ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳೊಂದಿಗೆ ಕಾರ್ಯ ನಿರ್ವಹಿಸಬೇಕು: ಡಿ ರಾಜಾ

Date:

Advertisements
  • ಪತ್ರಿಕೆಯೊಂದರ ಸಂದರ್ಶನದಲ್ಲಿ ರಾಜಾ ಉತ್ತರ
  • ರಾಷ್ಟ್ರೀಯ ಪಕ್ಷವಾಗಲು ರಾಜ್ಯದಲ್ಲಿ ಶೇ 6 ಮತ ಅಗತ್ಯ

ಭಾರತೀಯ ಕಮ್ಯುನಿಸ್ಟ್‌ ಪಕ್ಷಕ್ಕೆ (ಸಿಪಿಐ) ಭಾರತದ ಚುನಾವಣಾ ಆಯೋಗ ‘ರಾಷ್ಟ್ರೀಯ ಪಕ್ಷ’ದ ಸ್ಥಾನಮಾನ ಕಸಿದುಕೊಂಡ ನಂತರ ಪಕ್ಷದ ನಾಯಕ ಡಿ ರಾಜಾ ಬೇಸರ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್‌ 10ರಂದು ಸಿಪಿಐ ರಾಷ್ಟ್ರೀಯ ಪಕ್ಷ ಸ್ಥಾನಮಾನ ಕಳೆದುಕೊಂಡಿದೆ. 2019ರ ಸಾರ್ವತ್ರಿಕ ಚುನಾವಣೆಯ ನಂತರ ಸಿಪಿಐ ಸೇರಿದಂತೆ ಅನೇಕ ಕಮ್ಯುನಿಸ್ಟ್‌ ಪಕ್ಷಗಳು ಕಳಪೆ ಸಾಧನೆ ಮಾಡಿವೆ. “ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳೊಂದಿಗೆ ಕಾರ್ಯ ನಿರ್ವಹಿಸಲೇಬೇಕಿದೆ. ಇದರಿಂದ ಪ್ರಾದೇಶಿಕ ಪಕ್ಷಗಳ ಬೆಳವಣಿಗೆ ಸಾಧ್ಯವಾಗುತ್ತದೆ” ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷದ ಸ್ಥಾನಮಾನವು ಪಕ್ಷವೊಂದಕ್ಕೆ ರಾಜ್ಯಗಳಾದ್ಯಂತ ಸಾಮಾನ್ಯ ಚಿಹ್ನೆಯನ್ನು ಬಳಸಲು ಅನುಮತಿ ದೊರೆಯುವುದು ಮಾತ್ರವಲ್ಲದೆ, ನವದೆಹಲಿಯ ಪಕ್ಷದ ಕಚೇರಿಯಲ್ಲಿ ಮತದಾನದ ಸಮಯದಲ್ಲಿ ಪಕ್ಷಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅದಕ್ಕಾಗಿ ಪಕ್ಷವನ್ನು ರಾಜ್ಯ ಪಕ್ಷವೆಂದು ನಾಲ್ಕು ರಾಜ್ಯಗಳಲ್ಲಿ ಪರಿಗಣಿಸಬೇಕು. ಆಯಾ ಶಾಸನ ಸಭೆಗಳಲ್ಲಿ ಕನಿಷ್ಠ ಇಬ್ಬರು ಸದಸ್ಯರನ್ನು ಹೊಂದಿರಬೇಕು. ಅಲ್ಲದೆ ರಾಜ್ಯದಲ್ಲಿ ಕನಿಷ್ಠ ಶೇ 6ರಷ್ಟು ಮತಗಳನ್ನು ಹೊಂದಿರಬೇಕು. ಆಗ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ದೊರೆಯುತ್ತದೆ.

