ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಮೇಯರ್ ಚುನಾವಣೆಯಲ್ಲಿ ನಡೆದಿದ್ದ ಅಕ್ರಮದ ಬಗ್ಗೆ ಗರಂ ಆಗಿರುವ ಸುಪ್ರೀಂ ಕೋರ್ಟ್, “ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಬ್ಯಾಲೆಟ್ ಪೇಪರ್‌ಗಳನ್ನು ವಿರೂಪಗೊಳಿಸಿದ ಚುನಾವಣಾ ಅಧಿಕಾರಿ ಶಿಕ್ಷೆಗೆ ಅರ್ಹರು” ಎಂದು ಹೇಳಿದೆ.
ಚುನಾವಣಾ ಅಕ್ರಮ ಸಂಬಂಧ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಮೌಖಿಕವಾಗಿ ಆಕ್ರೋಶ ಹೊರಹಾಕಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು ಕೂಡ ಇದ್ದರು.
ಕಳೆದ ಜ.30ರಂದು ಚಂಡೀಗಢ ಮೇಯರ್ ಚುನಾವಣೆ ನಡೆದಿತ್ತು. ಒಟ್ಟು ಚಲಾವಣೆಯಾದ 36 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಸೊಂಕಾರ್ 16 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಬೆಂಬಲಿತ ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರು 12 ಮತಗಳನ್ನು ಪಡೆದಿದ್ದರು. ಸಂಸದೆ ಹಾಗೂ ವಿಶೇಷ ಸದಸ್ಯೆ ಕಿರಣ್ ಖೇರ್ ಅವರೂ ಮತ ಚಲಾಯಿಸಿದ್ದರು. ಆದರೆ ಫಲಿತಾಂಶ ನಾಟಕೀಯ ತಿರುವು ಪಡೆದುಕೊಂಡಿತ್ತು. ಚುನಾವಣಾಧಿಕಾರಿ ಅನಿಲ್ ಮಾಸಿಹ್ ಎಂಬುವವರು ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿ, ಬಿಜೆಪಿ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಿದ್ದರು.
🚨ये वीडियो देखिए🚨
मोदी जी देश भर में कैसे बेईमानी करके चुनाव जीतते हैं।#ChandigarhMayorElection pic.twitter.com/OYubKYT1jQ
— AAP (@AamAadmiParty) February 1, 2024
ಬಿಜೆಪಿ ಕೇವಲ 14 ಸದಸ್ಯರನ್ನು ಹೊಂದಿದ್ದು, ಆಮ್ ಆದ್ಮಿ ಪಕ್ಷ 13 ಕೌನ್ಸಿಲರ್‌ಗಳು ಹಾಗೂ ಕಾಂಗ್ರೆಸ್ 7 ಕೌನ್ಸಿಲರ್‌ಗಳನ್ನು ಹೊಂದಿದ್ದವು. ಈ ಎಲ್ಲ ಬೆಳವಣಿಗೆಯು ಕ್ಯಾಮರಾದಲ್ಲಿ ಸೆರೆಯಾಗಿತ್ತು ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಎಎಪಿ ಮತ್ತು ಬಿಜೆಪಿ ನಡುವೆ ರಾಜಕೀಯ ಸಮರಕ್ಕೂ ವೇದಿಕೆಯೊದಗಿಸಿತ್ತು.
ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯನ್ನು ಚಂಡೀಗಢ ಮೇಯರ್ ಆಗಿ ಚುನಾಯಿತರಾಗಿ ಘೋಷಿಸಿದ ಚುನಾವಣಾ ಫಲಿತಾಂಶಕ್ಕೆ ತಕ್ಷಣದ ತಡೆಯಾಜ್ಞೆ ನೀಡಲು ಸೋತ ಆಪ್ ಅಭ್ಯರ್ಥಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ತಡೆ ನೀಡಲು ನಿರಾಕರಿಸಿತ್ತು. ಇದರ ವಿರುದ್ಧ ಆಮ್ ಆದ್ಮಿ ಪಕ್ಷದ (ಎಎಪಿ) ಕೌನ್ಸಿಲರ್ ಕುಲದೀಪ್ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು ವಿಚಾರಣೆ ನಡೆಸುತ್ತಿದೆ.
