ನರೋಡಾ ಗಾಮ್‌ ಹತ್ಯಾಕಾಂಡ | ಆರೋಪಿಗಳ ಖುಲಾಸೆ ನ್ಯಾಯದ ಕೊಲೆ; ಸಾಕ್ಷಿಗಳ ಅಳಲು

Date:

Advertisements
  • ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದಲ್ಲಿ 67 ಆರೋಪಿಗಳು ಖುಲಾಸೆ
  • 2002ರಲ್ಲಿ ನರೋಡಾ ಗಾಮ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ 11 ಮಂದಿ ಹತ್ಯೆ

ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಲಯ ಖುಲಾಸೆ ಮಾಡಿದೆ. ಇದು ನ್ಯಾಯದ ನಿಜವಾದ ಕೊಲೆ ಎಂದು ಪ್ರಕರಣದ ಸಾಕ್ಷಿಗಳು ಹೇಳಿದ್ದಾರೆ.

ಹತ್ಯಾಕಾಂಡ ಪ್ರಕರಣದಲ್ಲಿ ಗುರುವಾರ (ಏಪ್ರಿಲ್‌ 20) ಗುಜರಾತ್ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಿಶೇಷ ನ್ಯಾಯಾಲಯ ಎಲ್ಲ 67 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ನ್ಯಾಯಾಲಯದ ತೀರ್ಪು ಬಂದಿರುವ ಈ ಸಮಯ ಸಂತ್ರಸ್ತರಿಗೆ ಕರಾಳ ದಿನ. ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದ ತೀರ್ಪು ಆತ್ಮಸಾಕ್ಷಿ ರಹಿತ ಎಂದು ಸಾಕ್ಷಿಗಳು ಬಣ್ಣಿಸಿರುವುದಾಗಿ ‘ಇಂಡಿಯನ್‌ ಎಕ್ಸ್‌ಪ್ರೆಸ್‌‘ ವರದಿ ಮಾಡಿದೆ.

Advertisements

ಪ್ರಾಸಿಕ್ಯೂಷನ್ ಸಾಕ್ಷಿಯಾಗಿದ್ದ ಇಮ್ತಿಯಾಜ್ ಅಹ್ಮದ್ ಹುಸೇನ್ ಕುರೇಶಿ (50) ತಾವು ಕಂಡ ಕಹಿ ಸತ್ಯವನ್ನು ಹೇಳಿದ್ದಾರೆ.

“ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದಲ್ಲಿ ಜೈದೀಪ್ ಪಟೇಲ್ (ಮಾಜಿ ವಿಎಚ್‌ಪಿ ನಾಯಕ), ಪ್ರದ್ಯುಮಾನ್ ಪಟೇಲ್, ಆಗಿನ ಹಾಲಿ ಪಾಲಿಕೆ ಸದಸ್ಯರಾದ ವಲ್ಲಭ್ ಪಟೇಲ್ ಮತ್ತು ಅಶೋಕ್ ಪಟೇಲ್ ಸೇರಿದಂತೆ 17 ಆರೋಪಿಗಳನ್ನು ನಾನು ಗುರುತಿಸಿದ್ದೇನೆ” ಎಂದು ಕುರೇಶಿ ಹೇಳಿದ್ದಾರೆ.

“ಆರೋಪಿಗಳು ಮಸೀದಿ ಸುಟ್ಟುಹಾಕಲು, ನಿರ್ದಿಷ್ಟ ಸ್ಥಳಗಳ ಮೇಲೆ ದಾಳಿ ಮಾಡಲು ಉದ್ರಿಕ್ತ ಗುಂಪಿಗೆ ಸೂಚಿಸುವುದನ್ನು ನಾನು ನೋಡಿದ್ದೇನೆ. ನನ್ನ ಕಣ್ಣ ಮುಂದೆಯೇ ಐವರು ಬೆಂಕಿಯಲ್ಲಿ ಸುಟ್ಟು ಮೃತಪಟ್ಟರು. ನಾನು ಆರೋಪಿಗಳನ್ನು ಗುರುತಿಸಿ ಎಲ್ಲ ಸಾಕ್ಷ್ಯ ನೀಡಿದ್ದೇನೆ. ಆದರೂ ಅವರು ಆರೋಪ ಮುಕ್ತವಾಗಿದ್ದಾರೆ” ಎಂದು ಕಂಬನಿ ಮಿಡಿದರು.

“ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು. ಆದರೆ ಖುಲಾಸೆಗೊಳಿಸುವ ಮೂಲಕ ನ್ಯಾಯಾಂಗ ನಂಬಿಕೆ ಕಳೆದುಕೊಂಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನಾವು ಹೋರಾಟ ಮುಂದುವರಿಸುತ್ತೇವೆ. ಆರೋಪಿಗಳ ಖುಲಾಸೆಯನ್ನು ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. 21 ವರ್ಷಗಳು ಕಳೆದಿವೆ, ಆದರೆ ಹತ್ಯಾಕಾಂಡದ ಭೀಕರತೆ ಮರೆಯಲು ಸಾಧ್ಯವಿಲ್ಲ. ಆಗಷ್ಟೆ ಮದುವೆಯಾಗಿ ಕುಂಭರ್ ವಾಸ್‌ಗೆ ಬಂದಿದ್ದ ನವವಧುವನ್ನು ನನ್ನ ಕಣ್ಣ ಮುಂದೆ ಇರಿದು ಕೊಲ್ಲಲಾಯಿತು. ಆಕೆಯ ಇಡೀ ಕುಟುಂಬ ಹತ್ಯೆಯಾಯಿತು” ಎಂದು ಹತ್ಯಾಕಾಂಡದ ಕರಾಳತೆ ವಿವರಿಸಿದರು.

“ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದಲ್ಲಿ 21 ವರ್ಷಗಳ ಕಾಯುವಿಕೆ ಹೊರತಾಗಿಯೂ ನಾವು ನ್ಯಾಯಾಲಯದ ಮೇಲೆ ಭರವಸೆ ಹೊಂದಿದ್ದೆವು. ನ್ಯಾಯಾಲಯಕ್ಕೆ ಆತ್ಮಸಾಕ್ಷಿ ಇರುತ್ತದೆ ಎಂದು ಭಾವಿಸಿದ್ದೆವು. ಕೆಲವರನ್ನಾದರೂ ತಪ್ಪಿತಸ್ಥರೆಂದು ಪ್ರಕಟಿಸುತ್ತಾರೆ ಎಂದು ಆಶಿಸಿದ್ದೆವು. 2002ರ ದುರಂತದಲ್ಲಿ 11 ಮಂದಿಯ ಹತ್ಯೆ ಮಾಡಲಾಗಿತ್ತು. ನ್ಯಾಯಾಲಯದ ಈ ತೀರ್ಪಿನಿಂದ ಇಂದು ನ್ಯಾಯದ ಕೊಲೆಯಾಗಿದೆ” ಎಂದು ಅಳಲು ತೋಡಿಕೊಂಡರು.

ಪ್ರಕರಣದ ಮತ್ತೊಬ್ಬ ಸಾಕ್ಷಿ ಶರೀಫ್ ಮಾಲೆಕ್ (42) ನ್ಯಾಯಾಲಯದಲ್ಲಿ ಆರೋಪಿಗಳ ಪೈಕಿ ಮಾಯಾ ಕೊಡ್ನಾನಿ ಮತ್ತು ಜೈದೀಪ್ ಪಟೇಲ್ ಸೇರಿದಂತೆ 13 ಆರೋಪಿಗಳನ್ನು ಗುರುತಿಸಿ ಸಾಕ್ಷ್ಯ ನುಡಿದಿದ್ದರು.

“ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದ ಈ ತೀರ್ಪು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದಲ್ಲಿ ಭಾಗವಹಿಸವವರು ಆರೋಪ ಮುಕ್ತಗೊಳ್ಳುತ್ತಾರೆ ಎಂದು ತೋರಿಸಿದೆ. ಇದು ನ್ಯಾಯಾಂಗದ ಮೇಲಿನ ನಂಬಿಕೆ ಕುಗ್ಗಿಸುತ್ತದೆ” ಎಂದು ಶರೀಫ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ ಮತ್ತು ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಎಸ್‌ಐಟಿ ಪ್ರಕರಣಗಳ ವಿಶೇಷ ನ್ಯಾಯಾಲಯ ಗುರುವಾರ ತೀರ್ಪ ನೀಡಿತ್ತು.

2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಕೋಮು ಗಲಭೆಯಲ್ಲಿ ಮುಸ್ಲಿಂ ಸಮುದಾಯದ 11 ಜನರನ್ನು ಹತ್ಯೆಗೈಯಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 86 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ಒಟ್ಟು ಆರೋಪಿಗಳಲ್ಲಿ 18 ಜನರು ಈಗಾಗಲೇ ಮೃತಪಟ್ಟಿದ್ದರು. ಉಳಿದ 68 ಮಂದಿಯನ್ನು ಪ್ರಕರಣದಿಂದ ಆರೋಪ ಮುಕ್ತಗೊಳಿಸಿ ಎಸ್ಐಟಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಸ್‌ ಕೆ ಬಾಕ್ಸಿ ಅವರು ತೀರ್ಪು ನೀಡಿದರು.

ಪ್ರಕರಣ ಸಂಬಂಧ 2010ರಲ್ಲಿ ಆರಂಭವಾದ ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ 187 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಸುಮಾರು 13 ವರ್ಷಗಳ ಕಾಲ 6 ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದ್ದಾರೆ ಎಂದು ವಿಶೇಷ ಪ್ರಾಸಿಕ್ಯೂಟರ್ ಸುರೇಶ್ ಶಾ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದೆಹಲಿಯ ಸಾಕೇತ್‌ ಕೋರ್ಟ್‌ನಲ್ಲಿ ಮಹಿಳೆ, ವಕೀಲರ ಮೇಲೆ ಗುಂಡಿನ ದಾಳಿ

2002ರ ಫೆ. 27ರಂದು ಗೋಧ್ರಾದಲ್ಲಿ ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ನ ಎಸ್- 6 ಭೋಗಿಗೆ ಬೆಂಕಿ ಹಚ್ಚಿಲಾಗಿತ್ತು. ಘಟನೆಯಲ್ಲಿ 58 ಜನರು ಮೃತಪಟ್ಟಿದ್ದರು.

ಘಟನೆಯಿಂದ ಗುಜರಾತ್‌ನಾದ್ಯಂತ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಅಹಮದಾಬಾದ್ ನಗರದ ನರೋಡಾ ಗಾಮ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ 11 ಮಂದಿಯನ್ನು ಹತ್ಯೆ ಮಾಡಲಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X