ಶರಣರ ನಾಡಾಗಿದ್ದ ಕಲಬುರಗಿ ಮರಣದ ನಾಡನ್ನಾಗಿಸುತ್ತಿದೆ ಕಾಂಗ್ರೆಸ್ ಸರ್ಕಾರ. ಅದರಲ್ಲೂ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದರಲ್ಲಿಯೂ ಟ್ರೋಲ್ ಮಿನಿಸ್ಟರ್ ಖ್ಯಾತಿಯ ಪ್ರಿಯಾಂಕ್ ಖರ್ಗೆ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.
ಆಳಂದ ತಾಲೂಕಿನಲ್ಲಿ ಹಾಡುಹಗಲೆ ಬಿಜೆಪಿ ಮುಖಂಡ ಮಹಾಂತಪ್ಪ ಆಲೂರೆಯವರನ್ನು ಕೊಚ್ಚಿ ಕೊಲೆ ಮಾಡಿದರೂ ಇದುವರೆಗೂ ಆರೋಪಿಗಳ ಬಂಧನವಾಗಿಲ್ಲ ಎಂದು ಕಿಡಿಕಾರಿ ಎಕ್ಸ್ ತಾಣದಲ್ಲಿ ಬಿಜೆಪಿ ಪೋಸ್ಟ್ ಮಾಡಿದೆ.
ಸಚಿವರ ಪುಂಡ ಪೋಕರಿ ಪಟಾಲಂ ಹೇಳಿದ್ದೇ ಕಾನೂನು, ಮಾಡಿದ್ದೇ ನ್ಯಾಯ ಎನ್ನುವಷ್ಟರ ಮಟ್ಟಿಗೆ ಆಡಳಿತ ಕುಸಿದಿದೆ. ಸಿಎಂ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕಲಬುರಗಿಯಲ್ಲಿ ಆಗುತ್ತಿರುವ ಕೊಲೆ, ಸುಲಿಗೆಗಳಿಗೆ ಲೆಕ್ಕವೇ ಇಲ್ಲ. ಮೊದಲು ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿ, ಇಲ್ಲವಾದಲ್ಲಿ ನಿವೃತ್ತಿ ಘೋಷಿಸಿ ಮನೆಗೆ ನಡೆಯಿರಿ” ಎಂದು ಕುಟುಕಿದೆ.
ಶರಣರ ನಾಡಾಗಿದ್ದ ಕಲ್ಬುರ್ಗಿಯನ್ನು ಮರಣದ ನಾಡನ್ನಾಗಿಸುತ್ತಿದೆ @INCKarnataka ಸರ್ಕಾರ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದರಲ್ಲಿಯೂ #TrollMinister @PriyankKharge ಅವರು ಜಿಲ್ಲೆಯ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಚಿವರ ಪುಂಡ ಪೋಕರಿ ಪಟಾಲಂ ಹೇಳಿದ್ದೇ ಕಾನೂನು, ಮಾಡಿದ್ದೇ… https://t.co/gHACazmdxg
— BJP Karnataka (@BJP4Karnataka) March 1, 2024
