ಮಣಿಪುರ ಹಿಂಸಾಚಾರ ಕೊನೆಗೊಳಿಸಲು ಭಾರತಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ಒತ್ತಾಯ

Date:

Advertisements

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಕೊನೆಗೊಳಿಸಬೇಕೆಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತ ವೊಲ್ಕರ್ ಟರ್ಕ್ ಪ್ರಸ್ತಾಪಿಸಿದ್ದಾರೆ.

ಜಾಗತಿಕ ಮಾನವಹಕ್ಕುಗಳ ಘೋಷಣೆಗೆ 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಈ ಸಂದರ್ಭದಲ್ಲಿ ಮಣಿಪುರದ ಜನಾಂಗೀಯ ಹಿಂಸಾಚಾರವನ್ನು ಕೊನೆಗೊಳಿಸಬೇಕೆಂದು ಪ್ರಸ್ತಾಪಿಸಿದ್ದಾರೆ.

ಜಾಗತಿಕ ಮಾನವ ಹಕ್ಕುಗಳ ಘೋಷಣೆಗೆ 75 ವರ್ಷಗಳು ತುಂಬಿರುವ ಸಂಭ್ರಮದ ಆಚರಣೆಗಾಗಿ ವಿಶ್ವಸಂಸ್ಥೆಯು ’75 ವರ್ಷಗಳ ಮಾನವಹಕ್ಕುಗಳು’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ವೊಲ್ಕರ್ ಟರ್ಕ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚಾಲನೆ ನೀಡಿದ್ದರು.

ಈ ಸಂದರ್ಭದಲ್ಲಿ ಹೇಳಿಕೆಯೊಂದನ್ನು ಹೊರಡಿಸಿರುವ ವೊಲ್ಕರ್ ಟರ್ಕ್ ಅವರು, ‘‘ಕೆಲವು ಗುಂಪುಗಳು ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸಿ ವಿಭಜನೆ ಹುಟ್ಟು ಹಾಕುತ್ತವೆ. ಹಲವು ಘಟನೆಗಳಲ್ಲಿ ಇದರ ಪರಿಣಾಮಗಳನ್ನು ನಾವು ನೋಡಿದ್ದೇವೆ. ಇದಕ್ಕೆ ಇತ್ತೀಚಿನ ಉದಾಹರಣೆಯಂದರೆ ಈಶಾನ್ಯ ಭಾರತದ ಮಣಿಪುರದಲ್ಲಿ ನಡೆದ ಹಿಂಸಾಚಾರ. ವಿಭಿನ್ನ ಜನಾಂಗೀಯ ಮತ್ತು ಬುಡಕಟ್ಟು ಗುಂಪುಗಳ ನಡುವೆ ಆಂತರ್ಯದಲ್ಲಿ ಇರುವ ಉದ್ವಿಗ್ನತೆಯನ್ನು ಈ ಹಿಂಸಾಚಾರ ಬಹಿರಂಗಪಡಿಸಿದೆ. ಇಂತಹ ಸಂದರ್ಭಗಳಲ್ಲಿ ಕ್ಷಿಪ್ರವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತೇ ನೆ. ಅಧಿಕಾರಿಗಳು ತಮ್ಮ ಅಂತರರಾಷ್ಟ್ರೀಯ ಮಾನವಹಕ್ಕುಗಳ ಬಾಧ್ಯತೆಗಳಿಗೆ ಅನುಗುಣವಾಗಿ ಈ ಹಿಂಸಾಚಾರಗಳ ತನಿಖೆ ಮಾಡಬೇಕು ಮತ್ತು ಅವುಗಳ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು’’ ಎಂದು ತಿಳಿಸಿದ್ದಾರೆ.

Advertisements
Bose Military School

ಈ ಸುದ್ದಿ ಓದಿದ್ದೀರಾ? ವಿಶ್ವದ ನಾಲ್ಕನೇ ಅತಿದೊಡ್ಡ ರಾಷ್ಟ್ರ ಜರ್ಮನಿಗೆ ಆರ್ಥಿಕ ಹಿಂಜರಿತದ ಆಘಾತ

ಹಲವು ಮಾನವ ಹಕ್ಕುಗಳ ಉಲ್ಲಂಘನೆ ಉಲ್ಲೇಖ

ಮಣಿಪುರದ ಜೊತೆಗೆ, ಮಯನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರ ಮಾನವ ಹಕ್ಕು ಉಲ್ಲಂಘನೆಗಳು, ಸುಡಾನ್‌ನ ನಾಗರಿಕರ ಹತ್ಯೆ , ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡಾ ಹತ್ಯೆ , ಎಲ್‌ಜಿಬಿಟಿಕ್ಯು ಹಕ್ಕುಗಳ ಉಲ್ಲಂಘನೆಗಳು, ರಿಯಲ್‌ ಮ್ಯಾಡ್ರಿಡ್ ಫುಟ್ಬಾ ಲ್ ಆಟಗಾರ ವಿನ್ಸಿಯಸ್ ಜೂನಿಯರ್ ಸ್ಪೇನ್‌ನಲ್ಲಿ ಎದುರಿಸುತ್ತಿರುವ ಜನಾಂಗೀಯ ನಿಂದನೆ, ಚೀನಾದಲ್ಲಿ ಮಾನವಹಕ್ಕುಗಳ ಹೋರಾಟಗಾರರಿಗೆ ವಿಧಿಸಲಾಗುತ್ತಿರುವ ಜೈಲು ಶಿಕ್ಷೆ ಮತ್ತು ಫ್ಲಾಯ್ಡ್ ಹತ್ಯೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಮಹಿಳೆಯರ ವಿರುದ್ಧ ನಡೆಸುತ್ತಿರುವ ಲಿಂಗ ತಾರತಮ್ಯ ವಿಷಯಗಳನ್ನು ವೊಲ್ಕರ್ ಟರ್ಕ್ ಪ್ರಸ್ತಾಪಿಸಿದ್ದಾರೆ.

