2024ರ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಬಿಹಾರ ಸರ್ಕಾರವು ತನ್ನ ಜಾತಿ ಆಧಾರಿತ ಸಮೀಕ್ಷೆಯ ಫಲಿತಾಂಶಗಳನ್ನು ಸೋಮವಾರ(ಅ.02) ಬಹಿರಂಗಗೊಳಿಸಿದೆ.
ಸರ್ಕಾರ ಬಿಡುಗಡೆಗೊಳಿಸಿದ ಜಾತಿ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಬಿಹಾರ ರಾಜ್ಯದ ಜನಸಂಖ್ಯೆಯ ಶೇ. 63 ರಷ್ಟು ಒಳಗೊಂಡಿವೆ.
ಬಿಹಾರ ಜಾತಿ ಅಧಾರಿತ ಗಣನೆ ಎಂದೂ ಕರೆಯಲ್ಪಡುವ ಜನಗಣತಿಯು 13 ಕೋಟಿ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯವರು ಶೇಕಡಾ 19 ಕ್ಕಿಂತ ಹೆಚ್ಚು ಎಂದು ತೋರಿಸುತ್ತದೆ. ಆದರೆ ಪರಿಶಿಷ್ಟ ಪಂಗಡದವರು ಶೇಕಡಾ 1.68 ರಷ್ಟಿದ್ದಾರೆ. ಮೇಲ್ಜಾತಿಗಳು ಅಥವಾ ‘ಸವರ್ಣೀಯರು’ ರಾಜ್ಯದ ಜನಸಂಖ್ಯೆಯ ಶೇಕಡಾ 15.52 ರಷ್ಟಿದ್ದಾರೆ. ಹಿಂದುಳಿದ ವರ್ಗಗಳು ಜನಸಂಖ್ಯೆಯ ಶೇಕಡಾ 27 ರಷ್ಟಿದ್ದರೆ, ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿಗಳು) ಶೇಕಡಾ 36 ರಷ್ಟಿದ್ದಾರೆ.
ಭೂಮಿಹಾರ್ ಜನಸಂಖ್ಯೆ ಶೇಕಡಾ 2.86 ರಷ್ಟಿದ್ದರೆ, ಬ್ರಾಹ್ಮಣರು ಶೇಕಡಾ 3.66 ರಷ್ಟಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮುದಾಯಕ್ಕೆ ಸೇರಿದ ಕುರ್ಮಿಗಳು ಜನಸಂಖ್ಯೆ ಶೇಕಡಾ 2.87 ರಷ್ಟಿದ್ದಾರೆ. ಮುಸಾಹರ್‌ಗಳು ಶೇಕಡಾ 3 ರಷ್ಟಿದ್ದಾರೆ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಸಮುದಾಯಕ್ಕೆ ಸೇರಿದ ಯಾದವರು ಜನಸಂಖ್ಯೆಯ ಶೇಕಡಾ 14 ರಷ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ವರದಿಗಾರ್ತಿಗೆ ಅವಮಾನಿಸಿದ ಅಣ್ಣಾಮಲೈ: ಪತ್ರಕರ್ತರ ಖಂಡನೆ
ಸಮೀಕ್ಷೆಗೆ ಸಂಬಂಧಿಸಿದಂತೆ ಬಿಜೆಪಿಯಿಂದ ಕಾನೂನು ತೊಡಕುಗಳು ಮತ್ತು ವಿರೋಧವನ್ನು ಎದುರಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಎಲ್ಲ ವರ್ಗಗಳ ಅಭಿವೃದ್ಧಿ ಮತ್ತು ಉನ್ನತಿಗಾಗಿ ರಾಜ್ಯ ಸರ್ಕಾರದ ವರದಿಯು ಸಹಾಯ ಮಾಡುತ್ತದೆ ಎಂದು ಹೇಳಿದರು.
“ಇಂದು, ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ, ಬಿಹಾರದಲ್ಲಿ ನಡೆಸಿದ ಜಾತಿ ಆಧಾರಿತ ಜನಗಣತಿಯ ಅಂಕಿಅಂಶವನ್ನು ಪ್ರಕಟಿಸಲಾಗಿದೆ. ಜಾತಿ ಆಧಾರಿತ ಗಣತಿ ಕಾರ್ಯದಲ್ಲಿ ತೊಡಗಿರುವ ಇಡೀ ತಂಡಕ್ಕೆ ಅಭಿನಂದನೆಗಳು. ಜಾತಿ ಆಧಾರಿತ ಜನಗಣತಿಯು ಪ್ರತಿಯೊಬ್ಬರ ಆರ್ಥಿಕ ಸ್ಥಿತಿಯ ಬಗ್ಗೆಯೂ ಮಾಹಿತಿಯನ್ನು ಒದಗಿಸುತ್ತದೆ. ಈ ವರದಿಯ ಆಧಾರದ ಮೇಲೆ ಎಲ್ಲ ವರ್ಗಗಳ ಅಭಿವೃದ್ಧಿ ಮತ್ತು ಉನ್ನತಿಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ನಿತೀಶ್ ಕುಮಾರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಮಿತ್ರ ಪಕ್ಷ ಆರ್‌ಜೆಡಿಯ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, “ಗಾಂಧಿ ಜಯಂತಿಯಂದು ನಾವೆಲ್ಲರೂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದೇವೆ. ಬಿಜೆಪಿಯ ಹಲವು ಪಿತೂರಿಗಳು, ಕಾನೂನು ಅಡೆತಡೆಗಳು ನಡುವೆಯೂ ಇಂದು ಬಿಹಾರ ಸರ್ಕಾರ ಜಾತಿ ಆಧಾರಿತ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯನರು ತಮ್ಮ ಹಿಂದಿನ ಅವಧಿಯಲ್ಲಿಯೇ ನಡೆದ ಜಾತಿ ಗಣತಿಯ ವರದಿಯನ್ನು ಜನತೆಯ ಮುಂದಿಡುವ ಕಾಲ ಬಂದಿದೆ