ಮೋದಿಯ ಇಂದಿನ ಸುಳ್ಳುಗಳು | ಮುಂಬೈ ದಾಳಿ ಕ್ರಮಕ್ಕೆ ಕಾಂಗ್ರೆಸ್‌ ಮುಂದಾಗಲಿಲ್ಲವೇ? ವಾಸ್ತವ ಏನು?

Date:

Advertisements

“ಕಾಂಗ್ರೆಸ್‌ನ ಧೋರಣೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆಗೆ ತುತ್ತಾಗಿದೆ. ಈ ಜನರು ಭಯೋತ್ಪಾದಕ ಸಂಘಟನೆಗಳನ್ನು ಭೇಟಿಯಾಗುತ್ತಿದ್ದರು. 26/11 ದಾಳಿಯ ನಂತರ, ಈ ಜನರಿಗೆ ಭಯೋತ್ಪಾದನೆಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯವಿರಲಿಲ್ಲ. ನಾವು ಕ್ರಮ ಕೈಗೊಂಡರೆ, ಮತ ಬ್ಯಾಂಕ್ ಅಸಮಾಧಾನಗೊಳ್ಳುತ್ತದೆಂದು ಭಯಪಟ್ಟರು”

ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆಯುತ್ತಿವೆ. ಅಲ್ಲಿನ ಕಂಧಮಾಲ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸುಳ್ಳುಗಳನ್ನು ಮುಂದುವರೆಸಿದ್ದಾರೆ. “ಒಡಿಶಾ – ರಾಜ್ಯ ಮತ್ತು ರಾಷ್ಟ್ರಕ್ಕೆ ಅದರ ಅಮೂಲ್ಯ ಕೊಡುಗೆಯು ಅಪಾರವಾಗಿದೆ” ಎಂದು ಹೆಮ್ಮೆ ವ್ಯಕ್ತಪಡಿಸಿದರು.

15:35-16:58 “ನನಗೆ, ಒಡಿಶಾದ ಪ್ರೀತಿ ದೊಡ್ಡ ಶಕ್ತಿಯಾಗಿದೆ. ನಾನು ಒಡಿಶಾದ ಜನರಿಗೆ ಋಣಿಯಾಗಿದ್ದೇನೆ. ನೀವು ನನ್ನನ್ನು ಋಣಿಯನ್ನಾಗಿ ಮಾಡಿದ್ದೀರಿ. ಕಷ್ಟಪಟ್ಟು ದುಡಿಯುವ ಮೂಲಕ ಮತ್ತು ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ನಿಮ್ಮ ಪ್ರೀತಿ ಮತ್ತು ಆಶೀರ್ವಾದದ ಋಣವನ್ನು ನಾನು ತೀರಿಸುತ್ತೇನೆ. ಹಗಲು ರಾತ್ರಿ ದುಡಿಯುವ ಮೂಲಕ ಒಡಿಶಾವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುತ್ತೇನೆ” ಎಂದು ಸುಳ್ಳು ಭರವಸೆಗಳನ್ನು ನೀಡಿದರು.

Advertisements

17:6-19:10 ಅಟಲ್ ಬಿಹಾರಿ ವಾಜಪೇಯಿ ಅವರು ಪೋಖ್ರಾನ್ ಪರೀಕ್ಷೆಗಳನ್ನು ಮಾಡಿದಾಗ, ಪ್ರಪಂಚದಾದ್ಯಂತ ವಾಸಿಸುತ್ತಿದ್ದ ಭಾರತೀಯರು ಹೆಮ್ಮೆಯಿಂದ ಭಾಗವಹಿಸಿದ್ದರು. ಭಾರತವು ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ ದಿನ ಅದು. ಮತ್ತೊಂದೆಡೆ, ʼಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇದೆ ಜಾಗರೂಕರಾಗಿರಿʼ ಎಂದು ತನ್ನ ದೇಶವನ್ನು ಬೆದರಿಸಲು ಪದೇ ಪದೇ ಕಾಂಗ್ರೆಸ್ ಪ್ರಯತ್ನಿಸುತ್ತಿದೆ” ಎಂದು ಹಸಿ ಸುಳ್ಳಿನಿಂದ ಆರೋಪ ಮಾಡಿದ್ದಾರೆ. ‌

