ಬಿಜೆಪಿಯಲ್ಲಿ ಪ್ರಸ್ತುತ ಓರ್ವನೇ ಓರ್ವ ಮುಸ್ಲಿಂ ಸಂಸದನಿಲ್ಲ. ಅಲ್ಲದೇ, ಮೋದಿ ಕ್ಯಾಬಿನೆಟ್‌ನಲ್ಲೂ ಕೂಡ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ಓರ್ವ ಸಚಿವ ಕೂಡ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ತಮ್ಮ ರಿಪೋರ್ಟ್ ಕಾರ್ಡ್ ಜನರ ಮುಂದಿಡುವ ಬದಲು ‘ಹಿಂದೂ-ಮುಸ್ಲಿಂ, ಮಂಗಳಸೂತ್ರ, ಮೀಸಲಾತಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ದೂರುವುದರಲ್ಲೇ ಬ್ಯುಝಿಯಾಗಿದ್ದಾರೆ.
11:32-13:40 ಉತ್ತರ ಪ್ರದೇಶದ ಇಟಾವಾದಲ್ಲಿ ಇಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನನ್ನ 10 ವರ್ಷಗಳ ಅಧಿಕಾರಾವಧಿಯ ನಂತರ, ನಾನು ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ. ನೀವು ನನ್ನ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದೀರಿ. ನಾನು ಕೇವಲ ಮುಂದಿನ 5 ವರ್ಷಗಳಿಗೆ ತಯಾರಿ ನಡೆಸುತ್ತಿಲ್ಲ. ನಾನು 25 ವರ್ಷಗಳಿಗೆ ದಾರಿ ಮಾಡಿಕೊಡುತ್ತಿದ್ದೇನೆ. ಭಾರತದ ಶಕ್ತಿ ಸಾವಿರ ವರ್ಷಗಳ ಕಾಲ ಉಳಿಯುತ್ತದೆ. ನಾನು ಅದರ ಅಡಿಪಾಯ ಹಾಕುತ್ತಿದ್ದೇನೆ. ಏಕೆಂದರೆ ನಾನು ಉಳಿಯುತ್ತೇನೋ ಇಲ್ಲವೋ, ಆದರೆ ಈ ದೇಶ ಯಾವಾಗಲೂ ಉಳಿಯುತ್ತದೆ” ಎಂದು ಮಾಡಿದ ಸಾಧನೆಯ ಬಗ್ಗೆ ಹೇಳದ ಮೋದಿ ತನ್ನ 25 ವರ್ಷಗಳ ಮುಂದಕ್ಕೆ ಸಾಧಿಸುವ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ.
ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣದಂತಹ ಜನರ ಪ್ರಸ್ತುತ ಸಮಸ್ಯೆಗಳ ಬಗ್ಗೆ ಮಾತನಾಡದ ಮೋದಿ 25 ವರ್ಷಗಳ ಮುಂದಕ್ಕೆ ಮಾತನಾಡುತ್ತಿದ್ದಾರೆ. 25 ವರ್ಷಗಳ ವರೆಗೆ ಜನರ ಬದುಕು ಬವಣೆಗಳೇನಾಗಿರಬೇಕು. 25 ವರ್ಷಗಳ ಅಭಿವೃದ್ಧಿ ನೋಡಲು ಎಷ್ಟು ಮಂದಿ ಇರಬಹುದು? ಆದರೆ, ಮೋದಿ ತನ್ನ ಅಭಿವೃದ್ಧಿಯ ಭರವಸೆಗಳ ಬಗ್ಗೆ ತಮ್ಮ ರಿಪೋರ್ಟ್ ಕಾರ್ಡ್ ಪ್ರಸ್ತುತಪಡಿಸುವುದೇ ಇಲ್ಲ. ಅವರ ಕಾರ್ಯ ಸಾಧನೆಯ ಆಧಾರದ ಮೇಲೆ ಚುನಾವಣೆ ಪ್ರಚಾರ ನಡೆಸುತ್ತಿಲ್ಲ. ಆದರೆ ಕೋಮುವಾದಿ ಮತ್ತು ಪೂರ್ವಾಗ್ರಹ ಪೀಡಿತ ಅಭಿಯಾನ ನಡೆಸುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಗಳು ವಾಸ್ತವವಾಗಿ ಸಂಪೂರ್ಣ ಸುಳ್ಳುಗಳಾಗಿವೆ.
