- ‘ವಿಚಾರಗಳ ಸಮರ್ಥನೆಗೆ ಪದಗಳು ಸಿಗದೆ ಮೋದಿ ಮೌನವಹಿಸುತ್ತಾರೆ’
- ಮೋದಿ ಮಾತನಾಡುವ, ಮೌನವಾಗುವ ಲಿಸ್ಟ್ ಮಾಡಿದ ಗುಂಡೂರಾವ್
ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ. ಆದರೆ ಕೆಲವೊಮ್ಮೆ ಕೆಲವು ವಿಚಾರಗಳ ಸಮರ್ಥನೆಗೆ ಪದಗಳು ಸಿಗದಿರುವ ಅಜ್ಞಾನವೂ ಮೌನಕ್ಕೆ ಕಾರಣವಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಧಾನಿಯನ್ನು ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಮಣಿಪುರ ಗಲಭೆಗೆ ಸಂಬಂಧಪಟ್ಟಂತೆ ಮೋದಿಯವರ ಮೌನವನ್ನು ಬುದ್ಧಿವಂತರ ಲಕ್ಷಣವೆನ್ನಬೇಕೋ ಅಥವಾ ಸಮರ್ಥಿಸಿಕೊಳ್ಳಲು ಆಗದ ಅಜ್ಞಾನವೆನ್ನಬೇಕೋ?” ಎಂದು ವ್ಯಂಗ್ಯವಾಡಿದ್ದಾರೆ.
ಮುಂದುವರಿದು, ಮೋದಿಯವರು ಮಾತನಾಡುವ ಸಂದರ್ಭಗಳು ಮತ್ತು ಮೌನವಾಗುವ ಸಂದರ್ಭಗಳು ಎಂದು ಗುಂಡೂರಾವ್ ಲಿಸ್ಟ್ ಮಾಡಿದ್ದಾರೆ.
ಮೋದಿ ಮಾತನಾಡುವ ಸಂದರ್ಭಗಳು
ಚುನಾವಣೆ ಬಂದಾಗ
ಪ್ರಚಾರಕ್ಕೆ ಕರೆದಾಗ
ಮನ್ ಕಿ ಬಾತ್ ಕಾರ್ಯಕ್ರಮವಿದ್ದಾಗ
ಎದುರಿಗೆ ಪ್ರಶ್ನೆ ಮಾಡದ ಪತ್ರಕರ್ತರಿಲ್ಲದಿದ್ದಾಗ
ಜೀ ಹುಜೂರ್ ಎಂದು ಅಡ್ಡಡ್ಡ ಬೀಳುವ ತಮ್ಮ ಪಕ್ಷದ ನಾಯಕರು ಎದುರಿರುವಾಗ ಈ ಸಂದರ್ಭಗಳಲ್ಲಿ ಮೋದಿಯವರು ನಿರಂತರವಾಗಿ, ನಿರರ್ಗಳವಾಗಿ, ಮಾತಾಡುತ್ತಲೇ ಇರುತ್ತಾರೆ ಎಂದು ಟೀಕಿಸಿದ್ದಾರೆ.
ಮೋದಿಯವರು ಮೌನವಾಗುವ ಸಂದರ್ಭಗಳು
ಗಲಭೆಗಳಾದಾಗ
ಸಾಮೂಹಿಕ ನರಮೇಧಗಳಾಗುವಾಗ
ಮಹಿಳೆಯರ ನಗ್ನ ಮೆರವಣಿಗೆಯಾಗುವಾಗ
ಬೆಲೆಯೇರಿಕೆಯಾದಾಗ
PMCares ಫಂಡ್ ಬಗ್ಗೆ ಕೇಳಿದಾಗ
2 ಕೋಟಿ ಉದ್ಯೋಗದ ಬಗ್ಗೆ ಕೇಳಿದಾಗ
ಕಪ್ಪುಹಣದ ಬಗ್ಗೆ ಕೇಳಿದಾಗ
ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ.. ಇಂತಹ ಸಂದರ್ಭಗಳಲ್ಲಿ ಮೋದಿ ಕಠೋರ ಮೌನ ತಪಸ್ವಿಗಳಾಗುತ್ತಾರೆ” ಎಂದು ಕುಟುಕಿದ್ದಾರೆ.