16 ವರ್ಷದವರು ಲೈಂಗಿಕತೆಯ ಬಗ್ಗೆ ನಿರ್ಧರಿಸಬಲ್ಲರು ಎಂದ ಮೇಘಾಲಯ ಹೈಕೋರ್ಟ್; ಪೋಕ್ಸೋ ಎಫ್‌ಐಆರ್‌ ರದ್ದು

Date:

Advertisements

ಲೈಂಗಿಕ ಕ್ರಿಯೆಯಲ್ಲಿ ಪಾಲ್ಕೊಳ್ಳುವ ಬಗ್ಗೆ ತನ್ನದೇ ಆದ ಪ್ರಜ್ಞಾಪೂರ್ವಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ 16 ವರ್ಷದ ಬಾಲಕಿಗೆ ಇರುತ್ತದೆ ಎಂದಿರುವ ಮೇಘಾಲಯ ಹೈಕೋರ್ಟ್, ಅಪ್ರಾಪ್ತ ವಯಸ್ಸಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ಮೇಲೆ ಪೋಕ್ಸೋ ಕಾಯ್ದೆ ಅಡಿ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿದೆ.

ಅರ್ಜಿಯನ್ನು ಪರಿಗಣಿಸಿದ ಮೇಘಾಲಯ ಹೈಕೋರ್ಟ್ ನ್ಯಾಯಮೂರ್ತಿ ವಾನ್ಲುರಾ ಡೀಂಗ್ಡೊಹ್ ಅವರ ಏಕಸದಸ್ಯ ಪೀಠ, “ಅರ್ಜಿದಾರರು ಮತ್ತು ಆಪಾದಿತ ಪರಸ್ಪರ ಪ್ರೀತಿಸುತ್ತಿದ್ದರಿಂದ ಇದು ಲೈಂಗಿಕ ದೌರ್ಜನ್ಯದ ಕೃತ್ಯವಲ್ಲ. “ಸಂಪೂರ್ಣವಾಗಿ ಸಮ್ಮತಿ” ಹೊಂದಿರುವ ಪ್ರಕರಣವಾಗಿದೆ” ಎಂದು ತಿಳಿಸಿದೆ.

“ನ್ಯಾಯಾಲಯವು ಸುಮಾರು 16 ವರ್ಷ ವಯಸ್ಸಿನ ಅಪ್ರಾಪ್ತರು ದೈಹಿಕ ಮತ್ತು ಮಾನಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿರುತ್ತಾರೆ ಎಂದು ತಾರ್ಕಿಕವಾಗಿ ಪರಿಗಣಿಸುತ್ತದೆ ಅಥವಾ ಲೈಂಗಿಕ ಕ್ರಿಯೆಯ ಚಟುವಟಿಕೆಯಲ್ಲಿ ಭಾಗವಹಿಸುವ ತನ್ನ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಈ ವಯಸ್ಸಿನ ವ್ಯಕ್ತಿ ಸಮರ್ಥನಾಗಿರುತ್ತಾನೆ” ಎಂದು ಪೀಠ ಹೇಳಿದೆ.

Advertisements

ನ್ಯಾಯಾಲಯವು ಆರೋಪಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಮತ್ತು ವಿಶೇಷ ಪೋಕ್ಸೋ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿ, ಆತನ ಬಿಡುಗಡೆಗೆ ಆದೇಶ ನೀಡಿತು.

ಈ ಸುದ್ದಿ ಓದಿದ್ದೀರಾ? ರಷ್ಯಾದ ಆಂತರಿಕ ಬಂಡಾಯ ಶಮನ; ಬೆಲಾರಸ್ ಅಧ್ಯಕ್ಷನ ಮಧ್ಯಸ್ಥಿಕೆಯಿಂದ ಹೋರಾಟ ಕೈಬಿಟ್ಟ ಪ್ರಿಗೋಷಿನ್

