ಮುಡಾ ಪ್ರಕರಣ | ರಾಜ್ಯಪಾಲರು ಇಡೀ ಕಾನೂನು ಪ್ರಕ್ರಿಯೆಯನ್ನೇ ಗಾಳಿಗೆ ತೂರಿದ್ದಾರೆ- ಕಾನೂನುತಜ್ಞ ವೇಣುಗೋಪಾಲ್

Date:

Advertisements

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಇರುವ ಮೂಡಾ ಪ್ರಕರಣದಲ್ಲಿ ರಾಜ್ಯಪಾಲರು ಹೇಗೆಲ್ಲ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬ ಕುರಿತು ಮೈಸೂರಿನ ಕಾನೂನು ತಜ್ಞ ವೇಣುಗೋಪಾಲ್ ಈದಿನ.ಕಾಮ್ ಜೊತೆ ಮಾತನಾಡಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ.

ಜುಲೈ 1ರಿಂದ ಅಪರಾಧ ಪ್ರಕ್ರಿಯೆ ಸಂಹಿತೆ ಬದಲಾಗಿ BNSS ಕಾಯ್ದೆ ಜಾರಿಗೆ ಬಂದಿದೆ. ಈ ಕಾಯ್ದೆಯ ಅನುಸಾರ ನೋಡಿದರೆ, ರಾಜ್ಯಪಾಲರು ಸಿದ್ದರಾಮಯ್ಯರವರ ಪ್ರಕರಣವನ್ನು ತನಿಖೆಗೆ ಅನುಮತಿ ನೀಡಿರುವುದು ಅತ್ಯಂತ ಬಾಲಿಶವಾದದ್ದು. ಒಂದು ವೇಳೆ ಉಚ್ಚ ನ್ಯಾಯಾಲಯ ಅನುಮತಿಯನ್ನು ರದ್ದು ಮಾಡದೇ ಇದ್ದರೂ, ನ್ಯಾಯಾಲಯ ಸರಿ ಇದೆ ಅಂದರೂ, ದೂರುದಾರ ಒಬ್ಬ ಸರ್ಕಾರಿ ನೌಕರನ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು ಅಂದ್ರೆ ಆತನ ಮೇಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಅಂತ ಈ ಕಾನೂನು ಹೇಳುತ್ತದೆ.

ಮುಖ್ಯಮಂತ್ರಿಗಳ ಮೇಲೆ ಕೇಸ್ ಮಾಡಬೇಕು ಅಂದ್ರೆ ಯಾರು ಪ್ರಮಾಣ ವಚನ ಬೋಧಿಸಿದರೊ ಅವರು ಅನುಮತಿ ನೀಡಬೇಕು ಎನ್ನುವುದಿದೆ. ಹಾಗಾಗಿ ಪಿರ್ಯಾದುದಾರ ರಾಜ್ಯಪಾಲರ ಅನುಮತಿ ಕೋರಿರುವುದಷ್ಟೆ. ಆದ್ರೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಅಂದರೆ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಭ್ರಷ್ಟಾಚಾರ ಮಾಡಿ, ಅದಕ್ಕೆ ಪೂರಕವಾಗಿ ಲಂಚ ಪಡೆದಿದ್ದಾರೆ, ಲಾಭಾಂಶ ಪಡೆದಿದ್ದಾರೆ ಅನ್ನುವ ಆರೋಪವಿಲ್ಲ. ದೂರುದಾರರ ಪ್ರಕಾರ ಹಲವಾರು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿ ಸಿದ್ಧರಾಮಯ್ಯನವರ ಪತ್ನಿಯ ಹೆಸರಿನಲ್ಲಿ ಲಾಭ ಮಾಡಿಕೊಟ್ಟಿದ್ದಾರೆ ಅನ್ನುವುದೇ ಈಗಿರುವ ಆರೋಪ.

