ಮುಸ್ಲಿಮರು ಹಿಂದೂಗಳಿಂದ ಶಿಸ್ತು ಕಲಿಯಬೇಕು: ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ

Date:

Advertisements

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೀದಿಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಿರುವುದನ್ನು ಸಮರ್ಥಿಸಿಕೊಂಡಿದ್ದು, ರಸ್ತೆಗಳು ಸಾರ್ವಜನಿಕ ಸಂಚಾರಕ್ಕಾಗಿ ಇರುವುದು ಎಂದಿದ್ದಾರೆ. ಹಾಗೆಯೇ ಮುಸ್ಲಿಮರು ಹಿಂದೂಗಳಿಂದ ಶಿಸ್ತು ಕಲಿಯಬೇಕು ಎಂದು ಹೇಳಿಕೊಂಡಿದ್ದಾರೆ.

ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, ಹಿಂದೂಗಳಿಂದ ಶಿಸ್ತು ಯಾಕೆ ಕಲಿಯಬೇಕು ಎಂಬುದಕ್ಕೆ ಯುಪಿ ಸಿಎಂ ಮಹಾ ಕುಂಭಮೇಳದ ಉದಾಹರಣೆ ನೀಡಿದ್ದಾರೆ. ಯಾವುದೇ ಅಪರಾಧ ಅಥವಾ ಅವ್ಯವಸ್ಥೆ ಇಲ್ಲದೆ ಕುಭಮೇಳ ನಡೆದಿದೆ. ಜನರು ಧಾರ್ಮಿಕ ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಮಹಾ ಕುಂಭಮೇಳ | ವಿವಾದಕ್ಕೆ ತಿರುಗಿದ ಖರ್ಗೆ ಹೇಳಿಕೆ

Advertisements

ಈ ನಡುವೆ ಉತ್ತರ ಪ್ರದೇಶದಲ್ಲಿ ಅವ್ಯವಸ್ಥೆಯಿಂದಾಗಿ ಕಾಲ್ತುಳಿತ ಉಂಟಾಗಿರುವುದು, ಸಂಚಾರದಟ್ಟಣೆ ಉಂಟಾಗಿರುವುದು, ಮಹಿಳೆಯರು ಬಟ್ಟೆ ಬದಲಾಯಿಸುವ ವಿಡಿಯೋ ಮಾರಾಟವಾಗಿರುವ ವಿಚಾರವನ್ನು ನೆಟ್ಟಿಗರು ಕೆದಕಿದ್ದಾರೆ. ಶಿಸ್ತು ಎಂಬುದು ವೈಯಕ್ತಿಕ, ಯಾವುದೇ ಧರ್ಮಕ್ಕೆ ಸಂಬಂಧಿಸಿದಲ್ಲ ಎಂದಿದ್ದಾರೆ.

ವಕ್ಫ್ (ತಿದ್ದುಪಡಿ) ಮಸೂದೆಯ ವಿರೋಧಿಗಳನ್ನು ಟೀಕಿಸಿದರು. ವಕ್ಫ್ ಮಂಡಳಿಗಳು ಭ್ರಷ್ಟಾಚಾರ ಮತ್ತು ಆಸ್ತಿ ದರೋಡೆಯ ಕೇಂದ್ರಗಳಾಗಿವೆ ಎಂದು ಆರೋಪಿಸಿದರು. ಅಪಾರ ಆಸ್ತಿಗಳನ್ನು ಹೊಂದಿದ್ದರೂ ಮುಸ್ಲಿಮರ ಕಲ್ಯಾಣಕ್ಕೆ ವಕ್ಫ್ ಮಂಡಳಿಯ ಕೊಡುಗೆಯನ್ನು ಪ್ರಶ್ನಿಸಿದರು.

ಹಾಗೆಯೇ ಮುಸ್ಲಿಮರ ಮೇಲೆ ಯಾವುದೇ ತಾರಯಮ್ಯ ಧೋರಣೆ ಇಲ್ಲವೆಂದು ಕೂಡಾ ಈ ಸಂದರ್ಭದಲ್ಲೇ ಹೇಳಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರು ಶೇ. 20ರಷ್ಟಿದ್ದರೂ, ರಾಜ್ಯ ಸರ್ಕಾರ ಯೋಜನೆಗಳ ಶೇಕಡ 35-40ರಷ್ಟು ಲಾಭವನ್ನು ಅವರೇ ಪಡೆಯುತ್ತಿರುವುದು ಎಂದಿದ್ದಾರೆ.