ಬಿಜೆಪಿ ಆಡಳಿತವು ಎಲ್ಲೆಡೆ ಕಾನೂನುಬಾಹಿರತೆ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಕ್ಕೆ ಕಾರಣವಾಗಿದೆ. ಪ್ರಧಾನಿಯವರು ಸಾಮೂಹಿಕ ಅತ್ಯಾಚಾರಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಸಾಧನೆಗಳ ಸುಳಿವು ನೀಡದೆ, ವಿಪಕ್ಷಗಳನ್ನು ದೂಷಿಸುತ್ತ ಮತಯಾಚನೆ ಮಾಡುತ್ತಿದ್ದಾರೆ.
15:40-17:10 “ಕಾಂಗ್ರೆಸ್-ಸಮಾಜವಾದಿ ಪಾರ್ಟಿಯಂತಹ ಕುಟುಂಬ ರಾಜಕೀಯ ಪಕ್ಷಗಳ ಪರಂಪರೆ ಏನು? ಅವರ ಪರಂಪರೆಯೆಂದರೆ ಕಾರುಗಳು, ಭವನಗಳು ಮತ್ತು ರಾಜಕೀಯ ಅಧಿಕಾರ ಆಟಗಳು. ಕೆಲವರು ಮೈನ್ಪುರಿ, ಕನೌಜ್ ಮತ್ತು ಇಟಾವಾವನ್ನು ತಮ್ಮ ಪರಂಪರೆ ಎಂದು ಪರಿಗಣಿಸುತ್ತಾರೆ. ಕೆಲವರು ಅಮೇಥಿ-ರಾಯ್‌ಬರೇಲಿಯನ್ನು ತಮ್ಮದೇ ಎಸ್ಟೇಟ್ ಎಂದು ಪರಿಗಣಿಸುತ್ತಾರೆ. ಆದರೆ ಬಡವರಿಗೆ ಗಟ್ಟಿಯಾದ ಮನೆ, ತಾಯಂದಿರು ಮತ್ತು ಸಹೋದರಿಯರಿಗೆ ಶೌಚಾಲಯಗಳು, ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಧಾನ್ಯಗಳು, ವಿದ್ಯುತ್, ಅನಿಲ, ನೀರಿನ ಸಂಪರ್ಕಗಳನ್ನು ಉಚಿತವಾಗಿ ಒದಗಿಸುವುದು ಮೋದಿಯವರ ಪರಂಪರೆ” ಎಂದು ಹಳಿಯೇ ಇಲ್ಲದ ರೈಲು ಬಿಡುತ್ತಿದ್ದಾರೆ.
ಹಿಂದೆಂದೂ ಕಂಡು ಕೇಳರಿಯದಷ್ಟು ಭ್ರಷ್ಟಾಚಾರ, ಮಹಿಳೆಯರ ಅತ್ಯಾಚಾರ, ದಲಿತರ ಮೇಲಿನ ದೌರ್ಜನ್ಯಗಳು, ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮೋದಿ ನೇತೃತ್ವದ ಬಿಜೆಪಿ ಆಡಳಿತದಲ್ಲಿ ನಡೆದಿವೆ. ಆದರೂ ಕೂಡಾ ಲಜ್ಜೆಗೆಟ್ಟ ಪ್ರಧಾನಿ, ಇದ್ಯಾವುದಕ್ಕೂ ಉತ್ತರಿಸದೆ, ಸಮಸ್ಯೆಗಳನ್ನು ಪರಿಹರಿಸಲು ತಾಕತ್ ಇಲ್ಲದಿದ್ದರೂ ವಿಪಕ್ಷಗಳ ವಿರುದ್ಧ ಮಾತನಾಡಿಕೊಂಡೇ ಮತ ಬೇಟೆ ನಡೆಸುತ್ತಿದ್ದಾರೆ. ಬಡವರ ಪರ ಮೋದಿಯ ಪರಂಪರೆ ಎಲ್ಲಿಯವರೆಗೆ ಸಾಗಿದೆ?. ಅಂಬಾನಿ, ಆದಾನಿಗಳಂತಹ ಕರೋಡ್ ಪತಿಗಳ ಬೆನ್ನಿಗೆ ನಿಲ್ಲುವುದು ಮೋದಿಯ ಪರಂಪರೆಯೇ?
