ಮೋದಿ ಸುಳ್ಳುಗಳು | ಮತದಾರರ ಋಣ ತೀರಿಸುತ್ತಾರಾ ಮೋದಿ?

Date:

Advertisements

ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳಿನ ನಾನ್‌ ಸ್ಟಾಪ್‌ ರೈಲು ಎಲ್ಲ ರಾಜ್ಯಗಳಲ್ಲೂ ಸ್ಟಾಪ್‌ ಕೊಟ್ಟು, ಜನರ ಬ್ರೈನ್‌ವಾಶ್ ಮಾಡುವ ಎಲ್ಲ ಪ್ರಯತ್ನ ಮಾಡುವುದನ್ನು ಇನ್ನೂ ಕೂಡ ಮುಂದುವರಿಸಿದ್ದಾರೆ. ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಮಾತನಾಡಿದ ಮೋದಿ ಸುಳ್ಳಿನ ಸರಮಾಲೆಯನ್ನೇ ಜನರ ಕೊರಳಿಗೆ ಹಾಕಿದ್ದಾರೆ.

“ಬಿಜೆಪಿ ತನ್ನ ಅಭಿವೃದ್ಧಿ ಮತ್ತು ಸುಧಾರಣಾ ಕಾರ್ಯಸೂಚಿಯನ್ನು ಮುಂದುವರಿಸಲು ನಿರ್ಣಾಯಕ ಜನಾದೇಶದ ಅಗತ್ಯವಿದೆ” ಎಂದು ಹೇಳಿದ ಮೋದಿ, ತಮ್ಮ ಸರ್ಕಾರದ ಸಾಧನೆಗಳು ಮತ್ತು ವಿರೋಧ ಪಕ್ಷಗಳೊಂದಿಗಿನ ವ್ಯತಿರಿಕ್ತತೆಯನ್ನು ಎತ್ತಿ ತೋರಿಸಿದರು. ಬಾರಾಬಂಕಿ ಮತ್ತು ಮೋಹನ್‌ಲಾಲ್‌ಗಂಜ್‌ ಜನರ ಆಶೀರ್ವಾದ ಮತ್ತು ಬೆಂಬಲವನ್ನು ಕೋರಿದರು.

“ನಾನು ದೇಶಕ್ಕಾಗಿ ಇನ್ನೂ ಹೆಚ್ಚು ಶ್ರಮಿಸುವ ಮೂಲಕ ತಮ ಮತದಾನದ ಋಣವನ್ನು ತೀರಿಸುತ್ತೇನೆ. ರಾಷ್ಟ್ರಕ್ಕೆ ಅವರ ಅಚಲ ಬದ್ಧತೆಯಿಂದ ದುಡಿಯುತ್ತೇನೆ. ಮೋದಿ ಸರ್ಕಾರವು ಐತಿಹಾಸಿಕವಾಗಿ ಹ್ಯಾಟ್ರಿಕ್‌ ಅಂಚಿನಲ್ಲಿದೆ ಎಂದು ಇಡೀ ದೇಶ ಮತ್ತು ಜಗತ್ತಿಗೆ ತಿಳಿದಿದೆ. ಹೊಸ ಅವಧಿಯಲ್ಲಿ ಬಡವರು, ಯುವಕರು, ರೈತರು ಮತ್ತು ಮಹಿಳೆಯರಿಗಾಗಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ. ಹಾಗಾಗಿ ಬಾರಾಬಂಕಿ ಮತ್ತು ಮೋಹನ್‌ಲಾಲ್‌ಗಂಜ್‌ ಜನರ ಆಶೀರ್ವಾದ ಮತ್ತು ಬೆಂಬಲ ಅಧಿಕವಾಗಿ ಬೇಕಿದೆ” ಎನ್ನುವ ಮೂಲಕ ಪ್ರಧಾನಿ ಮತ್ತೊಮ್ಮೆ ಸುಳ್ಳು ಭರವಸೆಗಳನ್ನು ನೀಡಿದರು.(12:00-13)