“ಪರಸ್ಪರ ಪ್ರೇಮ ಸಂಬಂಧದಲ್ಲಿ ತೊಡಗಿಕೊಳ್ಳುವ ಹದಿಹರೆಯದವರ ಕುಟುಂಬದವರು ಸಲ್ಲಿಸುವ ದೂರುಗಳ ಆಧಾರದಲ್ಲಿ ಪೋಕ್ಸೋ ಅಡಿ ದಾಖಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ಅನಿಸುತ್ತದೆ. ಹದಿಹರೆಯದವರು ಅಥವಾ ತರುಣ ತರುಣಿಯರು ಪ್ರಣಯ ಸಂಬಂಧಗಳಲ್ಲಿ ತೊಡಗಿರುವುದರ ಕುರಿತಂತಹ ಸ್ವರೂಪದ ಪ್ರಕರಣಗಳು ತನ್ನ ವ್ಯಾಪ್ತಿ ಅಥವಾ ಪರಿಧಿಯೊಳಗೆ ತರಬೇಕು ಎಂಬ ಉದ್ದೇಶವನ್ನು ಈ ಕಾಯ್ದೆ ಹೊಂದಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತದೆ” ಎಂಬುದಾಗಿ ಹೈಕೋರ್ಟ್ ಹೇಳಿದೆ.

ಶಾಸಕಾಂಗವು ಕೂಡ ಬದಲಾಗುತ್ತಿರುವ ಸಾಮಾಜಿಕ ಅಗತ್ಯಗಳ ವೇಗಕ್ಕೆ ತಕ್ಕಂತೆ ಪೋಕ್ಸೋ ಕಾಯ್ದೆಯಂತಹ ಕಠಿಣ ಕಾನೂನುಗಳ ವಿಚಾರದಲ್ಲಿ ಅಗತ್ಯ ಬದಲಾವಣೆಗಳನ್ನು ಜಾರಿಗೊಳಿಸಬೇಕು ಎಂದು ಮೇಘಾಲಯ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಆರೋಪಿ ಕೂಡ ಹದಿಹರೆಯದವನಾಗಿದ್ದು, ತಮ್ಮ 16 ವರ್ಷದ ಮಗಳನ್ನು ಅಪಹರಿಸಿ ಆಕೆಯಿಂದ ತನ್ನ ಲೈಂಗಿಕ ತೃಷೆ ತೀರಿಸಿಕೊಂಡಿದ್ದಾನೆ ಎಂದು 2021ರ ಜನವರಿ 1ರಂದು ಬಾಲಕಿಯ ತಾಯಿ ದೂರು ಸಲ್ಲಿಸಿದ್ದರು. ಅದರ ಆಧಾರದಲ್ಲಿ ಪೋಕ್ಸೋ ಕಾಯ್ದೆಯ ಸೆಕ್ಷನ್ 3 (ಎ)/ 4ರ ಅಡಿ ಎಫ್‌ಐಆರ್ ದಾಖಲಿಸಿ, ಆತನನ್ನು ಬಂಧಿಸಲಾಗಿತ್ತು. ತಾನು ಅರ್ಜಿದಾರನ ಪ್ರೇಯಸಿಯಾಗಿದ್ದು, ತನ್ನ ಒಪ್ಪಿಗೆ ಮೇರೆಗೆ ಲೈಂಗಿಕ ಕ್ರಿಯೆ ನಡೆದಿತ್ತು. ಇದರಲ್ಲಿ ಯಾವುದೇ ಬಲಾತ್ಕಾರ ಇರಲಿಲ್ಲ ಎಂದು ಬಾಲಕಿ ಹೇಳಿಕೆ ದಾಖಲಿಸಿದ್ದಳು.

ಇದು ಲೈಂಗಿಕ ದೌರ್ಜನ್ಯದ ಪ್ರಕರಣವಲ್ಲ. ಅರ್ಜಿದಾರ ಮತ್ತು ಆರೋಪಿತ ಸಂತ್ರಸ್ತೆಯು ಪರಸ್ಪರ ಪ್ರೀತಿಸುತ್ತಿದ್ದು, ಅವರಿಬ್ಬರೂ ಸಹಮತದಿಂದಲೇ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಪೋಕ್ಸೋ ಅಡಿಯಲ್ಲಿ ದಾಖಲಿಸಿದ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕು ಎಂದು ಆರೋಪಿ ಪರ ವಕೀಲರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X