ಇದನ್ನು ಓದಿದ್ದೀರಾ? ಅಯೋಧ್ಯೆಯ ಬೀದಿಗಳಲ್ಲಿ ಇನ್ಮುಂದೆ ಕರ್ಫ್ಯೂ, ಗುಂಡಿನ ಸದ್ದು ಕೇಳುವುದಿಲ್ಲ: ಯೋಗಿ ಆದಿತ್ಯನಾಥ್

ಬುಲ್ಡೋಜರ್ ಮಾದರಿಯನ್ನು ಸಮರ್ಥಿಸಿಕೊಂಡ ಆದಿತ್ಯನಾಥ್ ಅಭಿವೃದ್ಧಿ ಮತ್ತು ಕಾನೂನು ಜಾರಿ ಎರಡಕ್ಕೂ ಬುಲ್ಡೋಜರ್ ಒಂದು ಸಾಧನವಾಗಿದೆ. ಅದನ್ನು ಉತ್ತಮ ರೀತಿಯಲ್ಲಿ ಹೇಗೆ ಬಳಸಬಹುದು ಎಂಬುದನ್ನು ನಾವು ತೋರಿಸಿದ್ದೇವೆ ಎಂದು ನನಗನಿಸುತ್ತದೆ” ಎಂದು ಹೇಳಿದ್ದಾರೆ. ಬುಲ್ಡೋಜರ್ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ನ ಯಾವುದೇ ಪ್ರತಿಕೂಲ ಅವಲೋಕನವು ಉತ್ತರ ಪ್ರದೇಶಕ್ಕೆ ಸಂಬಂಧಿಸಿದಲ್ಲ. ವಾಸ್ತವವಾಗಿ, ಸುಪ್ರೀಂ ಕೋರ್ಟ್ ರಾಜ್ಯವು ಅಳವಡಿಸಿಕೊಂಡ ಮಾರ್ಗಸೂಚಿಗಳನ್ನು ಮೆಚ್ಚಿದೆ ಎಂದು ಅವರು ಹೇಳಿಕೊಂಡರು.

ಆರೋಪಿಗಳಾಗಲಿ, ತಪ್ಪಿತಸ್ಥರಾಗಿರಲಿ ಯಾರದ್ದೇ ಮನೆಗಳು, ಆಸ್ತಿಗಳನ್ನು ನೆಲಸಮ ಮಾಡಬಾರದು. ಬುಲ್ಡೋಜರ್ ಕಾರ್ಯಾಚರಣೆ ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು, ‘ಬುಲ್ಡೋಜರ್ ಕ್ರಮ’ವನ್ನು ನಿಷೇಧಿಸಿ ನವೆಂಬರ್‌ಗಳು ಮಹತ್ವದ ತೀರ್ಪು ನೀಡಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದೆ.

‘ಬುಲ್ಡೋಜರ್ ನ್ಯಾಯ’ ಎಂಬ ಹೆಸರಿನಲ್ಲಿ ಉತ್ತರ ಪ್ರದೇಶ ಸರ್ಕಾರವು ಅಪರಾಧಿಗಳು, ಆರೋಪಿಗಳ ಮನೆ-ಆಸ್ತಿಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಆರಂಭಿಸಿತ್ತು. ಬಳಿಕ, ಇದು ದೇಶಾದ್ಯಂತ ಪಸರಿಸಿತ್ತು. ಬುಲ್ಡೋಜರ್ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೂ ಸಲ್ಲಿಕೆಯಾಗಿತ್ತು. ಈ ಹಿಂದೆ, ಬುಲ್ಡೋಜರ್ ನ್ಯಾಯವನ್ನು ಅನುಮೋದಿಸಲಾಗದು, ಯಾವುದೇ ಕಟ್ಟಡಗಳನ್ನು ಅಧಿಕಾರಿಗಳು ಕೆಡವಬೇಕೆಂದರೆ, ನ್ಯಾಯಾಲಯದ ಅನುಮತಿ ಪಡೆಯಬೇಕೆಂದು ಸುಪ್ರೀಂ ಕೋರ್ಟ್ ಈ ಹಿಂದೆ ಮಧ್ಯಂತರ ಆದೇಶ ನೀಡಿತ್ತು.

ನವೆಂಬರ್‌ನಲ್ಲಿ , ಅಂತಿಮ ಆದೇಶ ನೀಡಿರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠವು, ‘ಬುಲ್ಡೋಜರ್ ನ್ಯಾಯ’ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಬುಲ್ದೋಜರ್ ಕ್ರಮವನ್ನು ನಿಷೇಧಿಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X