Advertisements

ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆಯೇ ಯುವಜನತೆಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಉದ್ಯೋಗ ಸೃಷ್ಟಿಯಾಗಲೇ ಇಲ್ಲ. ಬದಲಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಗುತ್ತಿಗೆ ಆಧಾರದಲ್ಲಿ ನೇಮಕಾತಿಗಳು ನಡೆಯುತ್ತಿವೆ. ಇದರಿಂದ ಯಾವುದೇ ಭದ್ರತೆ ಇರುವುದಿಲ್ಲ. ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದ್ದರು. ಕೊನೆಗೆ ಹಾಕಿದರೇ? ಆ ಹಣವನ್ನೂ ಹಾಕಲಿಲ್ಲ. ಅವರ ಭರವಸೆಗಳು ಭರವಸೆಯಾಗಿಯೇ ಉಳಿದಿವೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ಹಣದುಬ್ಬರವನ್ನು ನಿಭಾಯಿಸುವುದಾಗಿ ನೀಡಿದ್ದ ಭರವಸೆಗಳನ್ನೂ ಕೂಡ ಈಡೇರಿಸಲಿಲ್ಲ. ಹೀಗಿರುವಾಗ ಈಗ ವೋಟ್‌ ಬ್ಯಾಂಕ್‌ಗಾಗಿ ಮತ್ತೆ ಮಹಿಳೆಯರು ಮತ್ತು ಯುವಜನರನ್ನು ಸೆಳೆಯಲು ನಾಟಕೀಯ ಭರವಸೆಗಳನ್ನು ನೀಡುತ್ತಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿಗಳಿಗೆ ಬಿಜೆಪಿ-ಎನ್‌ಡಿಎ ಸಮರ್ಪಣೆ ಎಂದಿರುವ ಪ್ರಧಾನಿ ಮೋದಿಯವರು, ಪ್ರತಿಪಕ್ಷಗಳು ವಿಭಜನಕಾರಿ ರಾಜಕೀಯ ಮಾಡುತ್ತಿದೆ ಎಂದು ದೂರಿದ್ದಾರೆ. “ಪ್ರತಿಪಕ್ಷಗಳು ಮಾಡಿರುವ ಮೈತ್ರಿಕೂಟವನ್ನು ಇಂಡಿ ಮೈತ್ರಿ ಎಂದು ಕರೆಯಲಾಗುತ್ತದೆ. ಚುನಾವಣೆ ಮುಂದುವರೆದಂತೆ, ಈ ಇಂಡಿ ಜನರು ಇಸ್ಪೀಟ್‌ ಎಲೆಗಳ ಮನೆಯಂತೆ ಚದುರಿಹೋಗಲು ಪ್ರಾರಂಭಿಸಿದ್ದಾರೆ. ಪ್ರತಿಪಕ್ಷಗಳೊಳಗೆ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಿದ್ದು, ಏಕೀಕೃತ ದೃಷ್ಟಿ ಮತ್ತು ನಾಯಕತ್ವದ ಕೊರತೆ ಎದುರಾಗಿದೆ” ಎಂದು ಅಪ್ಪಟ ಸುಳ್ಳುಗಳನ್ನು ಹೇಳುತ್ತಿದ್ದಾರೆ ನಮ್ಮ ಪ್ರಧಾನಿ.(13-15-16:18)

ರಾಜ್ಯದ ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಸಮ್ಮುಖದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬಿಜೆಪಿ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕೆಲದಿನಗಳ ಹಿಂದೆಯಷ್ಟೇ ಹಿರಿಯ ನಾಯಕರಾದ ಮಾಜಿ ಸಚಿವ ಸಿ ಪಿ ಯೋಗೇಶ್ವರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ಪ್ರತಾಪ್ ಸಿಂಹ, ಸಿ.ಟಿ.ರವಿ ಅವರು ವಿರೋಧ ಪಕ್ಷಗಳೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಅವರವರೇ ಆರೋಪಿಸಿಕೊಂಡಿದ್ದರು.

