ಪ್ರಸ್ತುತ ಜಗತ್ತಿನಲ್ಲಿ ಮುಸ್ಲಿಮನಾಗಿರುವುದು ಒಬ್ಬಂಟಿ ಭಾವ ಮೂಡಿಸಿತ್ತಿದೆ. ಮುಸ್ಲಿಮರನ್ನು ಉಗ್ರರೆಂದು ಬಿಂಬಿಸಲಾಗುತ್ತಿದೆ. ಇದು, ನನಗೆ ಏಕಾಂಗಿ ಭಾವನೆಯನ್ನು ಹುಟ್ಟುಹಾಕಿದೆ ಎಂದು ಬಾಲಿವುಡ್ ಖ್ಯಾತ ಗಾಯಕ ಲಕ್ಕಿ ಅಲಿ ಹೇಳಿದ್ದಾರೆ.
ತಮ್ಮ ಮನದಾಳದ ಮಾತನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅಲಿ, ತಮ್ಮ ಸುತ್ತಲಿನ ಸ್ನೇಹಿತರೂ ಕೂಡ ತಮ್ಮಂದಿ ದೂರವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಪ್ರಸ್ತುತ ಜಗತ್ತಿನಲ್ಲಿ ಮುಸ್ಲಿಮನಾಗಿರುವುದು ಒಬ್ಬಂಟಿ ಭಾವ ಮೂಡಿಸಿದೆ. ಪ್ರವಾದಿ ಅವರ ಮಾರ್ಗವನ್ನು ಅನುಸರಿಸುವುದು ಒಂಟಿತನಕ್ಕೆ ದೂಡುತ್ತಿದೆ. ನಿಮ್ಮ ಸ್ನೇಹಿತರು ಕೂಡ ನಿಮ್ಮನ್ನು ಬಿಟ್ಟು ಹೋಗುತ್ತಾರೆ. ಈ ಜಗತ್ತು ನಿಮ್ಮನ್ನು (ಮುಸ್ಲಿಮರು) ಉಗ್ರರೆಂದು ಕರೆಯುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Its a lonely thing to be a Muslim in the World today
its a lonely thingto follow the sunnah of the Prophet , your friends will leave you , the world will call you a terrorist……..— Lucky Ali (@luckyali) July 12, 2024
ಮೂಲತಃ ಬೆಂಗಳೂರಿನವರಾದ ಅಲಿ ಅವರು ಬಾಲಿವುಡ್ ಗಾಯಕರಾಗಿ ಸಿನಿಪ್ರಿಯರ ಮನಗೆದ್ದಿದ್ದಾರೆ. ಅದಾಗ್ಯೂ, ಮುಸ್ಲಿಂ ವಿರೋಧಿ ಕೋಮುವಾದಿ ಮನಸ್ಥಿತಿಯನ್ನು ದೇಶದಲ್ಲಿ ಹೇರಳವಾಗಿ ಹರಡುತ್ತಿರುವ ಬಗ್ಗೆ ಆಂತಕಗೊಂಡಿದ್ದಾರೆ. ಅಸಮಾಧಾನ ವ್ಯಕ್ತಪಡಿಸಿದ್ದಾರೆ.