ಇತ್ತೀಚೆಗಿನ ಚುನಾವಣಾ ಪ್ರಚಾರವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಯಾವುದೇ ಭಯೋತ್ಪಾದಕ ತಪ್ಪಿಸಿಕೊಂಡು ಹೋಗದಂತೆ ಅವರನ್ನು ಕೊಲ್ಲಲು ನಮ್ಮ ಪಡೆಗಳು ಪಾಕಿಸ್ತಾನದ ಗಡಿಯೊಳಗೆ ಪ್ರವೇಶಿಸುತ್ತವೆ” ಎಂದು ಹೇಳಿದ್ದರು. ಇದು ಪ್ರಚೋದನಾಕಾರಿ ಹೇಳಿಕೆಯೆಂದು ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ಕೆಲವು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಕೂಡ ಮೋದಿ ಹೇಳಿಕೆಯ ಬಗ್ಗೆ ತೀಕ್ಷವಾಗಿ ಪ್ರತಿಕ್ರಯಿಸಿ, “ಅವರನ್ನು ಪ್ರಚೋದಿಸಬೇಡಿ. ಅವರು ಬಳೆ ತೊಟ್ಟುಕೊಂಡಿಲ್ಲ. ಅವರ ಬಳಿಯೂ ಅಣುಬಾಂಬ್‌ ಇದೆ. ಆ ಅಣುಬಾಂಬ್‌ಗಳು ನಮ್ಮನ್ನು ನಾಶಪಡಿಸಲಿವೆ” ಎಂದಿದ್ದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಮಣಿ ಶಂಕರ್‌ ಅಯ್ಯರ್ ಮಾತನಾಡಿ, “ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು. ನಾವು ಅವರ ವಿರುದ್ಧ ಮಿಲಿಟರಿ ಬಲವನ್ನು ತೋರಿದರೆ ನಮ್ಮ ದೇಶಕ್ಕೆ ಅಣುಬಾಂಬ್‌ ಹಾಕುತ್ತಾರೆ. ಅವರ ಬಳಿ ಅಣು ಬಾಂಬ್‌ಗಳಿವೆ. ನಮ್ಮ ಬಳಿಯೂ ಇದೆ. ಹುಚ್ಚು ಮನುಷ್ಯ ಲಾಹೋರ್‌ ಮೇಲೆ ಬಾಂಬ್‌ ಹಾಕಿದರೆ, ಅದರ ವಿಕಿರಣ ಅಮೃತಸರ ತಲುಪಲು 8 ಸೆಕೆಂಡ್‌ ಕೂಡ ಬೇಕಿಲ್ಲ. ನಾವು ಅವರನ್ನು ಗೌರವಿಸಿದರೆ, ಅವರು ಶಾಂತರಾಗುತ್ತಾರೆ. ನಾವು ಅವರನ್ನು ಕೆರಳಿಸಿದರೆ, ಹುಚ್ಚು ಮನುಷ್ಯ ಭಾರತದ ಮೇಲೆ ಬಾಂಬ್‌ ಹಾಕಲು ನಿರ್ಧರಿಸುತ್ತಾನಲ್ಲವೆ?” ಎಂದು ಅಯ್ಯರ್‌ ಪ್ರಶ್ನಿಸಿದ್ದರು. ಈ ಕುರಿತು ಮೋದಿ ಮತದಾರರಲ್ಲಿ ಊಹಾಪೋಹಗಳನ್ನು ಹರಡುತ್ತಿದ್ದು, ದೇಶೀಯರಲ್ಲೇ ದ್ವೇಷ ಉಂಟುಮಾಡುವಂತಹ ಭಾಷಣಗಳನ್ನು ಮಾಡುತ್ತಿದ್ದಾರೆ.