Advertisements

ಆದ್ರೆ ವಿಚಿತ್ರ ಅಂದ್ರೆ ಆರೋಪ ಮಾತ್ರ ಸಿದ್ದರಾಮಯ್ಯ ಅವರ ಮೇಲೆ ಕೇಳಿಬರುತ್ತಾ ಇದೆ. ಪ್ರಕರಣದ ವಿಚಾರವಾಗಿ
ಅಪರಾಧಿಕ ಒಳಸಂಚು ಅಂದ್ರೆ ಕನಿಷ್ಠ ಇಬ್ಬರು ಅಥವಾ ಅದಕ್ಕೂ ಮೀರಿದಂತೆ ಸೇರಿ ನಡೆದ ಅಪರಾಧ ಅಂತ. ಆದ್ರೆ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಒಬ್ಬರ ಮೇಲೆ ಮಾತ್ರ ಅನುಮತಿ ಕೋರಲಾಗಿದೆ, ಹೊರತು ಇನ್ಯಾರನ್ನೂ ಭಾಗಿ ಮಾಡಿಲ್ಲ.

ದೂರಿನ ಪ್ರಕಾರ ಜಿಲ್ಲಾಧಿಕಾರಿ, ತಹಶೀಲ್ದಾರ್, ಲ್ಯಾಂಡ್ ಅಕ್ವೈರ್ ಆಫೀಸರ್, ಮೂಡಾ ಅಭಿವೃದ್ಧಿ ಅಧಿಕಾರಿ, ಸಬ್ ರಿಜಿಸ್ಟ್ರಾರ್ ಸೇರಿದಂತೆ ಇನ್ನೂ ಹಲವು ಸರ್ಕಾರಿ ಅಧಿಕಾರಿಗಳ ಮೇಲೂ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಆರೋಪವಿದೆ. ಆದರೆ, ಒಬ್ಬರ ಮೇಲೆ ಅನುಮತಿ ಪಡೆದು,ಇನ್ನುಳಿದ ಆರೋಪಿಗಳ ವಿಚಾರಣೆಗೆ ಅನುಮತಿ ಪಡೆಯದೆ ನ್ಯಾಯಾಲಯಕ್ಕೆ ಹೋದರೆ ಕಾನೂನು ಪ್ರಕಾರ ನ್ಯಾಯಾಲಯ ಕೇಳುತ್ತೆ ಇನ್ನುಳಿದ ಆರೋಪಿಗಳ ಮೇಲೆ ಅನುಮತಿ ಯಾಕೆ ಪಡೆದಿಲ್ಲಅಂತ. ಯಾಕೆ ಅಂದ್ರೆ ಅಪರಾಧ ಎಲ್ಲರೂ ಸೇರಿಯೇ ಮಾಡಿರುತ್ತಾರೆ. ಹೀಗಿರುವಾಗ ಏಕ ವ್ಯಕ್ತಿಯ ಮೇಲೆ ಅನುಮತಿ ಪಡೆದಿದ್ದು ಸರಿಯಲ್ಲ. ಎಲ್ಲರ ಮೇಲೂ ಅನುಮತಿ ಪಡೆದು, ಜಿಲ್ಲಾಧಿಕಾರಿಗಳ ಮೇಲೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕಿತ್ತು. ಆದ್ರೆ ಈ ಪ್ರಕರಣದಲ್ಲಿ ಹಾಗಾಗಿಲ್ಲ.

ರಾಜ್ಯಪಾಲರಿಗೆ ದೂರುದಾರರು ದೂರು ಕೊಟ್ಟಾಗ ರಾಜ್ಯಪಾಲರು ಕೇವಲ ಸಿದ್ದರಾಮಯ್ಯ ಅವರ ಮೇಲೆ ಮಾತ್ರ ಯಾಕೆ ಅನುಮತಿ ಕೇಳ್ತಾ ಇದ್ದೀರಾ!? ಇನ್ನುಳಿದ ಸರ್ಕಾರಿ ಅಧಿಕಾರಿಗಳ ಮೇಲೆ ಯಾಕೆ ಅನುಮತಿ ಕೇಳ್ತಾ ಇಲ್ಲ ಎಂಬ ಪ್ರಶ್ನೆ ಮಾಡಬೇಕಿತ್ತು. ಆದ್ರೆ ಏಕಮುಖವಾಗಿ ಅನುಮತಿ ನೀಡಿದ್ದಾರೆ.

