ಸಾವಿರಕ್ಕೂ ಅಧಿಕ ರಾಕೆಟ್‌ ದಾಳಿ: ಪರಸ್ಪರ ಯುದ್ಧ ಘೋಷಿಸಿಕೊಂಡ ಹಮಾಸ್-ಇಸ್ರೇಲ್

Date:

Advertisements

ಇಸ್ರೇಲ್ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್ ಬಂಡುಕೋರರು ಸಾವಿರಕ್ಕೂ ಅಧಿಕ ರಾಕೆಟ್‌ ದಾಳಿ ನಡೆಸಿದ ಬಳಿಕ ಹಮಾಸ್ ಹಾಗೂ ಇಸ್ರೇಲ್ ಪರಸ್ಪರ ಯುದ್ಧ ಘೋಷಿಸಿಕೊಂಡಿದೆ.

ಈ ಯುದ್ಧಕ್ಕೆ ಇಸ್ರೇಲಿ ಸೇನೆಯು ‘ಆಪರೇಷನ್ ಐರನ್ ಸ್ವೋರ್ಡ್ಸ್’ ಎಂದು ಘೋಷಿಸಿಕೊಂಡರೆ, ಹಮಾಸ್‌ನವರು ‘ಅಲ್-ಅಕ್ಸಾ ಫ್ಲಡ್’ ಎಂದು ಘೋಷಿಸಿಕೊಂಡಿದೆ.

ಗಾಝಾ ನಗರದಲ್ಲಿ ರಾಕೆಟ್ ದಾಳಿಯಿಂದ ಉಂಟಾಗುತ್ತಿರುವ ಸ್ಫೋಟದ ಸದ್ದು ಕೇಳಿಬರುತ್ತಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

Advertisements

ಗಾಝಾ ಪಟ್ಟಿಯಿಂದ ಪ್ಯಾಲೆಸ್ತೀನ್‌ನ ಹಮಾಸ್ ಬಂಡುಕೋರರು ರಾಕೆಟ್ ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್ ‘ಯುದ್ಧದ ಸ್ಥಿತಿ’ ಘೋಷಿಸಿದೆ.

ಶನಿವಾರ ಹಬ್ಬದ ರಜೆಯ ಸಂದರ್ಭದಲ್ಲಿ ಮುಂಜಾನೆ 5000ಕ್ಕೂ ಅಧಿಕ ರಾಕೆಟ್‌ಗಳನ್ನು ಇಸ್ರೇಲ್ ಕಡೆ ಬಂಡುಕೋರರು ಉಡಾಯಿಸಿದ್ದಾರೆ. ಇದು ತನ್ನ ಮೊದಲ ದಾಳಿ ಎಂದು ಹಮಾಸ್ ಬಂಡುಕೋರರು ಹೇಳಿಕೊಂಡಿದ್ದಾರೆ. ಇಸ್ರೇಲ್‌ನಾದ್ಯಂತ ಎಚ್ಚರಿಕೆಯ ಸೈರನ್ ಮೊಳಗಿಸಲಾಗಿದೆ.

‘ಆಪರೇಷನ್ ಅಲ್-ಅಕ್ಸಾ ಫ್ಲಡ್’ ಪ್ರಾರಂಭಿಸಿದ್ದೇವೆ. 5,000 ರಾಕೆಟ್‌ಗಳನ್ನು ಹಾರಿಸಿದ್ದೇವೆ ಎಂದು ಹಮಾಸ್ ಸಶಸ್ತ್ರ ವಿಭಾಗ ಹೇಳಿಕೊಂಡಿದೆ. ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್)ನ ಯೋಧರ ಅಪಹರಣ ಹಾಗೂ ದಕ್ಷಿಣ ಇಸ್ರೇಲ್‌ನಲ್ಲಿ ಒತ್ತೆಯಾಳಾಗಿಟ್ಟುಕೊಂಡ ಸನ್ನಿವೇಶಗಳು ಕೂಡ ವರದಿಯಾಗಿವೆ.

ಇಸ್ರೇಲ್‌ನಲ್ಲಿ ಒಳಗಡೆ ನುಗ್ಗಿರುವ ಹಮಾಸ್‌ನ ಬಂಡುಕೋರರು ಪ್ಯಾರಾಗ್ಲೈಡರ್‌ಗಳನ್ನು ಬಳಸಿ ದಾಳಿ ನಡೆಸುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ 2ನೇ ದೊಡ್ಡ ಯುದ್ಧ ಇದಾಗಿದೆ.

ಗಾಝಾ ಪಟ್ಟಿಯಿಂದ ಹಲವಾರು ಮಂದಿ ಇಸ್ರೇಲ್ ಪ್ರದೇಶದೊಳಗೆ ನುಸುಳಿದ್ದಾರೆ. ಗಾಜಾ ಪಟ್ಟಿಯ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ತಮ್ಮ ಮನೆಗಳಲ್ಲಿಯೇ ಉಳಿಯಲು ಸೂಚಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಮಾಹಿತಿ ನೀಡಿವೆ.

ಪವಿತ್ರ ನಗರವಾದ ಜೆರುಸಲೇಮ್ ಮತ್ತು ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿವೆ. ಈ ಹಿಂಸಾಚಾರದ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭದ್ರತಾ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿದ್ದು, ಯುದ್ಧ ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ಈ ನಡುವೆ ಟ್ವೀಟ್ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಾವೀಗ ಯುದ್ಧದದಲ್ಲಿದ್ದೇವೆ ಎಂದು ಬರೆದುಕೊಂಡು, ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ.

ದಾಳಿಯ ಬಗ್ಗೆ ಮಾಹಿತಿ ನೀಡಿರುವ ಇಸ್ರೇಲ್ ರಕ್ಷಣಾ ಪಡೆಗಳು, ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ದಾಳಿಯಿಂದ ಐವರು ಇಸ್ರೇಲಿಗರು ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ಯಾಲೆಸ್ತೀನ್ ಮೇಲೆ ನಾವೂ ಕೂಡ ಪ್ರತೀಕಾರ ತೀರಿಸುತ್ತೇವೆ ಎಂದು ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X