ಮೋದಿಯ ಇಂದಿನ ಸುಳ್ಳುಗಳು | ತಳ ಸಮುದಾಯದ ರಾಷ್ಟ್ರಪತಿಗಳನ್ನು ಮೋದಿ ಮನಸಾರೆ ಒಪ್ಪಿಕೊಂಡಿದ್ದಾರೆಯೇ?

Date:

Advertisements

ಬಿಹಾರದ ಹಾಜಿಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, “ವಿಕಸಿತ ಭಾರತ ಮತ್ತು ವಿಕಸಿತ ಬಿಹಾರವನ್ನು ನಿರ್ಮಿಸಲು, ನಿರ್ಧಾರ ತೆಗೆದುಕೊಳ್ಳುವಲ್ಲಿ ಎಲ್ಲರಿಗೂ ಸಮಾನ ಭಾಗವಹಿಸುವಿಕೆಯ ಭರವಸೆ ನೀಡುತ್ತೇನೆ” ಎಂದು ತಮ್ಮ ಸುಳ್ಳುಗಳನ್ನು ಆರಂಭಿಸಿದರು.

“ನಿರ್ಣಾಯಕ ದಿನ ಜೂನ್ 4 ಸಮೀಪಿಸುತ್ತಿದೆ. ಎಲ್ಲರ ಕಣ್ಣು ಟಿವಿಗಳು, ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮಗಳತ್ತ ಇರುತ್ತವೆ. ನಿಮ್ಮ ಬೆಂಬಲವು ಸ್ಥಾನಗಳಾಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಚುನಾವಣಾ ಫಲಿತಾಂಶಗಳು ಮತ್ತೊಮ್ಮೆ ಮೋದಿ ಸರ್ಕಾರದ ಪರವಾಗಿರುತ್ತವೆ. ಎನ್‌ಡಿಎಗೆ ಮತ ಹಾಕುವ ಮೂಲಕ, ನೀವು ಕೇಂದ್ರದಲ್ಲಿ ಬಲವಾದ ಸರ್ಕಾರವನ್ನು ರಚಿಸುತ್ತೀರಿ. ಆರ್‌ಜೆಡಿ, ಕಾಂಗ್ರೆಸ್ ಅಥವಾ ಇತರ ಯಾವುದೇ ಮೈತ್ರಿಕೂಟಕ್ಕೆ ಮತ ಹಾಕುವುದು ವ್ಯರ್ಥ. ಆದ್ದರಿಂದ, ನಿಮ್ಮ ಮತಗಳನ್ನು ಎಣಿಕೆ ಮಾಡಲಿ, ಅದು ಭವಿಷ್ಯವನ್ನು ರೂಪಿಸಲಿ. ಹಾಗಾಗಿ ಎನ್‌ಡಿಎಗೆ ಮತ ಚಲಾಯಿಸಿ” ಎಂದು ಹೇಳಿದರು.

“ಬಿಜೆಪಿ ಮತ್ತು ಎನ್‌ಡಿಎ ನಿಜವಾದ ಸಾಮಾಜಿಕ ನ್ಯಾಯ ಮತ್ತು ನೈತಿಕತೆಯ ರಚನೆಗೆ ಭದ್ಧವಾಗಿದ್ದೇವೆ. ಪ್ರಸ್ತುತ, ನಾವು ದೇಶದಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಂದ ಹೆಚ್ಚಿನ ಸಂಖ್ಯೆಯ ಸಂಸದರು ಹಾಗೂ ಶಾಸಕರನ್ನು ಹೊಂದಿದ್ದೇವೆ. ಶೇ.60ರಷ್ಟು ಕೇಂದ್ರ ಸಚಿವ ಸಂಪುಟದಲ್ಲಿರುವ ಮಂತ್ರಿಗಳು ಈ ಸಮುದಾಯಗಳಿಗೆ ಸೇರಿದವರು. 2014ರಲ್ಲಿ ನಾವು ದಲಿತರಾದ ರಾಮನಾಥ್ ಕೋವಿಂದ್ ಅವರನ್ನು ಭಾರತದ ರಾಷ್ಟ್ರಪತಿಯಾಗಿ ನೇಮಿಸಿದ್ದೆವು. ಇಂದು, ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರು ಪ್ರತಿಷ್ಠಿತ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದಾರೆ. ಇದು ನಿಜವಾದ ಭಾಗವಹಿಸುವಿಕೆ” ಎಂದು ಹೇಳಿ ಪ್ರಧಾನಿ ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ.(25:46-26;50)

Advertisements

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರನ್ನು ಹೊಸ ಸಂಸತ್ ಭವನದ ಶಂಕುಸ್ಥಾಪನೆಗೆ ಆಹ್ವಾನಿಸಿರಲಿಲ್ಲ. ಹೊಸ ಸಂಸತ್ ಕಟ್ಟಡದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಮೋದಿ ಅಥವಾ ಬಿಜೆಪಿ ಆಹ್ವಾನಿಸಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಅಂತೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಕೂಡಾ ಆರೋಪ ಮಾಡಿದ್ದರು.

ಇನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ಒಪ್ಪಿಕೊಳ್ಳದಿರುವ ಕಾರಣ ಉದ್ದೇಶಪೂರ್ವಕವಾಗಿ ಕೋವಿಂದ್ ಅವರನ್ನು ನಿರ್ಲಕ್ಷಿಸಿ ಫೋಟೋಗೆ ಪೋಸ್ ನೀಡಿದ್ದಾರೆಂದು ಕೂಡಾ ಆರೋಪಿಸಲಾಗಿತ್ತು. ಟಿಆರ್‌ಎಸ್‌ನ ವೈ ಸತೀಶ್ ರೆಡ್ಡಿ, ಎಎಪಿಯ ಸಂಜಯ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷದ ವೀರೇಂದ್ರ ಚೌಧರಿ, ರೋಹನ್ ಗುಪ್ತಾ ಮತ್ತು ಸುಪ್ರಿಯಾ ಶ್ರಿನಾಟೆ ಅವರು ಸಮಾರಂಭದಲ್ಲಿ ಕೋವಿಂದ್ ಅವರನ್ನು ನಿರ್ಲಕ್ಷಿಸಿದ್ದಾರೆಂದು ಹೇಳಿ ವೀಡಿಯೊವನ್ನು ಟ್ವೀಟ್ ಮಾಡಿದ್ದರು.

ಇದನ್ನು ಓದಿದ್ದೀರಾ? ಕೆಲಸವಿಲ್ಲ, ಸಾಲವಿದೆ: ಪ್ರಧಾನಿ ಮೋದಿಯವರಿಗೆ ಚಹಾ ಆತಿಥ್ಯ ನೀಡಿದ್ದ ಅಯೋಧ್ಯೆಯ ದಲಿತ ಮಹಿಳೆ ಅಳಲು

ಪ್ರಧಾನ ಮಂತ್ರಿ ನರೇಂದ್ರ ಮೋದಿ 2023ರ ಡಿಸೆಂಬರ್ 30 ರಂದು ಅಯೋಧ್ಯೆಗೆ ಭೇಟಿ ನೀಡಿದ್ದರು. ರೈಲ್ವೆ ನಿಲ್ದಾಣ, ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಈ ವೇಳೆ ಅಯೋಧ್ಯೆಯ ಉಜ್ವಲ ಯೋಜನೆಯ 10ನೇ ಕೋಟಿಯ ಫಲಾನುಭವಿ ಮೀರಾ ದೇವಿ ಮಾಂಝಿ ಎಂಬ ದಲಿತ ಮಹಿಳೆ ಮನೆಗೆ ಭೇಟಿ ನೀಡಿ ಚಹಾ ಕುಡಿದು, ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದರು. ಈ ವೇಳೆ ಆ ದಲಿತ ಮಹಿಳೆ ವಾಸಿಸುತ್ತಿದ್ದ ಪ್ರದೇಶದ ದಲಿತ ಮಕ್ಕಳು ಪ್ರಧಾನಿಯವರನ್ನು ನೋಡಲೆಂದು ಕಬ್ಬಿಣದ ತಡೆಬೇಲಿಯ ಆ ಕಡೆಗೆ ನಿಂತು, ಪ್ರಧಾನಿಗೆ ಹಸ್ತಲಾಘವ ನೀಡಲು ಯತ್ನಿಸಿದ್ದರು ಆದರೆ ಪ್ರಧಾನಿ ಹಸ್ತಲಾಘವ ನೀಡುವುದಕ್ಕೆ ಮುಂದಾಗಿರಲೇ ಇಲ್ಲ. ಇದರ ಫೋಟೋ ಹಾಗೂ ವಿಡಿಯೋಗಳು ಹರಿದಾಡಿದ ನಂತರ ವ್ಯಾಪಕ ಟೀಕೆಗೂ ಕಾರಣವಾಗಿತ್ತು.

WhatsApp Image 2024 05 13 at 7.00.22 PM

ಹೀಗಿರುವಾಗ ಮೋದಿ ಕೇವಲ ವೋಟ್‌ ಬ್ಯಾಂಕ್‌ಗಾಗಿ ದಲಿತ ಮತ್ತು ಬುಡಕಟ್ಟು ಸಮುದಾಯಗಳನ್ನು ಮುನ್ನೆಲೆಗೆ ತರುತ್ತಿದ್ದಾರೆಯೇ ಹೊರತು ಯಾವುದೇ ಸಮಾನತೆ, ಸಾಮಾಜಿಕ ನ್ಯಾಯದ ಕಳಕಳಿಯಿಂದಾಗಲಿ ಅಲ್ಲ. ಬದಲಾಗಿ ವೋಟ್‌ ಬ್ಯಾಂಕ್‌ಗಾಗಿ ನಡೆಸುತ್ತಿರುವ ಗಿಮಿಕ್‌.

