ವಾಟರ್ ಮೆಟ್ರೋ | ದೇಶದ ಮೊದಲ ಜಲಸಾರಿಗೆಗೆ ಪ್ರಧಾನಿ ಮೋದಿ ಇಂದು ಚಾಲನೆ ; ಏನಿದರ ವಿಶೇಷ?

Date:

Advertisements
  • ವಾಟರ್ ಮೆಟ್ರೋ ಯೋಜನೆಗೆ ₹1,137 ಕೋಟಿ ವೆಚ್ಚ
  • ಈ ಜಲಸಾರಿಗೆಯಿಂದ ಕೊಚ್ಚಿಯ 10 ದ್ವೀಪಗಳಿಗೆ ಸಂಪರ್ಕ

ವಾಟರ್ ಮೆಟ್ರೋ ಯೋಜನೆ ದೇಶದ ಮೊದಲ ಜಲಸಾರಿಗೆ ಎಂಬ ಹೆಗ್ಗಳಿಕೆ ಪಡೆದಿದೆ.

ಕೇರಳದ ಕೊಚ್ಚಿಯಲ್ಲಿ ನಿರ್ಮಾಣವಾಗಿರುವ ಈ ಜಲಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಏಪ್ರಿಲ್ 25) ಲೋಕಾರ್ಪಣೆ ಮಾಡಲಿದ್ದಾರೆ.

ನೂತನವಾಗಿ ನಿರ್ಮಾಣವಾಗಿರುವ ಈ ಯೋಜನೆ ಸುಮಾರು ₹1,137 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಈ ವಾಟರ್ ಮೆಟ್ರೋ ದೇಶದ ಮೊಟ್ಟ ಮೊದಲ ಜಲಸಾರಿಗೆ ವ್ಯವಸ್ಥೆಯಾಗಿದೆ.

Advertisements

ಈ ಜಲಸಾರಿಗೆಯು ಕೊಚ್ಚಿಯ 10 ದ್ವೀಪಗಳಿಗೆ ನಿರಂತರವಾದ, ಅತ್ಯಂತ ವೇಗದ ಸಾರಿಗೆ ಸಂಪರ್ಕವನ್ನು ಕಲ್ಪಿಸಲಿದೆ.

ವಾಟರ್ ಮೆಟ್ರೋ ಯೋಜನೆಗಳಿಗೆ ಬಳಸಲಾಗಿರುವ ಅತ್ಯಾಧುನಿಕ ಸೌಲಭ್ಯಗಳುಳ್ಳ ವಿದ್ಯುತ್ ಚಾಲಿತ ದೋಣಿಗಳು, ಪ್ರಯಾಣಿಕರಿಗೆ ವಿಶೇಷ ಅನುಭವವನ್ನು ಒದಗಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಜಲಸಾರಿಗೆಯಲ್ಲಿ ನಾಗರಿಕರ ಸಂಚಾರ, ಸರಕು ಸಾಗಣೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಅತಿ ವೇಗವಾಗಿ, ಅತಿ ಸರಳವಾಗಿ, ಸುಧಾರಿತ ಸಮಯದಲ್ಲಿ ಕೈಗೊಳ್ಳಬಹುದಾಗಿದೆ.

ವಾಟರ್ ಮೆಟ್ರೋ ಸಾರಿಗೆ ಸಾಂಪ್ರದಾಯಿಕವಾದ ಜಲ ಮಾರ್ಗಗಳಿಗಿಂತ ಅಗ್ಗವಾಗಿದೆ. ಇದು ಅತಿ ಹೆಚ್ಚು ಸಮಯ ಉಳಿತಾಯ ಮಾಡುವಂಥ ಯೋಜನೆ ಎಂದು ಕೊಚ್ಚಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಲೋಕನಾಥ್ ಬೆಹ್ರಾ ಹೇಳಿದ್ದಾರೆ.

ವಾಟರ್ ಮೆಟ್ರೋ ವಿಶೇಷತೆ

ಈ ಜಲಸಾರಿಗೆಯನ್ನು ₹1,137 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಯೋಜನೆಗೆ ಜರ್ಮನಿಯ ಕೆ ಎಫ್ ಡಬ್ಲ್ಯು, ಕೇಂದ್ರ ಸರ್ಕಾರ ಹಾಗೂ ಕೇರಳ ರಾಜ್ಯ ಸರ್ಕಾರಗಳು ಹಣ ಹೂಡಿಕೆ ಮಾಡಿವೆ.