ವಿಜಯಪುರದಲ್ಲಿ ನಡೆದ ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರನ್ನು ಮರು ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದ ನಂತರ, ಯತ್ನಾಳ್ ಬೆಂಬಲಿಗರು ಘೋಷಣೆಗಳನ್ನು ಕೂಗಲಾರಂಭಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬೊಮ್ಮಾಯಿಗೆ ಮುಜುಗರ ಉಂಟಾಗಿ ಸಭೆಯಲ್ಲಿ ನಡೆಯುತ್ತಿದ್ದ ಅಶಿಸ್ತಿನ ದೃಶ್ಯಗಳಿಗೆ ಬೊಮ್ಮಾಯಿ ಮೂಕಪ್ರೇಕ್ಷಕರಾಗಿ ಕುಳಿತಿದ್ದರು. ಲೋಕಸಭಾ ಚುನಾವಣೆ ಬೆನ್ನಲ್ಲೇ ದೇಶಾದ್ಯಂತ ಬಿಜೆಪಿಯ ಬಹುತೇಕ ನಾಯಕರು ಪಕ್ಷಾಂತರಗೊಂಡಿದ್ದರೆ, ಕೆಲವರು ಬಂಡಾಯವೆದ್ದಿದ್ದಾರೆ. ಹೀಗಿರುವಾಗ ವಿಪಕ್ಷಗಳ ಒಳಜಗಳಗಳಿಗೆ ಮೂಗು ತೂರಿಸುವುದು ಪ್ರಧಾನಿಗೆ ಅವಶ್ಯಕತೆ ಇದೆಯೇ?

“ವಿರೋಧ ಪಕ್ಷದ ಸಂಸದರು ಅಭಿವೃದ್ಧಿಯತ್ತ ಗಮನ ಹರಿಸುವ ಬದಲು ತಮ್ಮನ್ನು ಟೀಕಿಸುತ್ತಾ ಸಮಯ ಕಳೆಯುತ್ತಿದ್ದಾರೆ. ಬಿಜೆಪಿ ಸಂಸದರೊಬ್ಬರು ನಿಮಗಾಗಿ ದೆಹಲಿಯಿಂದ ಹೆಚ್ಚಿನ ಯೋಜನೆಗಳನ್ನು ತರುತ್ತಾರೆ. ಬಿಜೆಪಿ ಸಂಸದರು ಇಲ್ಲಿನ ಅಭಿವೃದ್ಧಿಗೆ ಹೆಚ್ಚು ಕೆಲಸ ಮಾಡುತ್ತಾರೆ. ಹಾಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ” ಎಂದು ಮೋದಿಜಿ ಸುಳ್ಳಿನ ಬಂಡಿಗಳನ್ನೇ ಬಿಡುತ್ತಿದ್ದಾರೆ.(17:45-18:35)

ಕಳೆದ ಹತ್ತು ವರ್ಷಗಳಿಂದ ಸಂಸತ್ತಿನಲ್ಲಿ ಮೋದಿ ಎದುರು ಮಾತನಾಡಲು ಹೆದರುವ ಬಿಜೆಪಿಗರು ಅವರೇಳಿದ್ದಕ್ಕೆ ತಲೆಯಾಡಿಸಿಕೊಂಡು ಬಂದಿದ್ದಾರೆ. ಸಂಸದರು ತಮ್ಮ ಸಾಧನೆಗಳ ಮೇಲೆ ಮತಯಾಚಿಸಲು ಮುಖವಿಲ್ಲದೆ ಎಲ್ಲ ಕಡೆ ಮೋದಿಯವರನ್ನು ಮುಂದೆ ತರುತ್ತಿದ್ದಾರೆ. ಹೀಗಿರುವಾಗ ಬಿಜೆಪಿಗರು ನಿಜವಾಗಿಯೂ ಹೆಚ್ಚಿನ ಯೋಜನೆಗಳನ್ನು ತರುವರೇ?

