ಸನಾತನ ಧರ್ಮ ಇಸ್ಲಾಂಗಿಂತಲೂ ಮೊದಲೇ ಇತ್ತು. ಮುಸ್ಲಿಮರು ರಾಮನ ವಂಶಸ್ಥರು. ರಾಮನನ್ನು ಅನುಸರಿಸದ ಮುಸ್ಲಿಮರನ್ನು ಮುಸ್ಲಿಮರು ಎನ್ನಲು ಸಾಧ್ಯವಿಲ್ಲ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಹೇಳಿದ್ದಾರೆ. ಅವರ ಹೇಳಿಕೆ ಹೊಸ ವಿವಾದ ಸೃಷ್ಟಿಸಿದೆ.
ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಸಿದ್ದಿಕಿ, “ಸನಾತನ ಧರ್ಮವು ನಾಗರಿಕತೆಯ ಅಡಿಪಾಯ. ಎಲ್ಲ ಮುಸ್ಲಿಮರು ಶ್ರೀರಾಮನ ವಂಶಸ್ಥರು” ಎಂದಿದ್ದಾರೆ.
“ರಾಮ ಮತ್ತು ಕೃಷ್ಣರು ಇಸ್ಲಾಮಿಕ್ ಆಧ್ಯಾತ್ಮಿಕ ಪರಂಪರೆಯಲ್ಲಿ ಸ್ಥಾನ ಹೊಂದಿದ್ದರು ಎನ್ನಲಾಗಿದೆ. ಇಸ್ಲಾಂ ಧರ್ಮವು ಓರ್ವ ಪ್ರವಾದಿಯನ್ನು ಮಾತ್ರವೇ ಹೊಂದಿಲ್ಲ. ಅನೇಕ ಪ್ರವಾದಿಗಳಿದ್ದಾರೆ. ಅವರಲ್ಲಿ, ರಾಮ ಮತ್ತು ಕೃಷ್ಣ ಕೂಡ ಇದ್ದರಬಹುದು” ಎಂದು ಹೇಳಿದ್ದಾರೆ.
“ಕುರ್‌ಆನ್‌ನಲ್ಲಿ 25 ಪ್ರವಾದಿಗಳನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, ಹದೀಸ್ ಮತ್ತು ಸಂಪ್ರದಾಯಗಳು ಹೇಳುವಂತೆ ಪ್ರಪಂಚದಾದ್ಯಂತ 1,24,000 ಪ್ರವಾದಿಗಳನ್ನು ಕಳುಹಿಸಲಾಗಿದೆ. ಅವರಲ್ಲಿ ರಾಮ ಮತ್ತು ಕೃಷ್ಣ ಇರಲಿಲ್ಲ ಎನ್ನಲಾಗದು. ಅವರು ದೇವರ ಸಂದೇಶವಾಹಕರಾಗಿರಬಹುದು” ಎಂದು ಹೇಳಿದ್ದಾರೆ.