19:26-20:15 “ಇಂದು ದೇಶೀಯ ಕೋವಿಡ್ -19 ಲಸಿಕೆಗಳನ್ನು ದೂಷಿಸುತ್ತಿರುವವರು ಅಂದು ರಹಸ್ಯವಾಗಿ ಲಸಿಕೆ ಪಡೆದರು. ಆದರೆ, ಇಂದು ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರನ್ನು ಪ್ರಚೋದಿಸುತ್ತಿದ್ದಾರೆ. ಏಕೆಂದರೆ ಇದರಿಂದ ಕೋಲಾಹಲ ಹರಡುತ್ತದೆ. ಬಳಿಕ ಇದರ ಪಾಪಗಳನ್ನು ಮೋದಿಯವರ ಹಣೆಯ ಮೇಲೆ ಹಾಕಲಾಗುತ್ತಿದೆ” ಎಂದು ಬಂಡಲ್ ಬಿಟ್ಟು ತಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಕೋವಿಶೀಲ್ಡ್ ಮತ್ತು ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರ್ಯಾಂಡ್ ಹೆಸರುಗಳ ಅಡಿಯಲ್ಲಿ ಜಾಗತಿಕವಾಗಿ ಮಾರಾಟವಾದ ಕೊರೋನಾ ಲಸಿಕೆ ಕೆಲವು ಅಪರೂಪದ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಈ ಲಸಿಕೆಯಿಂದಾಗಿ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಅಥವಾ ಟಿಟಿಎಸ್ ಎಂಬ ರೋಗ ಉಂಟಾಗಬಹುದೆಂದು ಈ ಲಸಿಕೆ ತಯಾರಿಸಿದ ಸಂಸ್ಥೆ ಅಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಕೋವಿಶೀಲ್ಡ್ ಸರ್ಟಿಫಿಕೇಟ್‌ನಲ್ಲಿ ಬರುತ್ತಿದ್ದ ಮೋದಿ ಫೋಟೋ ಕೂಡಾ ಕಾಣೆಯಾಗಿದೆ. ಇದರಲ್ಲಿ ವಿಪಕ್ಷಗಳ ಪ್ರಚೋದನೆ ಎಲ್ಲಿದೆ? ಹಾಗಾದರೆ, ಮೋದಿ ಈವರೆಗೆ ಸುಳ್ಳು ಭಾಷಣಗಳನ್ನು ಹೊಡೆಯುತ್ತ ಜನರ ದಿಕ್ಕು ತಪ್ಪಿಸುತ್ತಿರುವುದು ನಿಜವಾದ ಪ್ರಚೋದನೆ ಅಲ್ಲವೇ?
इटावा की जनसभा में मेरे परिवारजनों के जोश और जुनून से साफ है कि पूरे उत्तर प्रदेश में भाजपा-एनडीए की अभूतपूर्व लहर है। https://t.co/CB8bs6PlX4
— Narendra Modi (@narendramodi) May 5, 2024
20:55-22:45 “ಧರ್ಮದ ಆಧಾರದ ಮೇಲೆ ಯಾವುದೇ ಮೀಸಲಾತಿ ಇರುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದರು. ಆದರೆ ಈಗ, ಸಮಾಜವಾದಿ ಪಾರ್ಟಿ-ಕಾಂಗ್ರೆಸ್ ಎಸ್‌ಸಿ/ಎಸ್‌ಟಿ/ಒಬಿಸಿಯಿಂದ ಮೀಸಲಾತಿಯನ್ನು ಕಸಿದುಕೊಳ್ಳಲು ಮತ್ತು ಧರ್ಮದ ಆಧಾರದ ಮೇಲೆ ವಿತರಿಸಲು ಬಯಸಿದೆ. ಕರ್ನಾಟಕದಲ್ಲಿ ರಾತ್ರೋರಾತ್ರಿ ಅವರು ಎಲ್ಲ ಮುಸ್ಲಿಂ ಜಾತಿಗಳನ್ನು ಒಬಿಸಿ ಎಂದು ಘೋಷಿಸಿದರು. ಉತ್ತರ ಪ್ರದೇಶದಲ್ಲಿ ಇದು ಸಂಭವಿಸಿದರೆ, ಯಾದವರು, ಮೌರ್ಯರು, ಲೋಧರು, ಪಾಲ್‌ಗಳು, ಜಾಧವ್‌ಗಳು, ಶಾಕ್ಯ, ಕುಶ್ವಾಹ ಸಮುದಾಯಗಳ ಗತಿ ಏನು? ಎಂದು ಪಾಪ ಪ್ರಧಾನಿ ಕಳವಳಪಡುತ್ತಿದ್ದಾರೆ.
ಹೋದಲ್ಲೆಲ್ಲ ಮೋದಿ ಇದೊಂದೇ ಪುಂಗಿ ಊದುತ್ತಾ ಕೇವಲ ಕರ್ನಾಟಕವನ್ನೇ ದೂಷಿಸುತ್ತಿದ್ದಾರೆ. ಆದರೆ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ, ಅವಕಾಶ ವಂಚಿತರಾದವರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನ ಹೇಳಿದೆ. ನರೇಂದ್ರ ಮೋದಿಯವರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ತಿದ್ದುಪಡಿ ಮಾಡಿ ಅವರಿಗೂ 10% ಮೀಸಲಾತಿ ನೀಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚನೆ ಮಾಡಿರುವ ಮೂಲ ಸಂವಿಧಾನದಲ್ಲಿ ಅದು ಇಲ್ಲ. ಆದರೂ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ನೀಡಿದೆ.