“ಕಾಂಗ್ರೆಸ್‌ನ ಧೋರಣೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆಗೆ ತುತ್ತಾಗಿದೆ. ಈ ಜನರು ಭಯೋತ್ಪಾದಕ ಸಂಘಟನೆಗಳನ್ನು ಭೇಟಿಯಾಗುತ್ತಿದ್ದರು. 26/11 ದಾಳಿಯ ನಂತರ, ಈ ಜನರಿಗೆ ಭಯೋತ್ಪಾದನೆಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯವಿರಲಿಲ್ಲ. ನಾವು ಕ್ರಮ ಕೈಗೊಂಡರೆ, ಮತ ಬ್ಯಾಂಕ್ ಅಸಮಾಧಾನಗೊಳ್ಳುತ್ತದೆಂದು ಭಯಪಟ್ಟರು” ಎಂದು ಮತ್ತೆ ಮತ್ತೆ ಸುಳ್ಳುಗಳನ್ನು ಸುರಿಸುತ್ತಲೇ ಇದ್ದಾರೆ.

ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ 10 ಮಂದಿ ಭಯೋತ್ಪಾದಕರ ಪೈಕಿ 9 ಮಂದಿ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದರು. ಬದುಕುಳಿದಿದ್ದ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ‘ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌’ಗೆ 2010ರಲ್ಲಿ ಮರಣದಂಡನೆ ವಿಧಿಸಿ, 2012ರಲ್ಲಿ ಪುಣೆಯಲ್ಲಿ ಗಲ್ಲಿಗೇರಿಸಲಾಯಿತು. ಆಗ ಇದ್ದದ್ದು ಕಾಂಗ್ರೆಸ್‌ ಸರ್ಕಾರವೇ, ಮನಮೋಹನ್‌ಸಿಂಗ್‌ ಪ್ರಧಾನಿಯಾಗಿದ್ದರು. ವೋಟ್‌ ಬ್ಯಾಂಕ್‌ ಮಾಡುವುದಿದ್ದರೆ ಅಪರಾಧಿಗೆ ಶಿಕ್ಷೆ ಆಗುತ್ತಿತ್ತೇ?

ಹಾಗಿದ್ದಲ್ಲಿ, ಮೋದಿ ಆಡಳಿತದಲ್ಲಿಯೇ ಸಾವಿರಾರು ಮಹಿಳೆಯರ ಮೇಲಿನ ಹತ್ಯಾಚಾರ ಪ್ರಕರಣ ತಮ್ಮ ಕಣ್ಣು ಮುಂದಿದ್ದರೂ ಕೂಡಾ ಮೋದಿ ಯಾಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ?. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಪ್ರಕರಣದಲ್ಲಿ ಮೋದಿ ಯಾಕೆ ಮೌನ ಮುರಿಯಲಿಲ್ಲ? ಅವರು ಮಾಡುತ್ತಿರುವುದು ವೋಟ್‌ ಬ್ಯಾಂಕ್‌ಗಾಗಿಯೇ?

21:18-22:30 ಕಾಂಗ್ರೆಸ್ ಕುಕೃತ್ಯಗಳಿಂದಾಗಿ ಭಾರತದ ಮುಸ್ಲಿಮರು ಎಲ್ಲಿಗೂ ಹೋಗುವುದಿಲ್ಲ. ಕಾಂಗ್ರೆಸ್ ರಾಜಕುಮಾರರು ಪ್ರತಿದಿನ ಹೇಳಿಕೆಗಳನ್ನು ನೀಡುತ್ತಾರೆ. 2014 ಮತ್ತು 2019ರ ಅವರ ಚುನಾವಣಾ ಭಾಷಣಗಳನ್ನು ನೀವು ನೋಡುತ್ತೀರಿ, ಅವರು ಅದೇ ಸ್ಕ್ರಿಪ್ಟ್‌ ಅನ್ನು ಈಗಲೂ ಓದಿಕೊಂಡು ಸವಾಲು ಹಾಕುತ್ತಿದ್ದಾರೆ. ಆದರೆ, ಎನ್‌ಡಿಎ 400 ಸ್ಥಾನಗಳನ್ನು ಪಡೆದೇ ಪಡೆಯುತ್ತದೆ” ಎಂದು ಸುಳ್ಳು ಭಾಷಣಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿದ್ದೀರಾ? ಮೋದಿಯ ಇಂದಿನ ಸುಳ್ಳುಗಳು | ರಾಜಮನೆತನದಂತೆ ಬದುಕುತ್ತಿರುವುದು ಕಾಂಗ್ರೆಸ್‌ ಅಥವಾ ಮೋದಿಯೇ?