Chandigarh Mayor Election | ‘Obvious That Presiding Officer Defaced Ballot Papers, This Is Murder Of Democracy’ : Supreme Court
Read more: https://t.co/p8EJGPCze0#SupremeCourtofIndia #ChandigarhMayorElection #SupremeCourt pic.twitter.com/3kaXVD66Rd— Live Law (@LiveLawIndia) February 5, 2024
ಇಂದು ಅರ್ಜಿಯ ವಿಚಾರಣೆ ವೇಳೆ ಚುನಾವಣಾಧಿಕಾರಿಯ ವಿರುದ್ಧ ಆಕ್ರೋಶ ಹೊರಹಾಕಿರುವ ಸುಪ್ರೀಂ ಕೋರ್ಟ್, “ಚುನಾವಣಾಧಿಕಾರಿ ಮತ ಪತ್ರಗಳನ್ನು ವಿರೂಪಗೊಳಿಸಿರುವುದು ಸ್ಪಷ್ಟವಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇದು ಪ್ರಜಾಪ್ರಭುತ್ವದ ಅಣಕ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ. ನಮಗಿದು ಗಾಬರಿ ಹುಟ್ಟಿಸುವಂತಿದೆ. ಚುನಾವಣಾಧಿಕಾರಿಯು ಈ ರೀತಿಯಾಗಿ ವರ್ತನೆ ಮಾಡಬಹುದೇ? ಸುಪ್ರೀಂ ಕೋರ್ಟ್ ಎಲ್ಲವನ್ನೂ ಗಮನಿಸುತ್ತಿದೆ ಎಂಬುದನ್ನು ಚುನಾವಣಾಧಿಕಾರಿಗೆ ತಿಳಿಸಿ” ಎಂದು ಟೀಕಿಸುತ್ತಾ, ಸಿಜೆಐ ಚಂದ್ರಚೂಡ್ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದನ್ನು ಓದಿದ್ದೀರಾ? ಜಾರ್ಖಂಡ್ | ವಿಶ್ವಾಸಮತ ಯಾಚನೆಯಲ್ಲಿ ಗೆದ್ದ ನೂತನ ಸಿಎಂ ಚಂಪೈ ಸೊರೇನ್
ಆ ಬಳಿಕ ಸುಪ್ರೀಂ ಕೋರ್ಟ್, ಚುನಾವಣಾಧಿಕಾರಿ ಅನಿಲ್ ಮಾಸಿಹ್‌ಗೆ ನೋಟಿಸ್ ನೀಡಬೇಕು ಹಾಗೂ ಮೇಯರ್ ಚುನಾವಣೆಯ ಸಂಪೂರ್ಣ ದಾಖಲೆಗಳು, ಮತಪತ್ರಗಳು ಮತ್ತು ವೀಡಿಯೋ ದಾಖಲೆಗಳನ್ನು ವಶಪಡಿಸಕೊಳ್ಳುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿತು. ಅಲ್ಲದೇ, ನಗರಸಭೆಯು ಸದ್ಯಕ್ಕೆ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
#BREAKING #SupremeCourt directs the Returning Officer of #Chandigarh Mayor Election to remain present before the Court on February 19 to explain his conduct as it appeared in the video.#SupremeCourtofIndia pic.twitter.com/XUEkeMDbJ6
— Live Law (@LiveLawIndia) February 5, 2024
ಫೆ.19ರಂದು ಹಾಜರಾಗಲು ಚುನಾವಣಾಧಿಕಾರಿಗೆ ನೋಟಿಸ್
ಇದೇ ವೇಳೆ ಮೇಯರ್ ಚುನಾವಣೆಯ ಚುನಾವಣಾಧಿಕಾರಿ ಅನಿಲ್ ಮಾಸೀಹ್ ಫೆಬ್ರವರಿ 19ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕು. ವಿಡಿಯೋದಲ್ಲಿರುವ ತಮ್ಮ ನಡವಳಿಕೆಯ ಬಗ್ಗೆ ವಿವರಣೆ ನೀಡುವಂತೆ ನಿರ್ದೇಶನ ನೀಡಿದೆ.
I salute the Judiciary and Judges for Election Observations during Chandigarh Mayor Election.