ಆದ್ರೆ ಪ್ರಶ್ನೆ ಇರೋದು ಶೋಕಾಸ್ ನೋಟಿಸ್ ತಕ್ಷಣ ಕೊಟ್ಟಿದ್ದಾರೆ. ಒಂದೇ ದಿನದಲ್ಲಿ ಕೊಟ್ಟಿದ್ದಾರೆ ಅನ್ನೋದು. ರಾಜ್ಯಪಾಲರು ಒಂದೇ ದಿನದಲ್ಲಿ ನೋಟಿಸ್‌ ಕೊಡಬಾರದು ಅಂತೇನೂ ಇಲ್ಲ. ಕಾನೂನಿನಲ್ಲಿ 120 ದಿನಗಳ ಕಾಲಮಿತಿ ಇದೆ. ರಾಜ್ಯಪಾಲರು ಯಾವಾಗ ಬೇಕಾದರೂ ಅನುಮತಿ ನೀಡಬಹುದು. ಆದ್ರೆ 120 ದಿನಗಳ ಕಾಲಾವಧಿ ಯಾಕಿದೆ ಅಂದ್ರೆ ರಾಜ್ಯಪಾಲರು ಈ ದೂರು ಸೂಕ್ತವಾದದ್ದು ಅನ್ನುವುದನ್ನೆಲ್ಲ ಪ್ರಾಥಮಿಕ ತನಿಖೆಯಿಂದ ಖಚಿತ ಪಡಿಸಿಕೊಂಡು ನಂತರ ತಮ್ಮ ನಿಲುವಿನಲ್ಲಿ ಅನುಮತಿ ನೀಡುವುದಕ್ಕಾಗಿ.

ಆದ್ರೆ ರಾಜ್ಯಪಾಲರು ಯಾವುದೇ ತನಿಖೆ ಮಾಡದೆ, ಸತ್ಯಾಸತ್ಯತೆ ತಿಳಿಯದೇ ಏಕಾಏಕಿ ಶೋಕಾಸ್ ನೋಟಿಸ್ ಕೊಟ್ಟ ಪರಿಣಾಮ ಇಲ್ಲಿ ಯಾವುದೇ ಭ್ರಷ್ಟಾಚಾರದ ಕೇಸ್ ನಡೆಸಲು ಸಾಧ್ಯವೇ ಇಲ್ಲ. ಅನುಮತಿ ಕೇವಲ ಏಕಮುಖವಾಗಿ ಸಿದ್ದರಾಮಯ್ಯ ಒಬ್ಬರ ಮೇಲೆ ಪಡೆದು ಇನ್ನುಳಿದವರನ್ನು ಕೈಬಿಟ್ಟು ಪ್ರಕರಣ ನಡೆಸುವುದಾದರೂ ಹೇಗೆ? ಲಾಜಿಕಲ್ ಎಂಡ್ ಗೆ ಈ ಪ್ರಕರಣ ತೆಗೆದುಕೊಂಡು ಹೋಗಬೇಕು ಅನ್ನುವ ಉದ್ದೇಶ ಇದ್ದಿದ್ರೆ ದೂರುದಾರರು ಈ ಪ್ರಕರಣದಲ್ಲಿನ ಎಲ್ಲರ ಮೇಲೂ ಅನುಮತಿ ಪಡೆದು ನ್ಯಾಯಾಲಯಕ್ಕೆ ಹೋಗಬೇಕಿತ್ತು.

ಆದ್ರೆ ಅಧಿಕಾರಿಗಳ ಮೇಲಿನ ತನಿಖೆಗೆ ಅರ್ಜಿ ಕೂಡ ಸಲ್ಲಿಸದ ದೂರುದಾರರು, ಇನ್ನುಳಿದ ಅಧಿಕಾರಿಗಳ ಮೇಲೂ ತನಿಖೆ ಆಗಬೇಕು ಅಂತ ಹೇಳಿಯೂ ಇಲ್ಲ. ರಾಜ್ಯಪಾಲರು ಅದನ್ನು ಪ್ರಶ್ನೆ ಮಾಡಿಲ್ಲ. ಒಬ್ಬರ ಮೇಲೆ ಕ್ರಿಮಿನಲ್ ಕೇಸ್ ಮಾಡಲು ಹೇಗೆ ಸಾಧ್ಯ?

