ಕೇಸರಿ ಬಾವುಟ ಹಿಡಿದು ತನಗೆಲ್ಲಿ ಮೈಲೇಜ್ ಸಿಗುತ್ತದೋ ಅಲ್ಲಿ ಕಾಣಿಸಿಕೊಳ್ಳಲು ಯತ್ನಿಸುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವುದೇ ಸಂಶಯ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಒಕ್ಕಲಿಗರ ಪ್ರಾಬಲ್ಯವಿರುವ ಮೈಸೂರು ಕ್ಷೇತ್ರವನ್ನು ಜೆಡಿಎಸ್ ತನ್ನ ಪಾಲಿಗೆ ಪಡೆದುಕೊಳ್ಳಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದೇ, ಹೊತ್ತಿನಲ್ಲಿ, ಅಯೋಧ್ಯೆಯ ರಾಮಮಂದಿರ ಬಾಲರಾಮ ಮೂರ್ತಿ ಕೆತ್ತನೆ ಮಾಡಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಬಿಜೆಪಿ ಜೊತೆಗೆ ಗುದ್ದಾಡಿ ಜೆಡಿಎಸ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ತನ್ನ ಪಾಲಿಗೆ ತೆಗೆದುಕೊಂಡರೆ ಪ್ರತಾಪ್ ಸಿಂಹ ನಿರುದ್ಯೋಗಿಯಾಗಬಹುದು, ಅಥವಾ ಪಕ್ಷದ ಕೆಲಸಗಳಿಗೆ ಸೀಮಿತವಾಗಬಹುದು. ಹಾಗಾದಲ್ಲಿ ಅವರು ಹಿಂದುತ್ವ ಕೋಮು ಹೋರಾಟಕ್ಕೆ ಇನ್ನೂ ಹೆಚ್ಚು ಸಮಯ ಕೊಡಬಹುದು ಎಂಬ ವ್ಯಂಗ್ಯದ ಮಾತುಗಳು ಮೈಸೂರಿನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಒಂದು ವೇಳೆ, ಜೆಡಿಎಸ್ ಪಾಲಿಗೆ ಕ್ಷೇತ್ರವನ್ನು ಬಿಟ್ಟುಕೊಡದೆ, ಬಿಜೆಪಿಯೇ ಉಳಿಸಿಕೊಂಡರೂ, ರಾಮಮಂದಿರ ಮೈಲೇಜ್ ಪಡೆದುಕೊಂಡು ಮತಗಿಟ್ಟಿಸಿಕೊಳ್ಳಲು ಬಿಜೆಪಿ, ಅರುಣ್ ಯೋಗಿರಾಜ್‌ಗೆ ಟಿಕೆಟ್ ನೀಡಬಹುದು. ರಾಮ ಮೂರ್ತಿ ಕೆತ್ತಿದವರನ್ನು ಸಂಸತ್ತಿಗೆ ಕಳಿಸುವಂತೆ ಪ್ರಚಾರಾಭಿಯಾನ ಮಾಡಿ, ಹೇಗಾದರೂ ಒಂದು ಸ್ಥಾನವನ್ನು ಬಿಜೆಪಿ ಗಟ್ಟಿಗೊಳಿಸಿಕೊಳ್ಳಲು ತಂತ್ರ ಎಣೆಯಬಹುದು ಎಂದೂ ಹೇಳಲಾಗುತ್ತಿದೆ.
ಟ್ವಿಟರ್‌ನಲ್ಲಿ ಅರುಣ್ ಯೋಗಿರಾಜ್‌ಗೆ ಬಿಜೆಪಿ ಟಿಕೆಟ್ ನೀಡಬಹುದು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಹಲವರು ಪ್ರತಾಪ್ ಸಿಂಹಗೆ ಟಿಕೆಟ್ ದೊರೆಯುವುದಿಲ್ಲವೆಂದು ಹೇಳುತ್ತಿದ್ದಾರೆ. ಅಲ್ಲದೆ, ಭಾನುವಾರ ಮೈಸೂರಿಗೆ ಭೇಟಿ ನೀಡಿರುವ ಅಮಿತ್ ಶಾ ಅವರನ್ನು ಸ್ವಾಗತಿಸುವವರ ಪಟ್ಟಿಯಲ್ಲಿಯೂ ಪ್ರತಾಪ್ ಸಿಂಹ ಅವರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದು ಪ್ರತಾಪ್ ಸಿಂಹ ಅವರಿಗೆಗೆ ಟಿಕೆಟ್ ಕೈ ತಪ್ಪಲಿದೆ ಎನ್ನುವ ಅನುಮಾನಕ್ಕೆ ಪುಷ್ಠಿ ನೀಡಿದೆ.
‘ದಿ ಅನಲೈಜರ್’ ಎಂಬ ಟ್ವಿಟರ್ ಖಾತೆಯು, “ಅರುಣ್ ಯೋಗಿರಾಜ್ ಮೈಸೂರಿನಿಂದ ಬಿಜೆಪಿ ಟಿಕೆಟ್ ಪಡೆದು ಲೋಕಸಭೆಗೆ ಸ್ಪರ್ಧಿಸಬಹುದು. (ಅವರು ಅಯೋಧ್ಯೆಯಲ್ಲಿ ರಾಮಲಲ್ಲಾನ ವಿಗ್ರಹದ ಶಿಲ್ಪಿ)” ಎಂದು ಪೋಸ್ಟ್ ಮಾಡಿದೆ.
ಕುಸುಮ್ ಶರ್ಮಾ ಎಂಬವರು, “2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಅರುಣ್ ಯೋಗಿರಾಜ್ ಅವರಿಗೆ ಶುಭ ಹಾರೈಸುತ್ತೇನೆ. ರಾಮಲಲ್ಲಾ ನಿಮ್ಮನ್ನು ಆಶೀರ್ವದಿಸುತ್ತಾರೆ” ಎಂದು ಪೋಸ್ಟ್ ಮಾಡಿದ್ದಾರೆ.
All the best #ArunYogiraj for contesting #LoksabhaElection2024 Ram Lalla will bless you abundantly 🙏#Election2024 #RamLallaVirajman #RamLallainAyodhya #AyodhyaRamMandir #22January2024 #PranPratishthaRamMandir https://t.co/TttKZE0uWG
— Kusum Sharma (@KusumSharma07) February 11, 2024
ಅಮಿತಾಬ್ ಚೌದರಿ ಎಂಬವರು, “ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೈಸೂರಿನಿಂದ ಅಯೋಧ್ಯೆ ರಾಮಮಂದಿರಕ್ಕಾಗಿ ರಾಮಲಲ್ಲಾನ ವಿಗ್ರಹವನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಕಣಕ್ಕಿಳಿಸಬಹುದು” ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು, ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗದೇ ಹೋಗಬಹುದು ಎಂಬುದರ ಬಗ್ಗೆ ಟ್ವೀಟ್ ಮಾಡಿರುವ ಜೆಪಿ ಚಡ್ಡಾ ಎಂಬವರು, “ಪ್ರತಾಪ್ ಸಿಂಹ ಅವರನ್ನು ಬಿಜೆಪಿ ಕೈಬಿಡಲು ಕಾರಣವೇನು? ಅವರು ಕರ್ನಾಟಕ ಬಿಜೆಪಿಯ ಅತ್ಯುತ್ತಮ ಸಂಸದ” ಎಂದಿದ್ದಾರೆ.
Why will bjp drop Pratap Simha ? One of the best mp and future of bjp Karnataka https://t.co/eaa44Ib1nG
— JP Chadda (@JP_Chadda) February 11, 2024