ನು ಹರಡುತ್ತ ಮತಬೇಟೆ ನಡೆಸುತ್ತಿದ್ದಾರೆ.

“ಇಂಡಿ ಮೈತ್ರಿಕೂಟವು ಭಾರತದಲ್ಲಿ ‘ವೋಟ್ ಜಿಹಾದ್’ ಗುರಿಯನ್ನು ಹೊಂದಿದೆ. ಇದು ಅಪಾಯಕಾರಿ ಪ್ರವೃತ್ತಿಯಾಗಿದ್ದು, ಒಂದೆಡೆ, ಅವರು ಎಸ್‌ಸಿ/ಎಸ್‌ಟಿ-ಒಬಿಸಿಗಳ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ನೀಡಲು ಬಯಸುತ್ತಾರೆ. ಮತ್ತೊಂದೆಡೆ, ಅವರು ‘ವೋಟ್ ಜಿಹಾದ್’ ಕರೆ ನೀಡುತ್ತಿದ್ದಾರೆ. ವಿರೋಧ ಪಕ್ಷಗಳ ಈ ನಡೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ” ಎಂದು ಸೋಲಿನ ಭಯದಲ್ಲಿ ಮತ್ತಷ್ಟು ಸುಳ್ಳುಗಳನ್ನು ಹರಡುತ್ತಿದ್ದಾರೆ.

ಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌ನಂತೆ ಇದೀಗ ವೋಟ್‌ ಜಿಹಾದ್‌ ಪ್ರಾರಂಭಿಸಲಿದ್ದಾರೆ. ಎಲ್ಲಾ ಮುಸ್ಲಿಮರು ಒಗ್ಗಟ್ಟಾಗಿ ವೋಟ್ ಜಿಹಾದ್ ಮಾಡುವಂತೆ ಹೇಳಲಾಗಿದೆ. ವಿರೋಧ ಪಕ್ಷಗಳ ಈ ನಡೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ”

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚರಿತ್ರೆಯ ಅರಿವು ಇಲ್ಲ. ಏಕೆಂದರೆ 1940ರ ದಶಕದ ಆರಂಭದಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರೇ ಬಂಗಾಳದಲ್ಲಿ ಮುಸ್ಲಿಂ ಲೀಗ್ ಜೊತೆ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರು. ಆಗ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದವರು ಮುಖರ್ಜಿಯೇ ಹೊರತು ಬೇರೆ ಯಾರೂ ಅಲ್ಲ. ಅವರು ಸ್ವತಃ ಬಂಗಾಳದಲ್ಲಿ ಮುಸ್ಲಿಂ ಲೀಗ್‌ ಜೊತೆಗಿನ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರು. ಸಿಂಧ್ ಹಾಗೂ ವಾಯುವ್ಯ ಪ್ರದೇಶದಲ್ಲೂ ಮುಸ್ಲಿಂ ಲೀಗ್ ಜೊತೆಗೆ ಹಿಂದೂ ಮಹಾಸಭಾ ಹೊಂದಾಣಿಕೆ ಮಾಡಿಕೊಂಡಿತ್ತು. ಇದೀಗ ʼವೋಟ್‌ ಜಿಹಾದ್‌ʼ ಎಂದೇಳಿ ಒಡೆದು ಆಳುವ ರಾಜಕಾರಣದಲ್ಲಿ ನಂಬಿಕೆ ಮತ್ತು ಆಚರಣೆ ಮಾಡುತ್ತಿರುವುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ.

“ಮುಸಲ್ಮಾನರಿಗೆ ವೋಟ್‌ ಜಿಹಾದ್‌ ನಡೆಸುವಂತೆ ಇಂಡಿಯಾ ಒಕ್ಕೂಟ ಕರೆ ನೀಡುತ್ತಿದೆ. ಇದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಮಾನವಾಗುತ್ತದೆ” ಎಂದು ಉದ್ದುದ್ದ ಭಾಷಣ ಬಿಗಿಯುವ ಮೋದಿ, ಅವರದೇ ಪಕ್ಷದ ನಾಯಕರು, ಸಂಸದರು, “ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು. ಸಂವಿಧಾನ ಬದಲಾಯಿಸಬೇಕಾದರೆ ನಾವು 400 ಸೀಟುಗಳನ್ನು ಗೆಲ್ಲಬೇಕು. ಹಾಗಾಗಿ ಬಿಜೆಪಿಗೆ ಮತ ನೀಡಿ” ಎಂದು ಹೇಳುವಾಗ ಮೋದಿ ಯಾಕೆ ಮೌನ ಮುರಿಯಲಿಲ್ಲ. ಸಂವಿಧಾನದ ವಿರುದ್ಧ ಮಾತನಾಡಿದವರ ವಿರುದ್ಧ ಯಾವ ಕ್ರಮ ಕೈಗೊಂಡರು. ಇದು ಸಂವಿಧಾನಕ್ಕಾದ ಅಪಮಾನವಲ್ಲವೇ? ಇದರಿಂದ ಪ್ರಜಾಪ್ರಭುತ್ವಕ್ಕೆ ಚ್ಯುತಿ ಬರಲಿಲ್ಲವೇ?