ಈಗ ಪ್ರಕರಣ 17A ನಲ್ಲಿ ಕೊಟ್ಟಿರುವ ಅನುಮತಿ ಇದನ್ನು ನ್ಯಾಯಾಲಯದಲ್ಲಿ ಪಿರ್ಯಾದುದಾರ ಕೊಡಲು ಬರುವುದಿಲ್ಲ. 17A ನಲ್ಲಿ ಪೊಲೀಸ್ ಅಧಿಕಾರಿಗೆ ಮಾತ್ರ ತನಿಖೆ ಮಾಡುವ ಅಧಿಕಾರವಿರುವುದು. ಆ ಅಧಿಕಾರಿ ಸೂಕ್ತ ಮೇಲಾಧಿಕಾರಿಗಳ ಅನುಮತಿ ಪಡೆಯಬೇಕು ಅನ್ನುವುದು ಇದೆ.

ಆದ್ರೆ ಇಲ್ಲಿ ಅನುಮತಿ ಕೊಟ್ಟಿರೋದು ದೂರುದಾರರಿಗೆ. ಮತ್ತೆ ಆ ದೂರುದಾರ ಲೋಕಾಯುಕ್ತ ಪೊಲೀಸರಿಗೆ ಹೋಗಿ ಕೊಡಬೇಕು. ರಾಜ್ಯಪಾಲರು ಲೋಕಾಯುಕ್ತಕ್ಕೆ ನೇರವಾಗಿ ಕೊಡಬಹುದಿತ್ತು. ಜತೆಗೆ ಒಬ್ಬರ ಮೇಲೆ ಕ್ರಿಮಿನಲ್ ಕೇಸ್ ನಡೆಸಲು ಹೇಗೆ ಆಗುತ್ತೆ? ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಹೇಗೆ ಸಾಧ್ಯ?.

ಹೊಸದಾಗಿ ಬಂದಿರುವ BNSS ಕಾಯ್ದೆ ಸೆಕ್ಷನ್ 223ರ ಪ್ರಕಾರ ಖಾಸಗಿ ವ್ಯಕ್ತಿ ಸರ್ಕಾರಿ ನೌಕರ, ಮುಖ್ಯಮಂತ್ರಿ ಯಾರೇ ಆಗಲಿ ಅವರ ವಿರುದ್ಧ ಖಾಸಗಿ ದೂರು ಸಲ್ಲಿಸಬೇಕು ಅಂದ್ರೆ ಕಾನೂನು ಪ್ರಕಾರ ಯಾವುದೇ ನ್ಯಾಯಾಲಯ ಆರೋಪಿಯ ಮಾತನ್ನು ಅಲಿಸದೇ ಕ್ರಿಮಿನಲ್ ಪ್ರಕರಣ ನೋಂದಾಯಿಸಲು ಬರುವುದಿಲ್ಲ.

ಖಾಸಗಿ ವ್ಯಕ್ತಿ ಸರ್ಕಾರಿ ಅಧಿಕಾರಿ, ಜನಪ್ರತಿನಿಧಿ ಮೇಲೆ ಅನುಮತಿ ಕೋರಬೇಕು ಅಂದ್ರೆ ಮೂರು ಹಂತದ ಕಂಡೀಷನ್ ಪೂರ್ಣಗೊಳಿಸಲೇಬೇಕು. ಮೊದಲನೇ ಕಂಡಿಷನ್ ಕ್ರಿಮಿನಲ್ ಮೊಕದ್ದಮೆ ಮೊದಲೇ ದಾಖಲಿಸಿರಬೇಕು. ಎರಡನೆಯದು ನ್ಯಾಯಾಲಯ ಆರೋಪಿಯನ್ನು ವಿಚಾರಿಸಿರಬೇಕು ಹಾಗೂ ಮೇಲಾಧಿಕಾರಿಗಳ ವರದಿ ಪಡೆದಿರಬೇಕು. ಮೂರನೆಯದು ಇದೆಲ್ಲವನ್ನೂ ಪಡೆದ ನಂತರ ನ್ಯಾಯಾಲಯ ರದ್ದು ಮಾಡಿರಬಾರದು. ಪೆಂಡಿಂಗ್ ಇಟ್ಟಿರಬೇಕು. ಆಗ ನ್ಯಾಯಾಲಯ ಪಿರ್ಯಾದುದಾರನಿಗೆ ಮುಖ್ಯಮಂತ್ರಿಗಳ ಮೇಲೆ, ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಅನುಮತಿ ತೆಗೆದುಕೊಂಡು ಬನ್ನಿ ಅನ್ನಬೇಕು ಆಗ ದೂರುದಾರ ರಾಜ್ಯಪಾಲರ ಬಳಿ ಹೋಗಿ ಅನುಮತಿ ಪಡೆಯಲು ಅರ್ಜಿ ಹಾಕಬೇಕು ಇದು ಕಾನೂನು ರೀತ್ಯಾ ನಡೆಯುವ ಪ್ರಕ್ರಿಯೆ.