23:8-24:5 “ಎಸ್‌ಪಿ(ಸಮಾಜವಾದಿ ಪಕ್ಷ) ಒಂದು ನಿರ್ದಿಷ್ಟ ಸಮುದಾಯದ ರಕ್ಷಕರು ಎಂಬ ಹೇಳಿಕೆಯೂ ಛಿದ್ರಗೊಂಡಿದೆ. ಒಂದೋ ಅವರು ತಮ್ಮ ಕುಟುಂಬಗಳಿಗೆ ಒಳ್ಳೆಯದನ್ನು ಮಾಡುತ್ತಾರೆ. ಇಲ್ಲವೇ ತಮ್ಮ ಮತ ಬ್ಯಾಂಕ್‌ಗಳಿಗೆ ಒಳ್ಳೆಯದನ್ನು ಮಾಡುತ್ತಾರೆ. ಇಂದಿಗೂ ಇಡೀ ರಾಜ್ಯದಲ್ಲಿ, ಎಸ್‌ಪಿಗೆ ತಮ್ಮ ಕುಟುಂಬದ ಹೊರಗೆ ಒಬ್ಬನೇ ಒಬ್ಬ ಯಾದವ್ ಅಭ್ಯರ್ಥಿಯನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿಯಲ್ಲಿ, ಯಾವುದೇ ಕಾರ್ಯಕರ್ತರು ಅತ್ಯುನ್ನತ ಸ್ಥಾನಗಳನ್ನು ತಲುಪಬಹುದು” ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹುರಿದುಂಬಿಸಿದರು.
ಆದರೆ, ವಾಸ್ತವ ಏನೆಂದರೆ, ಬಿಜೆಪಿಯಲ್ಲಿ ಪ್ರಸ್ತುತ ಓರ್ವನೇ ಓರ್ವ ಮುಸ್ಲಿಂ ಸಂಸದನಿಲ್ಲ. ಅಲ್ಲದೇ, ಮೋದಿ ಕ್ಯಾಬಿನೆಟ್‌ನಲ್ಲೂ ಕೂಡ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ಓರ್ವ ಸಚಿವ ಕೂಡ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ತಮ್ಮ ರಿಪೋರ್ಟ್ ಕಾರ್ಡ್ ಜನರ ಮುಂದಿಡುವ ಬದಲು ‘ಹಿಂದೂ-ಮುಸ್ಲಿಂ, ಮಂಗಳಸೂತ್ರ, ಮೀಸಲಾತಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ದೂರುವುದರಲ್ಲೇ ಬ್ಯುಝಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಮೋದಿಯ ಇಂದಿನ ಸುದ್ದಿಗಳು | 370ನೇ ವಿಧಿ ರದ್ದತಿಯಿಂದ ಏಕೀಕೃತ ಭಾರತ ನಿರ್ಮಿಸಿದ್ದಾರಾ ಮೋದಿ?
ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿ ಕುಟುಂಬ ರಾಜಕಾರಣಕ್ಕೆ ಹೆಸರಾಗಿದ್ದು, ಕುಟುಂಬ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಮೋದಿ ಈಗಾಗಲೇ ನಿರ್ದಿಷ್ಟ ವರ್ಗಗಳ ರಕ್ಷಣೆಗೆ ಭಾರತದ ಇಡೀ ಸಂಪತ್ತನ್ನು ಖಾಸಗೀಕರಣ ಮಾಡುವ ಮೂಲಕ ಲೂಟಿ ಹೊಡೆದು ಉದ್ಯಮಿಗಳ ಪಾಲು ಮಾಡಿದೆ. ಅಂಬಾನಿ ಏಷ್ಯಾದ ನಂಬರ್ ವನ್ ಶ್ರೀಮಂತರಾಗಿದ್ದಾರೆ. ಇದರ ಹಿಂದೆ ಮೋದಿಯ ಕೈವಾಡವಿರುವುದು ಜಗಜ್ಜಾಹೀರಾಗಿದೆ. ಹೀಗಿರುವಾಗ ಮೋದಿಗೆ ಸಾಮಾಜೀಕರಣದ ಕುರಿತು ಮಾತನಾಡುವ ನೈತಿಕತೆ ಇದೆಯೇ?