ಕರ್ನಾಟಕವು ಅತಿಹೆಚ್ಚು ತೆರಿಗೆ ಕಟ್ಟಿದರೂ ಕೂಡಾ ಸರಿಯಾದ ತೆರಿಗೆ ಪಾಲನ್ನು ಕೇಂದ್ರ ಸರ್ಕಾರ ನೀಡ್ತಾ ಇಲ್ಲ, ಅಂತ ಆರೋಪಿಸಿ ನಮ್ಮ ತೆರಿಗೆ ಪಾಲನ್ನು ನಮಗೆ ಕೊಡಿ ಅಂತ ಕೇಳಿ ಪ್ರತಿಭಟನೆ ಮಾಡಿತ್ತು. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ನಮ್ಮ ತೆರಿಗೆ ಪಾಲು ಕೊಡಿ. ಇಲ್ಲದಿದ್ದರೆ ಪ್ರತ್ಯೇಕ ರಾಷ್ಟ್ರದ ಕೂಗು ಏಳಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ, ಈ ಹೇಳಿಕೆಯನ್ನೇ ದೊಡ್ಡ ವಿವಾದವನ್ನಾಗಿಸಿದ್ದ ಬಿಜೆಪಿ ಹಾಗೂ ಪ್ರಧಾನಿ ಮೋದಿ, ತೆರಿಗೆ ಅನ್ಯಾಯದ ಬಗೆಗಿನ ಮೂಲ ವಿಷಯವನ್ನು ಕೈ ಬಿಟ್ಟಿದ್ದರು. ಮೋದಿ ಮತ್ತು ಬಿಜೆಪಿ, ʼಕಾಂಗ್ರೆಸ್‌ನವರು ಈ ದೇಶವನ್ನು ಉತ್ತರ-ದಕ್ಷಿಣ ಅಂತ ಒಡೆಯುವುದಕ್ಕೆ ನಿಂತಿದ್ದಾರೆ. ದೇಶವನ್ನು ವಿಭಜನೆ ಮಾಡುತ್ತಿದ್ದಾರೆ” ಎಂದು ಮುಗಿಬಿದ್ದಿದ್ದರು.

ಈಗ ಅದೇ ಮೋದಿಯವರು, ಅದರಲ್ಲೂ ದಕ್ಷಿಣ ಭಾರತದಲ್ಲಿ ಲೋಕಸಭಾ ಚುನಾವಣಾ ಮತದಾನ ಪ್ರಕ್ರಿಯೆ ಮುಗಿದ ಮೇಲೆ ದಕ್ಷಿಣದವರ ಮೇಲೆ ಮುಗಿಬಿದ್ದಿದ್ದಾರೆ. ಅದೂ ಕೂಡ ದಕ್ಷಿಣ ಭಾರತದವರ ಮೇಲೆ ಉತ್ತರ ಭಾರತದವರನ್ನು ಎತ್ತಿಕಟ್ಟುವ, ಒಡೆದಾಳುವ ಕೀಳುಮಟ್ಟದ ರಾಜಕೀಯ ಮಾಡುವುದಕ್ಕೆ ನಿಂತಿದ್ದಾರೆ.