“ಆರ್‌ಜೆಡಿ ಮತ್ತು ಕಾಂಗ್ರೆಸ್ ಎರಡೂ ತುಷ್ಟೀಕರಣವನ್ನು ತಮ್ಮ ಪ್ರಾಥಮಿಕ ರಾಜಕೀಯ ತಂತ್ರವಾಗಿ ಪರಿವರ್ತಿಸಿವೆ. ಇದು ಧಾರ್ಮಿಕ ಮೀಸಲಾತಿಯ ವಿರುದ್ಧ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಲುವಿಗೆ ವಿರುದ್ಧವಾಗಿದೆ. ಬಿಹಾರದ ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳು ಆರ್‌ಜೆಡಿ ಮತ್ತು ಕಾಂಗ್ರೆಸ್ ತಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಬಿಡುತ್ತವೆಯೇ” ಎಂದು ಮೋದಿ ವಿಪಕ್ಷಗಳ ವಿರುದ್ಧ ದಲಿತ ಮತ್ತು ಬುಡಕಟ್ಟು ಸಮುದಾಯಗಳನ್ನು ಎತ್ತಿಕಟ್ಟುತ್ತಿರುವ ಮೋದಿ ಸಾಮಾಜಿಕ ನೈತಿಕತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಮಾತನಾಡುತ್ತಿದ್ದಾರೆ. ತುಷ್ಟೀಕರಣದ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ ಮೋದಿ ಹೋದಲ್ಲೆಲ್ಲ ರಾಮಮಂದಿರದ ಕುರಿತು ಹೆಣೆಯುವ ಕಥೆ ಮತ್ತು ಜಗನ್ನಾಥ ದೇವಾಲಯದಲ್ಲಿ ಊಟ ಬಡಿಸುತ್ತಿರುವ ಫೋಸ್‌ಗಳ ಮೂಲಕ ಮತದಾರರನ್ನು ಸಾಂಸ್ಕೃತಿಕ ಯಜಮನಿಯಲ್ಲಿ ಬಂಧಿಸುತ್ತಿರುವುದು ಅವರ ತುಷ್ಟೀಕರಣ ಅಲ್ಲವೇ? ಭಾರತೀಯ ಮುಸಲ್ಮಾನರನ್ನು ಕಂಡರೆ ವಿಷ ಕಾರುತ್ತಿರುವ ಮೋದಿಜಿ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವೇ?(21:24-24:51)

“ಕಳೆದ ದಶಕದಲ್ಲಿ, ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ ಸೇರಿದಂತೆ ಹೆದ್ದಾರಿಗಳ ವಿಸ್ತರಣೆ, ಬಿಹಾರದಲ್ಲಿ ರಸಗೊಬ್ಬರ ಕಾರ್ಖಾನೆಗಳು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳಂತಹ ಯೋಜನೆಗಳ ಕಾಮಗಾರಿಗಳು ಗಣನೀಯ ಉದ್ಯೋಗ ಸಾಮರ್ಥ್ಯವನ್ನು ಸೂಚಿಸುತ್ತವೆ. ಅಲ್ಲದೆ, ಗಂಗಾ ನದಿಗೆ ಹಲವಾರು ದೊಡ್ಡ ಸೇತುವೆಗಳ ನಿರ್ಮಾಣ ಮತ್ತು ಪಾಟ್ನಾ ಮೆಟ್ರೋ ಯೋಜನೆಯ ಪ್ರಗತಿಯು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಮಾರ್ಗಗಳನ್ನು ತೋರಿಸುತ್ತದೆ” ಎಂದು ಮತ್ತಷ್ಟು ಸುಳ್ಳುಗಳನ್ನು ಹೇಳಿದ್ದಾರೆ. (32;33-4;5)

ಗಂಗಾ ನದಿಗೆ ಅಡ್ಡಲಾಗಿರುವ ರೈಲ್ವೆ ಸೇತುವೆ ಯೋಜನೆಯ ಕಾಮಗಾರಿ ಉದ್ಘಾಟನೆಯನ್ನು ಎಚ್‌ ಡಿ ದೇವೇಗೌಡರು ತಮ್ಮ ಪ್ರಧಾನ ಮಂತ್ರಿ ಅವಧಿಯಲ್ಲಿ ಮಾಡಿದ್ದರು. ದೇಶದಲ್ಲಿ ಇಷ್ಟು ವರ್ಷಗಳಿಂದ ಎಲ್ಲ ಇನ್ಫಾಸ್ಟ್ರಕ್ಚರ್‌ಗಳಿಂದ ಆರಂಭಿಸಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಮೋದಿ, ಈಗ ಎಲ್ಲವನ್ನೂ ತಾನೇ ಮಾಡಿದ್ದೇನೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಈಗ ಬಿಹಾರದ ಅಭಿವೃದ್ಧಿಯ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಮತ್ತು ಅದರಿಂದ ಉದ್ಯೋಗ ಸೃಷ್ಟಿಸುವುದಾಗಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X