ದೇಶದ ಮುಸ್ಲಿಮರು ಬಾಬರ್, ಘಜನಿ, ಘೋರಿ ಮಾನಸಿಕತೆಯಿಂದ ಹೊರ ಬರಬೇಕು. ಅವರ ಮಾನಸಿಕತೆ ಬಹಳ ಅಪಾಯಕಾರಿ ಎಂದು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಘಜನಿ, ಕಿಲ್ಜಿ, ಘೋರಿ, ಔರಂಗಜೇಬ್, ಮೊಘಲರು ಹಾಗೂ ಟಿಪ್ಪು ಕಾಲದಲ್ಲಿ ಸುಮಾರು 42,000 ದೇವಸ್ಥಾನಗಳನ್ನು ಧ್ವಂಸ ಮಾಡಲಾಗಿತ್ತು. ಆ ದಾಳಿಕೋರರೊಂದಿಗೆ ಇಲ್ಲಿನ ಮುಸ್ಲೀಮರು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.
“ಭಾರತೀಯ ಸನಾತನ ಪರಂಪರೆಯ ಮೇಲೆ ವಿಶ್ವಾಸವಿಟ್ಟು ಇಲ್ಲಿನ ಮುಸ್ಲಿಮರು ಭಾರತದಲ್ಲಿ ಉಳಿದುಕೊಂಡಿದ್ದಾರೆ. ಅವರಿಗೆ ಶಿಶುನಾಳ ಷರೀಫ್, ಅಬ್ದುಲ್ ಕಲಾಂ ಆದರ್ಶವಾಗಬೇಕು” ಎಂದು ಹೇಳಿದ್ದಾರೆ.
ಅನಂತ್ ಕುಮಾರ್ ಹೆಗಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಹೆಗಡೆ ಅವರ ಹೇಳಿಕೆಯನ್ನು ನಾವು ಸಮರ್ಥಿಸುವುದಿಲ್ಲ” ಎಂದು ಹೇಳಿದ್ದಾರೆ.
Nice News