ಮೂಡಾ ಹಗರಣ | ಎಲ್ಲ ಅಕ್ರಮ ನಡೆದಿರುವುದೇ ಬಿಜೆಪಿ ಕಾಲದಲ್ಲಿ: ಡಿ ಕೆ ಶಿವಕುಮಾರ್

Date:

Advertisements

ಮೂಡಾ ಹಗರಣ ವಿರೋಧಿಸಿ ಬಿಜೆಪಿಯಿಂದ ಸಿಎಂ ಮನೆಗೆ ಮುತ್ತಿಗೆ ವಿಚಾರವಾಗಿ ಡಿಸಿಎಂ ಡಿ ಕೆ ಶಿವಕುಮಾರ್‌ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, “ನಮ್ಮ ಕಾಲದಲ್ಲಿ ಯಾವುದೇ ಹಗರಣಗಳು ನಡೆದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರು

ಚನ್ನಪಟ್ಟಣದ ಕೋಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಮಾತನಾಡಿದ ಅವರು, “ಎಲ್ಲ ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲಿ. ಅವರ ಎಲ್ಲ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಕೊಡುತ್ತೇವೆ” ಎಂದು ತಿರುಗೇಟು ನೀಡಿದರು.

ಬೇಬಿ ಬೆಟ್ಟದಲ್ಲಿ ಪ್ರಯೋಗಾತ್ಮಕ ಸ್ಫೋಟದ ಬಗ್ಗೆ ಕೇಳಿದಾಗ, “ಕೆಆರ್‌ಎಸ್ ಅಣೆಕಟ್ಟಿನಲ್ಲಿ ಸ್ಫೋಟ ಮಾಡುವುದಿಲ್ಲ. ಏನೇನು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಸ್ಫೋಟ ಮಾಡಲಾಗುತ್ತದೆ. ಇಂತಿಷ್ಟು ದೂರ ಎಂಬುದು ಇರುತ್ತದೆ” ಎಂದು ಸ್ಪಷ್ಟಪಡಿಸಿದರು.

Advertisements

ಕುಮಾರಸ್ವಾಮಿ ಅವರು ಮಂಡ್ಯದಲ್ಲೂ ಜನಸಂಪರ್ಕ ಸಭೆ ನಡೆಸುತ್ತಿದ್ದಾರೆ. ನಿಮ್ಮನ್ನು ನೋಡಿ ನಕಲು ಮಾಡುತ್ತಿದ್ದಾರೆಯೇ ಎಂದಾಗ, “ಮಾಡಲಿ, ಒಳ್ಳೆಯ ಕೆಲಸ ಯಾರು ಮಾಡಿದರೆ ಏನಂತೆ. ಜನಸೇವೆ ಮಾಡುವುದನ್ನು ನಾನು ಬೇಡ ಎಂದು ಹೇಳಲು ಆಗುತ್ತದೆಯೇ” ಎಂದು ಮರು ಪ್ರಶ್ನಿಸಿದರು.

ಉಪಚುನಾವಣೆ ಅಭ್ಯರ್ಥಿಗಳನ್ನು ಯಾವಾಗ ಘೋಷಣೆ ಮಾಡುತ್ತೀರಾ ಎಂದು ಕೇಳಿದಾಗ,
“ಮೊದಲು ಚುನಾವಣಾ ದಿನಾಂಕ ಘೋಷಣೆಯಾಗಲಿ. ಅವರೇ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತಾರೆ” ಎಂದರು.

ಡಿಕೆ ಶಿವಕುಮಾರ್ ಅವರೇ ನನ್ನನ್ನು ಜೈಲಿಗೆ ಹಾಕಿಸಿದ್ದು ಎನ್ನುವ ವಕೀಲ ದೇವರಾಜೇಗೌಡ ಅವರ ಆರೋಪದ ಬಗ್ಗೆ ಕೇಳಿದಾಗ “ನನ್ನನ್ನು ನೆನೆಸಿಕೊಳ್ಳುತ್ತಿರಲಿ. ಬಹಳ ಸಂತೋಷ” ಎಂದಷ್ಟೇ ಹೇಳಿದರು.

ಇಲಾಖಾವಾರು ಅರ್ಜಿಗಳ ವಿಂಗಡಣೆ

ನಿವೇಶನ ಹಂಚಲು ಗಡುವು ಏನಾದರೂ ಇದೆಯೇ ಎಂದು ಕೇಳಿದಾಗ, “ಮೊದಲು ಎಲ್ಲ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುವುದು. ಅರ್ಹರನ್ನು ಗುರುತಿಸಲಾಗುವುದು. ನಂತರ ನಾನೇ ಖುದ್ದಾಗಿ ಬಂದು ಸರ್ಕಾರಿ ಜಮೀನು, ಖಾಸಗಿ ಜಮೀನು ಪರಿಶೀಲನೆ ನಡೆಸಿ ಹಂಚಿಕೆ ಮಾಡಲಾಗುವುದು. ಇಲಾಖಾವಾರು ಅರ್ಜಿಗಳನ್ನು ವಿಂಗಡಣೆ ಮಾಡಿ ಆಯಾಯ ಇಲಾಖೆಯ ಸಚಿವರಿಂದ ಸಭೆ ನಡೆಸಲಾಗುವುದು” ಎಂದು ತಿಳಿಸಿದರು.

