ಮುಂಬೈನ ಐಐಟಿ ಶೈಕ್ಷಣಿಕ ಸಂಸ್ಥೆಯ ಕ್ಯಾಂಟೀನ್ ಒಂದರ ಗೋಡೆಗಳ ಮೇಲೆ ‘ಸಸ್ಯಾಹಾರಿಗಳಿಗೆ ಮಾತ್ರ’ ಎಂಬ ಪೋಸ್ಟರ್‌ಗಳನ್ನು ಅಂಟಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಾಂಬೆ ಐಐಟಿಯಲ್ಲಿ ಆಹಾರ ತಾರತಮ್ಯದ ಪೋಸ್ಟರ್ ಅಂಟಿಸಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವಾರ ಬಾಂಬೆ ಐಐಟಿ ಹಾಸ್ಟೆಲ್ 12ರ ಕ್ಯಾಂಟೀನ್‌ನ ಗೋಡೆಗಳ ಮೇಲೆ ‘ಸಸ್ಯಾಹಾರಿಗಳಿಗೆ ಮಾತ್ರ ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ’ ಎಂಬ ಪೋಸ್ಟರ್‌ಗಳನ್ನು ಕಳೆದ ವಾರ ಅಂಟಿಸಲಾಗಿತ್ತು ಮತ್ತು ಅದರ ಭಾವಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಪೋಸ್ಟರ್‌ಗಳ ಬಗ್ಗೆ ತಿಳಿದಿದ್ದರೂ, ಐಐಟಿ ಕ್ಯಾಂಟೀನ್‌ನಲ್ಲಿ ಯಾರು ಅಂಟಿಸಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ವಿವಿಧ ವರ್ಗದ ಆಹಾರ ಸೇವಿಸುವ ಜನರಿಗೆ ನಿಗದಿತ ಆಸನಗಳಿಲ್ಲ ಮತ್ತು ಪೋಸ್ಟರ್‌ಗಳನ್ನು ಯಾರು ಹಾಕಿದ್ದಾರೆ ಎಂಬ ಬಗ್ಗೆ ಸಂಸ್ಥೆಗೆ ತಿಳಿದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 500 ಜನಕ್ಕೆ ಒಂದೇ ಕೊಠಡಿ, ಪತಿ-ಪುತ್ರನ ಶವ ನೋಡಬೇಕು; ಮಣಿಪುರ ಸಂತ್ರಸ್ತ ಶಿಬಿರಗಳಲ್ಲಿನ ಕರಾಳ ಅನುಭವಗಳು
ಐಐಟಿ ಸಂಸ್ಥೆಗಳಲ್ಲಿ ದಲಿತ ಹಾಗೂ ಶೋಷಿತ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪ್ರತಿನಿಧಿಸಿಸುವ ವಿದ್ಯಾರ್ಥಿ ಸಂಘಟನೆ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (ಎಪಿಪಿಎಸ್‌ಸಿ) ಘಟನೆಯನ್ನು ಖಂಡಿಸಿ ಪೋಸ್ಟರ್‌ಗಳನ್ನು ಹರಿದು ಹಾಕಿದೆ.
“ಹಾಸ್ಟೆಲ್‌ನ ಪ್ರಧಾನ ಕಾರ್ಯದರ್ಶಿಗೆ ಆರ್‌ಟಿಐಗಳು ಇಮೇಲ್ ಮೂಲಕ ಸಂಸ್ಥೆಯಲ್ಲಿ ಆಹಾರ ಪ್ರತ್ಯೇಕತೆಗೆ ಯಾವುದೇ ನೀತಿಯಿಲ್ಲ ಎಂದು ಬಹಿರಂಗಪಡಿಸಿದ್ದರೂ, ಕೆಲವರು ಮಾಂಸಾಹಾರ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಲು ಹಾಗೂ ‘ಸಸ್ಯಾಹಾರಿಗಳು ಮಾತ್ರ’ ಎಂಬ ನಾಮಫಲಕ ಅಂಟಿಸಿ ತಾರತಮ್ಯ ಮನಸ್ಥಿತಿ ಪ್ರದರ್ಶಿಸಿದ್ದಾರೆ” ಎಂದು ಎಪಿಪಿಎಸ್‌ಸಿ ಖಂಡಿಸಿದೆ.
ಘಟನೆಯ ನಂತರ ಹಾಸ್ಟೆಲ್‌ನ ಪ್ರಧಾನ ಕಾರ್ಯದರ್ಶಿ ಎಲ್ಲ ವಿದ್ಯಾರ್ಥಿಗಳಿಗೆ ಇಮೇಲ್ ಕಳುಹಿಸಿದ್ದು,”ಹಾಸ್ಟೆಲ್‌ನ ಮೆಸ್‌ನಲ್ಲಿ ಜೈನ್ ಸಮುದಾಯದ ಆಹಾರ ವಿತರಣೆಗೆ ಪ್ರತ್ಯೇಕ ಕೌಂಟರ್ ಇದೆ. ಆದರೆ ಜೈನ ಆಹಾರ ಸೇವಿಸುವವರಿಗೆ ಗೊತ್ತುಪಡಿಸಿದ ಪ್ರತ್ಯೇಕ ಸ್ಥಳವಿಲ್ಲ. ಕೆಲವರು ಜೈನ ಸಮುದಾಯವರಿಗೆ ಪ್ರತ್ಯೇಕ ಸ್ಥಳವಿದೆ ಎಂದುಕೊಂಡು ಮಾಂಸಾಹಾರ ಆಹಾರ ತರುವ ವ್ಯಕ್ತಿಗಳನ್ನು ಆ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ಅನುಮತಿಸುತ್ತಿರಲಿಲ್ಲ. ಆದರೆ ಇಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ನಿರ್ದಿಷ್ಟ ಸಮುದಾಯಕ್ಕೆ ಮೀಸಲಾಗಿದೆ ಎಂಬ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯನ್ನು ಯಾವುದೇ ಪ್ರದೇಶದಿಂದ ನಿರಾಕರಿಸುವ ಹಕ್ಕನ್ನು ಯಾರೂ ಹೊಂದಿರುವುದಿಲ್ಲ. ಇಂತಹ ಘಟನೆ ಮರುಕಳಿಸಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.