ಮಧ್ಯಪ್ರದೇಶ | ಸಮ್ಮತಿಯ ಸೆಕ್ಸ್‌ನಲ್ಲಿ ಮಹಿಳೆಯರ ವಯೋಮಿತಿ 16ಕ್ಕೆ ಇಳಿಸಲು ಹೈಕೋರ್ಟ್‌ ಕೇಂದ್ರಕ್ಕೆ ಮನವಿ

Date:

Advertisements
  • ರಾಹುಲ್‌ ಎಂಬ ಯುವಕನ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣ ರದ್ದುಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್
  • ಸಮ್ಮತಿಯ ದೈಹಿಕ ಸಂಬಂಧದಲ್ಲಿ ಮಹಿಳೆಯರ ವಯಸ್ಸಿನ ಮಿತಿಯನ್ನು 16 ರಿಂದ 18 ಕ್ಕೆ ಹೆಚ್ಚಳ ಕೇಂದ್ರ ಮಾಡಿತ್ತು

ಪುರುಷ ಮತ್ತು ಮಹಿಳೆಯ ಸಹಮತದ ದೈಹಿಕ ಸಂಬಂಧದಲ್ಲಿ (ಸಮ್ಮತಿಯ ಸೆಕ್ಸ್‌) ಮಹಿಳೆಯರ ವಯೋಮಿತಿಯನ್ನು 18 ರಿಂದ 16 ವರ್ಷಕ್ಕೆ ಇಳಿಸಲು ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್‌ ಪೀಠ ಶನಿವಾರ (ಜುಲೈ 1) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಮಹಿಳೆಯರ ಈ ವಯೋಮಿತಿಯಿಂದ ಹದಿಹರೆಯದ ಹುಡುಗರಿಗೆ ಅನ್ಯಾಯ ಮಾಡಲಿದ್ದು ಸಮಾಜದ ಚೌಕಟ್ಟನ್ನು ಹಾಳುಗೆಡಹುವ ಸಾಧ್ಯತೆ ಇದೆ ಎಂದು ಪೀಠ ಹೇಳಿದೆ.

ಮಧ್ಯಪ್ರದೇಶ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೋಕ್ಸೊ ಪ್ರಕರಣವೊಂದರ ವಿಚಾರಣೆಯ ವೇಳೆ ನ್ಯಾಯಮೂರ್ತಿ ದೀಪಕ್ ಕುಮಾರ್ ಅಗರವಾಲ್ ಅವರ ಏಕಸದಸ್ಯ ಪೀಠ ಈ ಅಭಿಪ್ರಾಯಪಟ್ಟಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Advertisements

ಬಾಲಕಿಯೊಬ್ಬಳನ್ನು ಪದೇ ಪದೇ ಅತ್ಯಾಚಾರ ಎಸಗಿ 2020ರಲ್ಲಿ ಆಕೆಯನ್ನು ಗರ್ಭಧಾರಣೆ ಮಾಡಿದ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಿದ ಜೂನ್‌ 27ರ ಆದೇಶದಲ್ಲಿ ಪೀಠ ಈ ಮನವಿ ಮಾಡಿದೆ.

“ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಹಾಗೂ ಅಂತರ್ಜಾಲ ಸಂಪರ್ಕದಿಂದ ಹುಡುಗ-ಹುಡುಗಿಯರು ಸಹಜವಾಗಿ 14ರ ವಯಸ್ಸಿನ ಆಸುಪಾಸಿನಲ್ಲೇ ದೈಹಿಕ ಆಕರ್ಷಣೆಗೆ ಒಳಗಾಗುತ್ತಾರೆ. ಆಸೆಯ ಬೇಕು ಬೇಡಗಳನ್ನು ನಿರ್ಧರಿಸುತ್ತಾರೆ ಅಥವಾ ತಿಳಿದಿರುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಸಮ್ಮತಿಯ ದೈಹಿಕ ಸಂಪರ್ಕದಲ್ಲಿ ಮಹಿಳೆಯರ ವಯೋಮಿತಿಯನ್ನು 18ಕ್ಕೆ ಹೆಚ್ಚಿಸಿರುವುದು ಸಮಾಜದಲ್ಲಿ ಏರುಪೇರುಗಳನ್ನು ಸೃಷ್ಟಿಸಲು ಕಾರಣವಾಗುತ್ತದೆ. ಸಾಮಾನ್ಯವಾಗಿ 16 ರ ವಯಸ್ಸಿನ ಮೇಲೆ ಹುಡುಗ-ಹುಡುಗಿಯರ ನಡುವೆ ಸಹಜವಾಗಿ ಸಂಬಂಧಗಳು ಏರ್ಪಡುತ್ತವೆ. ಆದರೆ, ಎಲ್ಲ ಅತ್ಯಾಚಾರ ಪ್ರಕರಣಗಳಲ್ಲಿ ಹುಡುಗರು ಅಪರಾಧಿಗಳು ಆಗಿರುವುದಿಲ್ಲ. ಈ ವಯಸ್ಸಿನಲ್ಲಿ ಸಮ್ಮತಿಯ ದೈಹಿಕ ಸಂಬಂಧ ಬೆಳೆಸಿ, ಕೆಲವರು ಕಾಯ್ದೆಯ ದುರುಪಯೋಗ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಮಿತಿಯನ್ನು 16 ವರ್ಷಕ್ಕೆ ಇಳಿಸುವುದು ಸೂಕ್ತ. ಈ ಹಿಂದಿನ ಐಪಿಸಿ ಸೆಕ್ಷನ್ 375 ಇದನ್ನೇ ಹೇಳುತ್ತಿತ್ತು” ಎಂದು ನ್ಯಾಯಮೂರ್ತಿ ಅಗರವಾಲ್ ಅವರ ಪೀಠ ಮನವಿ ಮಾಡಿದೆ.

ಮಹಿಳೆಯರಿಗೆ ದೈಹಿಕ ಸಂಪರ್ಕದ ಸಮ್ಮತಿಯ ವಯೋಮಿತಿ 18ಕ್ಕೆ ನಿಗದಿಪಡಿಸಿರುವುದು ಸಮಾಜದ ಮೂಲ ರಚನೆಯನ್ನು ಕದಡಿದೆ ಎಂದು ಪೀಠ ಹೇಳಿದೆ.

ಮಧ್ಯಪ್ರದೇಶ ರಾಹುಲ್ ಜಾಟವ್ ಎಂಬ ಯುವಕನ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣ ದಾಖಲಾಗಿತ್ತು. 18 ವರ್ಷ ವಯಸ್ಸಿನ ಯುವತಿಯೊಬ್ಬರ ಜೊತೆ ಸಮ್ಮತಿಯ ದೈಹಿಕ ಸಂಬಂಧ ಹೊಂದಿದ್ದ ಆತನ (ವಿಚಾರಣೆಯಲ್ಲಿ ತಿಳಿದು ಬಂದಿರುವಂತೆ) ವಿರುದ್ಧ ಅದೇ ಯುವತಿ 2022ರ ಜುಲೈನಲ್ಲಿ ಪೋಕ್ಸೊ ಅಡಿ ಪ್ರಕರಣ ದಾಖಲಿಸಿದ್ದರು.

ಸದ್ಯ ಹೈಕೋರ್ಟ್ ರಾಹುಲ್ ಜಾಟವ್ ವಿರುದ್ಧದ ಪ್ರಕರಣಗಳಲ್ಲಿ ಕೆಲ ಸೆಕ್ಷನ್ ಗಳನ್ನು ತೆಗೆದುಹಾಕಲು ಪೊಲೀಸರಿಗೆ ಸೂಚಿಸಿದೆ.

ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಭೀಕರ ಬಸ್‌ ದುರಂತ; ಮೂವರು ಮಕ್ಕಳು ಸೇರಿ 25 ಜನ ಸಜೀವ ದಹನ

ಇತ್ತೀಚೆಗೆ ಕೇಂದ್ರ ಸರ್ಕಾರ ಸಮ್ಮತಿಯ ದೈಹಿಕ ಸಂಬಂಧದಲ್ಲಿ ಮಹಿಳೆಯರ ವಯಸ್ಸಿನ ಮಿತಿಯನ್ನು 16 ರಿಂದ 18 ಕ್ಕೆ ಹೆಚ್ಚಳ ಮಾಡಿತ್ತು.

ಒಂದು ವೇಳೆ 18 ವರ್ಷ ಅಥವಾ 18ರೊಳಗಿನ ಬಾಲಕಿ/ಯುವತಿ ಸಮ್ಮತಿಯ ಮೇಲೆ ದೈಹಿಕ ಸಂಪರ್ಕ ನಡೆಸಿಯೂ ಪ್ರಕರಣ ದಾಖಲಾದರೆ ಅದು ಪೋಕ್ಸೊ ಅಡಿ ಬರುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X