Advertisements

ಸಿಪಿಐನ ಕ್ಷೀಣಿಸಿದ ಸ್ಥಿತಿಯು ಕಳೆದ ಹಲವಾರು ದಶಕಗಳಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪಕ್ಷ ಎನಿಸಿಕೊಂಡ ಪಕ್ಷಗಳ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಈ ಬಗ್ಗೆ ಸಿಪಿಐ ನಾಯಕ ಡ.ರಾಜಾ ಅವರು ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಸಂಸತ್ತಿನಲ್ಲಿ ಎಡಪಕ್ಷಗಳ ಬಲ ಕುಸಿದಿರುವುದು ಸತ್ಯ. ಈಗ ಲೋಕಸಭೆಯಲ್ಲಿ ಸಿಪಿಎಂ ಮತ್ತು ಸಿಪಿಐಗೆ ಸೇರಿದ ಐವರು ಸಂಸದರಿದ್ದಾರೆ. ನಾವು ಇನ್ನೂ ಕೆಲವು ವಿಧಾನಸಭೆಗಳಲ್ಲಿ ಅಸ್ತಿತ್ವ ಹೊಂದಿದ್ದೇವೆ. ನಮ್ಮ ಸೈದ್ಧಾಂತಿಕ, ರಾಜಕೀಯ ಪ್ರಭಾವ ಮತ್ತು ನಮ್ಮ ಚುನಾವಣಾ ಕಾರ್ಯಕ್ಷಮತೆಯ ನಡುವೆ ಅಂತರವಿದೆ. ಇದಕ್ಕೆ ಹಲವಾರು ಕಾರಣಗಳಿವೆ. ದೇಶದಲ್ಲಿ ಅನೇಕ ಹೊಸ ಸಮಸ್ಯೆಗಳು ಹುಟ್ಟಿಕೊಂಡಿವೆ” ಎಂದು ಅವರು ತಿಳಿಸಿದರು.

“ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಸಿಪಿಐ ಸಂಸತ್ತಿನಲ್ಲಿ ಪ್ರಮುಖ ಪ್ರತಿಪಕ್ಷಗಳಲ್ಲಿ ಒಂದಾಗಿತ್ತು. ದೇಶದ ಸಂಸದೀಯ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ರಾಜಕೀಯವನ್ನು ರೂಪಿಸುವಲ್ಲಿ ಮತ್ತು ಬಲಪಡಿಸುವಲ್ಲಿ ಪಕ್ಷ ಮಹತ್ತರ ಪಾತ್ರವನ್ನು ವಹಿಸಿದೆ. ಇಂದಿಗೂ ಸಂಸತ್ತಿನ ಕಟ್ಟಡ ಕಮ್ಯುನಿಸ್ಟ್ ನಾಯಕರಾದ ಇಂದ್ರಜಿತ್ ಗುಪ್ತಾ, ಭೂಪೇಶ್ ಗುಪ್ತಾ, ಎಸ್ ಎ ಡಾಂಗೆ ಮತ್ತು ಎ ಕೆ ಗೋಪಾಲನ್ ಅವರ ಪ್ರತಿಮೆ ಹೊಂದಿದೆ” ಎಂದು ತಿಳಿಸಿದರು.

“ನಮ್ಮ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ರೂಪಿಸುವಲ್ಲಿ ಕಮ್ಯುನಿಸ್ಟರ ಕೊಡುಗೆಯನ್ನು ಅವು ತೋರಿಸುತ್ತವೆ. ವರ್ಷಗಳು ಕಳೆದಂತೆ ನಮ್ಮ ಚುನಾವಣಾ ವ್ಯವಸ್ಥೆಯು ಅನೇಕ ದುಷ್ಪರಿಣಾಮಗಳಿಂದ ನರಳಲಾರಂಭಿಸಿತು. ಅನೇಕ ಹೊಸ ಅಂಶಗಳು ಕಾರ್ಯರೂಪಕ್ಕೆ ಬರುತ್ತಿವೆ. ಆದರೆ ಎಡರಂಗ ಮತ್ತು ಸಿಪಿಐ ಇತರರಂತೆ ಇರಲು ಸಾಧ್ಯವಿಲ್ಲ. ನಮ್ಮ ಪಕ್ಷ ಸಮಗ್ರ ಚುನಾವಣಾ ಸುಧಾರಣೆಗಳನ್ನು ಒತ್ತಾಯಿಸುತ್ತಿದೆ” ಎಂದು ವಿವರಿಸಿದರು.