ಕೊಚ್ಚಿಯ ಸುತ್ತಮುತ್ತಲೂ ಇರುವ 10 ಸಣ್ಣ ದ್ವೀಪಗಳನ್ನು ಜಲಸಾರಿಗೆ ಮೂಲಕ ಸಂಪರ್ಕ ಕಲ್ಪಿಸುವಂಥ ವ್ಯವಸ್ಥೆ ಕಲ್ಪಿಸಲಾಗಿದೆ.

ಆರಂಭದಲ್ಲಿ ಎಂಟು ವಿದ್ಯುತ್ ಚಾಲಿತ ದೋಣಿಗಳನ್ನು (ಎಲೆಕ್ಟ್ರಿಕ್ ಬೋಟ್) ಈ ಸಾರಿಗೆ ವ್ಯವಸ್ಥೆಗಾಗಿ ನಿಯೋಜಿಸಲಾಗಿದೆ. ಮುಂದೆ, ಅವಶ್ಯಕತೆಗೆ ತಕ್ಕಂತೆ ಈ ದೋಣಿಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಎಲ್ಲ ವಿದ್ಯುತ್ ಚಾಲಿತ ದೋಣಿಗಳನ್ನು ಕೊಚಿನ್ ಶಿಪ್ ಯಾರ್ಡ್ ಲಿಮಿಟೆಡ್ ತಯಾರಿಸಿದೆ.

ವಾಟರ್‌ ಮೆಟ್ರೋ ಯೋಜನೆಯಡಿ, ಕೊಚ್ಚಿಯ ಸುತ್ತಲಿನ 10 ದ್ವೀಪಗಳ ಸಂಪರ್ಕಕ್ಕಾಗಿ ಒಟ್ಟು 16 ಮಾರ್ಗಗಳನ್ನು ನಿಗದಿಗೊಳಿಸಲಾಗಿದೆ.

ಪ್ರತಿ ಮಾರ್ಗದಲ್ಲಿಯೂ ಸರಾಸರಿ 76 ಕಿ.ಮೀ.ಗಳ ಸಂಚಾರವಿರುತ್ತದೆ. ಇದಲ್ಲದೆ, ಜನರ ಅನುಕೂಲಕ್ಕಾಗಿ 38 ನಿಲ್ದಾಣಗಳನ್ನು ನಿಗದಿಗೊಳಿಸಲಾಗಿದೆ.

ಇತರ ಸಾರಿಗೆ ಸಂಪರ್ಕಗಳಿಗೂ ಜೋಡಣೆ

ವಾಟರ್ ಮೆಟ್ರೋ ಕೊಚ್ಚಿಯ ಸುತ್ತಮುತ್ತಲೂ ಇರುವ ಭೂ ಸಂಪರ್ಕ ಸಾರಿಗೆ ವ್ಯವಸ್ಥೆಗಳಾದ ರಸ್ತೆ ಸಾರಿಗೆ ಹಾಗೂ ರೈಲ್ವೆ ಸಾರಿಗೆಗೂ ನಂಟು ಕಲ್ಪಿಸುತ್ತದೆ.

ಕೊಚ್ಚಿ ಸಮೀಪದ ಒಂದು ದ್ವೀಪದಿಂದ ಹೊರಡುವ ಜನರು ಅಲ್ಲಿಗೆ ಸಮೀಪದ ರೈಲು ನಿಲ್ದಾಣ ಅಥವಾ ರಸ್ತೆ ಸಾರಿಗೆಯ ಸೌಲಭ್ಯವನ್ನು ಪಡೆಯಬೇಕಿದ್ದರೆ ಅವರನ್ನು ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಇರುವಂಥ ಪ್ರದೇಶಗಳಿಗೆ ಅವರನ್ನು ತಲುಪಿಸಲಾಗುತ್ತದೆ.

ಇದಕ್ಕಾಗಿ ದೋಣಿಗಳು ಸಾಗುವ ಮಾರ್ಗಗಳಲ್ಲಿ ರಸ್ತೆ, ರೈಲು ಸಂಪರ್ಕವು ದೊರೆಯುವ ಕಡೆಗಳಲ್ಲಿ ನಿಲ್ದಾಣಗಳನ್ನು ಮಾಡಿ ದೋಣಿಗಳನ್ನು ಅಲ್ಲಿ ಆ ಸೌಲಭ್ಯಗಳನ್ನು ಬಯಸುವ ಪ್ರಯಾಣಿಕರು ಇಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