“ಅಭಿವೃದ್ಧಿ ಪ್ರಯೋಜನಗಳನ್ನು ಕಟ್ಟಕಡೆಯ ಜನರಿಗೂ ತಲುಪಿಸಿ ಎಲ್ಲರನ್ನು ಶಕ್ತಗೊಳಿಸುವುದು ನಮ್ಮ ಗುರಿಯಾಗಿದೆ. ಕಾಂಗ್ರೆಸ್ 60 ವರ್ಷಗಳಲ್ಲಿ ಕೇವಲ ಶೇ.16ರಷ್ಟು ಮನೆಗಳಿಗೆ ನೀರು ಒದಗಿಸಿದೆ. ನಾವು ಅದನ್ನು ಶೇ.10 ವರ್ಷಗಳಲ್ಲಿ ಶೇ.75ಕ್ಕೆ ಹೆಚ್ಚಿಸಿದ್ದೇವೆ. ನಾವು ಭಾರತದ ಜನರಿಗೆ ವಿವಿಧ ಅಭಿವೃದ್ಧಿ ಪ್ರಯೋಜನಗಳನ್ನು ಒದಗಿಸಿದ್ದೇವೆ. 60 ವರ್ಷಗಳ ಕಾಂಗ್ರೆಸ್‌ಗೆ ಹೋಲಿಸಿದರೆ 10 ವರ್ಷಗಳಲ್ಲಿ ಬಿಜೆಪಿ ಸದೃಢವಾದ ಅಭಿವೃದ್ಧಿ ಸಾಧಿಸಿದೆ” ಎಂದು ಹಸಿ ಸುಳ್ಳುಗಳನ್ನು ಹೇಳಿದ್ದಾರೆ.

ಇದನ್ನೂ ಓದಿದ್ದೀರಾ? ಮೋದಿ ಸುಳ್ಳುಗಳು: ಭಾಗ-6 | ಕಾಂಗ್ರೆಸ್‌ನ 10 ವರ್ಷದ ಖರ್ಚನ್ನು ಮೋದಿ ಒಂದೇ ವರ್ಷದಲ್ಲಿ ಮಾಡಿದ್ದು ಯಾರ ಪ್ರಗತಿಗೆ?

ಕಳೆದ ಹತ್ತು ವರ್ಷಗಳಿಂದ ವಿಶ್ವಾದ್ಯಂತ ಸಂಚರಿಸಿ ಸಮಯ ವ್ಯರ್ಥ ಮಾಡಿರುವ ಮೋದಿ, ಇದೀಗ 2047ರ ಹೊತ್ತಿಗೆ ವಿಕಸಿತ ಭಾರತ ಮಾಡಲು ದಿನದ 24 ಗಂಟೆಯೂ ದುಡಿಯುತ್ತೇನೆಂದು ಯಾರೂ ನಂಬಲಾರದ ಸುಳ್ಳುಗಳನ್ನು ಹೇಳಿದ್ದಾರೆ.

ಈವರೆಗಿನ ಯಾವುದೇ ಸರ್ಕಾರಗಳು ಕುಡಿಯುವ ನೀರನ್ನು ಮೂಲ ಸೌಕರ್ಯವಾಗಿ ಉಚಿತವಾಗಿ ನೀಡುತ್ತಿದ್ದರು. ಆದರೆ, ಕೇಂದ್ರ ಬಿಜೆಪಿ ಸರ್ಕಾರ ಜಲ ಜೀವನ್‌ ಮಿಷನ್‌ ಯೋಜನೆ ಹೆಸರಿನಲ್ಲಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆದು ಆ ಮೂಲಕ ಹಣ ಲೂಟಿ ಮಾಡುತ್ತಿದ್ದಾರೆ. ಅವುಗಳೂ ಕೂಡಾ ಬಹುತೇಕ ಕಡೆ ದುರಸ್ತಿಗೆ ಬಂದಿದ್ದು, ಕಾರ್ಯಾಚರಣೆಯಲ್ಲಿಲ್ಲದೆ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಎಲ್ಲೆಡೆ ಬಿಂದಿಗೆ ಹಿಡಿದು ಪ್ರತಿಭಟನೆಗಳನ್ನು ನಡೆಸುತ್ತಿರುವುದು ಪ್ರಧಾನಿಯ ಗಮನಕ್ಕಿಲ್ಲವೇ?

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

Download Eedina App Android / iOS

X