- ಮೇ 2ರಂದು ಹುದ್ದೆ ತೊರೆದಿದ್ದ ಶರದ್ ಪವಾರ್
- ನೂತನ ಅಧ್ಯಕ್ಷರ ಆಯ್ಕೆಗೆ 18 ಜನರ ಸಮಿತಿ ರಚನೆ
ಶರದ್ ಪವಾರ್ ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ರಚಿಸಿದ್ದ ಎನ್‌ಸಿಪಿ ಸಮಿತಿ ಶುಕ್ರವಾರ (ಮೇ 5) ತಿರಸ್ಕರಿಸಿದೆ.
ನೂತನ ಅಧ್ಯಕ್ಷರ ಆಯ್ಕೆ ಸಂಬಂಧ 18 ಜನರ ಸಮಿತಿಯನ್ನು ಪಕ್ಷದ ಹಿರಿಯ ನಾಯಕ ಪ್ರಫುಲ್ ಪಟೇಲ್ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು.
ಅಜಿತ್ ಪವಾರ್, ಸುಪ್ರಿಯಾ ಸುಳೆ, ಮಾಜಿ ಕೇಂದ್ರ ಸಚಿವ ಪ್ರಪುಲ್ ಪಟೇಲ್ ಮತ್ತು ಛಗನ್ ಭುಜಬಲ್ ಅವರ ಆಯ್ಕೆ ಸಮಿತಿಯನ್ನು ಪವಾರ್ ರಚನೆ ಮಾಡಿದ್ದರು.
ಬೆಳಿಗ್ಗೆಯಿಂದಲೇ ಎನ್‌ಸಿಪಿ ಕಚೇರಿ ಮುಂದೆ ಜಮಾಯಿಸಿರುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಶರದ್ ಪವಾರ್ ಅವರು ಹುದ್ದೆ ತೊರೆಯಬಾರದು ಎಂದು ಆಗ್ರಹಿಸಿದ್ದರು.
ಸಭೆಯ ಬಳಿಕ ಸಮಿತಿಯ ಉಪಾಧ್ಯಕ್ಷ ಪ್ರಫುಲ್ ಪಟೇಲ್ ಅವರು ಮಾಹಿತಿ ನೀಡಿದ್ದು, “ಪವಾರ್ ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂಬುದು ನಮ್ಮ ನಿಲುವು. ಪವಾರ್ ಅವರನ್ನು ಇಂದು ಭೇಟಿಯಾಗಿ ವಿಷಯವನ್ನು ಅವರ ಮುಂದಿಡುತ್ತೇವೆ” ಎಂದು ಹೇಳಿದರು.
“ಸಮಿತಿಯು ಸರ್ವಾನುಮತದಿಂದ ಪವಾರ್ ಅವರ ರಾಜೀನಾಮೆ ತಿರಸ್ಕರಿಸಿ ನಿರ್ಣಯ ಅಂಗೀಕರಿಸಿದೆ. ಅವರು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ಒತ್ತಾಯಿಸುತ್ತದೆ” ಎಂದು ಸಮಿತಿಯ ಸಭೆಯ ನಂತರ ಪ್ರಪುಲ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ಪವಾರ್ ಅವರು ಮೇ 2ರಂದು ರಾಜೀನಾಮೆ ಘೋಷಿಸಿದ್ದರು. ಎರಡು ದಿನಗಳ ಬಳಿಕ ಅವರ ಉತ್ತರಾಧಿಕಾರಿ ಸ್ಥಾನವನ್ನು ಅಜಿತ್ ಪವಾರ್ ಅಥವಾ ಸುಪ್ರಿಯಾ ಸುಳೆ ಇಲ್ಲವೇ ಕುಟುಂಬದ ಹೊರಗಿನವರು ವಹಿಸಿಕೊಳ್ಳಬಹುದಾ? ಎಂಬ ಕುತೂಹಲ ಉಂಟಾಗಿತ್ತು. ಆದರೆ ಸಮಿತಿ ನಿರ್ಧಾರದ ನಂತರ ಪವಾರ್ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಈ ಸುದ್ದಿ ಓದಿದ್ದೀರಾ? ನನ್ನ ರಾಜ್ಯ ಹೊತ್ತಿ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ; ಮೇರಿ ಕೋಮ್ ಮನವಿ
ಪವಾರ್ ಅವರು ಮಹಾರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ರಾಜೀನಾಮೆ ಘೋಷಣೆಯ ನಂತರ ಹೊಸ ಅಧ್ಯಕ್ಷರ ಅಯ್ಕೆಗೆ ಸಮಿತಿ ರಚಿಸಿದ್ದರು.