ಕಡಿಮೆ ಪ್ರಯಾಣ ದರ, ಸಮಯ ಉಳಿತಾಯ

ವಾಟರ್ ಮೆಟ್ರೋ ಯೋಜನೆಯಡಿ ಮೊದಲು 15 ಮಾರ್ಗಗಳಲ್ಲಿ ಸಂಚಾರ ಆರಂಭವಾಗುತ್ತದೆ. ಆನಂತರ ಮಾರ್ಗಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಪ್ರಯಾಣ ದರವು ಜನರಿಗೆ ಕೈಗೆಟುಕುವಂತೆ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿ ಪ್ರಯಾಣಕ್ಕೂ ಜನರ ಕೈಗೆಟಕುವ ದರಗಳ ಟಿಕೆಟ್ ಗಳನ್ನು ನಿಗದಿಗೊಳಿಸಲಾಗಿದೆ. ಪ್ರಯಾಣಿಕರು ತೆರಳುವ ಹಾಗೂ ಹಿಂತಿರುಗುವ ಟಿಕೆಟ್ ಸಹ ಕೊಳ್ಳಬಹುದು. ಅಲ್ಲದೆ ವಾರದ ಅಥವಾ ಮಾಸಿಕ ಪಾಸ್ ಗಳನ್ನೂ ಪಡೆಯಲು ಅವಕಾಶವಿದೆ ಎಂದು ಲೋಕನಾಥ್ ಬೆಹ್ರಾ ಹೇಳಿದ್ದಾರೆ.

ಜಲಸಾರಿಗೆ ಯೋಜನೆಯಲ್ಲಿ ಸಾಗುವ ವಿದ್ಯುತ್ ಚಾಲಿತ ದೋಣಿಗಳಲ್ಲಿ ಕೊಚ್ಚಿ ವ್ಯಾಪ್ತಿಯಲ್ಲಿ ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಹೋಗಲು ಕೇವಲ 15 ನಿಮಿಷ ಸಾಕಾಗುತ್ತದೆ. ಇದು ಸಾಂಪ್ರದಾಯಿಕ ದೋಣಿಗಳಲ್ಲಿ ಸಾಗುವ ಅವಧಿಯನ್ನು ಶೇ. 40 ರಷ್ಟು ಇಳಿಕೆ ಮಾಡಿದೆ ಎಂದು ಹೇಳಲಾಗಿದೆ.

ದೋಣಿಗಳ ವಿನ್ಯಾಸ ಹಾಗೂ ಸೌಲಭ್ಯಗಳು

ವಿದ್ಯುತ್ ಚಾಲಿತ ದೋಣಿಗಳಲ್ಲಿ ಭಾರೀ ಅತ್ಯಾಧುನಿಕವಾದ ಲೀಥಿಯಂ ಟೈಟಾನೇಟ್ ಸ್ಪಿನೆಲ್ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಎಲ್ಲ ದೋಣಿಗಳೂ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿವೆ. ದೊಡ್ಡ ದೊಡ್ಡ ಗಾಜಿನ ಕಿಟಕಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ ವೈಫೈ ವ್ಯವಸ್ಥೆಯೂ ಇದ್ದು ಯಾವುದೇ ಆಧುನಿಕ ವ್ಯವಸ್ಥೆಗಳು ಯಾರಿಂದಲೂ ದುರ್ಬಳಕೆ ಮಾಡಿಕೊಳ್ಳದಂತೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಾಧ್ಯಮಗಳಿಗೆ ಪ್ರಕರಣಗಳ ಕುರಿತ ಸಂದರ್ಶನ; ಸುಪ್ರೀಂ ಕೋರ್ಟ್ ಆಕ್ಷೇಪ

ವಾಟರ್ ಮೆಟ್ರೋ ಯೋಜನೆಯ ವಿದ್ಯುತ್ ಚಾಲಿತ ದೋಣಿಗಳಲ್ಲಿ ಇದೇ ಮೊದಲ ಬಾರಿಗೆ ತಾಂತ್ರಿಕವಾಗಿ ಏಕ ಸೂಚನೆ ಮೂಲಕ ಸಂಚರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರತದಲ್ಲಿನ ಸಂಪರ್ಕ ವ್ಯವಸ್ಥೆಯಲ್ಲಿ ಇಂಥ ಏಕ ಸೂಚನೆ ವ್ಯವಸ್ಥೆಯನ್ನು ಕೇರಳದ ವಾಟರ್ ಮೆಟ್ರೋದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X