“ಚನ್ನಪಟ್ಟಣವನ್ನು ಬದಲಾವಣೆ ಮಾಡಬೇಕು. ಮುನಿಸಿಪಾಲಿಟಿ, ತಾಲ್ಲೂಕು ಕಚೇರಿ, ಆಸ್ಪತ್ರೆ ಸೇರಿದಂತೆ ಎಲ್ಲವನ್ನು ಬದಲಾವಣೆ ಮಾಡಬೇಕು. ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲ, ಬಡವರಿಗೆ, ಬೀಡಿ ಕಾರ್ಮಿಕರಿಗೆ ಮನೆಯಿಲ್ಲ, ಈ ಬದಲಾವಣೆಗಳು ಏಕೆ ಆಗಲಿಲ್ಲವೋ ಗೊತ್ತಿಲ್ಲ. ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವೀಕೃತಿ ಪತ್ರ ಪಡೆದುಕೊಳ್ಳುವ ತಾಳ್ಮೆಯಿತ್ತು. ಚನ್ನಪಟ್ಟಣ ನಗರದ ಮಹಿಳೆಯರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ದಾವಂತದಲ್ಲಿ ಇದ್ದಾರೆ. ಅಂದರೆ ಜನರ ಸಮಸ್ಯೆಗಳನ್ನು ಸರಿಯಾಗಿ ಆಲಿಸಿಲ್ಲ ಎಂದರ್ಥ. ಇದಕ್ಕೆ ನಾನು ಉತ್ತರ ಕೊಡಬೇಕಾಗಿಲ್ಲ, ಮತದಾರರು, ಸ್ಥಳೀಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು” ಎಂದರು.

ಜನಸೇವೆ ಮಾಡಲು ಅವಕಾಶ

“ಜನರ ಸೇವೆ ಮಾಡಲು ನನಗೆ ಅವಕಾಶ. ನಾನು ಅಧಿಕಾರದಲ್ಲಿದ್ದು ಈ ಕಾರ್ಯಕ್ರಮದ ಮೂಲಕ ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳನ್ನು ಬಗೆಹರಿಸುವ ವಿಶೇಷ ಕಾರ್ಯಕ್ರಮ. ಈ ಹಿಂದಿನ ಸರ್ಕಾರ ವೃದ್ಧಾಪ್ಯ ವೇತನ ನೀಡಲು 500 ರೂ ತೆಗೆದುಕೊಳ್ಳುತ್ತಿತ್ತು. ನಾನು ಕನಕಪುರದಲ್ಲಿ 13 ಸಾವಿರ ಜನರಿಗೆ ಪಿಂಚಣಿ ಬರುವಂತೆ ಮಾಡಿದೆ. ಪ್ರತಿ ವಾರ್ಡ್ ವಾರು ಸಭೆ ನಡೆಸಿ ಸುಮಾರು 3 ತಿಂಗಳ ಕಾಲ ನೀವೇಶನಗಳನ್ನು ಹಂಚಿದ್ದೇನೆ” ಎಂದು ತಿಳಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ : ‘ಎಕೆ, ಎಡಿ, ಎಎ’ ಸಮಸ್ಯೆ ಜೀವಂತ ಉಳಿಸಿದ ರಾಜ್ಯ ಸರ್ಕಾರ

'ಸಿ' ಮತ್ತು 'ಡಿ' ಗ್ರೂಪ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇತರೆ ಅಸ್ಪೃಶ್ಯ...

ಧರ್ಮಸ್ಥಳ ಸುತ್ತ ವ್ಯವಸ್ಥಿತ ಷಡ್ಯಂತ್ರ, ಹಿಂದಿನ ಶಕ್ತಿಗಳನ್ನು ಎಸ್‌ಐಟಿ ಪತ್ತೆ ಮಾಡಲಿ: ಸುನಿಲ್‍ ಕುಮಾರ್

ಧರ್ಮಸ್ಥಳಕ್ಕೆ ಸಂಬಂಧಿಸಿ ಎಸ್‍ಐಟಿ ತನಿಖೆಯಲ್ಲಿ ಬಿಜೆಪಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು...

ಪ್ರಧಾನಿ ಪದವೀಧರರಾಗದಿರುವುದು ಅಪರಾಧವಲ್ಲ, ಸುಳ್ಳು ಹೇಳುವುದು ಮಹಾಪರಾಧ: ಪ್ರಕಾಶ್ ರಾಜ್

ಪ್ರಧಾನಿ ಪದವೀಧರರಾಗದಿರುವುದು ಅಪರಾಧವಲ್ಲ, ಆದರೆ ಸುಳ್ಳು ಹೇಳುವುದು, ಆ ಸುಳ್ಳು ಮರೆಮಾಚಲು...

ನಾನು ದಲಿತರನ್ನು ವಿರೋಧಿಸಿಲ್ಲ, ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ: ಶಾಸಕ ಜಿ.ಟಿ.ದೇವೇಗೌಡ

ಸರ್ಕಾರದ ಪಾಲುಗಾರಿಕೆ ಇರುವ ಸಂಘಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ ಹಾಗೂ ಒಬ್ಬ...

Download Eedina App Android / iOS

X