ದೂರುದಾರ ಇದನ್ನೆಲ್ಲ ಮಾಡದೇ, ಪ್ರಕರಣ ದಾಖಲು ಮಾಡದೇ, ನ್ಯಾಯಾಲಯ ಆದೇಶ ಮಾಡದೇ ರಾಜ್ಯಪಾಲರ ಬಳಿ ಹೋಗಿ ಅನುಮತಿ ಕೋರಿದ್ದು. ರಾಜ್ಯಪಾಲರು ಪರಾಮರ್ಶಿಸಿ ಮೊಕದ್ದಮೆ ಹೂಡಿದ ಪ್ರತಿ, ನ್ಯಾಯಾಲಯದ ಆದೇಶ ಪ್ರತಿ ಇದನ್ನೆಲ್ಲ ಪಡೆದು ನಂತರ ವಿವೇಚನೆ ಚಲಾಯಿಸಬೇಕಿತ್ತು. ಆದ್ರೆ ರಾಜ್ಯಪಾಲರು ಇದನ್ನೆಲ್ಲ ಮಾಡದೇ ಖಾಸಗಿ ದೂರಿಗೆ ಏಕ ವ್ಯಕ್ತಿಯ ಮೇಲೆ ಅನುಮತಿ ನೀಡಿರುವುದು ಕಾನೂನು ಪ್ರಕ್ರಿಯೆ ಅಲ್ಲವೇ ಅಲ್ಲ. ರಾಜ್ಯಪಾಲರ ಕಚೇರಿ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಸಾಬೀತಾದಂತೆ.

ದೂರು ದಾಖಲು ಆಗುವುದಕ್ಕಿಂತ ಮುಂಚೆ ಅನುಮತಿ ಪಡೆದಿದ್ದರಿಂದ ಮ್ಯಾಜಿಸ್ಟ್ರೇಟ್ ಮುಂದೆ ವಿಶೇಷ ನ್ಯಾಯಾಲಯದಲ್ಲಿ ಸಿದ್ದರಾಮಯ್ಯನವರ ಮೇಲಿನ ಪ್ರಕರಣ ಪೆಂಡಿಂಗ್ ಇದೆ. ರಾಜ್ಯಪಾಲರ ತರಾತುರಿ ತೀರ್ಮಾನ ನ್ಯಾಯಾಲಯದ ಇಡೀ ಪ್ರಕ್ರಿಯೆಯನ್ನೇ ಗಾಳಿಗೆ ತೂರಿ ನೀಡಿದ ಅನುಮತಿ ಇದಾಗಿದೆ. ಸೆಕ್ಷನ್ 223ರ ಅನ್ವಯ ನ್ಯಾಯಾಲಯದ ನಡಾವಳಿ ಪ್ರಕಾರ ರಾಜ್ಯಪಾಲರು ಅನುಮತಿ ನೀಡಿಲ್ಲ, ಯಾರದ್ದೋ ಕೈಗೊಂಬೆಯಾಗಿ ಸಿದ್ಧರಾಮಯ್ಯನವರ ಮೇಲೆ ತನಿಖೆಗೆ ಅನುಮತಿ ನೀಡಿದ್ದಾರೆ. ಇದು ಕಾನೂನು ರೀತಿ ನಡೆದಿಲ್ಲ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

Download Eedina App Android / iOS

X