ಈ ನಡುವೆ ರಾಹುಲ್‌ ಗಾಂಧಿ ಪ್ರತಿದಾಳಿ ನಡೆಸಿದ್ದು, “ಮೋದಿ ಪ್ರಧಾನಿಯಲ್ಲ, 21ನೇ ಶತಮಾನದ ರಾಜ. ಸಚಿವ ಸಂಪುಟ, ಸಂಸತ್ತು ಮತ್ತು ಸಂವಿಧಾನಕ್ಕೂ ಅವರಿಗೆ ಯಾವುದೇ ಸಂಬಂಧವಿಲ್ಲ. ಪ್ರಧಾನಿ ಮೋದಿ ತಮ್ಮ ಮನಸ್ಸಿನಿಂದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇವರ ಹಿಂದೆ ಎರಡ್ಮೂರು ಫೈನಾನ್ಷಿಯರ್‌ಗಳಿದ್ದಾರೆ. ರಾಜನ ನಿಜವಾದ ಶಕ್ತಿ ಅವನೊಂದಿಗೆ ಮಾತ್ರ ಇರುತ್ತದೆ. ದೇಶದಲ್ಲಿ ಅಹಂ ಇಲ್ಲದ ಅನೇಕ ರಾಜರಿದ್ದರು. ಅವರು ಜನರ ಮಾತುಗಳನ್ನು ಕೇಳುತ್ತಿದ್ದರು. ಆದರೆ ಮೋದಿ ಯಾರ ಮಾತನ್ನೂ ಕೇಳುವುದಿಲ್ಲ. ಸುಳ್ಳು ಆರೋಪಗಳನ್ನು ಮಾಡುತ್ತಿರುವ ಪ್ರಧಾನಿ ನನ್ನ ಜೊತೆ ಚರ್ಚೆ ಮಾಡುವುದಿಲ್ಲ. ಅವರ ಬಹಿರಂಗ ಚರ್ಚೆಗೆ ಬರಲಿ” ಎಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ನಿವಾಸದ ಮೇಲೆ ಸಿಬಿಐ ದಾಳಿ, ಎಫ್‌ಐಆರ್ ದಾಖಲು

ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಬಂಧಿಸಿದ ಇಡಿ: ನಗದು ಸಹಿತ ಚಿನ್ನಾಭರಣ ವಶಕ್ಕೆ

ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ, ಕಚೇರಿ ಸೇರಿದಂತೆ 31...

ತಾಂತ್ರಿಕ ದೋಷ: ಮತ್ತೊಂದು ಏರ್‌ ಇಂಡಿಯಾ ವಿಮಾನ ರದ್ದು, ವಾರದಲ್ಲೇ ಮೂರನೇ ಘಟನೆ

110 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮುಂಬೈನಿಂದ ಜೋಧ್‌ಪುರಕ್ಕೆ ಹಾರುತ್ತಿದ್ದ ಏರ್‌ ಇಂಡಿಯಾ ವಿಮಾನವನ್ನು...

ಧರ್ಮಸ್ಥಳ ಪ್ರಕರಣ | ನಾವು ಯಾರ ಪರವೂ ಇಲ್ಲ; ನ್ಯಾಯದ ಪರ: ಡಿಸಿಎಂ ಡಿ.ಕೆ.ಶಿವಕುಮಾರ್

"ನಾವು ಧರ್ಮಸ್ಥಳದವರ ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ...

Download Eedina App Android / iOS

X