‘‘ವಲಸಿಗರು ಮತ್ತು ನಿರಾಶ್ರಿತರ ವಿರುದ್ಧದ ದ್ವೇಷಪೂರಿತ ಮಾತುಗಳು ಮತ್ತು ಹಾನಿಯುಂಟು ಮಾಡುವ ವ್ಯಾಖ್ಯಾನಗಳು ಈಗಲೂ ವ್ಯಾಪಕವಾಗಿ ಹರಿದಾಡುತ್ತಿವೆ. ಇದರ ವಿರುದ್ಧ ವಲಸಿಗ-ವಿರೋಧಿ ಕಾನೂನುಗಳು ಮತ್ತು ನೀತಿಗಳು ಜನರ ಬೆಂಬಲಕ್ಕೆ ನಿಂತಿವೆ. ದ್ವೇಷಪೂರಿತ ಮಾತುಗಳು ಮತ್ತು ವ್ಯಾಖ್ಯಾನಗಳು ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನು ಮತ್ತು ನಿರಾಶ್ರಿತರ ಕಾನೂನುಗಳ ಅಡಿಪಾಯವನ್ನೇ ದುರ್ಬಲಗೊಳಿಸುವ ಬೆದರಿಕೆ ಒಡ್ಡಿವೆ’’ ಎಂದು ಟರ್ಕ್ ತಿಳಿಸಿದ್ದಾರೆ.

‘‘ಜಾಗತಿಕ ಮಾನವಹಕ್ಕುಗಳ ಘೋಷಣೆಯ 14ನೇ ವಿಧಿಯು ಹಿಂಸಾಚಾರದಿಂದ ತಪ್ಪಿಸಿಕೊಂಡು ಆಶ್ರಯ ಕೋರುವ ಹಕ್ಕನ್ನು ಪ್ರತಿಯೊಬ್ಬರಿಗೂ ನೀಡುತ್ತದೆ. ಸಂಕಷ್ಟದ ಪರಿಸ್ಥಿತಿಗಳಲ್ಲಿರುವ ಎಲ್ಲ ನಾಗರಿಕನ್ನು ಮಾನವೀಯತೆಯಿಂದ ಕಾಣಬೇಕು ಮತ್ತು ಅವರ ಹಕ್ಕುಗಳನ್ನು ಗೌರವಿಸಬೇಕು. ಇಂಥ ಪರಿಸ್ಥಿತಿಯೊಂದು ಸೃಷ್ಟಿಯಾಗಲು ನಾವು ಒಗ್ಗಟ್ಟಿನಿಂದ ಕೆಲಸಮಾಡಬೇಕು’’ ಎಂದು ವಿಶ್ವ ಸಂಸ್ಥೆಯ ಮಾನವಹಕ್ಕುಗಳ ಆಯುಕ್ತರು ಹೇಳಿದ್ದಾರೆ.

ಮಣಿಪುರದ ಕುಕಿ-ರೊಮಿ ಬುಡಕಟ್ಟು ಪಂಗಡಗಳು ಮತ್ತು ಬಹುಸಂಖ್ಯಾತ ಮೇಟಿ ಸಮುದಾಯದ ನಡುವೆ ಇತ್ತೀಚೆಗೆ ಸಂಭವಿಸಿದ ಹಿಂಸಾಚಾರದಲ್ಲಿ 70ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡು ನೂರಾರು ಮಂದಿ ಗಾಯಗೊಂಡಿದ್ದಾರೆ. ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ನಷ್ಟವುಂಟಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements
Advertisements
Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಡಿಶಾ ಪ್ರವಾಹ | 100 ಗ್ರಾಮಗಳ ಮೇಲೆ ಪ್ರಭಾವ: ರಸ್ತೆ, ಹೊಲಗಳು ಜಲಾವೃತ

ಒಡಿಶಾ ಪ್ರವಾಹ ಸ್ಥಿತಿ ಗಂಭೀರವಾಗುತ್ತಿದ್ದು ಬಾಲಸೋರ್‌ನ ಸುಮಾರು 100 ಗ್ರಾಮಗಳ ಮೇಲೆ...

‘ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳುವುದು ಭಾವನೆಗಳ ಅಭಿವ್ಯಕ್ತಿ, ಲೈಂಗಿಕ ಉದ್ದೇಶವಾಗಲ್ಲ: ಬಾಂಬೆ ಹೈಕೋರ್ಟ್

'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೇಳುವುದು ಕೇವಲ ಭಾವನೆಗಳ ಅಭಿವ್ಯಕ್ತಿಯಾಗಿದೆ, ಅದು...

ದೆಹಲಿಯಲ್ಲಿ 10, 15 ವರ್ಷ ಹಳೆಯ ವಾಹನಗಳಿಗೆ ಇಂಧನ ನಿಷೇಧ; ಉಲ್ಲಂಘಿಸಿದರೆ ವಾಹನ ಜಪ್ತಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ, (ಇಂದಿನಿಂದ) 2025ರ...

Download Eedina App Android / iOS

X