“ನಮ್ಮಿಂದ ₹ 4 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಆದರೆ ನಾವು ಪಡೆಯುತ್ತಿರುವುದು ಏನು? 16 ನೇ ಹಣಕಾಸು ಆಯೋಗವು ಅದನ್ನು ಸರಿಯಾಗಿ ಹೊಂದಿಸದಿದ್ದರೆ, ದಕ್ಷಿಣ ಭಾರತದ ಎಲ್ಲ ರಾಜ್ಯಗಳು ತಮ್ಮ ಧ್ವನಿಯನ್ನು ಎತ್ತುವುದು ಅನಿವಾರ್ಯವಾಗಿದೆ” ಲೋಕಸಭೆಯಲ್ಲಿ ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ ಸುರೇಶ್ ಅವರು ಗುಡುಗಿದ್ದರು. ಈ ಹಿನ್ನೆಲೆಯಲ್ಲಿ ಮೋದಿಜಿ ಒಳಗೊಂಡಂತೆ ಬಿಜೆಪಿಗರು ವಿಭಜನೆಯ ಪಟ್ಟ ಕಟ್ಟಿದ್ದರು.

“ವಿರೋಧ ಪಕ್ಷದವರು ದಕ್ಷಿಣ ಭಾರತಕ್ಕೆ ಹೋಗಿ ಉತ್ತರ ಭಾರತದವರನ್ನು, ಅದರಲ್ಲೂ ಉತ್ತರ ಪ್ರದೇಶದವರನ್ನು ಬೈತಾರೆ, ಕೆಟ್ಟದಾಗಿ ಬಿಂಬಿಸ್ತಾರೆ” ಅಂತ ಮೋದಿ ಹೇಳಿದ್ದಾರೆ.

ಇದನ್ನೂ ಓದಿದ್ದೀರಾ? ದೇವಾಲಯದ ಚಿನ್ನ, ಮಂಗಳಸೂತ್ರದ ಮೇಲೆ ಕಾಂಗ್ರೆಸ್‌ ‘ಮಾವೋವಾದಿ’ ಪ್ರಣಾಳಿಕೆಯ ಕಣ್ಣು: ಪ್ರಧಾನಿ ಮೋದಿ

ಮೋದಿ ಹೇಳ್ತಾ ಇರೋದು ನಿಜವೇ ಆಗಿದ್ದಿದ್ದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚುನಾವಣೆ ಮುಗಿಯುವ ತನಕ ಯಾಕೆ ಸುಮ್ಮನಿದ್ದರು. ಇದು ನಮ್ಮದೇ ದೇಶದ ಜನರನ್ನು ಇವರ ಚುನಾವಣಾ ಲಾಭಕ್ಕಾಗಿ ಪರಸ್ಪರ ಎತ್ತಿ ಕಟ್ಟುವ ತಂತ್ರ ಅಲ್ಲವೇ? ಈತನಕ ಧರ್ಮ, ಭಾಷೆ, ಜಾತಿ, ಸಂಸ್ಕೃತಿ ಹೆಸರಲ್ಲಿ ಜನರ ನಡುವೆ ದ್ವೇಷ ರಾಜಕಾರಣ ಮಾಡಿದ ಮೋದಿ, ಈಗ ಉತ್ತರ ಭಾರತದ ಜನರನ್ನು, ದಕ್ಷಿಣ ಭಾರತದವರ ಮೇಲೆ ಎತ್ತಿಕಟ್ಟುವ ಕೀಳುಮಟ್ಟದ ರಾಜಕೀಯ ಮಾಡಲು ಮುಂದಾಗಿದ್ದಾರೆ.

ಇಡೀ ದೇಶಕ್ಕೆ ಪ್ರಧಾನಿಯಾಗಿರುವ, ನಾನು 140 ಕೋಟಿ ಜನರ ಪ್ರತಿನಿಧಿ ಅಂತ ಹೇಳಿಕೊಳ್ಳುವ ವ್ಯಕ್ತಿ ಈ ರೀತಿ ಸುಳ್ಳು ಹೇಳೋದು, ತನ್ನದೇ ದೇಶದ ಜನರನ್ನು ಒಬ್ಬರಿಗೊಬ್ಬರು ದ್ವೇಷಿಸುವಂತೆ ಮಾಡೋದು ಎಷ್ಟು ಸರಿ?

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X