ನವದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣಕ್ಕೆ ಇಂದು ಬೆಳ್ಳಂಬೆಳಗ್ಗೆ (ಸೆಪ್ಟೆಂಬರ್ 21) ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಲ್ಲಿನ ಹಮಾಲಿಗಳ ಜತೆ ಕಾಲ ಕಳೆದರು.
ಹಮಾಲಿಗಳೊಂದಿಗೆ ಭೇಟಿಯ ಸಮಯದಲ್ಲಿ, ಅವರೊಂದಿಗೆ ದಿನನಿತ್ಯ ನಡೆಯುವ ಕೆಲಸ ಕಾರ್ಯಗಳು ಹಾಗೂ ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಿದರು.
ಈ ಸುದ್ದಿ ಓದಿದ್ದೀರಾ? ಕೆನಡಾದಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಭಾರತ
ಅವರೊಂದಿಗಿನ ಒಗ್ಗಟ್ಟಿನ ಸಂದರ್ಭಕ್ಕಾಗಿ, ರಾಹುಲ್ ಅವರು ಕೂಲಿ ಉಡುಪನ್ನು ಧರಿಸಿ ತಲೆಯ ಮೇಲೆ ಹೊರೆಯೊಂದನ್ನು ಹೊತ್ತು ಒಂದಷ್ಟು ದೂರ ಸಾಗಿದರು.
“ಜನ ನಾಯಕ ರಾಹುಲ್ ಗಾಂಧಿ ಅವರು ಇಂದು ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ತಮ್ಮ ಹಮಾಲಿ ಸ್ನೇಹಿತರನ್ನು ಭೇಟಿ ಮಾಡಿದರು. ಇತ್ತೀಚೆಗೆ, ರೈಲ್ವೆ ನಿಲ್ದಾಣದ ಹಮಾಲಿ ಸ್ನೇಹಿತರು ಕಾಂಗ್ರೆಸ್ ನಾಯಕನನ್ನು ಭೇಟಿ ಮಾಡುವ ಬಹುದಿನಗಳ ತಮ್ಮ ಆಸೆ ವ್ಯಕ್ತಪಡಿಸಿದ ನಂತರ ರಾಹುಲ್ ಭೇಟಿ ಮಾಡಿದ್ದಾರೆ. ತಮ್ಮ ಹಮಾಲಿ ಸ್ನೇಹಿತರ ಜೊತೆ ಒಂದಷ್ಟು ಹೊತ್ತು ಕಾಲ ಕಳೆದು ಕಷ್ಟಸುಖಗಳನ್ನು ಹಂಚಿಕೊಂಡರು. ಭಾರತ ಒಗ್ಗೂಡಿಸುವಿಕೆ ಮುಂದುವರಿಯುತ್ತದೆ” ಎಂದು ಕಾಂಗ್ರೆಸ್ ಟ್ವಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.