“ಇಂದಿಗೂ ನಾವು ಬುದ್ಧಿಜೀವಿಗಳು, ಸಿದ್ಧಾಂತಿಗಳು ಅಥವಾ ರಾಜಕೀಯ ವಿಶ್ಲೇಷಕರನ್ನು ಪರಿಗಣಿಸಿದರೆ ಅವರು ಎಡಪಂಥೀಯರಾಗಿರುವುದು ಗಮನಕ್ಕೆ ಬರುತ್ತದೆ” ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

“ನಾವು ಜನಸಾಮಾನ್ಯರನ್ನು ತಲುಪುತ್ತಿದ್ದೇವೆ. ಭಾರತೀಯ ಸಮಾಜದಲ್ಲಿ ನಾವು ಹಲವಾರು ಪ್ರಶ್ನೆಗಳನ್ನು ಪರಿಹರಿಸಬೇಕಾಗಿದೆ. ಒಂದು ವರ್ಗ ಅಸಮಾನತೆ ಮತ್ತು ಶೋಷಣೆಯಿಂದ ಬಳಲುತ್ತಿದ್ದರೆ, ಇನ್ನೊಂದು ಸಾಮಾಜಿಕ ಅಸಮಾನತೆ ಮತ್ತು ತಾರತಮ್ಯದಿಂದ ಒದ್ದಾಡುತ್ತಿದೆ. ಆದ್ದರಿಂದ ವರ್ಗ, ಜಾತಿ ಮತ್ತು ಪಿತೃಪ್ರಭುತ್ವವನ್ನು ಎದುರಿಸಬೇಕಾಗಿದೆ” ಎಂದು ಪಕ್ಷದ ಗುರಿಗಳ ಬಗ್ಗೆ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮೈತ್ರಿಕೂಟಕ್ಕೆ ಸಿದ್ಧತೆ; ಕಾಂಗ್ರೆಸ್ ಜೊತೆ ಸಭೆ ನಡೆಸಿದ ಶರದ್ ಪವಾರ್‌

“ಎಡಪಕ್ಷಗಳು ಜನರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿವೆ. ಉದಾಹರಣೆಗೆ, ಎಡಪಕ್ಷಗಳು ಇತರ ಪ್ರಗತಿಪರ ಚಳವಳಿಗಳೊಂದಿಗೆ ಕೆಲಸ ಮಾಡುತ್ತಿವೆ. ಅಂಬೇಡ್ಕರ್ ಚಳುವಳಿ. ‘ಜೈ ಭೀಮ್, ಲಾಲ್ ಸಲಾಮ್‌’ ರೀತಿಯ ಚಳವಳಿಗಳು ದೇಶಾದ್ಯಂತ ಸಂಚಲನ ಮೂಡಿಸಿವೆ” ಎಂದು ರಾಜಾ ತಿಳಿಸಿದರು.

“ಎಡಪಕ್ಷಗಳು ಈಗ ಈ ರಾಜಕೀಯ ಮತ್ತು ಸೈದ್ಧಾಂತಿಕ ಪ್ರವಾಹಗಳೊಂದಿಗೆ ಈಜುತ್ತಿವೆ. ಅದೊಂದೇ ನಮ್ಮ ಮುಂದಿರುವ ದಾರಿ. ಇಂದು ಭಾರತೀಯ ಕ್ರಾಂತಿಯು ಮುಂದೆ ಸಾಗಬೇಕಾದರೆ ಕಮ್ಯುನಿಸ್ಟರು, ಅಂಬೇಡ್ಕರ್‌ವಾದಿಗಳು ಮತ್ತು ಪೆರಿಯಾರ್‌ವಾದಿಗಳ ನಡುವೆ ಏಕತೆ ಇರಬೇಕು” ಎಂದು ಡಿ ರಾಜಾ ಪ್ರತಿಪಾದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X